ಮಹಿಳಾದಿನದ ವಿಶೇಷ

ನಾವು ನಿಮ್ಮ ಹಾಗಲ್ಲ

Image result for sculptures of modernwoman

ಸೌಜನ್ಯ ದತ್ತರಾಜ

ಹೌದು ಖಂಡಿತಾ
ನಾವು ನಿಮ್ಮ ಹಾಗಲ್ಲ

ಪ್ರೀತಿಯಲ್ಲಿ
ಸೋಲುವವರೂ
ಸಂಸಾರವನ್ನು
ಲೆಕ್ಕಾಚಾರದಲಿ
ನಡೆಸುವವರು ನಾವು

ಮನೆ ಒಳಗೆ
ಮಹಾಭಾರತವೇ
ನಡೆಯುತ್ತಿದ್ದರೂ
ಮಂದಿ ಎದುರು
ಮುಗುಳ್ನಗುವವರು ನಾವು

ದೇಶ ದೇಶಾಂತರದ
ರಾಜಕಾರಣಕ್ಕೂ ಮೊದಲು
ಮನೆಮಂದಿಗಾಗಿ
ಹೋರಾಡುವವರು
ಬಡಿದಾಡುವವರು ನಾವು

ದುಃಖವೆಷ್ಟೇ ಇದ್ದರೂ
ತುಟಿಯ ರಂಗು
ಕಣ್ಣಿನ ಕಾಡಿಗೆ
ಕಡಿಮೆ ಆಗದಂತೆ
ನೋಡಿಕೊಳ್ಳುವವರು ನಾವು

ನಾವೇ ಶ್ರೇಷ್ಠವೆಂಬ
ಹೆಮ್ಮೆ ನಮಗೆಂದಿಗೂ ಇಲ್ಲ
ಆದರೂ ಹೆಣ್ತನದ
ಸಂಭ್ರಮ ಅಷ್ಟು
ಸುಲಭಕ್ಕೆ ದಕ್ಕುವಂತಹದ್ದಲ್ಲ

ಹೌದು ಖಂಡಿತಾ
ನಾವು ನಿಮ್ಮ ಹಾಗಲ್ಲ

********

2 thoughts on “ಮಹಿಳಾದಿನದ ವಿಶೇಷ

Leave a Reply

Back To Top