ಕಾವ್ಯಯಾನ

ಮೌನಗೀತೆ

ವಿಶಾಲಾ ಆರಾಧ್ಯ

ನೀನಂದು ಬಳಿ ಸರಿದು
ಒಲವಿಂದ ನಗು ತಂದು
ಬೀಸುವ ಗಾಳಿಯೊಲು
ಹಿತವೆನಿಸಿದೇ

ನಾನದನು ಹೇಳದಲೆ
ಗುಟ್ಟಾಗಿ ಬದಿಗಿಟ್ಟು
ಎದೆಯ ಗೂಡಲಿ ಒಂದು
ಗುಡಿ ಮಾಡಿದೆ

ಗುಡಿಯ ಗರ್ಭದಿ ಅಲ್ಲಿ
ಮೂರುತಿಯು ನೀನಾದೆ
ಕಣ್ಣ ಭಕುತಿಗೆ ತಾನೇ
ಪ್ರತಿಧ್ವನಿಸಿದೆ

ವನವೆಲ್ಲಾ ಓಡಾಡಿ
ಪತ್ರೆಯದು ಸಿಗದಾಗಿ
ಮನದೊಲವ ಪತ್ರೆ
ಯನೇ ನಿನಗಿರಿಸಿ

ನೀನಾರೋ ನಾನಾರೋ
ಒಂದು ನೋಟದಿ ಒಲಿದು
ಹೃದಯದಂಗಳವೆಲ್ಲ
ಬೆಳಕಾಗಿದೆ

ಮತ್ತೊಮ್ಮೆ ನೀ ಸುಳಿದು
ಮನದ ಭಾವವ ಉಲಿದು
ಚಿತ್ತದಲಿ ದಿಟವನ್ನು
ಅನುಗೊಳಿಸಿಡು ||

******


Leave a Reply

Back To Top