ಮಹಿಳಾದಿನದ ವಿಶೇಷ
ನಾನೆಂದೂ ಓಡುವುದಿಲ್ಲ. ಚೈತ್ರ ಶಿವಯೋಗಿಮಠ ಒಂದ್ಹತ್ತು ಚಪಾತಿಯನು ತೀಡಿ ಕಾದ ಎಣ್ಣೆಯಲಿ ಸಾಸಿವೆ ಜೀರಿಗೆ ಚಟ ಪಟ ಎನಿಸಿ ಕರಿಬೇವು ಚೊರ್ ಎನಿಸಿ ಒಂದು ಪಲ್ಯ ಮಾಡಿ, ದೌಡಾಯಿಸಬೇಕಿದೆ ನನ್ನ ಕನಸುಗಳ ಬೆಂಬತ್ತಲು! ನಿಮ್ಮ ಉದರಕಾಗಿಯೇ ಮಾಡುವೀ ಮಹತ್ಕಾರ್ಯದಲಿ ಕೊಂಚ ಕೈ ಜೋಡಿಸಿ ತಪ್ಪೇನಿಲ್ಲ! ವಯಸ್ಸು ದೇಹಕ್ಕೆ ಹೊರತು ಮನಸ್ಸಿಗಲ್ಲ! ಒಂದೆರಡು ಸವಿಮಾತು ಒಂದು ಮುಗುಳುನಗೆ ಇವಿಷ್ಟೇ! ಬೀಳ್ಕೊಡಿ ನನ್ನನ್ನೂ ಒಂದು ದೊಡ್ಡ ದಿನ ನನ್ನ ಮುಂದಿದೆ! ಆಗೊಮ್ಮೆ ಈಗೊಮ್ಮೆ ಜೀನ್ಸ್ ಧರಿಸುವೆ! ತುಸು ತುಟಿಗೆ ಬಣ್ಣ […]
ಮಹಿಳಾದಿನದ ವಿಶೇಷ
ಹಣತೆ ಹಚ್ಚುತ್ತಾಳೆ ಸುಮಂಗಳ ಮೂರ್ತಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿದಿನವೂ,ತಿಂಗಳನಂತೆ ಮಬ್ಬುಗಟ್ಟಿದ ಕತ್ತಲನ್ನು ನಂದಿಸುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಕ್ಷಣವೂ,ಗೋವರ್ಧನ ಗಿರಿಯಂತೆ ಭರವಸೆಯ ಭತ್ತ ಅಂಕುರವಾಗುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಬೆಳಗೂ,ನೇಸರನ ನಗುವಂತೆ ಹೆಪ್ಪುಗಟ್ಟಿದ ನೋವನು ಕರಗಿಸುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಇರುಳೂ,ತಂಗಾಳಿಯಂತೆ ದಣಿದ ಮನಸ್ಸಿಗೆ ಮುಲಾಮಾಗುವ ಸಲುವಾಗಿ ಹಣತೆ ಹಚ್ಚುತ್ತಾಳೆ ಅವಳು ಪ್ರತಿ ಹೆಜ್ಜೆಗೂ,ಮಣ್ಣಿನ ಘಮದಂತೆ ಚಿತೆಗೆ ನೂಕಿದ ಚಿಂತನೆಯ ಹಾದಿಗೆ ದೀವಿಗೆಯಾಗುವ ಸಲುವಾಗಿ ಹಣತೆ ಹಚ್ಚುತ್ತಾಳೆ […]
ಮಹಿಳಾದಿನ ವಿಶೇಷ
