Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಶಾಪ ಡಾ.ಗೋವಿಂದ ಹೆಗಡೆ ಶಾಪ ಸಣ್ಣ ಪುಟ್ಟವು ಸಾಲುವುದಿಲ್ಲ ಅಂತ ದೊಡ್ಡ ಹಂಡೆ, ಬಾನಿ, ಕೊಪ್ಪರಿಗೆ ಗಳನ್ನೇ ಆಳಕ್ಕಿಳಿಸಿದೆ ಕವಿತೆಗಳ ತುಂಬಿ- ಕೊಂಡು ಬರಲೆಂದು ಒಡಲ ತುಂಬ ಖಾಲಿ ಖಾಲಿ ಹೊರಳಿ ಬಂದಿವೆ ಬಾವಿಲಿ ಜಲ ಬತ್ತಿ ಹೋಯ್ತೆ ಈಗ ನಡೆದಿದೆ ಕವಿತೆಯ ಸುಳಿವೇ ಇರದ ಪೊಳ್ಳು ಪದಗಳ ಸಂತೆ ( ಇದೂ ಅವುಗಳಲ್ಲಿ ಒಂದಂತೆ?!) ** ಭಾರೀ ಜರಿ ಪೋಷಾಕು ಆಳೆತ್ತರದ ಹೂ ಹಾರ ಮಸ್ತು ಗುಲಾಲು ಬಾಜಾ ಬಜಂತ್ರಿ ಗಳಲ್ಲಿ ನಡೆದಿದೆ ಶವದ ಮೆರವಣಿಗೆ […]

ಕಾವ್ಯಯಾನ

ಯಾಕಿಷ್ಟು ಬೇಸರ? ದೀಪಿಕಾ ಬಾಬು ಯಾಕಿಷ್ಟು ಬೇಸರ ಈ ಮನಸಿಗೆ ನೀ ಬಾರದೆ ಹೋದರೆ ನನ್ನ ಕನಸಿಗೆ..! ಉಳಿಗಾಲ ವಿಲ್ಲ ಈಗ ಆ ನಿದೆರೆಗೆ ನೀ ಬೇಗ ಬರುವೆಯಾ ನನ್ನ ಮನಸಿಗೆ…!! ದೂರದ ‌ಪರಿಚಯ ನಮ್ಮದು ಆದೇವೂ ಆತ್ಮೀಯರಿಂದು, ಕಾರಣವೇ ಬೇಕೆಯೆಂದು ಬಯಸದು ಮನಸಿದು ಇಂದು..!! ನಮ್ಮಯ ಸಲ್ಲಾಪದ ಪ್ರೀತಿಗೆ ಸಿಕ್ಕಿದೆ ಮನೆಯಲ್ಲಿ ಒಪ್ಪಿಗೆ ಮದುವೆ ದಿಬ್ಬಣದ ಹೊತ್ತಿಗೆ ಆಗುವೆವು ಆದರ್ಶದ ಜೋಡಿಗೆ..!! ಮೋಡಿ ಯದು ಮಾಡಿದೆ ನೋಡು ನಿ‌ನ್ನೆದೆಯ ಉಸಿರಿನ ಹಾಡು..! ಹಿಡಿದಿರುವ ಪ್ರೀತಿಯ ಜಾಡು […]

