ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯಾವ ಶಿಲ್ಪಿಯೂ ಕೆತ್ತಲಾಗದ
ಕಲಾವಿದನ ಕೈ ಚಳಕಕೂ ನಿಲುಕದ
ಪರಮಾನಂದದ ನಿಮ್ಮ ನಗು
ಬದುಕಿನ ಪಾಠ ಹೇಳುತಿವೆ

ನಮ್ಮೊಡನಿರುವ ಜೀವಂತ ದೇವರುಗಳು
ಅವರೊಡನಾಟವೇ
ದೇವನೊಲುಮೆಯ ನೋಟ
ಸುಖ ದುಃಖಗಳ
ಸಮ್ಮಿಲನದ ‌ಸ್ಪೂರ್ತಿಯ ಪಾಠ

ಮುಖದ ತುಂಬಾ
ಚೈತನ್ಯದ ಚಿಲುಮೆ
ಹೊತ್ತು
ಹೇಳುತಿರುವಿರಿ
ಬಾಳೆಂಬ ಹೋರಾಟದ
ನಗುವಿನ ಮೌಲ್ಯ
ಬಲ್ಲವನ ಬೆಲ್ಲದ ಸವಿ
ಮಧುರ ಮಿಲನದ ಸಂತೃಪ್ತಿ

ಏನಿದ್ದರೇನ್ ಬಾಳಲಿ
ನೆಮ್ಮದಿಯೊಂದಿಲ್ಲದಿದ್ದರೆ
ಮಕ್ಕಳಾಟದಿ ಮೈಮರೆತು
ನೋವ ಮರೆತು ನಲಿವ ಕಾಣಬೇಕು
ಆ ಸತ್ಯ ಕಾಣುವ ಮನಸು
ನಮದಾಗಲಿ
ಹರಸಿ ಹಾರೈಸಿ ಮಕ್ಕಳೇ


About The Author

Leave a Reply

You cannot copy content of this page

Scroll to Top