ಅವಳೆಂದರೆ.. ವಿನುತಾ ಹಂಚಿನಮನಿ ಬಿತ್ತಿರುವದ ಬೆಳೆಯುವ ಭೂಮಿ ಧರಣಿ ಕಸವಿರಲಿ ವಿಷವಿರಲಿ ಬೀಜದ ಭ್ರೂಣ ಅಂಕುರಿಸಲು ಒಡಲ ಕೊಡುವ ರಮಣಿ ಜೀವಜಲ ಎರೆಯುವ ಅಮೃತ ವರ್ಷಿಣಿ ಮೇಲು ಕೀಳೆನಿಸದೆ ಪಾಪ ತೊಳೆಯುವ ಜಾಹ್ನವಿ ತಪ್ಪುಗಳ ಒಪ್ಪಿ ಒಪ್ಪಿಕೊಳ್ಳುವ ಮಹಾಮಾಯಿ ಎಲ್ಲವನೂ ತನ್ನದಾಗಿಸಿಕೊಳ್ಳುವ ನೀಲಮಯಿ ಸೂರ್ಯ ಚಂದ್ರ ತಾರೆಯರಿಗೆ ಅಂಗಳವಾಗಿರುವ ಅನಂನ ಆಗಸದಂತ ವಿಶಾಲಮನದ ಪ್ರೇಮಮಯಿ ಕೆಡುಕ ಧಿಕ್ಕರಿಸಿ ಸುಡುವ ಮೋಹಿನಿ ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ಕರುಣಾಮಯಿ ಅಸುರ ಮರ್ಧಿನಿ ಅಗ್ನಿ ಸ್ವರೂಪಿಣಿ ಜಗದ ಎಲ್ಲ ತೇಜಸ್ಸಿಗೆ […]
ಮಹಿಳಾದಿನದ ವಿಶೇಷ
ನಾವು ನಿಮ್ಮ ಹಾಗಲ್ಲ ಸೌಜನ್ಯ ದತ್ತರಾಜ ಹೌದು ಖಂಡಿತಾ ನಾವು ನಿಮ್ಮ ಹಾಗಲ್ಲ ಪ್ರೀತಿಯಲ್ಲಿ ಸೋಲುವವರೂ ಸಂಸಾರವನ್ನು ಲೆಕ್ಕಾಚಾರದಲಿ ನಡೆಸುವವರು ನಾವು ಮನೆ ಒಳಗೆ ಮಹಾಭಾರತವೇ ನಡೆಯುತ್ತಿದ್ದರೂ ಮಂದಿ ಎದುರು ಮುಗುಳ್ನಗುವವರು ನಾವು ದೇಶ ದೇಶಾಂತರದ ರಾಜಕಾರಣಕ್ಕೂ ಮೊದಲು ಮನೆಮಂದಿಗಾಗಿ ಹೋರಾಡುವವರು ಬಡಿದಾಡುವವರು ನಾವು ದುಃಖವೆಷ್ಟೇ ಇದ್ದರೂ ತುಟಿಯ ರಂಗು ಕಣ್ಣಿನ ಕಾಡಿಗೆ ಕಡಿಮೆ ಆಗದಂತೆ ನೋಡಿಕೊಳ್ಳುವವರು ನಾವು ನಾವೇ ಶ್ರೇಷ್ಠವೆಂಬ ಹೆಮ್ಮೆ ನಮಗೆಂದಿಗೂ ಇಲ್ಲ ಆದರೂ ಹೆಣ್ತನದ ಸಂಭ್ರಮ ಅಷ್ಟು ಸುಲಭಕ್ಕೆ ದಕ್ಕುವಂತಹದ್ದಲ್ಲ ಹೌದು ಖಂಡಿತಾ […]
ಮಹಿಳಾದಿನದ ವಿಶೇಷ
ಬೆಳಕಿನ ರಂಗೋಲಿ ಅಂಜನಾ ಹೆಗಡೆ ಏಳಯ್ಯ ಹನುಮಂತ ಎಷ್ಟು ನಿದ್ರೆ…. ಬಚ್ಚಲೊಲೆಯ ಮಸಿಬೂದಿ ಟೂತ್ ಪೌಡರ್ ಆಗಿ ಹೊಳೆವ ಹಲ್ಲು ಕೊರಳಗುಂಟ ಸುತ್ತಿಕೊಂಡ ಲಕ್ಷ್ಮಿತಾಳಿ ಸೆರಗೊಳಗೆ ಸೇರಿಸುತ್ತಾ ದೇವರನ್ನೆಬ್ಬಿಸುತ್ತಾಳೆ ಅಜ್ಜಿ ಅವಳ ಗಂಟಲು ನಡುಗುವುದಿಲ್ಲ ಹೂ ಬಿಡಿಸುತ್ತಿದ್ದಾಳೆ ಅಮ್ಮ ಒಲೆಯ ಮೇಲೆ ಕುದಿವ ನೀರಿನ ಶಾಖ ಅವಳ ಎದೆಗೆ ಇಳಿಯುವುದಿಲ್ಲ ಜೀನ್ಸ್ ಪ್ಯಾಂಟ್ ಸರಿಪಡಿಸುತ್ತ ಮೊಮ್ಮಗಳು ಬಣ್ಣದ ರಂಗೋಲಿ ಬಿಡಿಸುತ್ತಿದ್ದಾಳೆ ಅವಳ ನಗು ಮಾಸುವುದಿಲ್ಲ ಮಾರುತಿ ಮಂದಿರದ ಎದುರು ಕೈ ಮುಗಿದು ನಿಂತವಳ ಕೆಂಪು ನೈಲ್ ಪೋಲಿಶ್ […]
