ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಸಕಲೇಶಪುರ ತಾಲ್ಲೂಕಿನ ಬಿಸಿಲೆ ಘಾಟ್ ರಮ್ಯ ನೋಟ

ಗೊರೂರು ಅನಂತರಾಜು, ಹಾಸನ.

ಬೆಳಿಗ್ಗೆ ಆರೂವರೆ ಹೊತ್ತಿಗೆ ಬಿಸಿಲೆಘಾಟ್‌ಗೆ ಹೋಗಿ ಅಲ್ಲಿಯ ಸೂರ್ಯೋದಯದ ದೃಶ್ಯ ಸೆರೆ ಹಿಡಿಯುವ ಎಂದು ಹಿಂದಿನ ರಾತ್ರಿ ಹೇಳಿದ್ದ ಚಿತ್ರಕಲಾವಿದ ಛಾಯಗ್ರಾಹಕರು ಬಿ.ಎಸ್. ದೇಸಾಯಿ ಬೆಳಿಗ್ಗೆ ಹಾಸನದ ನಮ್ಮ ಮನೆ ಹತ್ತಿರ ಬರುವ ಹೊತ್ತಿಗೆಯೇ ಆರೂವರೆ ಆಗಿತ್ತು. ಹೀಗಾಗಿ ನಮ್ಮ ಪ್ರಯಣದ ದಿಕ್ಕನ್ನು ಪಾರ್ವತಮ್ಮನ ಬೆಟ್ಟಕ್ಕೆ ತಿರುಗಿಸಿದರು. ಬೆಟ್ಟ ಹತ್ತಿ ಇಳಿದು ದಣಿವಾಗಿ ತಿಂಡಿಗೆ ಮಗ್ಗೆ ಗ್ರಾಮಕ್ಕೆ ಬರುವ ಹೊತ್ತಿಗೆ ಸಮಯ ಹತ್ತಾಗಿತ್ತು. ಅಲ್ಲಿಯ ಹೋಟೆಲ್‌ನಲ್ಲಿ ತಟ್ಟೆ ಇಡ್ಲಿ ಖಾಲಿಯಾಗಿತ್ತು. ನಮ್ಮ ಹೊಟ್ಟೆ ತುಂಬಿಸಿದ್ದು ಪೂರಿ ಚಿತ್ರನ್ನ. ಮತ್ತೊಂದು ಬೇಕರಿಯಲ್ಲಿ ಬ್ರೂ ಕಾಫಿ ಕುಡಿದು ಅಂಗಡಿಯಲ್ಲಿ ಕಿತ್ತಳೆ ಬಾಳೆಹಣ್ಣು ಕೊಂಡು ಬಿಸಲೆಘಾಟ್ ಕಡೆಗೆ ಹೊರಟೆವು. ನಮ್ಮೊಂದಿಗೆ ಉತ್ತರ ಕರ್ನಾಟಕದ ಚಿತ್ರಕಲಾವಿದರು ಪಿ.ಎಸ್. ಕಡೇಮನಿ ಮತ್ತು ವಿಧ್ಯಾದರ ಎಸ್. ಸಾಲಿ ಇದ್ದರು. ಹರಿಹಳ್ಳಿ ಐಗೂರು ಹೆತ್ತೂರು ಮಾರ್ಗ ಬಿಸಿಲೆಗೆ ಪ್ರಯಾಣಿಸುತ್ತಾ ಘಾಟ್ ಇನ್ನೂ ೬ ಕಿ.ಮೀ. ದೂರ ಇರುವಾಗಲೇ ಮಂಕನಹಳ್ಳಿ ಬಳಿ ಕಾರು ನಿಲ್ಲಿಸಿ ನಿಮಗೆ ಇಲ್ಲಿ ಒಂದು ವಿಶೇಷ ತೋರಿಸುವೆ ಇಳಿಯಿರಿ ಎಂದರು ದೇಸಾಯಿ. ವನಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಂಕನಹಳ್ಳಿಯಲ್ಲಿ ಬ್ರಿಟಿಷರ ಕಾಲಘಟ್ಟ ೧೮೦೨ರಲ್ಲಿ ಕೋಲಿನ್ ಮರೆಂಜಿ ನೇತೃತ್ವದಲ್ಲಿ ಒಂದು ಕಲ್ಲಿನ ಗುರುತನ್ನು ಮಾರ್ಕ್ ಮಾಡಿದ್ದು ಅದುವೆ ರಿಡ್ಜ್. ಎದುರಿನ ಬೆಟ್ಟದ ಮೇಲಿಂದ ಬೀಳುವ ಮಳೆ ನೀರು ಇಲ್ಲಿ ಎರಡು ಕಡೆ ಡಿವೈಡ್ ಆಗಿ ಹರಿಯುವುದೇ ಇಲ್ಲಿನ ವಿಶೇಷತೆ. ಪಶ್ಚಿಮಕ್ಕೆ ಹರಿಯುವ ಮಳೆ ನೀರು ನೇತ್ರಾವತಿ ನದಿಯ ಮೂಲಕ ಅರೆಬಿಯನ್ ಸಮುದ್ರವನ್ನು ಸೇರಿದರೆ ಮತ್ತೊಂದು ಭಾಗ ಪೂರ್ವಕ್ಕೆ ಹರಿದು ಹೇಮಾವತಿ ಕಾವೇರಿ ನದಿಗಳ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಈ ದಿಕ್ಕನ್ನು ಇಲ್ಲಿ ಗುರುತಿಸಿ ರಿಡ್ಜ್ ಕಲ್ಲನ್ನು ನೆಡಲಾಗಿದೆ. ಪಶ್ಚಿಮ ಘಟ್ಟದ ಸ್ವಾಭಾವಿಕ ಜಲವಿಭಾಜಕ ರೇಖೆಯಾಗಿ ಈ ಸ್ಥಳ ಪ್ರಾಮುಖ್ಯ ಪಡೆದಿದೆ. ಬೆಟ್ಟದ ತಪ್ಪಲಿನಲ್ಲಿ ಒಂದು ವಿಶಾಲ ಕೆರೆ ಹರಡಿಕೊಂಡಿದ್ದು ಕೆರೆಗೆ ಅಡ್ಡಲಾಗಿ ಮಣ್ಣಿನ ಅಣೆಕಟ್ಟೆ ಇದ್ದು ಈ ಪ್ರದೇಶದಲ್ಲಿ ಶ್ರೀ ಲಕ್ಷಿö್ಮà ಗಣಪತಿ ದೇವಸ್ಥಾನ ಕಟ್ಟಿದ್ದು ಬಾಗಿಲು ಹಾಕಿತ್ತು. ದೇವಸ್ಥಾನದ ಮುಂದೆ ಒಂದು ಬೃಹದಾಕಾರದ ಮರ ಮದ್ಯೆ ಎರಡು ಪಾಲಾಗಿ ಹರಡಿಕೊಂಡಿತ್ತು. ಮನುಷ್ಯ ಮನೆ ಆಸ್ತಿ ಪಾಲು ಮಾಡಿಕೊಂಡAತೆ ಈ ಮರವು ಪಾಲಾಗಿದೆ ಎಂದು ದೇಸಾಯಿ ಎರಡು ಮರಗಳ ಮಧ್ಯೆ ನಿಂತು ಪೋಟೋ ತೆಗೆಸಿಕೊಂಡರು. ಅಲ್ಲಿ ನಾವು ಸ್ವಲ್ಪ ಅಡ್ಡಾಡಿ ಕಿತ್ತಳೆ ಬಾಳೆಹಣ್ಣು ತಿಂದು ಒಣಗಿದ ಗಂಟಲನ್ನು ತಂಪು ಮಾಡಿದೆವು. ಮುಂದೆ ಬಿಸಲೆ ಗ್ರಾಮ ದಾಟಿ ಬಿಸಿಲೆಘಾಟ್À ವೀಕ್ಷಣ ತಾಣ ತಲುಪಿದೆವು. ವ್ಯೂ ಪಾಯಿಂಟ್ ಮೇಲೆ ಹೋಗಲು ಪ್ರವೇಶ ದ್ವಾರದಲ್ಲಿ ಟಿಕೇಟ್ ಕೌಂಟರ್ ಇದ್ದು ಒಬ್ಬರಿಗೆ ೩೦ ರೂ. ಟಿಕೇಟ್ ದರ ನಿಗದಿಯಾಗಿ ಅಲ್ಲಿ ಟಿಕೇಟ್ ಖರೀದಿUಸಲು ಹೋದ ಸಾಲಿ ೦೬ ವರ್ಷ ಮೇಲಿನವರಿಗೆ ಫುಲ್ ಚಾರ್ಜ್ ಎಂಬ ಬೋರ್ಡ್ನ್ನು ರಿವರ್ಸ್ ಓದಿ ನಾವು ೬೦ರ ಮೇಲಿದ್ದೇವೆ ನಮಗೆ ಪ್ರೀ ತಾನೇ ಎಂದು ತಮಾಷೆ ಮಾಡಿದರು. ಕಾರು ನಿಲ್ಲಿಸುವ ಜಾಗದಲ್ಲಿ ಸ್ಥಳ ಮಾಹಿತಿಯ ಫಲಕವಿತ್ತು. ಆ ಮಾಹಿತಿಯಂತೆ ಬಿಸಿಲೆ ಗ್ರಾಮವು ತನ್ನ ಪೂರ್ವ ದಿಕ್ಕಿನಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊAಡಿದ್ದು ಪಶ್ಚಿಮ ಘಟ್ಟಗಳ ಭಾಗವಾಗಿದೆ. ಸಕಲೇಶಪುರದಿಂದ ಸುಮಾರು ೫೦ ಕಿ.ಮೀ. ಕುಕ್ಕೆ ಸುಬ್ರಮಣ್ಯ ಕ್ಷೇತ್ರದಿಂದ ೨೫ ಕಿ.ಮೀ. ದೂರ ಇರುವ ಈ ಸ್ಥಳ ತನ್ನ ಉತ್ತರಕ್ಕೆ ಕಾಗನೇರಿ ಮೀಸಲು ಅರಣ್ಯ, ಪಶ್ಚಿಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಭಾಗಿಮಲೈ ಮೀಸಲು ಅರಣ್ಯ, ನೈರುತ್ಯಕ್ಕೆ ಕುಕ್ಕೆ ಸುಬ್ರಮಣ್ಯ ಅರಣ್ಯ ವಲಯ ಹಾಗೂ ದಕ್ಷಿಣದಲ್ಲಿ ಕೊಡಗಿನ ಪುಷ್ಪಗಿರಿ ವನ್ಯಜೀವಿ ಸಂರಕ್ಷಿತ ಪ್ರದೇಶಗಳಿಂದ ಸುತ್ತುವರಿದಿದೆ. ಬಿಸಿಲೆ ಮೀಸಲು ಅರಣ್ಯ ಅದರ ಉತ್ತರಕ್ಕಿರುವ ಮೀಸಲು ಅರಣ್ಯ ಬಿಸಿಲೆ ಶ್ರೇಣಿಯ ಉದ್ದಕ್ಕು ವಿಸ್ತರಿಸಿ ಪುಷ್ಪಗಿರಿ ವನ್ಯಜೀವಿ ಸಂರಕ್ಷಿತ ಪ್ರದೇಶ ಹಾಗೂ ಕುದುರೆಮುಖ ರಾಷ್ಟಿçÃಯ ಉದ್ಯಾನವನ್ನು ಸಂಪರ್ಕಿಸುತ್ತವೆ. ಬಿಸಿಲೆ ಬೆಟ್ಟ ಪ್ರದೇಶವು ಬಿಸಿಲೆ ಗ್ರಾಮದಿಂದ ಸುಮಾರು ಐದು ಕಿ.