ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಾಯಿಗಿಂತ ನರಿ ಬಹಳ ಬುದ್ಧಿವಂತ ಪ್ರಾಣಿ,
ಆದರೂ ಜನ ನರಿ ಸಾಕುವುದಿಲ್ಲ,ನಾಯಿಯನ್ನೇ ಸಾಕುತ್ತಾರೆ;
ಯಾಕೆ ಗೊತ್ತಾ?
ಬುದ್ಧಿವಂತಿಕೆಗಿಂತ ಪ್ರಾಮಾಣಿಕತೆ ಮುಖ್ಯ,
ಚಾಣಾಕ್ಷತನಕ್ಕಿಂತ ನಿಷ್ಠೆಯೇ ಶ್ರೇಷ್ಠ.

ಜಾಣ್ಮೆಯಿಂದ ಬದುಕು ಗೆಲ್ಲಬಹುದು,
ಆದರೆ ನಂಬಿಕೆಯಿಂದ ಹೃದಯವನ್ನೆ ಗೆಲ್ಲಬಹುದು,
ಮಾತಿನಿಂದ ಮನವೊಲಿಸಬಹುದು,
ಆದರೆ ನಡೆನುಡಿಯಿಂದ ನಂಬಿಕೆಯನ್ನೇ ಗಳಿಸಬಹುದು.
ಎಷ್ಟೇ ಬುದ್ಧಿ ಇದ್ದರೂ ನಂಬಿಕೆ ಇಲ್ಲದಿದ್ದರೆ ವ್ಯರ್ಥ,
ಎಷ್ಟೇ ಸರಳವಾಗಿದ್ದರೂ ನಿಷ್ಠೆ ಇದ್ದರೆ ಅರ್ಥ,

ಜಗತ್ತು ಕೊನೆಗೆ ನೆನಪಿಡುವುದು
ಜಾಣತನ ತೋರಿದವನನ್ನಲ್ಲ,
ಕಷ್ಟಕಾಲದಲ್ಲೂ ಕೈಬಿಡದೆ
ಜೊತೆಯಾಗಿ ನಿಂತ ನಿಷ್ಠಾವಂತನನ್ನು.
ಜಾಣ್ಮೆ ಬದುಕಿಗೆ ಅಲಂಕಾರ,
ನಿಷ್ಠೆ ಬದುಕಿಗೆ ಆಧಾರ,

ಬುದ್ಧಿ ಮನುಷ್ಯನನ್ನು ಎತ್ತರಿಸಬಹುದು,
ಆದರೆ ಪ್ರಾಮಾಣಿಕತೆಯೇ ಅವನ ವ್ಯಕ್ತಿತ್ವವನ್ನು ಶ್ರೇಷ್ಠಗೊಳಿಸುತ್ತದೆ.


About The Author

Leave a Reply

You cannot copy content of this page

Scroll to Top