ಕಾವ್ಯ ಸಂಗಾತಿ
ನಿಶ್ಚಿತ ಎಸ್.
ಭಾವನೆಗಳು ಕೇಳುತ್ತಿವೆ


ಭಾವನೆಗಳು ಭಾವಕ್ಕೆ
ಒಳಗಾಗಿ,, ಭಾವಿಸದೆ
ಪ್ರತಿಬಿಂಬಕ್ಕಾಗಿ ಸೋತು
ಹೋಗಿದೆ ಮನಸ್ಸುಗಳು
ಭಾವದ ಭಾವನೆಗಳಿಗೆ….
ಇದ್ದಕ್ಕಿದ್ದಂತೆ ಮೂಡಿದ
ಹೊಸ ಭಾವನೆಗಳು,,
ಹಳೆ ಭಾವನೆಗಳಿಗೆ ಸ್ಪಂದಿಸದೆ,,
ಸೋಲಿಸುತ್ತಿದೆ ಮನವ ,
,ನಿನ್ನ ಭಾವವ ಭಾವಿಸಿ
ನೀ ಹೋಗೆಂದು….
ಯಾಕೋ ಭಾವನೆಗಳು,,
ಭಾವದ ತೀರಕ್ಕೆ ಬಲಿಯಾಗಿ,,
ಮನಸ್ಸಿನ ನೆಮ್ಮದಿಗೆ
ಬಲಿಯಾಗಿ,,
ಭಾವನೆಗಳೇ ಸದ್ದಿಲ್ಲದೆ
ಕೇಳುತ್ತಿದೆ ನಿನ್ನ
ಭಾವನೆಗಳು ಸರಿಯೇ
ಎಂದು….
ನಾಸರಿಯೋ,,
ನನ್ನ ಭಾವನೆ ಸರಿಯೋ,,
ನನ್ನ ಮನಸ್ಸು ಸರಿಯೋ,,
ನನ್ನ ಮನಸ್ಸಿನ ಒಡೆಯನಿಗಾಗಿ
ನಾ ನನ್ನ ಭಾವನೆಗಳನ್ನು
ಬಲಿ ಕೊಟ್ಟೆನೋ ಏನು
ಅರಿವಿಲ್ಲ ನನಗೀಗ…
ಹೇ ಮನಸೇ ..
ಹರಿಯುತ್ತಿರುವ ಮನಸ್ಸ,,
ಭಾವನೆಗಳಿಂದ ಬಂಧಿಸದೆ,,
ಮುಕ್ತಿಸು ನನ್ನನ್ನು
ನನ್ನಂತೆ ಸ್ವೀಕರಿಸು,,
ನೀನು ಹೇಳು ಒಮ್ಮೆ
ನಾ ಸರಿಯೋ ತಪ್ಪೋ…
ನಿಶ್ಚಿತ ಎಸ್



