ಕಾವ್ಯಯಾನ
ಕಾಡಿಗೆಯ ಹೆಜ್ಜೆ ಪೂರ್ಣಿಮಾ ಸುರೇಶ್ ಹುಣ್ಣಿಮೆಯಂತಹ ಹೆಣ್ಣೊಂದು ಶುಕ್ಲ-ಕೃಷ್ಣ ಪಕ್ಷಗಳಲಿ ಹೊರಳಿ ತುಸುತುಸುವೇ ಅರಳಿ ಒಂದಿಷ್ಟು ಬಾಡಿ,ಕರಗಿ ಮತ್ತೆ ಹುಡುಹುಡುಕಿ ಅಮಾವಾಸ್ಯೆಯಂತಹ ಗಂಡನ್ನು ಪ್ರೇಮಿಸಿದಳು! ಕಪ್ಪು- ಎಲ್ಲಿರಿಸುವೆ ಕುಹಕಕೆ ಉತ್ತರಿಸುವಂತೆ ಬಚ್ಚಿಟ್ಟುಕೊಂಡಳು ಕಣ್ಣೊಳಗೆ ಅವನನ್ನು ಕಾಡಿಗೆಯಾಗಿಸಿ! ಅವನೀಗ ಅವಳ ನಗುವಿಗೆ ನೀಲ ಆಗಸವಾಗುತ್ತಾನೆ. ಅವಳ ನೋವಿಗೆ ಕರಿನೀರಾಗಿ ಧುಮುಕಿ ಜಲಪಾತವಾಗುತ್ತಾನೆ ಕಡಲಾಗಿ ಸುಯ್ಲಿಟ್ಟು ಆವಿಯಾಗಿ ಮಳೆಯಾಗಿ ಅವಳ ತೋಯಿಸುತ್ತಾನೆ. ಜಗಕೆ ಕಾಣುವ ಕಣ್ಣಿನ ಬೆಳಕು, ಮೊರೆವ ಕಡಲಲೆಯ ಸುಯ್ಲು ಸುರಿವ ಮಳೆ ಹನಿಗಳು ಅರ್ಥವಾಗುವುದೇ ಇಲ್ಲ. *******
ಕಾವ್ಯಯಾನ
ಬೋನ್ಸಾಯ್. ಶಶಿಕಲಾ ವೀ ಹುಡೇದ. ಈ ಮಣ್ಣ ಕಣಕಣದ ಶಕ್ತಿಯೆಲ್ಲವೂ ನನ್ನ ಒಡಲಾಳದಲಿ ಮೈಮನಗಳಲಿ ವಸಂತನ ಪ್ರೀತಿಯ ಗಾಯದ ಗುರುತುಗಳು ಒನಪಿಲ್ಲದ ವೈಯ್ಯಾರದಲಿ ಒಡ್ಡು ಮುರಿಯುವ ಗಿಡ್ಡ ಮೈ ನೆತ್ತರೆಲ್ಲವೂ ಹರಿತ್ತಾಗಿ ಎಲೆಎಲೆಯೂ ಮಿಂಚು ಚಳಿಗಾಳಿಗೆ ಅದರುವ ಮೈ ನಾನು ಬದುಕಿರುವೆನೆಂಬುದಕೆ ಪುರಾವೆ ಬುಡದಡಿಯಲಿ ತಟ್ಟೆಯಲಿ ನಾಕೇ ನಾಕಿಂಚಿನ ನೆಲವೇ ಸಾಕ್ಷಿ ನಿಡುಸುಯ್ಯುವ ನನ್ನ ಪ್ರತಿ ಉಸುರಿಗೆ ನನ್ನ ಸುತ್ತಲೂ ಹೆಣೆದಿರುವ ನನ್ನದೇ ಬೇರುಗಳು ಶೋಕಿಸುವ ಬಿಳಲುಗಳು ಎಂಟ್ಹತ್ತು ಎಲೆಗಳು ಬೋನ್ಸಾಯ್ ಹೆಸರಲಿ ಕುಬ್ಜ ಬದುಕು ವರುಷಗಳುರುಳಿದರೂ […]
