ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಭಾರತದ ಭಾಷಾ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಅವಲೋಕಿಸಿದಾಗ, ಸಂಸ್ಕೃತವು ದೀರ್ಘಕಾಲಿಕ ಜ್ಞಾನ, ಧರ್ಮ, ಸಾಹಿತ್ಯ ಮತ್ತು ಆಡಳಿತದ ಪ್ರಮುಖ ಭಾಷೆಯಾಗಿ ಪ್ರಭಾವ ಬೀರಿರುವುದು ಕಂಡುಬರುತ್ತದೆ.
ಆದರೆ ಭಾರತದ ವಿಶಾಲ ಜನಸಮುದಾಯದ ಬದುಕು ಒಂದೇ ಭಾಷೆಯೊಳಗೆ ಸೀಮಿತವಾಗಿರಲಿಲ್ಲ. ದೇಶದ ವಿವಿಧ ಭೂಭಾಗಗಳಲ್ಲಿ ಜನರು ತಮ್ಮ ತಮ್ಮ ಸ್ಥಳೀಯ ಭಾಷೆಗಳ ಮೂಲಕ ತಮ್ಮ ಜೀವನಾನುಭವ, ಸಂಸ್ಕೃತಿ, ಪರಂಪರೆ, ಜನಪದ ಜ್ಞಾನ ಮತ್ತು ಸಾಮಾಜಿಕ ಅಸ್ತಿತ್ವವನ್ನು ಶತಮಾನಗಳಿಂದಲೂ ಉಳಿಸಿಕೊಂಡು ಬಂದಿದ್ದರು.

ಬ್ರಿಟಿಷರ ಆಗಮನದ ನಂತರ ಭಾರತದ ವಿವಿಧ ಪ್ರದೇಶಗಳು ವಸಾಹತುಶಾಹಿ ಆಡಳಿತದ ಅಡಿಯಲ್ಲಿ ಬಂದವು. ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ವಿಭಜಿಸಲ್ಪಟ್ಟಿದ್ದ ಈ ಪ್ರದೇಶಗಳಲ್ಲಿ ಸ್ವಾತಂತ್ರ್ಯದ ಆಶಯ ಕ್ರಮೇಣ ಬಲಗೊಳ್ಳತೊಡಗಿತು. ಪರಕೀಯ ಆಡಳಿತದಿಂದ ವಿಮೋಚನೆ ಪಡೆಯುವ ರಾಷ್ಟ್ರೀಯ ಹೋರಾಟದ ಜೊತೆಯಲ್ಲೇ, ತಮ್ಮ ನೆಲ, ನುಡಿ ಮತ್ತು ಸಂಸ್ಕೃತಿಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹೋರಾಟವೂ ರೂಪುಗೊಳ್ಳತೊಡಗಿತು.

 ಕನ್ನಡಿಗರ ಪಾಲಿಗೂ ಇದೇ ಭಾವನೆ ಕ್ರಮೇಣ ಒಂದು ದೊಡ್ಡ ಚಳುವಳಿಯ ರೂಪ ಪಡೆದುಕೊಂಡಿತು.
ಆ ಕಾಲದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು  ನೆಲೆಯನ್ನು ಹೊಂದಿದ್ದ ಕನ್ನಡಿಗರು ಆಡಳಿತಾತ್ಮಕವಾಗಿ ಬೇರೆ ಬೇರೆ ಭಾಗಗಳಲ್ಲಿ ವಿಭಜಿತರಾಗಿದ್ದರು. ಈ ವಿಭಜನೆಯಿಂದ ಕನ್ನಡ ಭಾಷೆಯ ಬೆಳವಣಿಗೆಗೂ, ಕನ್ನಡಿಗರ ಒಗ್ಗಟ್ಟಿನ ಭಾವನೆಗೂ ಹಲವು ಅಡಚಣೆಗಳು ಎದುರಾದವು.

