ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೆಣ್ಣು ಮಾಯೆಯಲ್ಲ

Woman With Face Art While Holding Leaves

ರೇಖಾ ವಿ.ಕಂಪ್ಲಿ

ಹೆಣ್ಣು ಮಾಯೆಯಲ್ಲ
ಹೆಣ್ಣು ನಿನ್ನ ಛಾಯೆಯೂ ಅಲ್ಲ
ಹೆಣ್ಣು ಕಣ್ಣಿಗಬ್ಬವು ಅಲ್ಲ
ಹೆಣ್ಣು ಕಾಮ ತೃಷೆಯೂ ಅಲ್ಲ
ಹೆಣ್ಣು ಬರೀ ತಾಯಿಯಲ್ಲ
ಹೆಣ್ಣು ಹೊನ್ನ ಆಶಿಸುವವಳಲ್ಲ
ಹೆಣ್ಣು ಹಣದ ಬೆನ್ನು ಅಲ್ಲ
ಹೆಣ್ಣು ಮಂದಾರ ಪುಷ್ಪವಲ್ಲ
ಹೆಣ್ಣು ಚೆಂದದ ಗೊಂಬೆಯಲ್ಲ
ಹೆಣ್ಣು ಮುನಿಯುವ ಮಾರಿಯಲ್ಲ
ಹೆಣ್ಣು ನಿನ್ನ ಅಡಿಯಾಳು ಅಲ್ಲ
ಹೆಣ್ಣು ನಿನ್ನ ಬದಲಿಸುವ ಕಣ್ಣು
ಹೆಣ್ಣು ಶಕ್ತಿ ತುಂಬುವ ಆಂತಾಯ೯
ಶಕ್ತಿಯೊಂದು ಗಂಡಾದರೇ
ಜಗದ್ಯುಕ್ತಿಯಾದವಳೇ ಹೆಣ್ಣು

***********

About The Author

Leave a Reply

You cannot copy content of this page

Scroll to Top