ಕಾವ್ಯಯಾನ

ಏಕೆ ಕಾಡುವೆ

Close-up of Pink Flowers on Table

ಶಾಂತಾ ಜೆ ಅಳದಂಗಡಿ

ಏಕೆ ಕಾಡುವೆ

ಮಾರುದ್ದ ಒಲವಿನೋಲೆ ಬರೆದು
ಹೃದಯದೊಳಗೆ ನನ್ನ ಸೆಳೆದು
ತಡವಿಲ್ಲದೆ ತಾಳಿಯ ಬಿಗಿದು
ದೂರವಾದೆ ಬಾಳಿಗಂತ್ಯ ಬರೆದು

ಮುಗ್ಗರಿಸಿ ಸಾಗಿದೆ ನನ್ನ ಬದುಕಿಂದು
ಗಾಲಿಕಳಚಿದ ಗಾಡಿ ಈ ಬಾಳು
ಕಣ್ಣೆವೆಯಲೆ ಕುಳಿತು ಕಾಡುವೆ ನನ್ನ
ಅಳಿಸಲಾಗದ ಪ್ರೇಮಬರಹ ಬರೆದು

ಹೂ ದುಂಬಿಗಳ ಒಲವಿನಾಟದಿ
ಕಾಣುವೆ ನನ್ನ ನಿನ್ನ ಅನುಬಂಧ
ಏಕೆ ಸರಿದೆ ನೇಪಥ್ಯಕೆ ಅವಸರದೆ

ಮನೋಮಂದಿರಕೆ ಒಡೆಯನಾಗಿದ್ದೆ
ದಿಗಂತದಾಚೆಗಿರುವೆ ನನ್ನ ನಿರೀಕ್ಷೆಯಲ್ಲಿ
ಬಂದೇ ಬರುವೆ ಅತಿಶೀಘ್ರದಲ್ಲಿ
ರಕ್ತಧಮನಿಗಳೆ ಬಿರಿವಂಥ ಓಲೆಬರೆದೆ

********

Leave a Reply

Back To Top