ಕಾವ್ಯಯಾನ

ಬೇಕಿತ್ತ..?

red flowers on window

ಮದುಸೂದನ ಮದ್ದೂರು

ಬೇಕಿತ್ತ..?



ತಂಗಾಳಿಗೆ ಮೈಯೊಡ್ಡಿದೆ
ಬಿರು ಬಿಸಿಲಲಿ ಬಸವಳಿದೆ
ತೆರೆದ ಮನದ
ಕಿಟಕಿಗಳ ಮುಚ್ಚಿದೆ
ಹಳೆಯ ನೆನಪುಗಳ
ಕಸ ಗುಡಿಸಿದೆ
ಉಸ್ಸೆನ್ನುತಾ ಹಾಸಿಗೆಗೆ ಅಡ್ಡಾದೆ
ಕಂಬಳಿ ಕವುಚಿ ಕಣ್ಮುಚ್ಚಿದೆ
ನಿದ್ದೆ ಬರುತ್ತಿಲ್ಲ…..
ಹೃದಯದೀ ನಿನ್ನ
ಪಿಸುದನಿ ಮಾರ್ದನಿ
ನೆನಪುಗಳ ಮೆರವಣಿಗೆ
ನಿನ್ನ ಮರೆವಣಿಕೆಗೆ
ಇಷ್ಟೇಲ್ಲಾ ಬೇಕಿತ್ತ….
ಗೊತ್ತಾಗುತ್ತಿಲ್ಲ…

********

Leave a Reply

Back To Top