ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಭೂಮಿಗೆ ನಮನ”

ಕಾವ್ಯಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಭೂಮಿಗೆ ನಮನ” ಹಸಿರ ಉಸಿರ ಹೊತ್ತ  ಭೂದೇವಿ ನೀನು,ನಮ್ಮ ಬಾಳ ಹಾದಿಗೆ ದಿವ್ಯ ಬೆಳಕು ನೀನು.ಕೋಟಿ ಜೀವ ರಾಶಿಗೆ ಆಸರೆಯ ಮಡಿಲು,ನಿನ್ನ ಪ್ರೀತಿಗೆ ಸಾಟಿಯಿಲ್ಲ, ಕರುಣೆ  ಕಡಲು. ಬೆಟ್ಟ ಸಾಲುಗಳು ನಿನ್ನ  ಮುಡಿಗೆ ಹೂವು,ಹರಿಯುವ ನದಿಗಳು ನಿನ್ನ ಜೀವ ಸೆಲೆಯು.ಗಾಳಿ, ಮಣ್ಣು, ನೀರು ಮರ ನಿನ್ನ ಕೊಡುಗೆ,ಮರೆತ ಮಾನವನ ಎಂತ ಉಡುಗೆ ತೊಡುಗೆ   ನಮ್ಮ ಭೂಮಿ ನಾವು ಉಳಿಸ ಬೇಕು,ಕಲುಷಿತವ ತೆಗೆದು ಹಸಿರ ಬೆಳೆಸ ಬೇಕು.ಮರಗಿಡಗಳ ನಟ್ಟು ತಂಪ ಹರಡ ಬೇಕು,ಭೂ ಮಾತೆಯ ಋಣ ತೀರಿಸಬೇಕು. ಭೂಮಿ ದಿನ  ಅಲ್ಲ ಬರಿ ಆಚರಣೆ,ಧರೆಯ ಉಳಿಸುವ ಸಂಕಲ್ಪ  ರಕ್ಷಣೆ.ಇರುವುದೊಂದೇ  ಭೂಮಿ,  ಉಳಿಸ ಬನ್ನಿ,ಭವ್ಯ ಭವಿಷ್ಯಕೆ  ಹೆಜ್ಜೆ ಹಾಕ ಬನ್ನಿ. ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಭೂಮಿಗೆ ನಮನ” Read Post »

ಕಾವ್ಯಯಾನ, ಗಝಲ್

ಡಾ. ರೇಣುಕಾತಾಯಿ. ಸಂತಬಾ ಅವರ ಗಜಲ್

ಕಾವ್ಯಸಂಗಾತಿ ಡಾ. ರೇಣುಕಾತಾಯಿ. ಸಂತಬಾ ಗಜಲ್ ನುಡಿಗೆ ಬೆರಗು ಮೂಡಿಸಿ ವಚನ ಬರೆದನು ನಮ್ಮ ಬಸವಣ್ಣದಯವಿಲ್ಲದ ಧರ್ಮವೆ ಇಲ್ಲವೆಂದು ಸಾರಿದನು ನಮ್ಮ ಬಸವಣ್ಣ.ll ಆಚಾರ ಸ್ವರ್ಗ ಅನಾಚಾರವೇ ನರಕವೆಂದ ನಮ್ಮ ಭಕ್ತಿ ಭಂಡಾರಿ,ಜಾತಿ ಮತ ಸರಿಸಿ ಸಮಾನತೆ ಬಿತ್ತಿದವನು ನಮ್ಮ ಬಸವಣ್ಣ.ll ಕಳಬೇಡ ಕೊಲ್ಲಬೇಡ ಹುಸಿ ನುಡಿಬೇಡವೆಂಬ ಮೌಲ್ಯ ಹೇಳಿಕೊಟ್ಟಮಾತಿನಲ್ಲಿಯೇ ಮುತ್ತುರತ್ನ ಜೋಡಿಸಿ ಇಟ್ಟವನು ನಮ್ಮ ಬಸವಣ್ಣ ll ಮೌಢ್ಯತೆಯ ದೊಡ್ಡ ಗೋಡೆ ದಾಟಿಸಿ ಹೊಸ ಬಾಗಿಲನು ತೆರೆದುಬಿಟ್ಟ,ಎಲ್ಲರನು ಇವ ನಮ್ಮವನೆಂದು ಹೇಳಿದವನು ನಮ್ಮ ಬಸವಣ್ಣ ll ತಾಯಿ ಅಕ್ಕಮ್ಮ ನೀಲಮ್ಮ ಶರಣೆಯರೆಲ್ಲರ ವಚನ ಗೌರವಿಸಿದ.ಶ್ರಮದಲಿ ಶಿವ ಕೈಲಾಸ ತೋರಿದ ಶರಣನು ನಮ್ಮ ಬಸವಣ್ಣ l ಡಾ. ರೇಣುಕಾತಾಯಿ. ಸಂತಬಾ. “ರೇಮಾಸಂತ”

ಡಾ. ರೇಣುಕಾತಾಯಿ. ಸಂತಬಾ ಅವರ ಗಜಲ್ Read Post »

ಇತರೆ

“ದಾರ್ಶನಿಕ ಬೀಚಿ” ಹಾಸ್ಯಬ್ರಹ್ಮ ಬೀಚಿಯವರ ಜನ್ಮದಿನಕ್ಕೆ ವಿಶೇಷಲೇಖನ,ಡಾ. ಭಾರತಿ ಮೂಲಿಮನಿ

ವ್ಯಕ್ತಿ ಸಂಗಾತಿ ಡಾ. ಭಾರತಿ ಮೂಲಿಮನಿ “ದಾರ್ಶನಿಕ ಬೀಚಿ” ಹಾಸ್ಯಬ್ರಹ್ಮ ಬೀಚಿಯವರ ಜನ್ಮದಿನ ಮನುಷ್ಯನು ಅಜ್ಞಾನದಿಂದ ಮಾಡುವ ತಪ್ಪುಗಳನ್ನು ಎತ್ತಿ ತೋರಿಸುವ, ಆ ಮೂಲಕ ಅದನ್ನು ತಿದ್ದುವ ಕೆಲಸವನ್ನು ಹಾಸ್ಯ ಸಾಹಿತ್ಯ ಮಾಡುತ್ತದೆ. ಹಾಸ್ಯದ ತೀವ್ರತೆ ಹೆಚ್ಚಾದಂತೆ ಅದರ ವಿಡಂಬನೆಯ ತೀವ್ರತೆಯು ಹೆಚ್ಚಾಗುತ್ತ ಹೋಗುತ್ತದೆ. ವಿಡಂಬನೆಯ ಮೊನಚು ಹೆಚ್ಚುವುದು ಅಸಹನೀಯವಾದ ಕೃತ್ಯಗಳು