ಮೂಕವಾಯಿತು

ರೇಖಾ ವಿ.ಕಂಪ್ಲಿ

ಮೂಕವಾಯಿತು
ಮೂಕವಾಯಿತು ಕೋಗಿಲೆ
ವಸಂತನಾಗಮನವಿರದೆ
ತನ್ನ ಗಾನವ ಮರೆತು
ನಿನ್ನದೇ ಚಿಂತೆ ಯೊಳಗೆ……..
ಮೂಕವಾಯಿತು ವೀಣೆ
ಮೀಟದ ಬೆರಳುಗಳಿರದೆ
ತನ್ನ ರಾಗವ ಮರೆತು
ನಿನ್ನ ಬೆರೆಯಲರಿಯದೆ……..
ಮೂಕವಾಯಿತು ಓಲೆಯೊಂದು
ರವಾನಿಸುವ ಹಂಸವಿರದೆ
ತನ್ನ ಪದವ ಮರೆತು
ನಿನ್ನ ಅರಿಯಲಾರದೆ…….
ಮೂಕವಾಯಿತು ಕನಸೊಂದು
ನನಸಾಗದ ಮನಸ್ಸಿರದೆ
ತನ್ನ ಊಹೆ ಮರೆತು
ನಿನ್ನ ಮರೆಯಲಾರದೆ….
ಮೂಕವಾಯಿತು ಕವಿತೆ
ಬರೆಯುವ ಕವಿಯೊರ್ವನಿರದೆ
ತನ್ನ ಯಾನವ ಮರೆತು
ನಿನ್ನ ಮನವರಿಯದೆ…..
********
Really good mam..