ಕಾವ್ಯ ಸಂಗಾತಿ
ಅನುರಾಧಾ ರಾಜೀವ್
“ಭಾವಗಳ ಹೂರಣ”


ಬರೆದ ಒಲವ ಓಲೆಯ ತುಂಬಾ
ನಿನ್ನುಸಿರ ಬಿಸಿ ಸಿಂಚನ
ಬೆರೆಸಿ ಪ್ರೇಮದ ಪನ್ನೀರ ಹನಿಯು
ನೀಡಿ ಎನ್ನೆದೆಗೆ ಹೊಸ ಚೇತನ
ಪ್ರತೀ ಪದಗಳಲೂ ತುಂಬಿ ತುಳುಕುತಿದೆ
ನಿನ್ನಂತರಂಗದ ಭಾವಗಳ ಹೂರಣ
ಜೊತೆ ಜೊತೆಗೆ ನಡೆವಾಸೆ ಬದುಕಲಿ
ಕಟ್ಟಿರುವೆ ಬಯಕೆ ತೋರಣ
ಪುಳಕಗೊಂಡಿದೆ ತನುಮನ ಒಂದಾಗಿ
ಹೃದಯದೊಳು ನವ್ಯ ಮಿಡಿತ
ತಳಮಳವು ಹೆಚ್ಚಿರೆ ಒಂದೊಮ್ಮೆ
ಕಾಣಬೇಕೆಂಬ ತುಡಿತ
ತೆರೆದ ಪುಸ್ತಕದಂತೆ ನಿನ್ನೊಡಲ
ಮಾತಿನ ಸರಣಿ ಮಾಲೆ
ಮರೆತೆ ಮಧುರ ಅನುಭೂತಿಯಲಿ
ಸೆಳೆಯಿತು ಮೋಹದ ಸೆಲೆ
ಅನುರಾಧಾ ರಾಜೀವ್ ಸುರತ್ಕಲ್



