ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನೀನಗೇನು ದಕ್ಕಿತು
ನಿನ್ನದೆನ್ನುವ ಕಿಂಚಿತ್ತು ಭಾವವೆ
ದಹಿಸಿದಷ್ಟು ಸುಲಭವಾಗಿ
ನೇವರಿಸಿ ಸರಿದಷ್ಟು ಗಾಢವಾಗಿ

ಅಯ್ಯೋ, ಬಿಡು ಅದೇ ಮಾತು
ಅದೇ ಕಥೆ! ಸೊಗಸಿಲ್ಲದ ಭಾವಗೀತೆ
ಅತ್ತು ಕರೆದಷ್ಟು ಉಮ್ಮಳಿಸಿತು  
ಸಿಟ್ಟು,ಸೆಡುವು ನೆಲ ಸಮವಾತು.

ಆದರೆ,ನಿನಗೇನೂ ಪರಕಾಗಿಲ್ಲ
ಬಿಟ್ಟು ಹೋದ ಜಾಡುಗಳೆಲ್ಲ
ಜಂಜಾಟದ ಬೇರುಗಳಾಗಿ ಇಳೆ ಸೇರಿ
ಮೌನದ ಗಾಯ ಮಾಸಲಿಲ್ಲ

ಹೋಗಲಿ ಬಿಡು ನಿನಗೇನು ಬೇಕಿತ್ತು
ದೈಹಿಕ ತೃಷೆ ಮಣ್ಣಾಗದಿದ್ದಿತೆ
ಮುಖವಾಡಗಳು ಕಳಚಿ ಬಿದ್ದಾಗಿದೆ
ಬಣ್ಣ ಮಾಸಲು ಸಮಯ ಬೇಕೆ

ಇನ್ನಾದರೂ ದೂರ ಹೋಗಿ ಬಿಡು
ನಿನ್ನೊಳಗೆ ನಾನಿಲ್ಲವೆಂಬ ಸತ್ಯ
ಅರಿವಿಗೆ ಬಂದರೆ ಸಾಕಲ್ಲವೆ
ಮಸ್ತಕದ ಪುಟ ತಿರುವಿ ನೋಡಬೇಕೆ

ಕೊನೆಗೂ,ನಾನಿಲ್ಲದ ಬದುಕು ನಿನ್ನಾಯ್ಕೆ
ಹೊಸದೆನಿಲ್ಲ ಬಿಡು ಲೋಕ ಬಲ್ಲವಗೆ
ಹಳೆ ನೀರು ಮುಂದಾಗಬೇಕು
ಹೊಸ ನೀರು ಹಳತಾಗಲು ಕಾಯಬೇಕು

ಎಲ್ಲ ಕಳಚುವ ಮುನ್ನ ಎಚ್ಚರಾಗು
ನಿನ್ನದಲ್ಲದ ಚಿಂತೆಗೆ ಚಿತೆ ಕಟ್ಟು
ಹೊತ್ತು ಸಾಗುವವರಿಗೆ ಶವವಾಗು
ಮಣ್ಣಲಿ ಉಳುವವಗೆ ಹೊರೆಯಾಗದಿರು

ಮತ್ತೆ ಸಿಗುವ ಹಂಬಲವಿಲ್ಲ
ಯಾವ ಜನ್ಮದ ನಂಟುಬೇಕಿಲ್ಲ
ಇದ್ದಾಗಲೇ ಸಾವ ಕಂಡವರಿಗೆ
ಮತ್ತೆ ಹುಟ್ಟುವ ಕನಸಿಲ್ಲ…..


About The Author

3 thoughts on ““ಹೊತ್ತು ಸಾಗುವವರಿಗೆ ಶವವಾಗು!” ಶಿವಲೀಲಾ ಹುಣಸಗಿ ಯಲ್ಲಾಪುರ”

  1. ಚೆಂದದ ಅರ್ಥಪೂರ್ಣವಾದ ಕವಿತೆ ಅಭಿನಂದನೆಗಳು
    ಬಿ.ಕೆ.ಜಯಶ್ರೀ ಹಾಸನ

  2. ಎಷ್ಟೇ ಪ್ರಯತ್ನ ಮಾಡಿದರೂ ನಮ್ಮ ಭಾವನೆಗೆ ಜೀವ ತುಂಬಲಾಗದು.ಅದೇ ರಾಗ ಅದೇ ಹಾಡು.ಒಮ್ಮೊಮ್ಮೆ ನಮಗೆ ಹಾನಿ ಎನಿಸದು.ಏಕೆಂದರೆ ತಪ್ಪು ನಮ್ಮದೇ ಆದ ಕಾರಣ ಪ್ರಕೃತಿ ಒಲಿದರೂ ಅಷ್ಟೇ ಬಿಟ್ಟರೂ ಅಷ್ಟೇ. ಒಮ್ಮೆ ನಮ್ಮ ತಪ್ಪಿನರಿವು ಆಗುವುದುಖಚಿತ.ಈ ತರಹದ ನೋವು ಸಾಕು ನಿ ದೂರಾಗು.ನಿನಗೇನು ?ನಾನಿಲ್ಲದೆ ನೀ ಬಾಳುವೆ ಎಂಬ ನಂಬಿಕೆಯಿದೆ.ಅದೇ ನಿನ್ನಾಯ್ಕೆ ನಾನು ಬಿರುಕು ಬಿಟ್ಟಿರುವೆ.ಜಲ ಇಲ್ಲದೆ ಒಣಗಿರುವೆ. ಮತ್ತೆನಾಗಬೇಕು ಸುಮ್ಮನೆ ರೈತನಿಗೆ ಹೊರೆಯಾಗಬೇಡ.ನನಗೆ ನಿನ್ನ ಅಗತ್ಯ ಇಲ್ಲ. ಯಾಕೆಂದರೆ ಇದ್ದು ನೀ ಸತ್ತಂತೆ. ಪ್ರಯೋಜನ ಇಲ್ಲ. ಕವಿತೆಯು ಪ್ರಕೃತಿಯ ಮೇಲಾದ ಅನ್ಯಾಯ ಎತ್ತಿ ಹಿಡಿದಿದೆ.ಉತ್ತಮ ಸಂದೇಶ ಸಾರುವ ಕವನ.ಅಭಿನಂದನೆಗಳು ಮೆಡಮ್

Leave a Reply

You cannot copy content of this page

Scroll to Top