ನಡೆದಾಗ. “ಒಂದು ವಿಷಯವನ್ನು ಒಬ್ಬ ವ್ಯಕ್ತಿಗೆ ಮನಮುಟ್ಟುವಂತೆ ಪರಿಣಾಮಕಾರಿಯಾಗಿ ಹೇಳುವ, ಆ ಮೂಲಕ  ಅಜ್ಞಾನದಿಂದ ನಡೆಯುವ ತಪ್ಪನ್ನು ತಿದ್ದುವ, ತಡೆಯುವ ಪರಿಣಾಮಕಾರಿ ಸಾಧನ ವಿಡಂಬನೆ” ಹಿಂದೆ ಜಾನಪದರು ಹಬ್ಬದ ದಿನಗಳಲ್ಲಿ ತಮ್ಮ ಬಂಧುಗಳೊಂದಿಗೆ ಸಂತೋಷದಿಂದ ಕಾಲ ಕಳೆಯಲು ಒಬ್ಬರನ್ನೊಬ್ಬರು ಹಾಸ್ಯ, ಮೊನಚಾದ  ವಿಡಂಬನೆಯಿಂದ ನಿಂದಿಸಿಕೊಳ್ಳುತ್ತಿದ್ದರು. ಹೀಗೆ ಬೇರೆಯವರನ್ನು  ವಿಡಂಬನೆ ಮಾಡಿದರೆ ಅದು ಅತಿರೇಕದ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಗಳೇ ಹೆಚ್ಚು.. ಆದರೆ ಮೊನಚಾದ ಹಾಸ್ಯದ ಮೂಲಕ ವಿಡಂನೆಯ ಗಾಂಭೀರ್ಯವನ್ನು ತಮ್ಮ ಮಾನಸ ಪುತ್ರ ತಿಂಮನ ಕೈಗೆ ಲೇಖನಿ ಕೊಟ್ಟವರು ಬೀಚಿ.ತಿಂಮ ಒಮ್ಮೊಮ್ಮೆ ಗುರುವು ಮೀರಿಸಿದ್ದು ಉಂಟೆಂದು ಅವರೇ ಹೇಳುತ್ತಾರೆಬೀಚಿಯವರು ಒಂದೂ ಶಬ್ಧವನ್ನೂ ನಿರರ್ಥಕವಾಗಿ ಬಳಸಿಕೊಂಡಿಲ್ಲ. ಯಾವದನ್ನೂ ಸುಮ್ಮನ್ನೇ ಎಳೆದು ತರುವುದಿಲ್ಲ. ಎನ್ನುವ ವಿಮರ್ಶಕರ ಮಾತಿನಲ್ಲಿ ಸತ್ಯವಿದೆ. ೬೩ಕೃತಿಗಳಲ್ಲಿ ಯಾವುದನ್ನು ಕೈಗೆತ್ತಿಕೊಂಡರೆ ಆ ಕಾಲದ,ಈ ಹೊತ್ತಿಗೂ ಹಸಿ ಹಸಿಯಾದ ಸಮಸ್ಯೆಗಳನ್ನು ಅದಕ್ಕೆ ಸುಡು ಸುಡು ಉದಾಹರಣೆ ಸಮೇತ ಓದುಗರ ಮುಂದೆ ತೆರೆದಿಡುವ,  ಆ ಮೂಲಕ  ಸಮಾಜದ ಶ್ರೇಣಿಯಲ್ಲಿ ಮೇಲಿಂದ ತುತ್ತ ತುದಿಯಲ್ಲಿ ಬದುಕುವ ಪ್ರತಿಯೊಬ್ಬರಿಗೂ ಅನ್ವಯಿಸುವ ತಾತ್ವಿಕತೆಯನ್ನು ಹೊತ್ತ ಮಹತ್ವದ ಹೊತ್ತಿಗೆಗಳೇ ಆಗಿವೆ. ಮುಂದೆ ಅಧ್ಯಯನ ಮಾಡಿದ ಕೃತಿಗಳಲ್ಲಿನ ಅವರ ತಾತ್ವಿಕತೆಯ ತುಣುಕುಗಳನ್ನು ಕಾಣಿಸಿದ್ದೇನೆ. ಇದು ನಾನು ಸಂಶಿಧನಾ ವಿದ್ಯಾರ್ಥಿಯಾಗಿ ಅವರನ್ನು ಕಂಡ ಬಗೆ . ಆ ಮೂಲಕ ಬೀಚಿ ಗುರುವಿಗೆ ನನ್ನ ನುಡಿ ನಮನ ಧರ್ಮ ಎನ್ನುವುದು ಬದುಕುವ ರೀತಿ. ಅದು ನೈತಿಕ ತಳಹದಿಯ ಮೇಲೆ ರಚನೆಯಾಗಿರಬೇಕಾದ ಅಗತ್ಯವಾಗಿದೆ. ನೈತಿಕತೆ ಎನ್ನುವುದು ಆಯಾ ಕಾಲ ಸಮಾಜ ನಂಬಿರುವ ಮತ್ತು ಒಪ್ಪಿರುವ ನಿಯಮಗಳೇ ಆಗಿವೆ, ಧರ್ಮ ಎನ್ನುವುದು ಬಲ ಹೀನನನ್ನು ಬಲಿಷ್ಟನು ಕಾಪಾಡುವುದೇ ಆಗಿದೆ. ಅದು ಎಲ್ಲಾ ಪ್ರಾಣಿ ಸಮೂಹಕ್ಕೂ ಅನ್ವಹಿಸುತ್ತದೆ. ಮನುಷ್ಯ ಮನುಷ್ಯನನ್ನು ನಂಬಿ ಆಶ್ರಯಕ್ಕೆ ಬಂದರೆ ನಂಬಿಕೆಗೆ ದ್ರೋಹ ಎಸಗುವುದು ಧರ್ಮ ಎನಿಸಲಾರದು. ಆಶ್ರಯ ಅದಕಿಲ್ಲ ಬಂಧುಗಳು ಯಾರಿಲ್ಲ!ಆಸೆ ಬದುಕಲು ಅದಕೆ ಪಾಪ ಪಾಪ!!ಆಶ್ರಮಕೆ ಬಂದಳು ಸ್ವಾಮಿ ಪಾದವ ನಂಬಿ!