ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ದೈವ ಸನ್ನಿಧಿಗಾಗಿ  ಹೊರಟ ಪಾದಗಳು
ದಾರಿಯಲ್ಲೇ ನಿಂತು ಹೋದವು
ಕರ್ಪೂರದ ಹೊಗೆಯಲ್ಲಿ ಬೆಳಕ ಹುಡುಕಿದವರು
ಕಾಲನ ಕತ್ತಲೆಗೆ  ನಡೆದುಬಿಟ್ಟರು

 ದರ್ಶನದ ಸಾಲೇ
 ಸಾವಿನ ಸುರಂಗವಾಗಿ
ಹೂವಿನ ಅಂಗಡಿಯ ಮುಂದೆ
ಸಾವಿನ ಸಂತೆ ತೆರೆಯಿತು

ಇತ್ತ ಬೆಳಕಿನ ಮನೆಯ ಮಗ
ಕತ್ತಲಲ್ಲಿ ಕೆಡವಲ್ಪಟ್ಟ ,ಬಂದೂಕು
ಹಣದ ಕೋಟೆಯನೂ ಕಾಯದು
ಹೆಸರಿನ ಛಾಯೆಯನೂ ಉಳಿಸದು .

ಭಕ್ತರ ಕಾಯುವ ದೇವರೂ ಮೈಮರೆತ
ಸುರಕ್ಷತೆಯ, ವ್ಯವಸ್ಥೆ ಕಡೆಗಣಿಸಿತು
ದೇವರು ,ವ್ಯವಸ್ಥೆ ಎರಡಷ್ಟೇ ಸೋತು ಸತ್ತದ್ದಲ್ಲಾ
ಸತ್ತಿದ್ದು ನಂಬಿಕೆಯು

 ವ್ಯವಸ್ಥೆ ಇನ್ನೂ ಹದವಾಗುವುದು
ದಾರಿ ಅಗಲ ಮಾಡುವವವರು  ರೊಕ್ಕ ನೋಡ್ತಾರೆ
ಇಂದು,ಮಾಡುವ ಕೆಲಸ ಸೇವೆಯಲ್ಲಾ ರೊಕ್ಕ ಕೇಳುತ್ತದೆ
ಕುಸಿದ ಮೇಲೆ ಮಾತ್ರ ಕಣ್ಣು ತೆರೆಯುತ್ತದೆ

ಸಹಬಾಳ್ವೆ ಕಲಿಯದ ಗುಂಪಿನ ನಡುವೆ
 ಜೀವಗಳು ಒದ್ದಾಡುತ್ತಿವೆ
ಸಹನೆ ಕಲಿಯದ ದಾರಿಯ ನಡುವೆ
 ಕನಸುಗಳೂ ಸುಂಕ ಕೇಳಿವೆ

ನಾವು ದೇವರ ಯಾಕೆ ನಂಬುತ್ತೇವೆ?
ಭಯದಿಂದಲೋ, ಭಕ್ತಿಯಿಂದಲೋ
ಆದಿಯಿಂದ ಬಂದ ಆಚಾರದಿಂದಲೋ
ಉತ್ತರವಿಲ್ಲದ  ಪ್ರಶ್ನೆ ಇಲ್ಲಿ ಎಲ್ಲವೂ ಮರುಳು
 ಉತ್ತರ ಹುಡಕಲಾಗದುಷ

ನಂಬಿಕೆ ಸತ್ತಾಗ ದೇವರು ಸಾಯುವುದಿಲ್ಲ
ಮನುಷ್ಯ ಸಾಯುತ್ತಾನೆ
ದೇವರು ಗುಡಿಯಲ್ಲಿಲ್ಲ ತಾಯಿಯಲ್ಲಿ, ಕರುಣೆಯಲ್ಲಿ
ಪ್ರೇಮದ ಕಣ್ಣಲ್ಲಿ ,ನಿಸ್ವಾರ್ಥದಲ್ಲಿ
ಹದವರಿತ ಕಾಯಕದಲ್ಲಿ ಎಂಬರಿವು ಯಾವಾಗ ?


About The Author

Leave a Reply

You cannot copy content of this page

Scroll to Top