ಆರಂಭದಲ್ಲಿ ಕೆಲವೇ ಚಿಂತಕರು, ಸಾಹಿತಿಗಳು ಮತ್ತು ಹೋರಾಟಗಾರರ ಮನಸ್ಸಿನಲ್ಲಿ ಮೂಡಿದ ಈ ಆಶಯ ಕ್ರಮೇಣ ಜನಮನದ ಆಶಯವಾಗಿ ಪರಿವರ್ತಿತವಾಯಿತು. ವಿವಿಧ ಸಂಘ-ಸಂಸ್ಥೆಗಳು ಸ್ಥಾಪನೆಯಾದವು. ಕನ್ನಡ ಸಾಹಿತ್ಯ ಸಮ್ಮೇಳನಗಳು, ಸಭೆಗಳು, ಉಪನ್ಯಾಸಗಳು, ಪತ್ರಿಕೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಕನ್ನಡಿಗರಲ್ಲಿ ಏಕತೆಯ ಭಾವನೆ ಮೂಡಿಸಲಾಯಿತು. “ಕನ್ನಡನಾಡು ಒಂದಾಗಬೇಕು” ಎಂಬ ಕನಸು ನಿಧಾನವಾಗಿ ಸಾಮೂಹಿಕ ಸಂಕಲ್ಪವಾಗಿ ಬೆಳೆದಿತು.

ಹೀಗೆ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ವಿಶಾಲ ಹಿನ್ನೆಲೆಯೊಳಗೆ ಹುಟ್ಟಿಕೊಂಡ ಕನ್ನಡ ನಾಡಿನ ಏಕತೆಯ ಹೋರಾಟವು ಕಾಲಕ್ರಮೇಣ ತನ್ನದೇ ಆದ ವಿಶಿಷ್ಟ ರೂಪ ಪಡೆದುಕೊಂಡಿತು.  

 ಕರ್ನಾಟಕದ ಭೂಭಾಗವು ಸುಮಾರು ಇಪ್ಪತ್ತೆರಡು(೨೨) ಆಡಳಿತಾತ್ಮಕ ವಿಭಾಗಗಳಲ್ಲಿ ಚದುರಿಹೋಗಿತ್ತು. ಮೈಸೂರು ಸಂಸ್ಥಾನ, ಕೊಡಗು ಮದ್ರಾಸ್ ಪ್ರಾಂತ್ಯದಲ್ಲಿ ಬಳ್ಳಾರಿ ದಕ್ಷಿಣ ಕನ್ನಡ ಕೊಳ್ಳೇಗಾಲ, ಮುಂಬೈ ಪ್ರಾಂತ್ಯದಲ್ಲಿ ಬೆಳಗಾವಿ ಬಿಜಾಪುರ ಧಾರವಾಡ ಉತ್ತರ ಕನ್ನಡ ಜಿಲ್ಲೆಗಳಾದರೆ…. ಹೈದರಾಬಾದ ಸಂಸ್ಥಾನದಲ್ಲಿ ಗುಲ್ಬರ್ಗಾ, ಬೀದರ,ರಾಯಚೂರು ಜಿಲ್ಲೆಗಳು
 ಇವಅಲ್ಲದೆ ಕೇಂದ್ರ ಸರ್ಕಾರದ ನೇರ ಆಡಳಿತದಲ್ಲಿ ಬೆಂಗಳೂರು, ಬೆಳಗಾವಿ, ಬಳ್ಳಾರಿ ಪ್ರದೇಶಗಳು ಜತ್ತ, ಮುಧೋಳ, ಸೊಂಡೂರ, ಸವಣೂರ, ಸಾಂಗ್ಲಿ, ಮಿರಜ, ಜಮಖಂಡಿ, ರಾಮದುರ್ಗ ಮುಂತಾದವು ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿದ್ದವು.

. ರಾಜಕೀಯ ಗಡಿಗಳು ಕನ್ನಡಿಗರನ್ನು ಬೇರ್ಪಡಿಸಿದ್ದರೂ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಂಧ ಮಾತ್ರ ಅವರನ್ನು ಒಳಗಿನಿಂದ ಒಂದಾಗಿಸುತ್ತಲೇ ಇತ್ತು.

  ಚಳುವಳಿಗೆ ಸುಮಾರು ಒಂದೂವರೆ ಶತಮಾನದಷ್ಟು ದೀರ್ಘ ಇತಿಹಾಸವಿದೆ.ಹಲವು ತಲೆಮಾರುಗಳ ಚಿಂತನೆ, ಪರಿಶ್ರಮ, ತ್ಯಾಗ ಮತ್ತು ನಿರಂತರ ಹೋರಾಟದ ಫಲವಾಗಿ ಬೆಳೆದ ಮಹತ್ತರ ಜನಚಳುವಳಿಯಾಗಿದೆ.

