ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಕಣ್ಣಿಗೆ ಕಾಣದ ಸತ್ಯದ ಹಿಂದೆ,
ಬೆನ್ನೇರಿ ಬರುವ ಅಗೋಚರ ಚಂದ;
ರೂಪವಿಲ್ಲದ ರೂಪಿಗೆ ನಾವಿಲ್ಲಿ ಮಣಿದಿದ್ದೇವೆ,
ಇಲ್ಲದ ಅಸ್ತಿತ್ವವ ಜೀವದೊಳಗೆ ತಂದಿದ್ದೇವೆ.

ಮುಟ್ಟಲಾಗದ ಆಕಾಶವ ಸ್ಪರ್ಶಿಸಲು ಕೈಚಾಚಿ,
ಕತ್ತಲೆಯಲಿ ಕಣ್ಣುಗಳನ್ನು ಬಿಟ್ಟು ಪರಿತಪಿಸಿ;
ನಂಬಿಕೆಯೆಂಬ ಕಗ್ಗತ್ತಲ ದಾರಿಯಲಿ ಸಾಗುತ,
ಕಾಣದ ದೇವರ ನೆರಳನೆ ಮೈತುಂಬಾ ಹೊತ್ತು

ಗಾಳಿಯಂತೆ ಆತ, ಇರುವುದೆಲ್ಲದರಲಿ ವ್ಯಾಪಿಸಿ,
ಆದರೆ ಯಾರ ಕಣ್ಣಿಗೂ ಎಂದೂ ಕಾಣದೆ ಮುಚ್ಚಿ;
ಸುಂಟರಗಾಳಿಯಲಿ ಸಿಲುಕಿದ ಒಂಟಿ ಮರ ದೇವನೆ?
ಅಥವಾ ನಮ್ಮೊಳಗಿನ ಅಂಜಿಕೆಯೆ ಆತನ ನಾಮವೆ?

ಸಂಕಟದ ಕಡಲು ಉಕ್ಕಿ ಬಂದಾಗ ಈ ಬದುಕಿನಲಿ,
ಯಾರೂ ಇಲ್ಲದ ಏಕಾಂತದ ಆ ಕತ್ತಲು ಗೂಡಿನಲಿ;
ಮನಸ್ಸು  ಕೈಮುಗಿದು ಬೇಡುವುದು ಯಾರಿಗೆ?
ಕಾಣದೆಯೇ ಆ  ಸ್ಪರ್ಶವಿರುವುದೇಕೆ ಒಳಗೆ?

ಕಣ್ಣಿಗೆ ಕಾಣದ್ದೇ ಇಲ್ಲಿ ದೊಡ್ಡ ಸತ್ಯವಾಗಿಹುದು,
ಉಸಿರು ಕಣ್ಣಿಗೆ ಕಾಣದು, ಆದರೂ ಜೀವವಿಹುದು;
 ದೇವರು; ಕಾಣದಿದ್ದರೇನು, ನಂಬಿಕೆಯ ಕಣ್ಣಲಿ,
ಅವನಿಲ್ಲದ ಕ್ಷಣವಿಲ್ಲ ಈ ಜಗತ್ತಿನ ಹಾದಿಯಲಿ.

ಕಾಣದ ದೇವರ ನೆರಳೂ ಇಲ್ಲದ ಕತ್ತಲೆಯ ಕಡಲಲಿ,
ಬೆಳಕಿಗಾಗಿ ಹಂಬಲಿಸಿ ಕರಗಿತು ಮನುಜನ ನೆರಳು;
ಕೊನೆಗೆ ಉಳಿದದ್ದು ದೇವರು ನಂಬಿಕೆಯೂ ಅಲ್ಲ
ಬ್ರಹ್ಮಾಂಡದ ಅಂತಿಮ ಶೂನ್ಯದೊಂದಿಗೆ ನಮ್ಮದೇ ಕರಗಿಹೋದ ಪ್ರಜ್ಞೆ ಮಾತ್ರ ಉಳಿಯಿತು.


About The Author

1 thought on “ಅನನ್ಯ ಎಚ್ ಸುಬ್ರಹ್ಮಣ್ಯ ಅವರ ಕವಿತೆ “ಕಾಣದ ನೆರಳು””

  1. ಧನ್ಯವಾದಗಳು ಸರ್ ನನ್ನ ಕವನವನ್ನು ಪ್ರಕಟ ಮಾಡಿರುವುದಕ್ಕೆ

Leave a Reply

You cannot copy content of this page

Scroll to Top