ಪ್ರಸವ ವೇದನೆ ಮಾತ್ರ ತಪ್ಪಲಿಲ್ಲವೋ ತಿಂಮ!! ಬೀಚಿಯವರು ಹೇಳುವುದು ಅದನ್ನೇ ಇಲ್ಲಿ ಎಲ್ಲವನ್ನು, ಎಲ್ಲರನ್ನು ಕಳೆದುಕೊಂಡು ಏಕಾಂಗಿಯಾಗಿರುವ ಹೆಣ್ಣು ಆಶ್ರಯ ಬೇಡಿ ಬಂದರೆ ಆಕೆಯ ಶೀಲವನ್ನೇ ದೋಚುವುದು, ಅದು ಒಂದು ಆಶ್ರಮದ ಸ್ವಾಮಿಯಿಂದ ಇಂಥಹ ಕುಕೃತ್ಯ ನಡೆಪದರೆ ಯಾರನ್ನು ನಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವ ಪ್ರಶ್ನೆ ಖಂಡಿತ ಕಾಡುತ್ತದೆ. ನಂಬಿಕೊಂಡು ಬಂದ ಹೆಣ್ಣಿನ ಮೇಲೆ ಪುರುಷ ಸಮಾಜದಿಂದ ಆಗುವ  ದೌರ್ಜನ್ಯವನ್ನು  ಹೇಳುತ್ತಾ ಹೆಣ್ಣಿನ ಬದುಕಿಗೆ ಪುರುಷ ಸಮಾಜದಿಂದ ಆಗುವ ತೊಂದರೆಯನ್ನು, ಅದರಿಂದ ಅವಳಿಗಾಗುವ ಮಾನಸಿಕ, ದೈಹಿಕ ಹಿಂಸೆಯ ಒಟ್ಟು ನಷ್ಟವನ್ನು ಹೇಳುತ್ತಾರೆ. ಸ್ತ್ರೀಯನ್ನು ಸ್ವಾತಂತ್ರ್ಯಳಾಗಿ ಬದುಕಲು ಬಿಡದ ಮತ್ತು ನಂಬಿ ಆಶ್ರಯಕ್ಕೆ ಬಂದವಳನ್ನು ವಂಚಿಸುವ ಧರ್ಮಾಧಿಕಾರಿಯು ಒಂದು ಆಶ್ರಮವನ್ನು ನಡೆಸುವಂತಹದ್ದು, ಮತ್ತು  ನಂಬಿದವಳನ್ನು ವಂಚಿಸುವಂತಹದ್ದು  ಧರ್ಮದ ಹೆಸರಿನಲ್ಲಿ ನಡೆಯುವ ವಂಚನೆಯಾಗಿದೆ. ಮತ್ತು ಧರ್ಮಕ್ಕೆ ಮಸಿ ಬಳಿಯುವ  ಮೂರ್ಖತನ ಅದು. ಇದು ಇಂದು ನೆನ್ನೆಯದ್ದಲ್ಲ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವುದಾಗಿದೆ. ಸಮಾಜದ ಸಾಮನ್ಯ ಜನರ ಮೇಲಿಲ್ಲದ ನಂಬಿಕೆ  ಆಶ್ರಮಗಳು ಮತ್ತು ಮಠಗಳ ಮೇಲಿರುವುದು. ಅಲ್ಲಿಯೂ ಹೆಣ್ಣಿಗೆ ರಕ್ಷಣೆ ಇಲ್ಲ ಎನ್ನುವುದು ಇಲ್ಲಿ ಸಾಭಿತಾಗುತ್ತದೆ. ಆಶ್ರಮಗಳು, ಮಠಗಳು, ಧಾರ್ಮಿಕ ಕೇಂದ್ರಗಳು ಜನರ ಬದುಕನ್ನು ಅದರಲ್ಲೂ ದಿಕ್ಕಿಲ್ಲದ ಅನಾಥ ಮಕ್ಕಳ, ಸ್ತ್ರೀಯರ ಬದುಕನ್ನು ರಕ್ಷಿಸುತ್ತವೆ ಎನ್ನುವ ಬಲವಾದ ನಂಬಿಕೆ ಸುಳ್ಳಾಗುತ್ತದೆ. ಯಾವ ದೈವದ ಮೇಲೆ ನಂಬಿಕೆ ಇಟ್ಟು  ದೈರ್ಯದಿಂದ ಆಶ್ರಯವನ್ನು ಬೇಡಿ  ಬಂದ ಹೆಣ್ಣಿಗೆ  ನಂಬಿಕೆ ದ್ರೋಹ, ಅವಳಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಆಗುವ ವಿಫಲತೆ  ಮತ್ತು ಮಠ ಮಂದಿರಗಳ ಮೇಲಿನ ನಂಬಿಕೆ ಸುಳ್ಳಾಗುತ್ತದೆ. ಹೆಣ್ಣಿನ ರಕ್ಷಣೆ ಮಾಡಬೇಕಾದುದು ಕುಟುಂಬ. ಅಂಥಹ ಕುಟುಂಬವನ್ನು ಕಳೆದುಕೊಂಡ ಹೆಣ್ಣು ಸಮಾಜದಲ್ಲಿ ಬದುಕುವುದು ಇಷ್ಟೊಂದು ಕಠಿಣ ಎನ್ನುವುದು ಈ ಮಾತಿನಲ್ಲಿ ಅಡಕವಾಗದೆ. ಒಂದು ಹೆಣ್ಣು ಯಾರ ಸಹಾಯವಿಲ್ಲದೇ ಬದುಕು ರೂಪಿಸಿಕೊಳ್ಳಲು ಆದದಂತಹ ಸ್ಥಿತಿ. ಆದರೂ ಆಶ್ರಮಕ್ಕೆ ಬಂದ ಹೆಣ್ಣಿಗೆ ಅಲ್ಲಿಯೂ  ಕಾಮುಕರ ಕಾಟ  ತಪ್ಪುವುದಿಲ್ಲ ಆಶ್ರಮ ಎಂದರೆ ಕುಟುಂಬಕ್ಕಿಂತಲೂ ಹೆಚ್ಚು ಭದ್ರತೆ ಒದಗಿಸುವ ತಾಣ, ಅಂತಹ ಆಶ್ರಮ ನಡೆಸುವ ಮಹನೀಯರು ಆಶ್ರಯ ಕೊಡುವ  ನೆಪದಲ್ಲಿ  ಹೆಣ್ಣಿನ ಶೀಲ ದೋಚುವ ಅವಳ ಬದುಕನ್ನು ಕಿತ್ತುಕೊಳ್ಳುವ ತಾಣಗಳಾಗಿ ಮಾರ್ಪಟ್ಟಿರುವುದು ಶೊಚನೀಯ ಸಂಗತಿಯಾಗಿದೆ. “ಗಂಡ ಹೆಂಡತಿ ಜಗಳ ಬೀದಿಗೆ ಬಂತೊಮ್ಮೆ|                                          ಕಂಡು ನಿಂತರು ಎಲ್ಲ, ಜಾಣೊಬ್ಬ ನುಡಿದ||ಗಂಡ ಹೆಂಡತಿ ಜಗಳ ಉಂಡು ಮಲಗುವತನಕಉಂಡರೆ ಮುಗಿದೀತು, ಊಟಕಿಲ್ಲದಕೆ ಜಗಳವೋ ತಿಂಮ|”ಈ ಚೌಪದಿಯಲ್ಲಿ ಬೀಚಿಯವರು ಸಮಾಜದಲ್ಲಿ ನಡೆಯುವ ಘಟನೆಗಳಿಗೆ ತುಂಬಾ ಸೂಕ್ಷ್ಮವಾಗಿ ಸಂವೇದಿಸುತ್ತಾರೆ. ಬಡತನಲ್ಲಿ ಹುಟ್ಟಿ ಬೆಳೆದ ಅವರಿಗೆ ಅದು ಹೊಸದಲ್ಲ. ಅದರಲ್ಲೇ ಸಂತೋಷದಿಂದ  ಬಾಳಿ ಬದುಕಿದವರು. ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವುದು ಸಾಮಾನ್ಯವಾದ ಗಾದೆ. ಆದರೂ ಅದು ಬಾಗಶಃ ಸತ್ಯ. ಅಂದರೆ ಒಂದು ಕುಟುಂಬವು ನೆಮ್ಮದಿಯಿಂದ ಬಾಳಲು ಕೌಟುಂಬಿಕ ಹಿನ್ನಲೆಯೂ ಕಾರಣವಾಗಿರುತ್ತದೆ. ಹಸಿವು ಮನುಷ್ಯನನ್ನು ಎಂಥ ಹೀನ ಕೆಲಸÀಕ್ಕೂ ತೊಡಗಿಸುತ್ತದೆ. ಕೌಟುಂಬಿಕ ಸುಖ ಎನ್ನುವುದು ಬದುಕಿನ ಮೂಲಭೂತ ಅಗತ್ಯವನ್ನು ಮೀರಿದ್ದು. ಇಲ್ಲಿ ಅವರು ಹೇಳುತ್ತಿರುವುದು ಜೀವಿಸಲು ಅತೀ ಮುಖ್ಯವಾಗಿ ಬೇಕಾದುದು ಆಹಾರ ಅದೇ ಅವರಿಗೆ ಇಲ್ಲದಿದ್ದಾಗ ಅದಕ್ಕಾಗಿಯೇ ಮನೆಯಲ್ಲಿ ಕಲಹ ಹಸಿವನ್ನು ಮೀರಿದ್ದು ಇನ್ನೊಂದಿಲ್ಲ. ಆ ಅಗತ್ಯ ತೀರಿದರೆ ಮುಂದಿನ ಬೇಡಿಕೆ. ನೆಮ್ಮದಿಯಿಂದ ಹೊಟ್ಟೆ ತುಂಬಿದರೆ ತೃಪ್ತ ಮನಸ್ಸು ನಿದ್ದೆಗೆ ಜಾರುತ್ತದೆ. ಅಲ್ಲಿ ಜಗಳ ಇಲ್ಲದೇ ನೆಮ್ಮದಿಯಿಂದ ಬದುಕು ಸಾಗುತ್ತದೆ ಆದರೆ, ತಿನ್ನಲು ಅನ್ನವೇ ಇಲ್ಲದಿದ್ದಾಗ ಊಟಕ್ಕಾಗಿಯೇ ಜಗಳ ಆಗುವುದು ವಿಪರ್ಯಾಸ ಸತ್ಯ. ಉಂಡು ಮಲಗುವತನಕ ಜಗಳ ಎಂದರೆ ಉಂಡರೆ ಮಲಗುವ ಅವಸರ ಉಣ್ಣಲು ಅನ್ನ ಬೇಡವೇ? ಲೇಖಕರು ಇಲ್ಲಿ ಬಡತನವನ್ನು ಒತ್ತಿ ಹೇಳುತ್ತಾ…ದಾಂಪತ್ಯ ಪಾಡು ಮತ್ತು ಬಡತನವನ್ನು ಮುಖಾ ಮಖಿಯಾಗಿಸುತ್ತಾರೆ. ಉಂಡು ಮಲಗುವುದಾದರೆ ಜಗಳ ನಿಂತೀತು, ಅದಕ್ಕಾಗಿ ಉಣ್ಣಬೇಕು, ಆ ಉಣ್ಣಲು ಇಲ್ಲದಿರುವುದಕ್ಕೆ ಈ ಜಗಳಿನ್ನು ಅದು ಮುಗಿಯುವುದೆಂತು ಮುಗಿಯಲು ಉಣ್ಣಬೇಕು. ಒಂದಕ್ಕೊಂದು ಬೆಸೆದುಕೊಂಡಿವೆ. ಊಟ ಮಾಡಲು ಆಹಾರವೇ ಇಲ್ಲದಿರೆ ಜಗಳ ನಿಲ್ಲುವುದಿಲ್ಲ, ಜಗಳ ನಿಲ್ಲಲು ಊಟ ಬೇಕು. ಬಡತನದ ಬದುಕು, ಬಡವ ಅನುಭವಿಸುವ ನೋವು ಹಸಿವಿನ ಸಂಕಟ, ಏನೆಲ್ಲಾ ಸಂಕಷ್ಟಗಳನ್ನು ತಂದೊಡ್ಡುತ್ತದೆ ಎನ್ನುವುದನ್ನು ಚಿತ್ರಿಸುತ್ತದೆ. ಊಟ ಇಲ್ಲದ್ದಕ್ಕೆ ಜಗಳ ನಡೆಯುತ್ತಿದೆ, ಜಗಳವು ಜಗಜ್ಜಾಹಿರಾಗುತ್ತಿದೆ. ಕುಟುಂದ ಕಲಹ ಬೀದಿಗೆ ಬರಬಾರದು ಎನ್ನುವುದು ಸೂಕ್ಷö್ಮ ಆದರೆ ಅದು ಬೀದಿಯಲ್ಲೇ ಬದುಕುವ ಜನರಿಗೆ ಜಗಳಕ್ಕಾಗಿಯೇ ಮನೆ ಎಲ್ಲಿಂದ ತರುವುದು. ತಮ್ಮ ಮನೆಯಲ್ಲಿ ಕತ್ತೆ ಸತ್ತರೂ ಪಕ್ಕದವರ ತಟ್ಟೆಯ ನೊಣ ತೆಗೆಯುವ ಬುದ್ಧಿ ಮಾತ್ರ ಹೋಗುವುದಿಲ್ಲ  ಜನರಿಗೆ. ಅದನ್ನು ಹೇಳುವುದು ಸಹ ಬೀಚಿಯವರ ಉದ್ಧೇಶವಾಗಿದೆ. ಇದರಿಂದ ತಿಳಿಯಬೇಕಾದುದಿಷ್ಟೆ  ಸಂಸಾರ ಎಂದ ಮೇಲೆ ಒಂದಿಲ್ಲೊಂದು ಕಾರಣಕ್ಕೆ ಇಂಥ ಸಣ್ಣ ಪುಟ್ಟ ಕಲಹಗಳು ಇದ್ದೇ ಇರುತ್ತವೆ. ಎಂದು ತಿಳಿದು ಜನ ಸುಮ್ಮನಿರದೇ ತಾವು ಅಲ್ಲಿ ಇಣುಕುವುದ ಸರಿಯಲ್ಲ. ಎಲ್ಲರ ಮನೆ ದೋಸೆ ತೂತೇ ಎನ್ನುವ ಮಾತು ಅವರಿಗೆ ಗೊತ್ತಿರಬೇಕು. “ಹಿಂದೊಂದು ಕಾಲದಿ ನಮಿಸುತ್ತ ಹೊರಟೆ|ಬಂದವರೆಲ್ಲರೂ ತಲೆಗೆ ಕಾಲಿಟ್ಟರು||ಅಂದು ಕಾಲೆತ್ತಿದೆ ಬಾಗಿದವು ತಲೆಗಳು|\ಒಂದು ತಿಳಿ, ದುಂಡು ಜಗತ್ತಿಗೆ ರುಂಡವಿಲ್ಲವೂ ತಿಂಮ|” ಜಗತ್ತು ಎಂದರೆ ನಾವು ಹೇಗೆ ಬದುಕುತ್ತೇವೆ ಎನ್ನುವುದರ ಮೇಲೆ  ಅದರ ಇರುವಿಕೆ. ನಮ್ಮನ್ನು ನಾವು ಹೇಗೆ ಪರಿಚಯಿಸಿಕೊಂಡಿರುತ್ತೇವೆ ಎನ್ನವುದರ ಮೇಲೆ ನಮ್ಮನ್ನು ಅದು ಉಪಚರಿಸುತ್ತದೆ, ನಾವು ಹೆದರಿ ವಿಧೇಯತೆ ತೋರಿದರೆ ತನ್ನ ಹಿಡಿತಲ್ಲಿಟ್ಟುಲೊಳ್ಳುತ್ತದೆ, ನಮ್ಮ ಬದುಕನ್ನು ತನ್ನ ಕಾಲ ಬುಡದಲ್ಲಿರಿಸಿಕೊಳ್ಳುತ್ತದೆ, ಹಾಗೆ ನಾವು ಬಲಿಷ್ಟರಾಗಿದ್ದರೆ ನಮ್ಮ ಹಿಡಿತದಲ್ಲಿ ತಾನು ಇರುತ್ತದೆ, ನಮ್ಮ ಕಾಲ ಬುಡದಲ್ಲಿದ್ದು ವಿಧೇಯತೆಯನ್ನು ತೋರುತ್ತದೆ. ಜಗತ್ತಿಗೆ ಹೀಗೆ ಇರಬೇಕೆನ್ನುವುದು ನಿಯಮವಲ್ಲ ಅದು ಅಲ್ಲಿನ ಜನತೆಯ ಬದುಕಿನ ಶೈಲಿಯ ಮೇಲೆ ಅವಲಂಬಿಸಿದೆ. ಇದೊಂದು ವಿಷವರ್ತುಲ ಎಂದೂ ನಿಲ್ಲುವುದಿಲ್ಲ ಒಬ್ಬನನ್ನು ತುಳಿಯಲು ಮತ್ತೊಬ್ಬ, ಅವನನ್ನು ತುಳಿಯಲು ಇನ್ನೊಬ್ಬ ಹೀಗೆ ಸಾಗುತ್ತಾ ಯಾವುದೂ ಸ್ಥಿರವಲ್ಲದ ಸ್ಥಿತಿಗೆ ತಲುಪುತ್ತದೆ ಎನ್ನುವ ಸಂದೇಶವನ್ನು ಬೀಚಿಯವರು ಕೊಡುತ್ತಾರೆ. ದಾಸಕೂಟದ ರಂಗನಾಥರಾಯರು ತಮ್ಮ ಬಂಗಲೆಗೆ “ಆನಂದವಿಲ್ಲ” ಎಂದು ಹೆಸರಿಸಿದ್ದು ಸೂಕ್ತವಾಗಿದೆ. ಸರಿಯಾಗಿ ಆ ಸಮಯಕ್ಕಾಗಲೇ ತಮ್ಮ ಆ ಸ್ವಾಮಿನಿಷ್ಠೆಯ ದಾಸ್ಯದಲ್ಲಿಯ ಆನಂದಕ್ಕೆ ಕೊನೆ ಅಲ್ಲಿಗೆ ಬ್ರಿಟಿಷರ ಆಳ್ವಿಕೆಗೆ ವಿರುದ್ಧವಾಗಿ ಹೇಗಾದರೂ ಅವರನ್ನು ಇಲ್ಲಿಂದ ಓಡಿಸುವ ಮತ್ತು ಭಾರತವನ್ನು ದಾಸ್ಯದಿಂದ ಮುಕ್ತಿಗೊಳಿಸುವ ನಿಟ್ಟಿನಲ್ಲಿ ಹೋರಾಟ ದೇಶಾದ್ಯಂತ ನಡೆಯುತ್ತಿದೆ. ಎಲ್ಲೆಡೆ ಗಾಂಧೀಜಿಯವರ ಮುಂದಾಳತ್ವದಲ್ಲಿ ಅವರ ತತ್ವಗಳನ್ನು ಆಧರಿಸಿ ಚಳುವಳಿ ಉಗ್ರ ರೂಪ ತಾಳಿದೆ. ಆಂಗ್ಲರ ಆಳ್ವಿಕೆ ಯಾವಾಗ ಕೊನೆಯಾಗುತ್ತದೆ ಗೊತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ತಾವು ಹಿಂದೆ ೧೨ ರೂಪಾಯಿ ವೇತನ ಪಡೆದರೂ ಸುಖ ಜೀವನ ನಡೆಸುತ್ತಿದ್ದರು. ಅಮಾಯಕ ಜನಗಳ ಬದುಕನ್ನು ಛಿದ್ರಗೊಳಿಸಿ ಸತ್ತ ದನಗಳನ್ನು ಬಿಡದೆ ಲೀಲಾವೂ ಮಾಡಿಸಿ ರಾಜ ಸತ್ತೆಯ ಖಜಾನೆಗೆ ತುಂಬುತ್ತಿದ್ದ ಕಾಲ ಇನ್ನೂ ಮರೆಯಾಗುತ್ತಿದೆ. ಆನಂದ ಖಂಡಿತ ಇಲ್ಲದಾಗುತ್ತದೆ. ತಮ್ಮ ಬಂಗಲೆಗೆ ಕೊಟ್ಟ ಹೆಸರು ಎಷ್ಟೊಂದು ಹಾಸ್ಯಾಸ್ಪದವಾಗಿದೆ. “ಅವಶ್ಯಕತೆ ಇದ್ದರಷ್ಟೇ ಆಯಾ ವಸ್ತುವಿಗೆ ಬೆಲೆ ಇಲ್ಲದಾಗ ಅದೊಂದು ಕಸ. ಸಾಮಾನ್ಯವಾಗಿ ಅನೇಕರಿಗೆ ದೇವರು ಕೂಡ ಇಂಥದ್ದೊಂದು ಕೊಡೆ” ದೇವರು ಇದ್ದಾನೆ ಎನ್ನುವ ಆಸ್ತಿಕರ ಮುಂದೆ ದೇವರೇ ಇಲ್ಲ ಎನ್ನುವ ನಾಸ್ತಿಕನೊಬ್ಬನಿಗೆ ಪಾಠ ಕಲಿಸಬೇಕಾದರೆ ಅವನಿಗೆ ಪರಿಸ್ಥಿತಿಯನ್ನು ಅರ್ಥೈಸಬೇಕು ಅದು ಅವನ ಲೈಂಗಿಕ ಬಯಕೆಯನ್ನು ಅದರೊಂದಿಗೆ ಬೆಸೆದು .