ಮಹಿಳಾದಿನದ ವಿಶೇಷ
ಹೆಣ್ಣು ಮಾಯೆಯಲ್ಲ ರೇಖಾ ವಿ.ಕಂಪ್ಲಿ ಹೆಣ್ಣು ಮಾಯೆಯಲ್ಲ ಹೆಣ್ಣು ನಿನ್ನ ಛಾಯೆಯೂ ಅಲ್ಲ ಹೆಣ್ಣು ಕಣ್ಣಿಗಬ್ಬವು ಅಲ್ಲ ಹೆಣ್ಣು ಕಾಮ ತೃಷೆಯೂ ಅಲ್ಲ ಹೆಣ್ಣು ಬರೀ ತಾಯಿಯಲ್ಲ ಹೆಣ್ಣು ಹೊನ್ನ ಆಶಿಸುವವಳಲ್ಲ ಹೆಣ್ಣು ಹಣದ ಬೆನ್ನು ಅಲ್ಲ ಹೆಣ್ಣು ಮಂದಾರ ಪುಷ್ಪವಲ್ಲ ಹೆಣ್ಣು ಚೆಂದದ ಗೊಂಬೆಯಲ್ಲ ಹೆಣ್ಣು ಮುನಿಯುವ ಮಾರಿಯಲ್ಲ ಹೆಣ್ಣು ನಿನ್ನ ಅಡಿಯಾಳು ಅಲ್ಲ ಹೆಣ್ಣು ನಿನ್ನ ಬದಲಿಸುವ ಕಣ್ಣು ಹೆಣ್ಣು ಶಕ್ತಿ ತುಂಬುವ ಆಂತಾಯ೯ ಶಕ್ತಿಯೊಂದು ಗಂಡಾದರೇ ಜಗದ್ಯುಕ್ತಿಯಾದವಳೇ ಹೆಣ್ಣು ***********
ಮಹಿಳಾದಿನದ ವಿಶೇಷ
ಮುಖವಾಡ ದಾಕ್ಷಾಯಣಿ ನಾಗರಾಜ ಮತ್ತೆ ಮುಸ್ಸಂಜೆಯಲಿ ಮುಸುಕಿನ ಗುದ್ದಾಟ ಆಗಷ್ಟೇ ಮುದ್ದೆಯಾದ ಹಾಸಿಗೆಯಲಿ ನಲುಗಿದ ಹೂಗಳ ಅಘ್ರಾಣಿಸಿ ತಡಕಾಡುತ್ತೇನೆ ಒಂದಷ್ಟಾದರೂ ನಿನ್ನ ಪ್ರೀತಿ ಘಮಲು ಉಳಿದಿದೆಯೇ ? ಪ್ರತಿಸಾರಿಯಂತೆಯೇ, ರವಷ್ಟು ಕೂಡ ಮುಲಾಜಿಲ್ಲದೆ ರಾಚುತ್ತದೆ ಮೂಗಿಗೆ ತುಸು ಕಾಮ ಮತ್ತಷ್ಟು ಗೆದ್ದೆನೆಂಬ ನಿನ್ನ ಅಹಂ,, ಜಾರಿದ ಕಣ್ಣಹನಿಗೆ ಜತನದಿಂದ ನಗುವಿನ ಮುಖವಾಡ ತೊಡಿಸಿಬಿಡುತ್ತೇನೆ ನೀನಿಲ್ಲದ ಮತ್ತೊಂದು ಮುಸ್ಸಂಜೆಯಲಿ ಮುಖವಾಡ ಕಳಚಿಟ್ಟು ನಿಂದಿಸುತ್ತೇನೆ ಹೇ ನಿರ್ದಯಿ ಬದುಕೇ ಅದೆಷ್ಟು ಮುಖವಾಡಗಳ ತೊಡಿಸುವೆ? ಜಾರಿಸುತ್ತಾ ಕಂಬನಿಗಳ ,,,, *******
ಮಹಿಳಾದಿನದ ವಿಶೇಷ
ವಿಪ್ಲವದ ಪತಂಗ ಶೃತಿ ಮೇಲುಸೀಮೆ ವಯಸ್ಸಿನ್ನೂ ಹದಿನಾಲ್ಕು ಎತ್ತ ನೋಡಿದರೂ ಹರಡಿರದ ಮೈ.. ಸಿನಿಮಾ ಮೋಡಿಯೋ ಹದಿವಯಸ್ಸಿನ ಮಂಕೋ ಆಗಿತ್ತಂತೆ ಪ್ರೇಮ.. ಶಾಲೆಗೆ ಬಿಟ್ಟು ಬಿಟ್ಟು ಬರೋ ಚಾಳಿ ಶುರುವಾಯಿತು ಶಾಲೆ ಹೋಗಲ್ಲ ಅನ್ನೋ ಖಯಾಲಿ.. ಬಂಧು ಒಬ್ಬನಿದ್ದನಂತೆ ಬಾಂಧವ್ಯ ಬೆಸೆಯಲು