ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಶಾಪ

brown and green abstract art

ಡಾ.ಗೋವಿಂದ ಹೆಗಡೆ

ಶಾಪ

ಸಣ್ಣ ಪುಟ್ಟವು ಸಾಲುವುದಿಲ್ಲ
ಅಂತ
ದೊಡ್ಡ ಹಂಡೆ, ಬಾನಿ, ಕೊಪ್ಪರಿಗೆ
ಗಳನ್ನೇ ಆಳಕ್ಕಿಳಿಸಿದೆ
ಕವಿತೆಗಳ ತುಂಬಿ- ಕೊಂಡು
ಬರಲೆಂದು ಒಡಲ ತುಂಬ

ಖಾಲಿ ಖಾಲಿ ಹೊರಳಿ ಬಂದಿವೆ
ಬಾವಿಲಿ ಜಲ ಬತ್ತಿ ಹೋಯ್ತೆ

ಈಗ ನಡೆದಿದೆ
ಕವಿತೆಯ ಸುಳಿವೇ ಇರದ
ಪೊಳ್ಳು ಪದಗಳ ಸಂತೆ
( ಇದೂ ಅವುಗಳಲ್ಲಿ ಒಂದಂತೆ?!)
**

ಭಾರೀ ಜರಿ ಪೋಷಾಕು
ಆಳೆತ್ತರದ ಹೂ ಹಾರ
ಮಸ್ತು ಗುಲಾಲು ಬಾಜಾ ಬಜಂತ್ರಿ
ಗಳಲ್ಲಿ ನಡೆದಿದೆ
ಶವದ ಮೆರವಣಿಗೆ
ಮೆರೆಸೋದು ಅಂದರೆ ಹಾಗೇ!

ಪಾಪ,ಕವಿತೆ
ಉಡಲು ಸ್ವರಗಳ
ಪತ್ತೆಯೇ ಇರದೆ
( ಉಣಲು ವ್ಯಂಜನ ಸಿಗದೆ-
ಹಸಿದೇ)
ಬತ್ತಲಾಗಿಯೇ ಉಳಿದು
ಮರೆಯಾಗಿದೆ

ಮೆರವಣಿಗೆಯತ್ತ ಇಣುಕಲೂ
ಹೋಗದೇ…

**********

About The Author

Leave a Reply

You cannot copy content of this page

Scroll to Top