ಮೀ. ದೂರದಲ್ಲಿದ್ದು ದಕ್ಷಿಣ ಕನ್ನಡ, ಕೊಡಗು ಹಾಸನ ಜಿಲ್ಲೆಗಳÀ ಸಂಗಮ ಪ್ರದೇಶವಾಗಿದೆ. ಬಿಸಿಲೆಘಾಟ್ ವೀಕ್ಷಣಾ ಸ್ಥಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ಕುಮಾರಪರ್ವತ ೧೩೧೯ ಮೀ. ಕೊಡಗು ಜಿಲೆಯ ದೊಡ್ಡಬೆಟ್ಟ ೧೧೧೯ ಮೀ. ಪುಷ್ಪಗಿರಿ ೧೭೧೨ಮೀ. ಹಾಸನ ಜಿಲ್ಲೆಯ ಪಟ್ಟ ಬೆಟ್ಟ ೧೧೧೨ ಮೀ ಹಾಗೂ ಎಣ್ಣೆಕಲ್ಲು ೯೦೦ ಮೀ ಎತ್ತರದ ಗುಡ್ಡ ಬೆಟ್ಟಗಳು ಕಂಡುಬರುತ್ತವೆ. ಈ ವೀಕ್ಷಣಾ ಸ್ಥಳ ಹಾಗೂ ಪರ್ವತ ಶ್ರೇಣಿಗಳನ್ನು ಬೇರ್ಪಡಿಸುವ ಕಣಿವೆಯಲ್ಲಿ ಹರಿಯುವ ಗಿರಿ ನದಿಯ ಜುಳುಜುಳು ಸದ್ದನ್ನು ಕೇಳಬಹುದು. ಬಿಸಿಲೆ ಹಾಗೂ ತಾಲ್ಲೂಕಿನ ವಿವಿಧ ಅರಣ್ಯ ಪ್ರದೇಶಗಳು ಮಾನ್ಸೂನ್ ಸಮಯದಲ್ಲಿ ಉತ್ತಮ ಮಳೆಯನ್ನು ಪಡೆಯುತ್ತಾ ಉತ್ತಮ ಬಗೆಯ ಮರಗಳನ್ನು ಹೊಂದಿವೆ. ಯಸಳೂರು ಅರಣ್ಯ ವಲಯದ ವ್ಯಾಪ್ತಿಗೆ ಬರುವ ಬಿಸಿಲೆ ತನ್ನಲ್ಲಿ ನಿತ್ಯ ಹರಿದ್ವರ್ಣ ಹಾಗೂ ಅರೆ ನಿತ್ಯ ಹರಿದ್ವರ್ಣ ಕಾಡುಗಳನ್ನು ಹೊಂದಿದ್ದು ಅಲ್ಲಲ್ಲಿ ಎಲೆಯುದುರುವ ಕಾಡುಗಳನ್ನು ಹೊಂದಿದೆ. ಹಾಗೆ ಸುಮಾರು ೧೦೦೦ ಮೀ. ಎತ್ತರದಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಲಾ ಅರಣ್ಯಗಳು ಕಂಡುಬAದು ಹುಲ್ಲುಗಾವಲುಗಳು ಸಹ ಕಾಣಸಿಗುತ್ತವೆ.
ಪ್ರವಾಸಿಗರು ವ್ಯೂ ಪಾಯಿಂಟ್ ಬಳಿಗೆ ಯಾವುದೇ ಪ್ಲಾಸ್ಟಿಕ್‌ನ್ನು ತೆಗೆದುಕೊಂಡು ಹೋಗಲು ಅವಕಾಶ ಇಲ್ಲ. ನೀರಿನ ಪ್ಲಾಸ್ಟಿಕ್ ಬಾಟಲ್‌ಗಳನ್ನು ಆಯ್ದು ಅಲ್ಲಿ ತೂಗುಹಾಕಿದ್ದ ಚೀಲದಲ್ಲಿ ವಾಚ್‌ಮ್ಯಾನ್ ಹಾಕುತ್ತಿದ್ದರು. ವ್ಯೂ ಪಾಯಿಂಟ್ ಎರಡು ಹಂತಗಳಲ್ಲಿ ಪ್ರವಾಸಿಗರು ಅಲ್ಲಿ ನಿಂತು ನೋಡಲು ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಿದ್ದರು. ಅಡ್ಡಕಂಬದ ರಕ್ಷಣಾ ತುದಿ ತನಕ ಹೋಗಿ ಕಂಬಕ್ಕೆ ಒರಗಿ ನಿಂತು ಪ್ರವಾಸಿಗರು ಪೋಟೋ ತೆಗೆಸಿಕೊಳ್ಳುತ್ತಿದ್ದರು. ಸ್ವಲ್ಪಹೊತ್ತು ಕಲ್ಲುಹಾಸಿನ ಮೇಲೆ ಕುಳಿತು ದಣಿವಾರಿಸಿಕೊಂಡೆವು. ನಂತರ ನಾವು ಅದೇ ಕಂಬಗಳ ಬಳಿ ಸಾಗಿ ಒರಗಿ ನಿಂತು ಪೋಟೋ ತೆಗೆಸಿಕೊಂಡೆವು. ಅಲ್ಲಿ ನಿಂತು ವೀಕ್ಷಿಸುವಾಗ ನಮ್ಮ ಕಣ್ಣಿಗೆ ಪ್ರಕೃತಿ ಸೃಷ್ಟಿಸಿದ ಅದ್ಭುತ ಹಸಿರು ದೃಶ್ಯ ವರ್ಣಿಸುವುದೆಂತು. ಅಲ್ಲೇ ಕುಳಿತು ಕಾಳಿದಾಸನಂತೆ ಕಾವ್ಯ ಬರೆಯಲು ನನ್ನ ಕೈಯಲ್ಲಿ ಸಾಧ್ಯವಾಗಲಿಲ್ಲ. ಎತ್ತರೆತ್ತರದ ಹಸಿರು ಬೆಟ್ಟಗಳ ಸಾಲು, ಕೆಳಗೆ ಕಣ್ಣಾಯಿಸಿದರೆ ಬಹಳ ಆಳಕ್ಕೆ ಬೆಟ್ಟದ ತಪ್ಪಲು, ಮಧ್ಯೆ ಗೆರೆ ಬರೆದಂತೆ ಸೀಳಿಕೊಂಡು ಹರಿಯುತ್ತಿರುವ ಝರಿ ನೋಡಲು ಸುಂದರ ಬಲುಸುಂದರ. ಬೆಳಗಿನ ಸೂರ್ಯೋದಯದ ಸಮಯದಲ್ಲಿ ಮಂಜು ಮುಸುಕಿನ ದೃಶ್ಯ ಇನ್ನೂ ನೋಡಲು ಚೆಂದ ಎಂದರು ದೇಸಾಯಿ. ಕಾಲಮೀರಿ ನಾವು ಮದ್ಯಾಹ್ನ ಲಂಚ್ ವೇಳೆ ಅಲ್ಲಿದ್ದವು. ನೆತ್ತಿ ಮೇಲಿನ ಬಿಸಿಲು ಬಿಸಿಲೆ ಅರಣ್ಯವನ್ನು ಬಟಾಬಯಲುಗೊಳಿಸಿ ಬೆರಗುಗೊಳಿಸಿತು. ಬಿಸಿಲೆ ಅರಣ್ಯ ಪ್ರದೇಶದಲ್ಲಿ ತೇಗ, ಬೀಟೆ, ಅಲೆಕ್ಸಾಂಡ್ರಿಯ, ಲಾಅರೆಲ್, ಭಾರತೀಯ ಧೂಪದ ಮರ, ಟ್ಯೂಲಿಪ್, ಮಲಬಾರ್ ಕಿನೋ ಇನ್ನಿತರೆ ಬಹಳಷ್ಟು ಜಾತಿಯ ಬೆಲೆ ಬಾಳುವ ಮರಗಳು ಹೇರಳವಾಗಿವೆ. ಅಂತೆಯೇ ಆನೆಗಳು, ಕಾಡುಕೋಣಗಳು, ಜಿಂಕೆ ಕಡವೆ, ಕಾಡುಹಂದಿ ಇನ್ನಿತರೆ ಕಾಡುಪ್ರಾಣಿಗಳು ಇವೆ ಎಂದು ಹೇಳಿದರೂ ನಮ್ಮ ಕಣ್ಣಿಗೆ ಯಾವುದೂ ಬೀಳಲಿಲ್ಲ. ಸಮುದ್ರಮಟ್ಟದಿಂದ ಸುಮಾರು ೩೮೦೦ ಅಡಿ ಎತ್ತರದಲ್ಲಿದೆ ಎಂದು ಹೇಳಲಾದ ಈ ಪ್ರದೇಶವು ಯುನೆಸ್ಕೋ ವಿಶ್ವ ಪರಂಪರೆ ತಾಣದ ಗಡಿಯಲ್ಲಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇರುವ ಪುಷ್ಟಗಿರಿ ಬೆಟ್ಟವು ಅತ್ಯಂತ ಎತ್ತರವಾಗಿದ್ದುಸೋಮವಾರಪೇಟೆ ತಾಲ್ಲೂಕಿಗೆ ಸೇರಿದೆ. ಇದು ಕೊಡಗಿನ ೨ನೇ ಅತಿ ಎತ್ತರದ ಶಿಖರವೆಂದು ಹೇಳಲಾಗಿದೆ. ಸೋಮವಾರಪೇಟೆಯಿಂದ ೨೬ ಕಿ.ಮೀ. ಕುಮಾರಳ್ಳಿಯಿಂದ ಒಂದೂವರೆ ಕಿ.ಮೀ.ದೂರದಲ್ಲಿ ಕಾಡಿನ ನಡುವೆ ಇದ್ದು ಚಾರಣಿಗರು ಪೂರ್ವ ಪ್ರವೇಶ ದ್ವಾರವನ್ನು ಬೀಡೇಹಳ್ಳಿ ಹೆಗ್ಗಡೆಮನೆ ದೇವಸ್ಥಾನದ ಮೂಲಕ ಮತ್ತು ಕುಕ್ಕೆ ಸುಬ್ರಹ್ಮಣ್ಯದಿಂದ ಗಿರಿಗದ್ದೆ ಮೂಲಕ ಪಶ್ಚಿಮ ಪ್ರವೇಶದ್ವಾರವನ್ನು ತಲುಪಬಹುದು. ತ್ಯಾಗರಾಜ್ ಮುಟ್ಟನಹಳ್ಳಿ ಅವರು ಪುಷ್ಪಗಿರಿ ಕುಮಾರಪರ್ವತದಲ್ಲಿ ಚಾರಣ ಮಾಡಿದ ಸಾಹಸ ಕಥೆಯನ್ನು ತಮ್ಮ ಚಾರಣದ ಸರಣಿಗಳು ಕಿರುಕೃತಿಯಲ್ಲಿ ಬರೆದಿದ್ದಾರೆ. ಈ ಕೃತಿಗೆ ನಾನು ಮುನ್ನುಡಿ ಬರೆದು ಓದುವಾಗ ಈ ಪ್ರದೇಶ ನೋಡುವ ಕುತೂಹಲ ಇತ್ತು. ಹಾಸನ ಜಿಲ್ಲೆಗೆ ಸೇರಿದ ಎಣ್ಣೆಕಲ್ಲು ಮತ್ತು ಪಟ್ಟ ಬೆಟ್ಟದ ಮೇಲ್ಬಾಗವು ದಟ್ಟ ಅರಣ್ಯದ ಬದಲು ಸಂಪೂರ್ಣ ಹಸಿರು ಹಲ್ಲುಗಾವಲಿನಿಂದ ಕೂಡಿದೆ. ಸಾಹಸಪ್ರಿಯರಿಗೆ ಇಲ್ಲಿ ಜೀಪ್ ಆಫ್ ರೋಡಿಂಗ್ ವ್ಯವಸ್ಥೆ ಇದೆ. ಮುಖ್ಯ ರಸ್ತೆಯಿಂದ ಬೆಟ್ಟದ ಕಡೆಗೆ ಹೋಗುವ ೨ ಕಿ.ಮೀ. ರಸ್ತೆ ಅತ್ಯಂತ ಕಠಿಣವಾಗಿದೆ. ಅಲ್ಲಿಗೆ ಜೀಪ್ ಮಾಡಿಕೊಂಡು ಹೋಗಬಹುದು ಎಂದರು ದೇಸಾಯಿ. ಇಲ್ಲಿ ಹರಿಯುವ ನದಿಗಳಲ್ಲಿ ಕುಮಾರಧಾರ ನದಿಯು ಕೊಡಗು ಜಿಲ್ಲೆಯ ಪುಷ್ಪಗಿರಿ ವನ್ಯಜೀವಿಧಾಮದ ಸುವiರು ೧೬೦೦ ಮೀ. ಎತ್ತರದಲ್ಲಿ ಉಗಮಗೊಳ್ಳುತ್ತದೆ. ಇದು ಪಶ್ಚಿಮಾಭಿಮುಖವಾಗಿ ೮೦ ಕಿ.