ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ದಸರಾ
ನಾಚಿಗೆ ಇಲ್ಲವೆ ನಿನಗೆ
ನಿನ್ನ ಬಾ ಎಂದವರು ಯಾರು?

ಬರ ಸಿಡಿಲಿನಂತ ಬರ
ಉತ್ತರವೇ ತತ್ತರ
ಕಾಣುವುದಿಲ್ಲವೇ

ನನ್ನವರು ಹಸಿವಿನ ಹಾವು
ಸುತ್ತಿಕೊಂಡವರು
ಕಣ್ಣೀರು ಬಸೆದು
ಮಂಜಾದ ನೋಟದಿಂದ ಅನ್ನದ ಹಂಬಲಿಸುವರು
ಪುಟ್ಟ ಮಕ್ಕಳ
ಹೊಟ್ಟೆ ಬೆನ್ನು ಕೂಡಿ ಬಿಲ್ಲಿನಂತೆ ಬಾಗಿವೆ
ಹಸಿವುವೆ ಶಾಪ
ನಾವು
ದೇವರ ಜೊತೆ ಜಿದ್ದಿಗೆ ಬಿದ್ದಿದ್ದೇವೆ

ನೀ ಬಾ ಎಂದು ಹೇಳಿದವರು ಯಾರು?
ನಾ ಹೇಳಿದನಾ
ಇಲ್ಲ
ನೀವೂ ಹೇಳಿದೀರಾ?

ಓ ನನಗೇ
ಯಾರೆಂದು ಗೊತ್ತಾಯಿತು

ಹೊಗಳಿಕೆ ಧೂಪ ಹಣ್ಣು ಕಾಯಿಗೆ
ಆಸೆ ಬುರುಕ ನೀ

ಸಿರಿವಂತರ ಸರ್ಗದಲ್ಲಿ
ನವ ದಿನ ನವ ಬಣ್ಣದವರು
ಹಸಿದವರಿಗೆ ಅನ್ನ ಇಕ್ಕದವರು
ನಿನ್ನವರು

ಹಾಳಾದ ಹಳ್ಳಿಗಳು
ಬತ್ತಿದ ಹಳ್ಳ ಕೊಳಗಳು
ಸ್ಪರ್ಧೆಗೆ ಬಿದ್ದಿದ್ದಾರೆ ಇಬ್ಬರು
ನಿತ್ಯ ಸುಡುವ ಸೂರ್ಯ
ಹೊಟ್ಟೆ ಶುರುವ ಹಸಿವು
ಬದುಕು ಜಾಲಿ ಗಿಡ

ಹೇಗಿದ್ದರೂ ಬಂದಿರುವೆ
ಮತಿ ಹೀನರ ಮನೆಯಲ್ಲಿರು

ಉತ್ಪಾದಗಳ ಮೇಲೆ
ಹೊಟ್ಟೆಗೆ ತಣ್ಣೀರು ಬಟ್ಟೆ
ಸುತ್ತಿಕೊಂಡು
ಮಲಗಿದ್ದಾರೆ ನನ್ನವರು

ಶ್!!
ಸದ್ದು ಮಾಡದೇ ಹೊರಟು ಹೋಗು

ನಾಚಿಕೆ ಇಲ್ಲವೇ ನಿನಗೆ

ದಸರಾ
ನಾಚಿಗೆ ಇಲ್ಲವೆ ನಿನಗೆ
ನಿನ್ನ ಬಾ ಎಂದವರು ಯಾರು?

ಬರ ಸಿಡಿಲಿನಂತ ಬರ
ಉತ್ತರವೇ ತತ್ತರ
ಕಾಣುವುದಿಲ್ಲವೇ

ನನ್ನವರು ಹಸಿವಿನ ಹಾವು
ಸುತ್ತಿಕೊಂಡವರು
ಕಣ್ಣೀರು ಬಸೆದು
ಮಂಜಾದ ನೋಟದಿಂದ ಅನ್ನದ ಹಂಬಲಿಸುವರು
ಪುಟ್ಟ ಮಕ್ಕಳ
ಹೊಟ್ಟೆ ಬೆನ್ನು ಕೂಡಿ ಬಿಲ್ಲಿನಂತೆ ಬಾಗಿವೆ
ಹಸಿವುವೆ ಶಾಪ
ನಾವು
ದೇವರ ಜೊತೆ ಜಿದ್ದಿಗೆ ಬಿದ್ದಿದ್ದೇವೆ

ನೀ ಬಾ ಎಂದು ಹೇಳಿದವರು ಯಾರು?
ನಾ ಹೇಳಿದನಾ
ಇಲ್ಲ
ನೀವೂ ಹೇಳಿದೀರಾ?

ಓ ನನಗೇ
ಯಾರೆಂದು ಗೊತ್ತಾಯಿತು

ಹೊಗಳಿಕೆ ಧೂಪ ಹಣ್ಣು ಕಾಯಿಗೆ
ಆಸೆ ಬುರುಕ ನೀ

ಸಿರಿವಂತರ ಸರ್ಗದಲ್ಲಿ
ನವ ದಿನ ನವ ಬಣ್ಣದವರು
ಹಸಿದವರಿಗೆ ಅನ್ನ ಇಕ್ಕದವರು
ನಿನ್ನವರು

ಹಾಳಾದ ಹಳ್ಳಿಗಳು
ಬತ್ತಿದ ಹಳ್ಳ ಕೊಳಗಳು
ಸ್ಪರ್ಧೆಗೆ ಬಿದ್ದಿದ್ದಾರೆ ಇಬ್ಬರು
ನಿತ್ಯ ಸುಡುವ ಸೂರ್ಯ
ಹೊಟ್ಟೆ ಶುರುವ ಹಸಿವು
ಬದುಕು ಜಾಲಿ ಗಿಡ

ಹೇಗಿದ್ದರೂ ಬಂದಿರುವೆ
ಮತಿ ಹೀನರ ಮನೆಯಲ್ಲಿರು

ಉತ್ಪಾದಗಳ ಮೇಲೆ
ಹೊಟ್ಟೆಗೆ ತಣ್ಣೀರು ಬಟ್ಟೆ
ಸುತ್ತಿಕೊಂಡು
ಮಲಗಿದ್ದಾರೆ ನನ್ನವರು

ಶ್!!
ಸದ್ದು ಮಾಡದೇ ಹೊರಟು ಹೋಗು
ಸಾಯಬಣ್ಣ ಮಾದರ (ಸಲಾದಹಳ್ಳಿ)

About The Author

Leave a Reply

You cannot copy content of this page

Scroll to Top