ಚಳುವಳಿಯ ಹಾದಿ ಸುಗಮವಾಗಿರಲಿಲ್ಲ.  ನಾಡು ನುಡಿಯ ಮೇಲಿನ ಅಭಿಮಾನ ಅವರ ಹೋರಾಟಕ್ಕೆ ನಿರಂತರ ಶಕ್ತಿಯನ್ನು ನೀಡಿತು.
 ಚಳುವಳಿಗೆ ಕೈಜೋಡಿಸಿದವರ ಆಶಯವು…. ಕೆಲವರ ಕನಸಾಗಿ ಉಳಿಯದೆ, ನಿಧಾನವಾಗಿ ಜನಸಾಮಾನ್ಯರ ಹಕ್ಕಿನ ಧ್ವನಿಯಾಗಿ ಮಾರ್ಪಟ್ಟಿತು.
ಈ ಹೋರಾಟವು ಒಂದೇ ಹಂತದಲ್ಲಿ ತನ್ನ ಗುರಿಯನ್ನು ಸಾಧಿಸಲಿಲ್ಲ.  
ಗಡಿಗಳ ಪುನರ್ವ್ಯವಸ್ಥೆಯು….. ಕನ್ನಡಿಗರ ಒಗ್ಗಟ್ಟಿನ ಪ್ರಜ್ಞೆಯ ದ್ಯೋತಕವಾಯಿತು.ಜನಮನದ ಶಕ್ತಿಯಾಗಿ ಪರಿವರ್ತಿತವಾದ ಇತಿಹಾಸವಾಯಿತು.
ಕರ್ನಾಟಕ ಏಕೀಕರಣದ ಈ ದೀರ್ಘ ಹೋರಾಟವು   ಕನ್ನಡದ ನೆಲ ನುಡಿಯೊಂದಿಗೆ ಬೆಸೆದುಕೊಂಡು, ಕನ್ನಡಿಗರಲ್ಲಿ ಜಾಗೃತಿ ಮತ್ತು ಒಗ್ಗಟ್ಟಿನ ಭಾವನೆಯನ್ನು ಬೆಳೆಸಲು ಶ್ರಮಿಸಿಲು  ಜಯದೇವಿತಾಯಿಯವರು ಕರೆಕೊಡುತಿದ್ದರು.

   ಒಂದೇ ರಾಜ್ಯದ ಅಡಿಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು ಸೇರಿದರೂ, ಗಡಿಭಾಗಗಳ ಪ್ರಶ್ನೆ ಹೊಸ ಸವಾಲಾಗಿ ಎದುರಾಯಿತು. ಹಲವು ಕನ್ನಡ ಪ್ರದೇಶಗಳು ದೀರ್ಘಕಾಲ ಅನ್ಯಭಾಷಿಕ ಆಡಳಿತಗಳ ಅಡಿಯಲ್ಲಿ ಉಳಿದಿದ್ದರಿಂದ, ಅಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರ ಹಕ್ಕುಗಳು ಕ್ರಮೇಣ ದುರ್ಬಲಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಕ್ಕೆ ಅಗತ್ಯವಾದ ಸ್ಥಾನ ದೊರೆಯದಿರುವುದು ಕನ್ನಡಪರ ಚಿಂತಕರಲ್ಲಿ ಆತಂಕ ಮೂಡಿಸಿತ್ತು.
 ಭಾಷೆಯೊಂದಿಗೆ ಜನರ ಸಂಸ್ಕೃತಿ, ಪರಂಪರೆ, ಸಾಮಾಜಿಕ ಬದುಕು ಮತ್ತು ಅಸ್ತಿತ್ವವೂ ಬೆಸೆದುಕೊಂಡಿತ್ತು. ಹೀಗಾಗಿ ಗಡಿಭಾಗದ ಕನ್ನಡಿಗರ ಹಕ್ಕುಗಳನ್ನು ರಕ್ಷಿಸುವುದು ಮತ್ತೊಂದು ಮಹತ್ವದ ಕರ್ತವ್ಯವಾಗಿ ಪರಿಣಮಿಸಿತು.

