ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

“ಗುಂಪಿಗೆ ಸೇರದ ಪದ”

ಬಿಟ್ಟ ಸ್ಥಳ ತುಂಬುವಾಗೆಲ್ಲ ಆಯ್ದ ಪದವಾಗದೆ ಹೊರಗುಳಿದು ಬಿಟ್ಟೆ ಅನುಕಂಪದ ಕಡಲು ಉಕ್ಕಲಿಲ್ಲ ಸಹಕಾರದ ಸೇತುವೆಯೂ ಜೊತೆಯಾಗಲಿಲ್ಲ.

ಜಗುಲಿ ಕಟ್ಟೆ ಪುರಾಣದ ಮಾತುಗಳೆ
ನೂಕಿದ್ದವು ಬೇಲಿಯಾಚೆ,,
ಕಡ್ಡಿ ಚುಚ್ಚಿ ಬೆಂಕಿಹಚ್ಚಿದಾಗೆಲ್ಲ
ಉರಿದು ಬೂದಿಯಾದ ನಾನು
ಹಬ್ಬ ಹರಿದಿನಗಳಲಿ ಕರುಣೆ ಕಣಜವಾಗಿ ಕಸಮುಸುರೆಗಾಗೊ ಬಿಟ್ಟಿ ವಸ್ತು ನಾನು!.

ಕಾಲ ಬದಲಾಗಿದೆ ಎಂದವರೆಲ್ಲ
ಒಮ್ಮೆ ಇಣುಕಲಿ ಮಾನವೀಯತೆ ಮೆರೆದು,
ಸೋತಾಗ ತೂಗುವ ತವರು
ಸೋಸಿ ಇಕ್ಕುವ ತಾಳಿ ಮಾಲೀಕರು
ಮಾನವೀಯತೆ ಮರೆತ ನೆರೆಹೊರೆ
ಬಂಧು ಬಳಗ ಇವೆಲ್ಲ
ಖಾಲಿ ಜೋಳಿಗೆಯ ವಾಸನೆಗಳು.

ಸೌಜನ್ಯಕ್ಕಾದರೂ ಸೇರಿಸಬಹುದಿತ್ತು ಶಾಸ್ತ್ರಕ್ಕಲ್ಲದೆ ಶ್ರಾದ್ಧಕ್ಕಾದರೂ,ಮುಂಡೆ,ಬಂಜೆ ಸೂಳೆ, ಖೋಜಾ ಎಂದೇ ಹೊರಗಟ್ಟಿದ ಮೇಲೆ ಯಾರ ಹಂಗು?
ಹೋಗಲಿ ಬಿಡಿ ನಾನು ಭಿನ್ನ ಪದವೆ
ಯಾಕೆಂದರೆ ನಾನು ಮನಕೆ ಪಥ್ಯವಾಗದ ಮನುಷ


About The Author

Leave a Reply

You cannot copy content of this page

Scroll to Top