ಕಾವ್ಯ ಸಂಗಾತಿ
ನಾಮದೇವ ಕಾಗದಗಾರ
“ಮುಖವಾಡಗಳ ಸಂತೆ”


ನಿಷ್ಕ್ರಿಯ ಸಮಾಜದ ಕತ್ತಲು
ಹೋಗಲಾಡಿಸಲು ಎದೆ ಹಣತೆಯಾಗಬೇಕು;
ಹಣತೆಯಲ್ಲಿ ಸಮಾನತೆ,
ಜಾತ್ಯತೀತ ಎಣ್ಣೆ ಇದ್ದರೆ ಮಾತ್ರ
***
ಹಳ್ಳಿಯ ಮಣ್ಣಿನ ಘಮ ಮರೆತಾಗಿದೆ,
ಸೂಪರ್ ಮಾರ್ಕೆಟ್ ಪ್ಯಾಕೆಟ್ ಒಳಗೆ,
ಸಾವಯವದ ಹಣೆಪಟ್ಟಿ ಜಗತ್ತಾಗಿದೆ!
***
ಗಗನಚುಂಬಿ ಕಟ್ಟಡಗಳ ಸಾಲು;
ಕಿಟಕಿಯಿಂದ ಇಣುಕುವ ಚಂದಿರನಿಗೂ
ಸಿಗುತ್ತಿಲ್ಲ ಮುಕ್ತವಾಗಿ ಒಂದು ಪಾಲು!
***
ನೂರು ಗ್ರೂಪುಗಳಲ್ಲಿ ಸಾವಿರ ಗೆಳೆಯರು;
ಒಂಟಿಯಾಗಿ ಕಣ್ಣೀರು ಸುರಿಸುವಾಗ
ಒರೆಸಲು ಯಾರೂ ಇಲ್ಲ!
***
ಕೃತಕ ಬುದ್ಧಿಗೂ ಭಾವನೆಗಳ ಲೇಪನ;
ಮನುಷ್ಯ ಮಾತ್ರ ಯಂತ್ರ,
ಚೇತನ ಕಳೆದುಹೋಗಿದೆ!
***
ಸ್ಟೇಟಸ್ಗಳಲ್ಲಿ ದಿನವೂ ದೇಶಭಕ್ತಿಯ ಕದರು;
ರಸ್ತೆಯ ಕಸವನು ದಾಟುವಾಗ ಮಾತ್ರ
ಮುಚ್ಚಿಕೊಳ್ಳುವುದು ಕಣ್ಣಿನ ಪದರು
ನಾಮದೇವ ಕಾಗದಗಾರ