ಕಾವ್ಯಯಾನ
ಬಾರಯ್ಯ ಸಂಭವಿಸು ಮದ್ದೂರು ಮಧುಸೂದನ್ ಕೇಡುಗಾಲಕೆ ನಾಯಿ ಮೊಟ್ಟೆ ಇಕ್ಕಿದೆ ಮೊಟ್ಟೆ ಇಕ್ಕಿದ್ದು ದಿಟವೇ ? ಪ್ರಶ್ನಿಸುವ ಬಾಯಿಗಳಿಗೆ ಈಗಾಗಲೇ ಕರ್ಪ್ಯೂ ಜಾರಿಯಾಗಿದೆ ಹುತ್ತವೇ ಹಾವನ್ನು ನುಂಗುವ ದುರಿತ ಕಾಲವಿದು ಭುಸಗುಡುವ ಬಾಯಿಗೆ ಬಾಂಬಿಕ್ಕುವ ಭಯ ಚಾಲು ಇದೆ ಬಣ್ಣ ಬಣ್ಣದ ಪ್ರಣಾಳಿಕೆಗಳೆಂಬ ಟಿಕಳಿಗಳನ್ನು ಈಗಾಗಲೇ ಕುಂಡಿ ಮೇಲೆ ಅಂಟಿಸಿಯಾಗಿದೆ ಶಬ್ದಕೆ ನಾಚಿಕೆಯಾಗುವಷ್ಟು ಮೈಕಾಸುರ ಅಬ್ಬರಿಸುತ್ತಿದ್ದಾನೆ ಕಾಶ್ಮೀರದೀ ಕನ್ಯಾಕುಮಾರಿವರೆಗೆ ಚಾಲ್ತಿಯಲ್ಲಿದೆ. ಸಗಣಿ ತಿಂದವರ ಭಕ್ತಿಯ ಮಾರಾಟ ಜೋರಿದೆ ಕಾವಿ ಮರೆಯಲಿ ತ್ರಿಶೂಲಗಳಿಗೂ ನಾಚಿಕೆ ಸಂಭವಿಸಿದೆ ಪ್ರಜಾಪ್ರಭುತ್ವದ ಸಿಂಹಾಸನಕೆ […]
ಕಾವ್ಯಯಾನ
ಮೌನಗೀತೆ ವಿಶಾಲಾ ಆರಾಧ್ಯ ನೀನಂದು ಬಳಿ ಸರಿದು ಒಲವಿಂದ ನಗು ತಂದು ಬೀಸುವ ಗಾಳಿಯೊಲು ಹಿತವೆನಿಸಿದೇ ನಾನದನು ಹೇಳದಲೆ ಗುಟ್ಟಾಗಿ ಬದಿಗಿಟ್ಟು ಎದೆಯ ಗೂಡಲಿ ಒಂದು ಗುಡಿ ಮಾಡಿದೆ ಗುಡಿಯ ಗರ್ಭದಿ ಅಲ್ಲಿ ಮೂರುತಿಯು ನೀನಾದೆ ಕಣ್ಣ ಭಕುತಿಗೆ ತಾನೇ ಪ್ರತಿಧ್ವನಿಸಿದೆ ವನವೆಲ್ಲಾ ಓಡಾಡಿ ಪತ್ರೆಯದು ಸಿಗದಾಗಿ ಮನದೊಲವ ಪತ್ರೆ ಯನೇ ನಿನಗಿರಿಸಿ ನೀನಾರೋ ನಾನಾರೋ ಒಂದು ನೋಟದಿ ಒಲಿದು ಹೃದಯದಂಗಳವೆಲ್ಲ ಬೆಳಕಾಗಿದೆ ಮತ್ತೊಮ್ಮೆ ನೀ ಸುಳಿದು ಮನದ ಭಾವವ ಉಲಿದು ಚಿತ್ತದಲಿ ದಿಟವನ್ನು ಅನುಗೊಳಿಸಿಡು || […]
