ಕಾವ್ಯಯಾನ

ಸಾವಿಲ್ಲದ ಸೂರ್ಯ

Dr B R Ambedkar Death Anniversary mahaparinirvan Diwas Of ambedkar ...

ಸಾಯಬಣ್ಣ ಎಂ. ಮಾದರ

ಸಾವಿಲ್ಲದ ಸೂರ್ಯ ಹುಟ್ಟಿ ಬಂದ
ಕತ್ತಲು ಜಗದಲಿ
ನಿಲ್ಲಲು ನೆಲವಿಲ್ಲ
ಆಂತರಿಕ್ಷದಲ್ಲೂ ಜಾಗವಿಲ್ಲ
ಅಂತದರಲ್ಲಿಯೇ ಹುಟ್ಟಿದ ಅಂಬೆವಾಡಿಯಲ್ಲಿ !!

ಕಾಡಿಗೆ ತುಂಬಿರುವ ದೀಪಗಳ ನಾಡಲ್ಲಿ
ಮುಟ್ಟಿದರೆ ಮೈಲಿಗೆ ಎನ್ನುವ ನೀರಿನ ನೆಲದಲ್ಲಿ
ಹುಸಿ ನಾಮವ ಆಕ್ರಮಿಸಿದ ಮೂಲಿಗರ ನಾಡಲ್ಲಿ
ಖಡ್ಗವಿಲ್ಲ ಕೈಯಲ್ಲಿ
ಕಿರೀಟವಿಲ್ಲ ತಲೆಯಲಿ
ರಥವೇರಿಯಂತೂ ಬರಲಿಲ್ಲ
ಸಿರಿಯನ್ನೂ ಮೆಟ್ಟಲಿಲ್ಲ ಭಾರತಾಂಬೆಯನ್ನು ಹೊತ್ತು
ಉದಯಿಸಿದನು ಕತ್ತಲೆ ಜಗದಲಿ !!

ಮುಂಡುಕಗಳ ನಾಡಲ್ಲಿ
ಗೋರಿಯ ಒಳಗೆ ಸೇರಿರುವ ಮಾನವೀಯತೆ ಮಸಣದಲಿ
ಬಲಹೀನರ ಕಣ್ಣು ಕಿತ್ತಿ
ನಾಲಿಗೆ ಸೀಳಿ ಬೆತ್ತಲೆ ಮಾಡಿ
ಅಗ್ನಿ ಕುಂಡ ಹಾಕಿ ಸುರಪಾನದಲಿ ಸುರಿಯುವರನ್ನು
ಕತ್ತು ಸೀಳಿದನಲ್ಲ
ಸಂವಿಧಾನ ಅಸ್ತ್ರದಲಿ!!

ಬುದ್ಧನ ಬಡಿದಟ್ಟಿದರು
ಬಸವಗ ಕುತ್ತಿಗೆ ಕೊಡಲಿ ಹಾಕಿ
ವಿವೇಕವಾಣಿ ಅಳಿಸಿ
ಗಹಗಹಿಸಿ ನಗುತ್ತಿದ್ದರಲ್ಲ
ಮೂಕ ದೇವರ ತಾಣದಲಿ
ಹೊಟ್ಟೆ ಹೊರೆಯುವರ ಸಾಲಲಿ
ನೆಲದ ಮಕ್ಕಳ ಕಣ್ಣೀರ
ಹಸಿವಿನ ಆಸರೆಗಾಗಿ
ಉದಯಿಸಿದರು ಕಾಮದೇನು ಕಲ್ಪವೃಕ್ಷವಾಗಿ!!

ಮನುಸ್ಮೃತಿ ಸುಟ್ಟು ಸುಳ್ಳಿನ ಕಂತೆ ಪುರಾಣ ಮೆಟ್ಟಿಲಾಗಿ ಮೆಟ್ಟಿ
ಸಕ್ಕರೆ ಮೇಯುವ ಸಾಲು ನಿಂತ ಕೆಂಪು ಕರಿ ಇರುವೆಗಳಿಗೂ ಅಭಯ ನೀಡಿ
ಕಣ್ಣು ಕಾಣದ ಗಾವಿಲರಿಗೂ ದೀಪದಾರಿಯಾಗಿ
ಅಖಂಡತೆಯ ಜೈಘೋಷ ಮೊಳಗಿಸಿ
ಅಷ್ಟದಿಕ್ಕುಗಳಲ್ಲಿ ಉದಯಿಸಿದ
ಭೀಮ ಜ್ಯೋತಿಯಾಗಿ !!
ಸಾವಿಲ್ಲದ ಸೂರ್ಯನಾಗಿ.!

******

One thought on “ಕಾವ್ಯಯಾನ

Leave a Reply

Back To Top