ಕಾವ್ಯಯಾನ

ಗಝಲ್

10 Important facts about the Indian constitution

ಹೇಮಗಂಗಾ

ಸಮ ಸಮಾಜದ ಭವ್ಯ ಮಂಟಪಕೆ ಬುನಾದಿಯಾದವರು ನೀವು
ತಮ ತೊಡೆದು ಅಜ್ಞಾನಿಗಳ ಮನ ಬೆಳಗಿಸಿದವರು ನೀವು

ಸೃಷ್ಟಿಯಲ್ಲಿರದ ಮೇಲು ಕೀಳೆಂಬ ದೃಷ್ಟಿ ಬೇಕೇಕೆ ಈ ಜಗದಿ?
ಅಸ್ಪೃಶ್ಯತೆಯ ಪಿಡುಗ ಹೊಸಕಲು ದಾರಿ ತೋರಿದವರು ನೀವು

ಸಮಾನತೆ ಎಂಬುದು ಉಳಿಯಬಾರದು ಬರಿಯ ನಿಘಂಟಿನಲ್ಲಿ
ಶೋಷಿತರ ಅಡಗಿಹೋದ ದನಿಗೆ ಕೊರಳಾದವರು ನೀವು

ನೆನೆವೆವು ನಿಮ್ಮ ನವರೂಪ ತಳೆದ ಸಂವಿಧಾನದ ಶಿಲ್ಪಿಯೆಂದು
ಭವಿಷ್ಯದ ಪುಟಪುಟದಿ ಹೊಸ ಭಾಷ್ಯ ಬರೆದವರು ನೀವು

ಭೇದಭಾವವಿಲ್ಲ ಸಾವಿಗೆ ಎಲ್ಲರೊಂದೇ ಮರಳಿ ಮಣ್ಣ ಸೇರಿರೆ
ಅರಿವು ಮೂಡಿಸಿ ಅಜರಾಮರರಾಗಿ ಉಳಿದವರು ನೀವು

***********************

3 thoughts on “ಕಾವ್ಯಯಾನ

Leave a Reply

Back To Top