ಕಾವ್ಯಯಾನ

ಸಾಲಿನ ಜಾಡು ಹಿಡಿದು ಡಾ.ಗೋವಿಂದ ಹೆಗಡೆ “ಕತ್ತಲಿನ ಮುಖ ಮೀಸೆ…” ಮತ್ತು “ರೆಪ್ಪೆಗಳ ತಂತಿಯ ಮೇಲೆ…” ಸುಮಾರು ೧೯೮೭- ೮೮ ಇರಬೇಕು. ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದೆ .ತಿಂಗಳ ತುಷಾರ ಮಾಸ ಪತ್ರಿಕೆಯ ಚಿತ್ರ ಕವನ ಸ್ಪರ್ಧೆಯ ಬಹುಮಾನಿತ ಕವನ ಮನಸೆಳೆಯಿತು. ಮೊದಲಿಗೆ ಚಿತ್ರದ ಬಗ್ಗೆ ಹೇಳಬೇಕು. ಕತ್ತಲಿನಲ್ಲಿ ದೀಪದ ಕಂಬ, ಉರಿಯುತ್ತಿರುವ ದೀಪದ ಕುಡಿ, ಸೊಡರು. ಅದನ್ನು ತಿದ್ದಲು ಮುಂದೆ ಬಂದಿರುವ ಹೆಣ್ಣಿನ, ತುಂಬು ಬಳೆಗಳಿರುವ ಅಂದದ ಕೈ.ಚಿತ್ರ ‘ಯಜ್ಞ’ ಮಂಗಳೂರು ಅವರದು ಇರಬೇಕು, ಖಾತ್ರಿಯಾಗಿ ನೆನಪಿಲ್ಲ. […]

ಕಾವ್ಯಯಾನ

ಬೇಕಿತ್ತ..? ಮದುಸೂದನ ಮದ್ದೂರು ಬೇಕಿತ್ತ..? ತಂಗಾಳಿಗೆ ಮೈಯೊಡ್ಡಿದೆ ಬಿರು ಬಿಸಿಲಲಿ ಬಸವಳಿದೆ ತೆರೆದ ಮನದ ಕಿಟಕಿಗಳ ಮುಚ್ಚಿದೆ ಹಳೆಯ ನೆನಪುಗಳ ಕಸ ಗುಡಿಸಿದೆ ಉಸ್ಸೆನ್ನುತಾ ಹಾಸಿಗೆಗೆ ಅಡ್ಡಾದೆ ಕಂಬಳಿ ಕವುಚಿ ಕಣ್ಮುಚ್ಚಿದೆ ನಿದ್ದೆ ಬರುತ್ತಿಲ್ಲ….. ಹೃದಯದೀ ನಿನ್ನ ಪಿಸುದನಿ ಮಾರ್ದನಿ ನೆನಪುಗಳ ಮೆರವಣಿಗೆ ನಿನ್ನ ಮರೆವಣಿಕೆಗೆ ಇಷ್ಟೇಲ್ಲಾ ಬೇಕಿತ್ತ…. ಗೊತ್ತಾಗುತ್ತಿಲ್ಲ… ********

ಕಾವ್ಯಯಾನ

ಜೀವಾತ್ಮಕ್ಕೆಲ್ಲ ದೀಪಿಕಾ ಬಾಬು ಮನದುಂಬಿ ಬರೆದಿಹೆನು ಇದನು ನಾನೂ ನೀವು ಓದಿದರೆ ಸಾರ್ಥಕವು, ನನಗೆ ಇನ್ನೂ….!! ನನ್ನ ಬರಹಗಳೆನು ಶ್ರೇಷ್ಠ ಕಾವ್ಯಗಳಲ್ಲಾ, ನೀವೆಳುವ ಮುನ್ನ ತಿಳಿದಿಹೆನು ನಾನೆಲ್ಲಾ….!!. ಬರೆದ ಸಾಲಿನ ನಡುವೆ ಮೂಡಿದ ಭಾವಗಳೆಲ್ಲಾ ನಿಮ್ಮನು ಒಮ್ಮೆ ಹೀಗೆ ತಲ್ಲಣ ಗೊಳಿಸುವವೆಲ್ಲಾ..!! ಅಕ್ಷರ ಪಾತ್ರದ ಒಳಗೆ ನೂರಾರು ದುಗುಡವನೆಲ್ಲಾ ಗೀಚಿಬರದೆ ನಾನು ನಿಕ್ಷಲ್ಮಶ ಹೃದಯದ ಹೊನಲಾ..!! ಏನಿದೇ ನಿನ್ನಯ ಒಳಗೆ ಅರ್ಥವಿರದ ಪದಗಳೆಲ್ಲಾ, ಸಹನೆ ಎಂಬುದೇ ಬೇಕು ತಿಳಿಯುವ ಉದ್ದೇಶವಲ್ಲಾ..!! ನೂರಾರು ಸಾವಿರಾರು ಕಲ್ಪನೆಯ ಕುಸುಮಗಳಿಗೆಲ್ಲಾ ಬರಹದ […]

