ಕಾವ್ಯ ಸಂಗಾತಿ
ವನಜಾಕ್ಷಿ ಬೆಟ್ಟದಾಲೂರು ಅವರ ಕವಿತೆ “ಸ್ನೇಹ”

ಸ್ನೇಹ ಜೊತೆಯ ಹೆಜ್ಜೆಯಷ್ಟೇಯಲ್ಲ,
ಜೊತೆಯಿಲ್ಲದ ಕ್ಷಣದಲೂ ಜೊತೆಗಿರುವ ಭಾವ;
ಮೌನದ ತುಟಿಯಂಚಲಿ ಮಾತು ಅರಳಿ
ಮನದ ಮಿಡಿತವನು ಓದುವ ಜೀವ.
ಇದು ಕೈಹಿಡಿದ ನೆರಳಷ್ಟೇ ಅಲ್ಲಾ,
ಕತ್ತಲ ಹಾದಿಯ ಹಣತೆಯ ಬೆಳಕು;
ಬಿದ್ದ ಮೇಲೆ ಎತ್ತುವ ಕೈಯೆತ್ತದದು
ಜಾರುವ ಮುನ್ನವೇ ಚಾಚುವ ಅಭಯ ಹಸ್ತ.
ಕಾಲದೊಳಗೆ ಬತ್ತಿದ ಹೊಳೆಯ ದಡದಂತೆ,
ಮನದ ನದಿಯ ಒರತೆ ಬತ್ತದಿರೆ ನೈಜ
ದಿಕ್ಕುಗಳೇ ಹೊರಳಿ ಸರಿದರೂ ದೂರ
ಸದಾ ಜೀವಂತ ನೆನಪಿನ ರಹದಾರಿ
ನಗುವಿನ ಹೊತ್ತಿಗೆ ನೆರಳುಗಳು ನೂರು,
ಕಣ್ಣೀರ ಹೊತ್ತಿಗೆ ಕರೆವ ಎದೆಯದನಿ
ಜಗವೇ ಬೆನ್ನು ತಿರುಗಿದ ಹೊತ್ತಲೂ
“ನಾನಿದ್ದೇನೆ ಎನುವೊಂದು ಅಭಯ.
ಇದು ಬಂಧನವಿಲ್ಲ, ಬೆಸೆಯುವ ನಂಟು,
ಸ್ವಾರ್ಥದ ನೆರಳಿಲ್ಲ, ಹೃದಯದ ಹಂಚಿಕೆ;
ಪಡೆದಷ್ಟಕ್ಕಿಂತ ಕೊಟ್ಟಾಗಲೇ ಪಾವನ—
ಜೀವದ ದಾರಿಯಲಿ ಅದೊಂದು ಬೆಳಕು.
ಜೀವಪರರಲಿನ ಜೀವ ಸೆಳೆತವೂ
ಮಹಾಮೌಲ್ಯದ ಮಾಣಿಕ್ಯವೂ ಸ್ನೇಹ
ನಿಂತರೂ ಉಸಿರು ನೆನಪಾಗಿ ಮಿಡಿಯುವ,
ಜೀವದ ಪುಟದಲಿ ಅಳಿಯದ ಅಕ್ಷರ ಸ್ಹ
– ವನಜಾಕ್ಷಿ ಬೆಟ್ಟದಾಲೂರು




Beautiful ❤️