ಕಾವ್ಯಯಾನ
ಗಝಲ್ ಹೇಮಗಂಗಾ ಸಮ ಸಮಾಜದ ಭವ್ಯ ಮಂಟಪಕೆ ಬುನಾದಿಯಾದವರು ನೀವು ತಮ ತೊಡೆದು ಅಜ್ಞಾನಿಗಳ ಮನ ಬೆಳಗಿಸಿದವರು ನೀವು ಸೃಷ್ಟಿಯಲ್ಲಿರದ ಮೇಲು ಕೀಳೆಂಬ ದೃಷ್ಟಿ ಬೇಕೇಕೆ ಈ ಜಗದಿ? ಅಸ್ಪೃಶ್ಯತೆಯ ಪಿಡುಗ ಹೊಸಕಲು ದಾರಿ ತೋರಿದವರು ನೀವು ಸಮಾನತೆ ಎಂಬುದು ಉಳಿಯಬಾರದು ಬರಿಯ ನಿಘಂಟಿನಲ್ಲಿ ಶೋಷಿತರ ಅಡಗಿಹೋದ ದನಿಗೆ ಕೊರಳಾದವರು ನೀವು ನೆನೆವೆವು ನಿಮ್ಮ ನವರೂಪ ತಳೆದ ಸಂವಿಧಾನದ ಶಿಲ್ಪಿಯೆಂದು ಭವಿಷ್ಯದ ಪುಟಪುಟದಿ ಹೊಸ ಭಾಷ್ಯ ಬರೆದವರು ನೀವು ಭೇದಭಾವವಿಲ್ಲ ಸಾವಿಗೆ ಎಲ್ಲರೊಂದೇ ಮರಳಿ ಮಣ್ಣ ಸೇರಿರೆ […]
ಕಾವ್ಯಯಾನ
ನಿಜ ಜಗಕೆ ಧಾವಂತವಿಲ್ಲ… ದೇವಯಾನಿ ಧಾವಂತವಿರಲಿಲ್ಲ ಬೆಳಗಿಗೆ ಈ ಮೊದಲಿನಿಂದಲೂ ತನ್ನಷ್ಟಕ್ಕೆ ತಾನೇ ಮೂಡುವ ಸೂರ್ಯ ಚೆಂಬೆಳಕ ಚೆಲ್ಲುವುದಕ್ಕೆ ಚುರುಗುಟ್ಟಿಸುವ ಬಿಸಿಲಹೊಗೆ ಚಿಮ್ಮಿಸಲು ಗಡಿಯಾರ ಬೇಕಿರಲೇ ಇಲ್ಲ ಹಕ್ಕಿ ಚಿಲಿಪಿಲಿಯೂ ಹೂ ಹಣ್ಣುಗಳೂ ಎಲ್ಲವೂ ಕಾಯುತ್ತಿದ್ದುದು ಸೂರ್ಯ ತೇಜದ ಗಡಿಯಾರ ತಾನೆ? ಋತುವುರುಳಿ ಋತುವಾಗಮಿಸಿ ನಗುವ ವಸುಂಧರೆಗೆ ಆಗಾಗ ಹೊನ್ನ ಹೊದಿಕೆ , ಶ್ವೇತ ಚಾದರ ಮಳೆಹನಿಯ ತೋರಣ ಎಲ್ಲಕೂ ರವಿಕಿರಣವೇ ಕಾರಣ ಈಗಲೀಗೀಗ ಗಡಿಯಾರದ ಮುಳ್ಳುಗಳನೂ ಮೀರಿಸಿದ್ದಾಯ್ತು ಹುಲುಮಾನವ ಹಾರಾಟ ,ಧಾವಂತ ನಡೆಯದೆಲೆ ಗುರಿ ಸೇರುವ […]
ಕಾವ್ಯಯಾನ
ಸಂವಿಧಾನ ಶಿಲ್ಪಿ ತೇಜಾವತಿ ಹೆಚ್. ಡಿ ರಾಮಜಿ ಭೀಮಾಬಾಯಿಯ ಹದಿನಾಲ್ಕನೆಯ ಪುತ್ರರತ್ನವಾಗಿ ಬೆಳಗುಬೈಗು ಧೋಹೆ ರಾಮಾಯಣ ಮಹಾಭಾರತ ಸಂಸ್ಕಾರವಾಗಿ ಹೋದಲ್ಲೆಲ್ಲಾ ಅಸ್ಪೃಶ್ಯತೆಯ ಬಿಸಿಯನ್ನೇ ನೀನುಂಡೆ ಸಹಪಾಠಿಗಳೆದುರು ದಲಿತನೆಂದು ಅವಮಾನಕ್ಕೀಡಾದೆ! ಫೆಂಡೆಸೆ ಅಂಬೇಡ್ಕರರ ಪ್ರೀತಿಯ ತುತ್ತಿಗೆ ಪಾತ್ರರಾಗಿ ಗುರುಗಳ ಕೈಯಲಿ ಭೀಮರಾವ್ ಅಂಬೇಡ್ಕರ್ ಆಗಿ ಅಸ್ಪೃಶ್ಯರ ವರ್ಗದಲ್ಲೇ ಮೊದಲು ಸನ್ಮಾನಕ್ಕೆ ಪಾತ್ರನಾದೆ ಭಗವಾನ್ ಬುದ್ಧನ ಚರಿತ್ರೆಯ ಹೊತ್ತಗೆಗೆ ಆಕರ್ಷಿತನಾದೆ ! ಹೆಜ್ಜೆ ಹೆಜ್ಜೆಗೂ ತಿರಸ್ಕಾರದ ಉರಿಯಲ್ಲಿ ಹೊಗೆಯಾಗಿ ಪಣತೊಟ್ಟೆ ದಲಿತವರ್ಗದವರ ಪಾಲಿಗೆ ಜಾಗೃತಿಯಾಗಿ ಬಹಿಷ್ಕೃತ ಭಾರತ ಪತ್ರಿಕೆಗೆ ಸಾಮಾಜಿಕ […]
ಕಾವ್ಯಯಾನ
ಭೀಮ ದೀಪ ಎ ಎಸ್. ಮಕಾನದಾರ ಸಮ ಸಮಾಜದ ಕನಸುಗಾರ ಭಾರತ ಮಾತೆಯ ಕುವರ ಡಾ. ಬಿ ಆರ್. ಅಂಬೇಡ್ಕರ್ ! ಕಪ್ಪು ನೆಲದ ಕೆಂಪುಗಣ್ಣಿನ ಪಾರಿವಾಳ ಗುಣದ ಭೀಮ ! ಕೋಮುವಾದ ಬ್ರಾಮಣ್ಯ ಬಂಡವಾಳಶಾಹಿಗಳ ಬಣ್ಣ ಬಯಲು ಮಾಡಿದ ಸಮಾನತೆಯ ಮಂತ್ರ ಜಪಿಸಿ ಕಪ್ಪು ಜನರ ಸೂರ್ಯನಾದ ಬಿಳಿ ಕರಿಯರ ನಡುವಿನ ಅಡ್ಡಗೋಡೆಯ ಕೆಡವಿದ ಅಪ್ರತಿಮ ಚಿಂತಕ ದ್ವೀಪಗಳಾಗಿದ್ದ ಕೇರಿ ಮೊಹಲ್ಲಾ ಬಡಾವಣೆಗಳಲ್ಲಿ ಚೈತನ್ಯ ದೀಪ ಬೆಳಗಿಸಿದ ವರ್ಗ ವರ್ಣದ ವಿಷದ ಹಾವಿಗೆ ಹೆಡಮುರಿಗೆ ಕಟ್ಟಿದ […]