ಇದೇ ಸಂದರ್ಭದಲ್ಲಿ ಸೋಲಾಪುರದಂತಹ ಕನ್ನಡಿಗರ ಬಾಂಧವ್ಯ ಹೊಂದಿದ್ದ ಪ್ರದೇಶಗಳ ಕುರಿತೂ ರಾಜಕೀಯ ಚರ್ಚೆಗಳು ನಡೆದವು. ಗಡಿಭಾಗಗಳ ಭವಿಷ್ಯವನ್ನು ನಿರ್ಧರಿಸುವ ಪ್ರಶ್ನೆ ಕೇವಲ ರಾಜಕೀಯ ನಾಯಕರ ಮಟ್ಟದಲ್ಲೇ ಉಳಿಯದೆ, ಜನಸಾಮಾನ್ಯರ ಮನಸ್ಸಿನಲ್ಲಿಯೂ ತೀವ್ರ ಆತಂಕವನ್ನು ಹುಟ್ಟಿಸಿತು.
ಈ ಸಂದರ್ಭದಲ್ಲಿ ಜಯದೇವಿತಾಯಿಯವರ ಧ್ವನಿ ಮತ್ತೊಮ್ಮೆ ಸ್ಪಷ್ಟವಾಗಿ ಮೊಳಗಿತು. ಗಡಿಭಾಗದ ಜನರ ಅಭಿಪ್ರಾಯವನ್ನು ಕಡೆಗಣಿಸಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂಬುದು ಅವರ ದೃಢ ನಿಲುವಾಗಿತ್ತು. ಜನರ ಸಮ್ಮತಿಯಿಲ್ಲದೆ, ಅವರ ಬದುಕು ಮತ್ತು ಭಾಷೆಯ ಭವಿಷ್ಯವನ್ನು ನಿರ್ಧರಿಸುವ ಯಾವುದೇ ಒಪ್ಪಂದಕ್ಕೆ ಸರ್ಕಾರ ಮುಂದಾಗಬಾರದು ಎಂದು ಅವರು ಎಚ್ಚರಿಸಿದರು.

ವಿಶೇಷವಾಗಿ ನಿಜಲಿಂಗಪ್ಪನವರಂತಹ ನಾಯಕರ ಮೇಲೆ ಕನ್ನಡಿಗರು ಇಟ್ಟಿದ್ದ ನಿರೀಕ್ಷೆಯನ್ನು ಉಲ್ಲೇಖಿಸುತ್ತಾ, ಕನ್ನಡಿಗರ ಹಿತವನ್ನು ರಕ್ಷಿಸುವ ಜವಾಬ್ದಾರಿ ನಾಯಕತ್ವದ ಮೇಲಿದೆ ಎಂಬ ಸಂದೇಶವನ್ನು ಅವರು ಸ್ಪಷ್ಟಪಡಿಸಿದರು.
ಅವರ ಎಚ್ಚರಿಕೆಯ ಧ್ವನಿಯಲ್ಲಿ ಯಾವುದೇ ಒಂದು ಪ್ರದೇಶದ ಪರವಾದ ಸಂಕುಚಿತ ಮನೋಭಾವನೆಯ ಬದಲಾಗಿ, ಕರ್ನಾಟಕದ ಅಖಂಡತೆ ರಾಜಕೀಯ ಏರುಪೇರುಗಳಿಗೆ, ಜಾತಿ ಮತಗಳ ವಿಭಜನೆಗೆ ಅಥವಾ ಕ್ಷಣಿಕ ರಾಜಕೀಯ ಒತ್ತಡಗಳಿಗೆ ಬಲಿಯಾಗಬಾರದು ಎಂಬ ವಿಶಾಲ ಚಿಂತನೆ ಇತ್ತು.

