ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೆಣ್ಣಿನ ಸ್ವಗತ

Woman Arranging Flowers On A Vase

ಪ್ರೊ.ಕವಿತಾ ಸಾರಂಗಮಠ

ಹೆಣ್ಣಿನ ಸ್ವಗತ

ಹೆತ್ತವರಿಗೆ ಸಾಲವಾದೀತೆಂದು
ಓದು ತ್ಯಜಿಸಿ
ಸದಾ ನಗು ಬೀರುವಳು..!

ವರದಕ್ಷಿಣೆ ಭಾರವಾದೀತೆಂದು
ಮನ ಹಿಡಿಸದ ಮದುವೆಗೊಪ್ಪಿ
ಸದಾ ನಗು ಬೀರುವಳು..!

ಗೌರವ ಹಾಳಾದೀತೆಂದು
ಕುಡುಕ ಪತಿಯೊಂದಿಗೆ ರಾಜಿಯಾಗಿ
ಸದಾ ನಗು ಬೀರುವಳು..!

ಇಲ್ಲ ಸಲ್ಲದ ಅಪವಾದಗಳೆಂದು
ಒಡನಾಡಿಗಳೊಂದಿಗೆ ಹೊಂದಿಕೊಂಡು
ಸದಾ ನಗು ಬೀರುವಳು..!

ಸಮಾಜದಿ ಗಾಳವಾಗಬಾರದೆಂದು
ಶೀಲಾಪಹರಣಗೊಂಡು
ಆತ್ಮಹತ್ಯೆಗೆ ಶರಣಾದರೂ
ನಗು ಬೀರುವಳು..!

ಊರ್ಮಿಳೆ,ಅಹಲ್ಯೆ, ಸೀತೆಯರಿಗೆ
ಅಪವಾದ ತಪ್ಪಲಿಲ್ಲ ,ನಾನಾವ ಲೆಕ್ಕವೆಂದು
ಸದಾ ನಗು ಬೀರುವಳು..!

ಅಸಹಜ ನಗುವ ಕಂಡು
ದೇವರೂ ನಕ್ಕಾನೆಂದು
ಸದಾ ನಗು ಬೀರುವಳು..!

ನೀನೆಷ್ಟೇ ಕಷ್ಟ ಕೊಟ್ಟರೂ
ನಾ ಅಳಲೇ ಇಲ್ಲೆಂದು ಅಣುಕಿಸುವಂತೆ
ಸಾವಲ್ಲೂ ನಗು ಬೀರುವಳು..!

********

About The Author

Leave a Reply

You cannot copy content of this page