ಕಾವ್ಯಯಾನ
ಡಾ. ಬಿ.ಆರ್ ಅಂಬೇಡ್ಕರ್ ಸಿಂಧು ಭಾರ್ಗವ್ ಮಹಾರಾಷ್ಟ್ರದ ಅಂಬೇವಾಡದಲಿ ಅಂಬೆಗಾಲಿಡುತ ನೀ ಬಂದೆ ಭೀಮಬಾಯಿಯವರ ಕೊನೆಯ ಮುದ್ದಿನ ಮಗನಾದೆ ಶೋಷಿತ ಜನರ ನೋವನು ಮರೆಸಲು ಮುಂದಾದೆ ಹಕ್ಕುಗಳಿಗಾಗಿ ಹೋರಾಟ ನಡೆಸಿ ದನಿಯಾದೆ ಮುಗ್ಧ ಜನರಿಗೆ ದೀನದಯಾಳು ನೀನಾದೆ ಜ್ಞಾನದ ದೀಪವ ಮನದಲಿ ನೀ ಬೆಳಗಿಸಿದೆ ಸಂವಿಧಾನವ ರಚನೆಯ ಮಾಡಿ ಜನರಿಗೆ ನೀ ನೆಲೆ ನೀಡಿದೆ ಬುದ್ಧನ ಅನುಯಾಯಿಗಾಗಿ ಧೈರ್ಯದ ಗುಂಡಿಗೆಯ ಹೊಂದಿದೆ ಅಸ್ಪರ್ಶತೆಯ ಅಂಧಕಾರವ ನೀ ಹೊಡೆದೋಡಿಸಿದೆ ಸಮಾನತೆಯ ಸಾರುತ ಜನರ ಒಗ್ಗೂಡಿಸಿದೆ ಭಾರತಾಂಬೆಯ ಕುವರನಾಗಿ ದೇಶಕೆ […]
ಕಾವ್ಯಯಾನ
ಸಾವಿಲ್ಲದ ಸೂರ್ಯ ಸಾಯಬಣ್ಣ ಎಂ. ಮಾದರ ಸಾವಿಲ್ಲದ ಸೂರ್ಯ ಹುಟ್ಟಿ ಬಂದ ಕತ್ತಲು ಜಗದಲಿ ನಿಲ್ಲಲು ನೆಲವಿಲ್ಲ ಆಂತರಿಕ್ಷದಲ್ಲೂ ಜಾಗವಿಲ್ಲ ಅಂತದರಲ್ಲಿಯೇ ಹುಟ್ಟಿದ ಅಂಬೆವಾಡಿಯಲ್ಲಿ !! ಕಾಡಿಗೆ ತುಂಬಿರುವ ದೀಪಗಳ ನಾಡಲ್ಲಿ ಮುಟ್ಟಿದರೆ ಮೈಲಿಗೆ ಎನ್ನುವ ನೀರಿನ ನೆಲದಲ್ಲಿ ಹುಸಿ ನಾಮವ ಆಕ್ರಮಿಸಿದ ಮೂಲಿಗರ ನಾಡಲ್ಲಿ ಖಡ್ಗವಿಲ್ಲ ಕೈಯಲ್ಲಿ ಕಿರೀಟವಿಲ್ಲ ತಲೆಯಲಿ ರಥವೇರಿಯಂತೂ ಬರಲಿಲ್ಲ ಸಿರಿಯನ್ನೂ ಮೆಟ್ಟಲಿಲ್ಲ ಭಾರತಾಂಬೆಯನ್ನು ಹೊತ್ತು ಉದಯಿಸಿದನು ಕತ್ತಲೆ ಜಗದಲಿ !! ಮುಂಡುಕಗಳ ನಾಡಲ್ಲಿ ಗೋರಿಯ ಒಳಗೆ ಸೇರಿರುವ ಮಾನವೀಯತೆ ಮಸಣದಲಿ ಬಲಹೀನರ […]