ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಈ ಮನಸು ಕನಸಲ್ಲೆ ಮನೆ ಕಟ್ಟುತಿತ್ತು
ಒಂದೊಂದಾಗಿ ಕೋಣೆಯ ಅಡಿಪಾಯ ಹಾಕಿಸಿನಮ್ಮ ಕನಸಿನ ಮನೆ*
ತ್ತು
ಇಟ್ಟಿಗೆಗಳ ಒಂದರ ಮೇಲೊಂದು ಏರಿಸಿತ್ತು
ಪ್ರೀತಿ ಪ್ರೇಮವೆಂಬ ಗಟ್ಟಿತನದ ಸಿಮೆಂಟಿತ್ತು.

ಶುದ್ಧ ಗಾಳಿ ಬೆಳಕು ಬರುವಂತೆ
ಮನೆ ಮುಂದೆ ಗಿಡ ನೆಡುವಂತೆ
ನೆರಳಿನಾಸರೆ ಹಕ್ಕಿ ಪಿಕ್ಕಿಗಳು ಪಡೆದಂತೆ
ನಮ್ಮ ತಲೆಯ ಮೇಲೊಂದು ಸೂರಂತೆ.

ಒಂದು ಸ್ವಂತಕ್ಕೆ ಮೇಲೊಂದು ಬಾಡಿಗೆಗೆ
ಪುಟ್ಟ ಗ್ರಂಥಾಲಯ ಒಂದು ಒಳಗೆ
ಒಳಾಂಗಣ ಹೊರಾಂಗಣ ಆಟಕೆ ಮಕ್ಕಳಿಗೆ
ವಿಶ್ರಾಂತಿ ಕೋಣೆ ಬಂದ ಅತಿಥಿಗಳಿಗೆ.

ಪುಟ್ಟ ಗೂಡಿನ ಕನಸೊಂದ ಕಂಡಿಹೆನು
ಬ್ಯಾಂಕಲ್ಲಿ ಕೊಡುವರಂತೆ ಕಟ್ಟಲು ಲೋನು
ಮಳೆರಾಯ ಒಳ ಬಂದು ಸೋಕಿದನು
ಕನಸಿಂದ ವಾಸ್ತವಕೆ ದೂಡಿದ ಮನವನು.


About The Author

Leave a Reply

You cannot copy content of this page

Scroll to Top