ಸಾಕಿತ್ತು ಇಷ್ಟು ಹೆತ್ತವರಿಗೆ ಊದಿಸಿದರು ವಾಲಗವ ಅಕ್ಷರದ ಬೆಲೆ ತಿಳಿಯದ ಹಿರೀಕರು ಯಾರಿಗೂ ಗೊತ್ತಾಗದಂತೆ ಮದುವೆ ಆಗಿಯೇ ಹೋಯಿತು ಕಗ್ಗತ್ತಲಲ್ಲಿ ತಿಳಿದೂ ತಿಳಿಯದೆ ಬಿದ್ದಿದ್ದಾಗಿತ್ತು ಸಂಸಾರದ ಸುಳಿಗೆ.. ಈಗೇನಿದ್ರೂ ದುಡಿತ ಬಿಡುವಿಲ್ಲದ ಗಳಿಗೆ.. ಹಸಿದ […]
ಮಹಿಳಾದಿನದ ವಿಶೇಷ
ಗೆಳತಿ ಕೇಳೆ ದೀಪಿಕಾಬಾಬು ಗೆಳತಿ ಕೇಳೆ, ಎಲ್ಲರಂತಲ್ಲ ನನ್ನವನು, ನನ್ನವನು ನನಗಾಗಿ ಇರುವವನು..! ತನ್ನ ಹಣೆಯ ಬರಹ ಬರೆದುಕೊಳ್ಳಲಾಗದೆ ಬೇರೆಯೆಲ್ಲರ ವಿಧಿ ಲಿಖಿತ ಬರೆಯುತ್ತ, ಸೃಷ್ಟಿಸಿದ ಮಗಳಾದ ಸರಸ್ವತಿಯನ್ನು ವರಿಸಿದ ಮೂರು ಶಿರವುಳ್ಳ ಬ್ರಹ್ಮನಂತಲ್ಲ, ಕಣೆ ಗೆಳತಿ ನನ್ನವನು..! ಸ್ಮಶಾನದ ಅಧಿಪತಿಯಾಗಿ ಭಸ್ಮ ಬಳಿದುಕೊಂಡು ಕೈಲಾಸನಾಥನೂ ಎನಿಸಿಕೊಂಡು ಪಾರ್ವತಿಯನ್ನು ವಿವಾಹವಾಗಿ ಗಂಗೆಯನ್ನು ಶಿರದಲ್ಲಿ ಮುಡಿದಿಹ ಶಂಕರನಂತಲ್ಲ , ಕಣೆ ಗೆಳತಿ ನನ್ನವನು..! ಶಾಂತ ಸಾಗರದಲ್ಲಿ ಸರ್ಪದ ಮೇಲೆ ಆಯಾಗಿ, ಲೋಕದ ಬಗ್ಗೆ ಚಿಂತಿಸದೆ ಮಲಗಿರುವ, ಶ್ರೀ ಮಹಾಲಕ್ಷ್ಮಿಯು […]
ಮಹಿಳಾದಿನದ ವಿಶೇಷ
ಹೆಣ್ಣಿನ ಸ್ವಗತ ಪ್ರೊ.ಕವಿತಾ ಸಾರಂಗಮಠ ಹೆಣ್ಣಿನ ಸ್ವಗತ ಹೆತ್ತವರಿಗೆ ಸಾಲವಾದೀತೆಂದು ಓದು ತ್ಯಜಿಸಿ ಸದಾ ನಗು ಬೀರುವಳು..! ವರದಕ್ಷಿಣೆ ಭಾರವಾದೀತೆಂದು ಮನ ಹಿಡಿಸದ ಮದುವೆಗೊಪ್ಪಿ ಸದಾ ನಗು ಬೀರುವಳು..! ಗೌರವ ಹಾಳಾದೀತೆಂದು ಕುಡುಕ ಪತಿಯೊಂದಿಗೆ ರಾಜಿಯಾಗಿ ಸದಾ ನಗು ಬೀರುವಳು..! ಇಲ್ಲ ಸಲ್ಲದ ಅಪವಾದಗಳೆಂದು ಒಡನಾಡಿಗಳೊಂದಿಗೆ ಹೊಂದಿಕೊಂಡು ಸದಾ ನಗು ಬೀರುವಳು..! ಸಮಾಜದಿ ಗಾಳವಾಗಬಾರದೆಂದು ಶೀಲಾಪಹರಣಗೊಂಡು ಆತ್ಮಹತ್ಯೆಗೆ ಶರಣಾದರೂ ನಗು ಬೀರುವಳು..! ಊರ್ಮಿಳೆ,ಅಹಲ್ಯೆ, ಸೀತೆಯರಿಗೆ ಅಪವಾದ ತಪ್ಪಲಿಲ್ಲ ,ನಾನಾವ ಲೆಕ್ಕವೆಂದು ಸದಾ ನಗು ಬೀರುವಳು..! ಅಸಹಜ ನಗುವ […]