ಕಾವ್ಯಯಾನ

ತೋಳ ಉಯ್ಯಾಲೆ

person holding bouquet of flower

ಶಾಂತಾ ಜೆ ಅಳದಂಗಡಿ

ತೋಳ ಉಯ್ಯಾಲೆ

ಅಂದದ ಸುಂದರ ಬಂಧುರ ಭಾವದ
ಕವಿತೆಯ ಬರೆದನು ನನ್ನೀ ಬಾಳಿನ ಪುಟದಲ್ಲಿ

ಕಾವ್ಯದ ನವ್ಯತೆ ಬಲು ನಾವೀನ್ಯತೆ
ಬೆಳಗಿತು ನನ್ನಯ ಹೃದಯದ ಹಣತೆ

ಚೆಲ್ಲುವೆ ನನ್ನವ ನಡೆಯುವ ಹಾದಿಗೆ
ಘಮ ಘಮ ಅನ್ನುವ ಮನಸ್ಸಿನ ಮಲ್ಲಿಗೆ

ತೋಳ ಉಯ್ಯಾಲೆ ಪ್ರೇಮದೆ ಕಟ್ಟುವೆ
ಜತೆಯಾಗಿ ಕುಳಿತು ಜೋಕಾಲಿ ಆಡುವೆ

ಸ್ವರ್ಗವೆ ಇರಲಿ ನರಕವೆ ಬರಲಿ
ಹೂವು ನಾರಿನ ಬಂಧವು ಬೆಸೆಯಲಿ

******

Leave a Reply

Back To Top