ಕಾವ್ಯಯಾನ

ತೋಳ ಉಯ್ಯಾಲೆ ಶಾಂತಾ ಜೆ ಅಳದಂಗಡಿ ತೋಳ ಉಯ್ಯಾಲೆ ಅಂದದ ಸುಂದರ ಬಂಧುರ ಭಾವದ ಕವಿತೆಯ ಬರೆದನು ನನ್ನೀ ಬಾಳಿನ ಪುಟದಲ್ಲಿ ಕಾವ್ಯದ ನವ್ಯತೆ ಬಲು ನಾವೀನ್ಯತೆ ಬೆಳಗಿತು ನನ್ನಯ ಹೃದಯದ ಹಣತೆ ಚೆಲ್ಲುವೆ ನನ್ನವ ನಡೆಯುವ ಹಾದಿಗೆ ಘಮ ಘಮ ಅನ್ನುವ ಮನಸ್ಸಿನ ಮಲ್ಲಿಗೆ ತೋಳ ಉಯ್ಯಾಲೆ ಪ್ರೇಮದೆ ಕಟ್ಟುವೆ ಜತೆಯಾಗಿ ಕುಳಿತು ಜೋಕಾಲಿ ಆಡುವೆ ಸ್ವರ್ಗವೆ ಇರಲಿ ನರಕವೆ ಬರಲಿ ಹೂವು ನಾರಿನ ಬಂಧವು ಬೆಸೆಯಲಿ ******

ಕಾವ್ಯಯಾನ

ಮಾಗಿಯ ಪದ್ಯ ಮಾಗಿಯ ಪದ್ಯ ಮಾಗಿಯ ಪದ್ಯ ಕೌದಿ ಕವುಚಿ ಕಂಬಳಿ ಹುಳುವಾದರೂ ಅಡಗಲೊಲ್ಲದ ಚಳಿ ಬೆಳಗಾಗ ಬರುವ ಚುರುಕು ಬಿಸಿಲಿನ ನೆನಪೇ ಬಿಸಿ ಹುಟ್ಟಿಸ ಬಲ್ಲದು ಒಳಗೆ ಉರಿ ಮುಖದ ಸೂರ್ಯ, ನಿನ್ನ ಆಗಮನ ಅದೆಷ್ಟು ಬೆಚ್ಚಗೆ , ಜಡ ಮಾಗಿಗೆ!!! *******************

ಕಾವ್ಯಯಾನ

ಸೋತ ಪ್ರೇಮಿ ಪ್ಯಾರಿಸುತ ಸೋತಪ್ರೇಮಿ ನಾನು ಸಹಿಸಲಾರದ ಸೋಲಿನೊಂದಿಗೆ ನಿಂತಿದ್ದೇನೆ. ನೀ ಬಿಟ್ಟು ಹೋದ ದಾರಿಯಲಿ ಒಬ್ಬಂಟಿಯಾಗಿ ಅಷ್ಟೇ…! ಇನ್ನೆಷ್ಟು ಬದುಕು ಉಳಿದಿದೆ ಕಾಲಮಾನ ದೂಡಲು…! ನಾವಿಬ್ಬರು ಕೂಡಿ ತೆಗಿಸಿದ ಫೋಟೋವನ್ನ ಕಟ್ಟಾಕಿಸಿ ಜೋಪಾನವಾಗಿ ಇಡಬಲ್ಲೆ…! ಆದರೆ ..? ನಿನ್ನ ಮೇಲಿರುವ ಪ್ರೀತಿ ಯಾವುದರಲ್ಲಿ ಇಡಲಿ…? ಇದ್ದೊಂದು ಹೃದಯ ಚುಚ್ಚಿ ನೀನೇ ಹಾಳು ಮಾಡಿದ್ದು ಆಗಿದೆ… ನಿನ್ನೆಲ್ಲ ಸೌಂದರ್ಯವನ್ನ ಕಣ್ಣಲ್ಲಿ ಜೋಪನವಾಗಿಸಿದ್ದೆ. ನೀ ಕೊಟ್ಟ ನೋವಿಗೆ ಕಣ್ಣೀರಾಗಿ ಹರಿದು ಹೋಗಿದೆ. ಹೇಳಿಹೋಗಬೇಕಿತ್ತು. ಇಲ್ಲವೇ …? ಮುನ್ಸೂಚನೆ ಕೊಟ್ಟಿದ್ದರೆ..? […]