ಮೀ. ದೂರ ಹರಿದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯನ್ನು ಸೇರುತ್ತದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಈ ನದಿಯ ದಂಡೆಯಲ್ಲಿದೆ. ಈ ನದಿ ಹರಿಯುವ ಮಾರ್ಗದಲ್ಲಿ ಮಲ್ಲಳ್ಳಿ ಜಲಪಾತ ನಿರ್ಮಾಣವಾಗುತ್ತದೆ. ಈ ಜಲಪಾತವು ೨೦೦ ಅಡಿ ಎತ್ತರದಿಂದ ಧುಮುಕುವುದು. ದೇಸಾಯಿ ನಾವು ಮೂವರು ಕಂಬಿ ಒರಗಿ ನಿಲ್ಲಲು ಹೇಳಿ ಎಡ ತುದಿಯಲ್ಲಿ ನಿಂತಿದ್ದ ನನ್ನನ್ನು ಹಾಗೆಯೇ ತಮ್ಮ ಹಿಂದಿನಿAದ ಹೋಗಿ ಬಲ ಬದಿಯಲ್ಲಿ ಬೇರೊಂದು ಭಂಗಿಯಲ್ಲಿ ನಿಲ್ಲಲು ತಿಳಿಸಿ ಒಂದೇ ಪೋಟೋದಲ್ಲಿ ನಾನು ಎರಡು ಬದಿಯಲ್ಲಿ ಬರುವಂತೆ ಪೋಟೋ ಶೂಟ್ ಮಾಡಿದರು.

ನಾವು ವಾಪಸ್ಸು ಬರುತ್ತಾ ಮೂಕನಮನೆ ಜಲಪಾತಕ್ಕೆ ಹೋಗಬಹುದಿತ್ತು. ಇಲ್ಲಿ ೩೦-೪೦ ಅಡಿ ಎತ್ತರದಿಂದ ನೀರು ಧುಮುಕುತ್ತದೆ. ಪಶ್ಚಿಮ ಘಟ್ಟಗಳ ಮತ್ತು ಬಿಸಲೆ ಕವಲು ಕಾಡುಗಳ ತೊರೆಗಳಿಂದ ಈ ಜಲಪಾತ ರೂಪುಗೊಂಡಿದೆ. ಇದು ಕುಮಾರಧಾರ ನದಿ ಜಲಾನಯನ ಪ್ರದೇಶದ ಭಾಗವಾಗಿದೆ. ದಟ್ಟ ಕಾಡುಗಳು ಕಾಫಿ ತೋಟಗಳ ಮತ್ತು ಗುಡ್ಡಗಳ ನಡುವೆ ಈ ಜಲಪಾತವಿದೆ. ಅಲ್ಲಿಗೆ ಹೋಗಬಹುದು ಆದರೆ ನೀರಿನ ಝರಿ ಇಲ್ಲಾ ಅಂದ್ರೇ ನೀವ್ಯಾರೂ ಜರಿಬರ‍್ದು ಎಂದರು ದೇಸಾಯಿ. ಆದರೆ ಊಟದ ವೇಳೆ ಮೀರಿದ್ದರಿಂದ ನಾವು ಅಲ್ಲಿಗೆ ಹೋಗದೆ ದಾರಿ ಮದ್ಯೆ ಹೋಟೆಲ್‌ನಲ್ಲಿ ಊಟ ಮಾಡಿ ಹಾಸನಕ್ಕೆ ವಾಪಸ್ಸಾದೆವು.


About The Author

Leave a Reply

You cannot copy content of this page

Scroll to Top