ಅದಕ್ಕೆ ಪೂರಕವಾಗಿ ಅದನ್ನು ಸಾಧಿಸಿ ತೋರಿ.ಸಿ. ನೋಡು, ಇದೇ ದೇವರು ನಿನ್ನ ಮನೋ ಕಾಮನೆಗಳನ್ನು ಈಡೇರಿಸಿದವನು ಎಂದು ದೇವಸ್ಥಾನದಲ್ಲಿ ನಿಂತು ಲೈಂಗಿಕ ಅತೃಪ್ತನೊಬ್ಬನಿಗೆ ದೇವರಿದ್ದಾನೆ ಎಂದು ತೋರಿಸುವುದು ವಿಡಂಬನಾತ್ಮಕವಾಗಿದೆ. ಲೇಖಕರದು ಇಧೆ ವಾದ “ಅವರನ್ನು ಯಾರಾದರೂ ವೇವರಿದ್ದಾನೆಯೇ ಎಂದರೆ ಇದ್ದಾನೆ, ಇಲ್ಲವೇ ಎಂದರೆ ಇಲ್ಲ” ಎನ್ನುತ್ತಾರೆ. ಅಂದರೆ ದೇವರ ಬಗೆಗೆ ತಮಗಿರುವ ಕಲ್ಪನೆಯೂ ಕೊಡೆಯಂತೆಯೆ ಅಗತ್ಯವಿದ್ದಾಗ ಅದನ್ನು ಬಳಸಿಕೊಂಡು ಅಗತ್ಯವಿಲ್ಲದಿದ್ದಾಗ ಮೂಲೆ ಸೇರಿಸುವುದು. ದೇವರು ಅಷ್ಟೇ! ಅಗತ್ಯಕ್ಕೆ ತಕ್ಕಂತೆ ಬಳಕೆಯಾಗುತ್ತಾನೆ ಅಗತ್ಯ ಇಲ್ಲದಾಗ ಮೂಲೆ ಸೇರುತ್ತಾನೆ. “ನಮಗೆ ಬೇಡವಾದುದನ್ನೆಲ್ಲ ಕರ್ಮದ ತಲೆಗೆ ಕಟ್ಟುವುದು ಸುಲಭ”ತಂದೆ ತಾಯಿಗಳು ಆಸ್ತಿಕರಾಗಿದ್ದರೂ, ಮಹಾನ್ ದೈವ ಭಕ್ತರಾಗಿದ್ದಾಗಲೂ ಮಗ ನಾಸ್ತಿಕನಾದರೆ ಅದು ಅವನ ಪೂರ್ವಾರ್ಜಿತ ಕರ್ಮ ಎಂದು ಅಂದುಕೊಂಡು ತಂದೆ ತಾಯಿ ಅವನನ್ನು ಅವನ ಪಾಡಿಗೆ ಬಿಟ್ಟು ತಾವು ಅವನ್ನು ಕರ್ಮ ಫಲ ಎಂದು ಹೇಳುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ. ಯಾವುದು ಮನುಷ್ಯನ ಹುಟ್ಟಿನಿಂದಲೇ ಪಡೆದುಕೊಂಡು ಬಂದಿರುವುದಿಲ್ಲ. ಅದು ಅವನು ರೂಢಿಸಿಕೊಂಡದ್ದಾಗಿರುತ್ತದೆ. ಸಾಧ್ಯವಾದರೆ ಹಿರಿಯರು ಅವನ ಮನೋಭಾವಗಳನ್ನು ಬದಲಾಯಿಸಬಹುದು. ಅವನನ್ನು ತಿದ್ದಲಾಗದೆ ಅವನ ಇಚ್ಛೆಯಂತೆ ಅವನನ್ನು ಬೆಳೆಯಲು ಬಿಟ್ಟು ಬಿಡುವುದು ತಮ್ಮ ಬೇಜವಾದ್ಬಾರಿ  ಆಗಿದೆ.

“ದಾರ್ಶನಿಕ ಬೀಚಿ” ಹಾಸ್ಯಬ್ರಹ್ಮ ಬೀಚಿಯವರ ಜನ್ಮದಿನಕ್ಕೆ ವಿಶೇಷಲೇಖನ,ಡಾ. ಭಾರತಿ ಮೂಲಿಮನಿ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-22 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಸುಧನ್ವನ ಸಾಹಸವದು ಸೂರೆಗೊಂಡಿತು ನಮ್ಮ ಸೇನೆಯನು                 ಈಗ ಪಶ್ಚಾತ್ತಾಪ ಭಾವ ಮೂಡಿತು ಪುರೋಹಿತ ಲಿಖಿತನಲ್ಲಿ. ಕೃಷ್ಣಭಕ್ತನಾದ ಸುಧನ್ವನಿಗೆ ತೊಂದರೆ ಆಗಲೆಂದು ಬಯಸಿದ ತನಗೆ ಮರಣವೇ ಸರಿಯಾದ ಶಿಕ್ಷೆ ಎಂಬ ಭಾವನೆ ಮೂಡಿತ್ತು ಅವನಲ್ಲಿ. ಸುಧನ್ವನಿದ್ದ ಆ ಎಣ್ಣೆ ಕೊಪ್ಪರಿಗೆಗೆ ಜಿಗಿದ. ಕೃಷ್ಣಭಕ್ತನ ಸಂಗದ ಘನಪರಿಣಾಮದಲಿ ಉಷ್ಣಾತಿಉಷ್ಣ ತೈಲದಲಿ ಬಿದ್ದರೂ ಸಹ ಲಿಖಿತ ಉಷ್ಣರಹಿತ ಸ್ಥಿತಿಯನ್ನು ಅನುಭವಿಸಿದ. ತಂಪುತಂಪಾದ ಕೊಳದಂತೆ ಭಾಸವಾಯಿತು ಆ ಕೊಪ್ಪರಿಗೆಯ ಒಳಗು ಅವನಿಗೆ.      ಅರಸ ಹಂಸಧ್ವಜನಿಗೆ ನಂಬಲಸಾಧ್ಯವಾದ ವಿಸ್ಮಯವಾಯಿತು. ಒಡನೆ ಬಂದವನು ಸುಧನ್ವ ಲಿಖಿತ ಇಬ್ಬರನ್ನೂ ಪ್ರೀತಿಯಿಂದ ಆಲಂಗಿಸಿಕೊAಡ. “ನಿನ್ನ ಮಗನ ದೆಸೆಯಿಂದ ನಮ್ಮ ಈ ನಗರ ಧನ್ಯವಾಯಿತಿಂದು” ಎಂದು ಹಂಸಧ್ವಜನಲ್ಲಿ ಸುಧನ್ವನನ್ನು ಮನಸಾರೆ ಹೊಗಳಿದ ಲಿಖಿತ.     