೧೯೫೪-೫೫ ಮೈಸೂರು ಸಂಸ್ಥಾನದ ಶಾಸನ ಸಭೆಯ ಮುಂಗಡ ಪತ್ರದ ಅಧಿವೇಶನದಲ್ಲಿ ಕೆಂಗಲರು ಐತಿಹಾಸಿಕ ಕಾರಣಗಳು ಮೈಸೂರು ಸಂಸ್ಥಾನವನ್ನು ವಿಶಾಲ ಗೊಳಿಸುತ್ತ ಮಗ್ಗಲು ಪ್ರದೇಶದಲ್ಲಿಯೇ ಜನರು ಸ್ವಯಂ ಪ್ರೇರಣೆಯಿಂದ ಈ ಸಂಸ್ಥಾನದಲ್ಲಿ ಸೇರ್ಪಡೆ ಹೊಂದಲು ಆತುರರಾಗಿದ್ದಾಗ ಅವರೆಲ್ಲರನ್ನು ನಾವು ಅವರಾಡುವ ಭಾಷೆಯನ್ನು ಗಮನಿಸದೇ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಹೀಗಿದ್ದರೂ ನಾವೆಲ್ಲಾ ಭಾರತೀಯರೆಂಬ ಒಂದೇ ಮಾತೃಭೂಮಿಯ ನಾಗರಿಕರಿಗೆ ಅವರನ್ನು ಸ್ವಾಗತಿಸದಿರುವುದು ಸಾಧ್ಯವಿಲ್ಲ ,ನಮ್ಮ ದೇಶ ಬಾಂಧವರು ಒಳಕ್ಕೆ ಬಾರದಂತೆ ಬಾಗಿಲನ್ನು ನಾವು ಮುಚ್ಚಿಕೊಳ್ಳುವುದೆಂದರೆ ದೇಶಪ್ರೇಮ ಮತ್ತು ಭಾತೃ ಪ್ರೇಮಿಗಳಿಗೆ ಮಿತಿಯನ್ನು ಹಾಕಿಕೊಂಡಂತೆ ಎಂದು ಹೇಳಬಹುದು ನಮ್ಮ ಧೋರಣೆಯು ರಾಜ್ಯವನ್ನು ವಿಸ್ತರಿಸುವುದಲ್ಲ, ನಮ್ಮಲ್ಲಿ ಬಂದು ಸೇರಬೇಕೆನ್ನುವವರನ್ನು ಸ್ವಾಗತಿಸುತ್ತೇವೆ.
 ಮುಂಬೈ ಕರ್ನಾಟಕ ಹೈದರಾಬಾದ ಕರ್ನಾಟಕವೆಂದೇ ಇಂಗ್ಲೀಷರಿಂದ ಕರೆಯಲ್ಪಟ್ಟು ಭೂ ಪ್ರದೇಶದ ಜನತೆಯ ಭಾಷೆ ಕನ್ನಡವೆನ್ನುವುದನ್ನು  ಮೈಸೂರುವನ್ನು ಬಿಟ್ಟರೆ ಉಳಿದೆಲ್ಲರೂ ಆಂಧ್ರಪ್ರದೇಶ ಮಹಾರಾಷ್ಟ್ರದವರಂತೆ ಅನ್ಯಭಾಷಿಕ ಭಿನ್ನತೆಯನ್ನು ಬಿಟ್ಟರೆ ಆ ಭಾಗದವರೆಲ್ಲರ ಭಾಷೆ ಕನ್ನಡವೆಂದು ಇಂಗ್ಲೀಷರ ಅಧ್ಯಯನ ಮಾಡಿ ಹೇಳಿದ್ದನ್ನು ಒಪ್ಪದೆ ತಿರಸ್ಕಾರದ ಭಾವನೆ ಸ್ವ ಪ್ರತಿಷ್ಠತೆಯಿಂದ ಮೈಸೂರಿನ ಜನರು ಉಳಿದಿರುವುದನ್ನು ಪರಿಕೀಯರಂತೆ ನಟಿಸುವದ ಖಂಡಿಸಿದರು.

  ದೇಶಪ್ರೇಮ ಮಾತೃ ಪ್ರೇಮದ ಹೆಸರಿನಲ್ಲಿ ತಮ್ಮ ಹೆಗ್ಗಳಿಕೆಯನ್ನು ಮೆರೆಯುವ ಪ್ರಯತ್ನ ಮಾಡಿದ್ದಾರೆ ಇದಕ್ಕೆ ಹಿಂದೆ ಎರಡು ಕರ್ನಾಟಕಗಳಾಗಲಿ ಎಂದು ಅವರ ಪ್ರಯತ್ನವಿತ್ತು ಇಂಥ ಮೈಸೂರಿನವರಿಗೆ ಜಯದೇವಿ ತಾಯಿಯವರು ಖಂಡಿಸಿದ್ದಾರೆ. ಕನ್ನಡಿಗರ ಸಂದಿಗ್ಧ ಮನೋಭಾವವನ್ನು ಪ್ರಕಟಿಸಿದ ಕೆಂಗಲರು ಕನ್ನಡಿಗರ ಬಹುದಿನಗಳ ಕನಸು ನನಸಾಗದಿದ್ದಲ್ಲಿ ಅಖಿಲ ಕನ್ನಡ ಕುಲಕ್ಕೆ ಕೇಡು ಬಗೆದಂತೆ ಕನ್ನಡ ಸರ್ಕಾರವು ನಿಮ್ಮೆಲ್ಲರನ್ನು ಕ್ಷಮಿಸದು ಎಂದಿದ್ದಾರೆ .