ಕಾವ್ಯಯಾನ

ಏಕೆ ಕಾಡುವೆ ಶಾಂತಾ ಜೆ ಅಳದಂಗಡಿ ಏಕೆ ಕಾಡುವೆ ಮಾರುದ್ದ ಒಲವಿನೋಲೆ ಬರೆದು ಹೃದಯದೊಳಗೆ ನನ್ನ ಸೆಳೆದು ತಡವಿಲ್ಲದೆ ತಾಳಿಯ ಬಿಗಿದು ದೂರವಾದೆ ಬಾಳಿಗಂತ್ಯ ಬರೆದು ಮುಗ್ಗರಿಸಿ ಸಾಗಿದೆ ನನ್ನ ಬದುಕಿಂದು ಗಾಲಿಕಳಚಿದ ಗಾಡಿ ಈ ಬಾಳು ಕಣ್ಣೆವೆಯಲೆ ಕುಳಿತು ಕಾಡುವೆ ನನ್ನ ಅಳಿಸಲಾಗದ ಪ್ರೇಮಬರಹ ಬರೆದು ಹೂ ದುಂಬಿಗಳ ಒಲವಿನಾಟದಿ ಕಾಣುವೆ ನನ್ನ ನಿನ್ನ ಅನುಬಂಧ ಏಕೆ ಸರಿದೆ ನೇಪಥ್ಯಕೆ ಅವಸರದೆ ಮನೋಮಂದಿರಕೆ ಒಡೆಯನಾಗಿದ್ದೆ ದಿಗಂತದಾಚೆಗಿರುವೆ ನನ್ನ ನಿರೀಕ್ಷೆಯಲ್ಲಿ ಬಂದೇ ಬರುವೆ ಅತಿಶೀಘ್ರದಲ್ಲಿ ರಕ್ತಧಮನಿಗಳೆ ಬಿರಿವಂಥ […]

ಕಾವ್ಯಯಾನ

ಮೂಕವಾಯಿತು ರೇಖಾ ವಿ.ಕಂಪ್ಲಿ ಮೂಕವಾಯಿತು ಮೂಕವಾಯಿತು ಕೋಗಿಲೆ ವಸಂತನಾಗಮನವಿರದೆ ತನ್ನ ಗಾನವ ಮರೆತು ನಿನ್ನದೇ ಚಿಂತೆ ಯೊಳಗೆ…….. ಮೂಕವಾಯಿತು ವೀಣೆ ಮೀಟದ ಬೆರಳುಗಳಿರದೆ ತನ್ನ ರಾಗವ ಮರೆತು ನಿನ್ನ ಬೆರೆಯಲರಿಯದೆ…….. ಮೂಕವಾಯಿತು ಓಲೆಯೊಂದು ರವಾನಿಸುವ ಹಂಸವಿರದೆ ತನ್ನ ಪದವ ಮರೆತು ನಿನ್ನ ಅರಿಯಲಾರದೆ……. ಮೂಕವಾಯಿತು ಕನಸೊಂದು ನನಸಾಗದ ಮನಸ್ಸಿರದೆ ತನ್ನ ಊಹೆ ಮರೆತು ನಿನ್ನ ಮರೆಯಲಾರದೆ…. ಮೂಕವಾಯಿತು ಕವಿತೆ ಬರೆಯುವ ಕವಿಯೊರ್ವನಿರದೆ ತನ್ನ ಯಾನವ ಮರೆತು ನಿನ್ನ ಮನವರಿಯದೆ….. ********

Back To Top