ಕೃಷ್ಣಲೀಲೆಗೆ ಪಾತ್ರನಾದ ಸುಧನ್ವ ಈಗ ವೀರಾಗ್ರಣಿಯ ಪಾತ್ರ ಧರಿಸಿ ರಣರಂಗಪ್ರವೇಶ ಮಾಡಿದ. ಈ ಮೊದಲು ಮಗನನ್ನು ತೆಗಳಿದ್ದ ಹಂಸಧ್ವಜನಲ್ಲಿ ಈಗ ಅದೇ ಮಗನ ಬಗೆಗೆ ಹೆಮ್ಮೆಯ ಭಾವನೆಯಿತ್ತು. ಮಕ್ಕಳಾದವರ ಬದುಕಿನ ನಿಜ ಸಾರ್ಥಕತೆಯಿದು ಎನಿಸಿತು ನನಗೆ ಆ ಕ್ಷಣದಲ್ಲಿ. ತಂದೆ ತಾಯಿ ಅವರಿವರಲ್ಲಿ ಹೇಳಿಕೊಂಡು ಹೆಮ್ಮೆಪಡುವಂತಹ ರೀತಿಯಲ್ಲಿ ಬದುಕುವುದಕ್ಕಿಂತ ಮಿಗಿಲಾದದ್ದು ಏನಿದೆ ಮಕ್ಕಳ ಪಾಲಿಗೆ! ಹಂಸಧ್ವಜನ ಆ ಪ್ರೌಢ ಮೊಗದಲ್ಲಿ ಸಂತಸದ ಭಾವ ತಾಂಡವವಾಡುತ್ತಿತ್ತು.     ತಂದೆಯ ಚರಣಕ್ಕೆ ನಮಿಸಿದ ಸುಧನ್ವ ಯುದ್ಧಕ್ಕೆ ಸಿದ್ಧನಾಗಿ ಚತುರಂಗ ಬಲವನ್ನು ನಮ್ಮೆಡೆಗೆ ಮುನ್ನಡೆಸಿದ. ಮುಂದೆ ಮುಂದೆ ಬಂದ ಸೇನೆ ನಮ್ಮ ಕುದುರೆಯನ್ನು ಹಿಡಿಯಿತು. ತಕ್ಷಣವೇ ಪದ್ಮವ್ಯೂಹವನ್ನು ರಚಿಸಿದರು ಚಂಪಕಾಪುರಿಯ ಸೈನಿಕರು. ಆ ವ್ಯೂಹದೊಳಗೆ ಬಂಧಿಯಾಯಿತು ನಮ್ಮ ಕುದುರೆ.     ಈ ವಿಚಾರ ತಿಳಿದ ತಕ್ಷಣವೇ ನಾನು ಹೊರಳಿದ್ದು ಶ್ರೀಕೃಷ್ಣ ಸುತನೆಡೆಗೆ. ವಿಷಯ ತಿಳಿಸಿದೆ. ಮಾಡಬಹುದೇನೀಗ ಎಂದು ಕೇಳಿದೆ. ಕೆಲವೊಮ್ಮೆ ಹಾಗೆಯೇ, ಬದುಕೆಂಬ ಯುದ್ಧರಂಗದಲ್ಲಿ ಅನುಭವಕ್ಕಿಂತಲೂ ಕಿರಿಯರ ತಕ್ಷಣದ ಸಲಹೆಯೇ ಮುಖ್ಯ ಎನಿಸಿಬಿಡುತ್ತದೆ. ತಾನೊಬ್ಬನೇ ಪದ್ಮವ್ಯೂಹವನ್ನು ಹೊಕ್ಕು ಕುದುರೆಯನ್ನು ಬಿಡಿಸಿ ತರುತ್ತೇನೆ ಎಂಬ ಧೀರನುಡಿಯನ್ನಾಡಿದ ಪ್ರದ್ಯುಮ್ನ. ಅವನಿಗೊಂದು ಅವಕಾಶ ಕೊಟ್ಟುನೋಡುವುದು ಒಳ್ಳೆಯದು ಎನಿಸಿತು.     ಅಷ್ಟರಲ್ಲಿ ಬಳಿಬಂದ ಕರ್ಣಸುತ ವೃಷಕೇತು “ಇಂದಿನ ಯುದ್ಧವಿದು ನನ್ನನ್ನು ಸೆಳೆಯುತ್ತಿದೆ. ಶತ್ರುಸೇನೆಯನ್ನು ಪುಡಿಗಟ್ಟಿ ಕುದುರೆಯನ್ನು ತಾರದೇ ಹೋದರೆ ನಾನು ಕರ್ಣನಿಗೆ ಜನಿಸಿದವನೇ ಅಲ್ಲ” ಎಂದ. ಪ್ರದ್ಯುಮ್ನನ ಮಾತಿಗಿಂತಲೂ ಇವನ ಮಾತಿನಲ್ಲಿ ಬಿರುಸು ಅಧಿಕವಿದೆ ಎನಿಸಿತು. ಅವನನ್ನೇ ಕಳುಹಿಸಿಕೊಟ್ಟೆ ಸುಧನ್ವನಿಗೆ ಎದುರಾಗಿ.     ಯುದ್ಧಕ್ಕೆ ಹೋದ ವೃಷಕೇತುವಿನ ಗುರುತು ಮೊದಲಿಗೆ ಸಿಗಲಿಲ್ಲ ಸುಧನ್ವನಿಗೆ. ಕೇಳಿದ. “ನೀನಾರು? ಯಾರ ಮಗ? ಯಾವ ಕುಲ ನಿನ್ನದು?”     ಕುಲದ ಪ್ರಶ್ನೆಯೆತ್ತಿದ್ದಕ್ಕೆ ಘಟಾನುಘಟಿಗಳ ಎದುರೇ ಸಿಡಿದುನಿಂತವನು ಕರ್ಣ. ಅವನ ಮಗನಾದ ವೃಷಕೇತುವಿನಲ್ಲಿಯೂ ಕಾಣಿಸಿಕೊಂಡಿತು ಅದೇ ಬಗೆಯ ಅಸಮಾಧಾನ, ಸುಧನ್ವ ಪ್ರಶ್ನೆ ಕೇಳಿದಾಗ. “ನಯನಕ್ಕೆ ಅಗೋಚರವಾಗಿರುವ ಹೂವೊಂದು ಪರಿಮಳವನ್ನು ಪಸರಿಸುತ್ತದೆ. ಕುಲ ಯಾವುದು ಎನ್ನುವುದು ಅರಿವಿಗೆ ಬರಬೇಕಾದದ್ದು ಪೌರುಷದಿಂದಲೇ ಹೊರತು ಬೇರಾವುದರಿಂದಲೂ ಅಲ್ಲ. ನಿನಗೆ ನನ್ನ ಗುರುತು ಇಲ್ಲವೆಂದ ಮಾತ್ರಕ್ಕೆ ನಾನು ಪರಾಕ್ರಮ ತೋರಿಸದೇ ಇರುವವನಲ್ಲ” ಎಂದ ಕರ್ಣತನಯ.     