ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನೀನಿಲ್ಲದೆ ಮುಸ್ಸಂಜೆ ಬಣ ಬಣ
ಒಡಲ ತುಂಬ ಅನುರಾಗ ಪ್ರತಿಕ್ಷಣ
ಹೇಳೆ ಪ್ರಿಯಲತೆ ಬಂಧಿಸಲೆ ದೇವತೆ
ಬಾರೆನ್ನ ಚೆಲುವೆ ಸರಗಿಯ ಶೋಭಿತೆ

ನೋಟದಿ ಸೆಳೆದೆ ನಗುತ ನಿಂದೆ
ಮಾಯಗಾತಿ ಅದೆಲ್ಲಿಂದ ಬಂದೆ
ಮನದಲಿ ನೂರಾರು ಆಸೆಗಳ ತಂದೆ
ಹೂವ್ವಿನ ಗಂಧದಲಿ ಎನ್ನ ಮೀಯಿಸಿದೆ

ಕೆಂಪಿನ ಕೆನ್ನೆಯ ಮರೆಯಲಿ ಹೆಂಗೆ
ಹರಳಿನ ಕೊರಳನು ಚುಂಬಿಸಿ ನಿಂಗೆ
ಹೆರಳನು ಬೆರಳಲಿ ಆಡಿಸಲೇನ ಹಂಗೆ
ಗುಳಿಕೆನ್ನೆಯ ಒಡತಿ ಬಾರೆ ನಿಂಗಿ ಬಳಿಗೆ

ಕಾಯಿಸದಿರು ಒಲವ ಸೂಸಿದ ನಾರಿ
ಸಮ್ಮತಿಸು ನೀ ಬಾಳ ಹಬ್ಬದ ಬಂಗಾರಿ
ಹೃದಯ ಹಿಗ್ಗ ತಡೆಯಲಾರೆ ಸಿಂಗಾರಿ
ತಂದಿರುವೆ ಕರೆದೊಯ್ಯಲು ಅಂಬಾರಿ

ಹೇಗೇಗೋ ಇದ್ದೆ ನಾ ಮರುಳನಂತೆ
ನೀ ಬಂದೆ ಮದಿರೆಯ ಮೋಹದಂತೆ
ಸುರಗಿಯ ಸುತ್ತಿ ನಿಂತೆ ಜಾರದಂತೆ
ಅನುಮಾನ ಬೇಡ ಅನುಮತಿಸು ಕಾಂತೆ


About The Author

1 thought on “ಜಯಶ್ರೀ ಭ.ಭಂಡಾರಿ.ಬಾದಾಮಿ “ಚತುರೆ ಬಾ ಸಮ್ಮತಿಸು….””

Leave a Reply

You cannot copy content of this page

Scroll to Top