ಜಯದೇವಿ ತಾಯಿಯವರಂತ ಉದಾರಿ ನಿಸ್ವಾರ್ಥಿ ಅಧಿಕಾರದ ವ್ಯಾಮೋಹವಿಲ್ಲದ ಮಹಿಳೆಯರ ಒತ್ತಾಯಕ್ಕಾಗಿಯಾದರೂ ಮೈಸೂರಿನವರು ಅಖಂಡ ಕರ್ನಾಟಕ ನಿರ್ಮಾಣಕ್ಕೆ ಒಪ್ಪಿದರು. ಯಾವುದೇ ರಾಜಕೀಯ ಪಕ್ಷಕ್ಕೆ ಸೇರದೆ ವೈಯಕ್ತಿಕ ಹಿತಾಸಕ್ತಿಗಳಿಗೆ ಮಣಿಯದ ವೀರ ಕನ್ನಡತಿಯ ಸ್ಥಾನ ಉಳಿಸಿಕೊಂಡು ಬಂದ ಜಯದೇವಿಯವರ ನಿಶ್ಚಲ ನಿಷ್ಠೆಯೇ ಮೈಸೂರಿನವರ ಮನ ಒಲಿಸಿತು .ಅವರ ಸರಳ ಸ್ವಾಭಾವಿಕ ಸೋದರಿಕೆಯ ಅಧಿಕಾರದ ಒತ್ತಾಯವನ್ನು ಒಪ್ಪಿದರು ಎನ್ನಬಹುದಾಗಿದೆ.

 ಇದೇ ಹೊತ್ತಿಗೆ ಕರ್ನಾಟಕ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಅಂಬಲಿಯವರ ನೇತೃತ್ವದ ಸದಿಚ್ಚಾ ಮಂಡಳಿಯು ಮೈಸೂರಿನಲ್ಲಿ ಪ್ರವಾಸ ತೆಗೆದುಕೊಂಡು ಜನತೆಯ ಮನವಣಿಸಲು ಪ್ರಾರಂಭಿಸಿತು.

“ನೊಂದವರ ನೋವು, ನೋವೇಅರಿಯ
ದವರಿಗೇನು ಬಲ್ಲರು?”ಎಂದು ಹೇಳುತ್ತಿದ್ದ ಜಯದೇವಿತಾಯಿಯವರ ಮನಸ್ಸಿನ ತಳಮಳ ತೊರುತಿತ್ತು.

ಪರಭಾಷೆಯ ಒತ್ತಡದಲ್ಲಿ ಬದುಕುತ್ತಿರುವವನಿಗೆ ಮಾತ್ರ ತನ್ನ ಭಾಷೆಯನ್ನು ಕಳೆದುಕೊಳ್ಳುವ ನೋವು ಎಷ್ಟು ಆಳವಾದುದು ಎಂಬುದು ತಿಳಿಯುತ್ತದೆ. ತನ್ನ ಮಗುವಿನ ಶಿಕ್ಷಣದಲ್ಲಿ ತನ್ನದೇ ಮಾತೃಭಾಷೆಗೆ ಸ್ಥಾನ ದೊರೆಯದಾಗ ತಾಯಿಯ ಮನಸ್ಸಿಗೆ ಆಗುವ ನೋವು, ಆಡಳಿತ ಕಚೇರಿಯಲ್ಲಿ ತನ್ನ ಭಾಷೆಯಲ್ಲಿ ಮಾತನಾಡಲು ಸಾಧ್ಯವಾಗದಾಗ ಸಾಮಾನ್ಯ ಕನ್ನಡಿಗ ಅನುಭವಿಸುವ ಅಸಹಾಯಕತೆ….ಇವುಗಳನ್ನು ದೂರದಿಂದ ನೋಡುವವರಿಗೆ ಅರ್ಥವಾಗುವುದು ಸುಲಭವಲ್ಲ.ಎಂದು… ಹೀಗೆ ಜಯದೇವಿತಾಯಿಯವರ ಹೋರಾಟಕ್ಕೆ ಹೊಸ ಅರ್ಥ ದೊರೆಯಿತು.


About The Author

Leave a Reply

You cannot copy content of this page

Scroll to Top