ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮರುಜನ್ಮವೆತ್ತಿ  ಬಾರಯ್ಯ ಬಸವ
ಬಿಳಿಬಣ್ಣ ಹೊರಗಿನ ಬದುಕೆಂಬುವರಯ್ಯಾ
ಕರಿಬಣ್ಣ ಒಳಗಿನ ಬದುಕೆಂಬುವರಯ್ಯಾ
ಭಿಕ್ಷೆಯೇ ನಮ್ಮೊಳಗಿನ ಬದುಕೆಂಬುವರಯ್ಯಾ
ಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾ
ಬಸವ ಬಸವಳಿದವರ ಅಪ್ಪಿ  ಸಂತೈಸಯ್ಯಾ
ಬಯಲಿನ ಬದುಕೆ ನಮ್ಮದೆಂದು  ಸಾರಾಯ್ಯಾ //
ಹೆಣ್ಣು ಹೊನ್ನು ಮಣ್ಣು ನನ್ನ ದೆಂಬುವರಯ್ಯಾ
ಹೆಬ್ಬುಲಿಯ ಗರ್ಭದಲಿ ಧರ್ಮ ಅಧರ್ಮವಾಗಿಹುದಯ್ಯಾ
ದರ್ಪ ದೌರ್ಜನ್ಯ ಹೆಡೆಮುರಿ ಕಟ್ಟಿಹುದಯ್ಯಾ
ಹಾಳಾದ ಗಂಗೆ ಹಾಲಾಹಲವಾಗಿಹಾಳಯ್ಯಾ
ಪರಧನ -ಸತಿನೊಲ್ಲೆಯೆಂದು  ಮತ್ತೆ ಸಾರಯ್ಯಾ //
ಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾ
ಬೆತ್ತಲಾಗುವುದೇ ಬಯಲಿನ ಬದುಕೆಂಬುವರಯ್ಯಾ
ಕತ್ತಲಾಗುವುದೇ ನರಮೇಧವೆಂಬುವರಯ್ಯಾ
ಶೀಲ-ಸಾಲ-ಶೂಲ ನಿತ್ಯ ಸತ್ಯವೆಂಬುವರಯ್ಯಾ
ಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾ
ಬಸವ ಬಸವಳಿದವರ ಅಪ್ಪಿ  ಸಂತೈಸಯ್ಯಾ
ಅಳಬೇಡ ಕೊಲಬೇಡವೆಂದು ಮತ್ತೆ ಸಾರಯ್ಯ //
ಚಿನ್ನದ ಚೂರಿಗೆ  ಹೂ ಮುಡಿಸಿಹರಯ್ಯಾ
ರಾಮನಲಿ ರಾವಣನ ಕೂಡಿಸಿಹರಯ್ಯಾ
ಹೆತ್ತವರಲ್ಲಿ ಹುತ್ತ ಹುಡುಕಿಹರಯ್ಯಾ
ಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾ
ಬಸವ ಬಸವಳಿದವರ ಅಪ್ಪಿ  ಸಂತೈಸಯ್ಯಾ
ಕಾಲೇ ಕಂಬ ದೇಹವೇ ದೇಗುಲವೆಂದು ಸಾರಯ್ಯ//
ಬೆತ್ತಲಾಗುವುದೇ ಬಯಲಿನ ಬದುಕೆಂಬುವರಯ್ಯಾ
ಕತ್ತಲಾಗುವುದೇ ನರಮೇಧವೆಂಬುವರಯ್ಯಾ
ಶೀಲ- ಶೂಲ -ಸಾಲ ನಿತ್ಯ ಸತ್ಯವೆಂಬುವರಯ್ಯಾ
ಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾ
ಬಸವ ಬಸವಳಿದವರ ಅಪ್ಪಿ  ಸಂತೈಸಯ್ಯಾ
ಕಳಬೇಡ ಕೊಲಬೇಡವೆಂದು ಮತ್ತೆ ಸಾರಯ್ಯ //
ಚಿನ್ನದ ಚೂರಿಗೆ  ಹೂ ಮುಡಿಸಿಹರಯ್ಯಾ
ರಾಮನಲಿ ರಾವಣನ ಕೂಡಿಸಿಹರಯ್ಯಾ
ಹೆತ್ತವರಲ್ಲಿ ಹುತ್ತ ಹುಡುಕಿಹರಯ್ಯಾ
ಇಂತಿಪ್ಪ ಲೋಕದಲ್ಲಿ ಬಯಸಿ ಬಾರಯ್ಯಾ
ಬಸವ ಬಸವಳಿದವರ ಅಪ್ಪಿ  ಸಂತೈಸಯ್ಯಾ
ಕಾಲೇ ಕಂಬ ದೇಹವೇ ದೇಗುಲವೆಂದು


About The Author

1 thought on “ಡಾ.ಸರಸ್ವತಿ ಕಳಸದ ಅವರ ಕವಿತೆ “ಮರುಜನ್ಮವೆತ್ತಿ ಬಾರಯ್ಯಾ””

Leave a Reply

You cannot copy content of this page

Scroll to Top