ಕಾವ್ಯ ಸಂಗಾತಿ
ಡಾ.ಹಸೀನಾ ಹೆಚ್.ಕೆ. ಶಿವಮೊಗ್ಗ
ಗಜಲ್


*ಸಪ್ತ* ಸಾಗರ ದಾಟಿ ಪರ್ಯವಸಾನಗೊಂಡ *ಹಾದಿಯಿದು* ಪ್ರೇಮ
*ಗುಪ್ತ* ಬಯಕೆಯ ಮೀಟಿ ಆಲಾಪಗೊಂಡ *ಶೃತಿಯಿದು* ಪ್ರೇಮ
ಹೃದಯದಂಗಳದಲ್ಲಿ ಮಲ್ಲಿಗೆ ಬಳ್ಳಿ ನೆಟ್ಟವನು ನೀನಲ್ಲವೆ ಒಡೆಯ
*ಸುಪ್ತ* ಮನವ ಮತ್ತೆ ಮತ್ತೆ ತೀಡಿ *ಲಯಗೊಂಡ* ಭಾವವಿದು ಪ್ರೇಮ
ತನ್ನ ತಾ ಅರಿವಿನ ಮೊರೆಗೆ ಕಿವಿ ತೆರೆದು ಕೇಳಿದವರಾರು?
*ಕ್ಲುಪ್ತ* ಕಲ್ಪನೆ ಕಟಿ ಕಟಿದು ಕೆನೆಗೊಂಡ *ಚತ್ರವಿದು* ಪ್ರೇಮ
ಸುಟ್ಟು ಬೂದಿಯಾಗುವ ಹಂಬಲಕೆ ಕೊನೆ ಮೊದಲಿಲ್ಲ ಗೆಳತಿ
*ತಪ್ತ* ಸ್ವರವ ಕುಡಿ ಕುಡಿದು ಹದಗೊಂಡ *ಗುನುಗಿದು* ಪ್ರೇಮ
ಜಗದಲಿ ಅದೆಷ್ಟು ಮಧುಪಾತ್ರೆಗಳು ಬರಿದಾಗಿವೆ ನೋಡು ಹಸೀನಾ..
*ತೃಪ್ತ* ಹೃದಯವ ಹುರಿದು ಮೆದುಮಾಡಿಕೊಂಡ *ನೈವೇದ್ಯವಿದು* ಪ್ರೇಮ
-ಡಾ.ಹಸೀನಾ ಹೆಚ್.ಕೆ, ಶಿವಮೊಗ್ಗ




Super ma’am