ಕಾವ್ಯಯಾನ

ಯಾಕಿಷ್ಟು ಬೇಸರ?

green leaf plant

ದೀಪಿಕಾ ಬಾಬು

ಯಾಕಿಷ್ಟು ಬೇಸರ ಈ ಮನಸಿಗೆ
ನೀ ಬಾರದೆ ಹೋದರೆ ನನ್ನ ಕನಸಿಗೆ..!
ಉಳಿಗಾಲ ವಿಲ್ಲ ಈಗ ಆ ನಿದೆರೆಗೆ
ನೀ ಬೇಗ ಬರುವೆಯಾ ನನ್ನ ಮನಸಿಗೆ…!!

ದೂರದ ‌ಪರಿಚಯ ನಮ್ಮದು
ಆದೇವೂ ಆತ್ಮೀಯರಿಂದು,
ಕಾರಣವೇ ಬೇಕೆಯೆಂದು
ಬಯಸದು ಮನಸಿದು ಇಂದು..!!

ನಮ್ಮಯ ಸಲ್ಲಾಪದ ಪ್ರೀತಿಗೆ
ಸಿಕ್ಕಿದೆ ಮನೆಯಲ್ಲಿ ಒಪ್ಪಿಗೆ
ಮದುವೆ ದಿಬ್ಬಣದ ಹೊತ್ತಿಗೆ
ಆಗುವೆವು ಆದರ್ಶದ ಜೋಡಿಗೆ..!!

ಮೋಡಿ ಯದು ಮಾಡಿದೆ ನೋಡು
ನಿ‌ನ್ನೆದೆಯ ಉಸಿರಿನ ಹಾಡು..!
ಹಿಡಿದಿರುವ ಪ್ರೀತಿಯ ಜಾಡು
ಆಗಿಹುದು ನನ್ನಯ ಪಾಡು..!

ಬದುಕಿನ ಜೀವಾಳ ನೀನು
ಮೀಸಲಿಡುವೆ ಪ್ರತಿ ಜನುಮವ ನಾನು
ಕಾದಿರಿಸು ನನ್ನಗಾಗಿ ಇನ್ನು
ಪ್ರತಿ ಜೀವನ… ನಮ್ಮ ಪ್ರೀತಿ ಸವಿ ಜೇನು..!!

*********

Leave a Reply

Back To Top