ನನಗವನ ಮಾತು ಸರಿಯೆಂದು ತೋರಿತು. ಕುಲದ ಪ್ರಶ್ನೆಯನ್ನು ಮುಂದಿಟ್ಟುಕೊAಡು ಅವಕಾಶವನ್ನು ಕೊಡುವುದಾಗಲೀ, ಅವಕಾಶವನ್ನು ನಿರಾಕರಿಸುವುದಾಗಲೀ ಸರಿಯಲ್ಲ. ಕುಲವನ್ನು ಇನ್ನೊಬ್ಬರು ಹೇಳಿಕೊಳ್ಳಬೇಕಾದ ಅಗತ್ಯವೂ ಇಲ್ಲ.    ಯುದ್ಧಕ್ಕಿಳಿದರು ಸುಧನ್ವ ವೃಷಕೇತು. ಇದ್ದವರೆಲ್ಲರೂ ಅಚ್ಚರಿಯಿಂದ ನೋಡುವ ತೆರದಲ್ಲಿ ಶೌರ್ಯಭರಿತವಾಗಿ ಕದನ ನಡೆಯಿತು. ಹಂಸಧ್ವಜಸುತ ಪ್ರಯೋಗಿಸಿದ ಬಾಣಗಳು ಕರ್ಣಸುತನ ಶರೀರದೆಲ್ಲೆಡೆ ನಾಟಿ ಅವನನ್ನು ಅತೀವವಾಗಿ ಜರ್ಜರಿತಗೊಳಿಸಿದವು. ಪ್ರಜ್ಞೆ ಕಳೆದುಕೊಂಡ ವೃಷಕೇತು. ಸುಧನ್ವನ ಗೆಲುವಿಗೆ ಪ್ರಜ್ಞೆಬಂತು. ರಥವನ್ನು ತಿರುಗಿಸಿದ ಸಾರಥಿ ವೃಷಕೇತುವಿನ ಜೀವವನ್ನು ಉಳಿಸಿದ.    ಆಗಲೇ ಸುಧನ್ವನೆದುರು ಹೋಗಿ ಕದನಕ್ಕೆ ಮನಮಾಡಿದ ಪ್ರದ್ಯುಮ್ನ. ಎಂಟು ಬಾಣಗಳು ಸಿಡಿದು ಬಂದವು ಕೃಷ್ಣಪುತ್ರನೆಡೆಗೆ, ಹಂಸಧ್ವಜಪುತ್ರನ ಬಿಲ್ಲಿನಿಂದ. ಪ್ರದ್ಯುಮ್ನನೂ ಅದೇ ಬಗೆಯ ಉತ್ತರವಿತ್ತ. ಅವನ ಪ್ರತಿಕ್ರಿಯೆಯನ್ನು ಸಹಿಸುವುದಕ್ಕಾಗಲಿಲ್ಲ ಸುಧನ್ವನಿಗೆ. “ಕೃಷ್ಣಸುತ ನೀನೆಂದು ಇದುವರೆಗೂ ಸಹಿಸಿದೆ. ಇನ್ನು ನಾನು ಸಹಿಸುವವನಲ್ಲ. ನನ್ನ ಬಾಣವದು ಬಾಯಾರಿದೆ. ನಿನ್ನೊಡಲಲ್ಲಿ ಕೆಂಪುಜಲವಿದೆ. ನನ್ನ ಬಾಣಕ್ಕೆ ಆ ಜಲವನ್ನು ಕುಡಿಸದೆ ಬಿಡುವವನಲ್ಲ” ಎಂದು ಹೇಳುತ್ತಲೇ ಪ್ರದ್ಯುಮ್ನನ ಬಾಣವನ್ನು ಏಳು ತುಂಡುಗಳಾಗಿ ಕತ್ತರಿಸಿದ. ಸುಧನ್ವ ಶೌರ್ಯದ ಮುಂದೆ ಪ್ರದ್ಯುಮ್ನ ಪರಾಕ್ರಮವದು ಕಳೆಗುಂದಿತು.     ಸುಧನ್ವನನ್ನು ಸೋಲಿಸದೆಯೇ ಮರಳುವವರಲ್ಲ ಎಂದು ವೀರಾವೇಷದಿಂದ ಹೋದ ಕೃತವರ್ಮ ಸೋಲಿನ ಮುಖ ಹೊತ್ತು ಮರಳುವಂತಾಯಿತು. ಅನುಸಾಲ್ವನ ಸಾಮರ್ಥ್ಯವದು ಸಾಲದೇ ಹೋಯಿತು. ನಮ್ಮ ಸೇನೆಯನ್ನು ಸಂಪೂರ್ಣವಾಗಿ ಸೂರೆಗೊಳ್ಳುವ ಹುಮ್ಮಸ್ಸಿನಲ್ಲಿದ್ದಾನೆ ಆತ ಎನ್ನುವುದು ಗೊತ್ತಾಗುತ್ತಿತ್ತು. ನಮ್ಮ ಕಡೆಯ ವೀರಾಧಿವೀರರನ್ನು ಬಹುಬೇಗ ಕೊನೆಗಾಣಿಸಿ ಕ್ಷಿಪ್ರವಾಗಿ ಕೃಷ್ಣದರ್ಶನಗೈಯ್ಯುವ ಉತ್ಸುಕತೆ ಸುಧನ್ವನಲ್ಲಿ ಇದ್ದಂತಿತ್ತು. ಜೀವ ಕಳೆದುಕೊಂಡು ನೆಲದ ಮೇಲೆ ಬಿದ್ದಿದ್ದ ನಮ್ಮ ಸೇನೆಯ ಆನೆ ಕುದುರೆ ರಥ ಸೈನಿಕರು ಎಲ್ಲವೂ ಎಲ್ಲರೂ ಸಾರಿ ಸಾರಿ ಹೇಳುತ್ತಿದ್ದುದು ಗಗನದೆತ್ತರವಾಗಿದ್ದ ಸುಧನ್ವ ಪರಾಕ್ರಮವನ್ನು. ಬರಿಯ ಕೃಷ್ಣಭಕ್ತ ಇವನಲ್ಲ, ಯುದ್ಧದಲ್ಲಿ ಸರ್ವಶಕ್ತ ಎಂದೆನಿಸಿತು ನನಗೆ. ಆದರೂ ನನ್ನ ಶಕ್ತಿಗೆ ಸಮನಲ್ಲ ಎಂಬ ಮೇಲರಿಮೆಯ ಭಾವವೂ ಮೂಡಿತು.    ಇನ್ನು ನಾನು ಯುದ್ಧರಂಗವನ್ನು ಪ್ರವೇಶಿಸದಿದ್ದರೆ ಗೆಲುವು ದೊರೆಯುವಂಥದ್ದಲ್ಲ ಎಂದು ಹೇಳುತ್ತಿತ್ತು ನನ್ನ ಅಂತರಂಗ. ಸುಧನ್ವನನ್ನು ಎದುರಿಸಲು ಸಜ್ಜಾದೆ…      ಡಾ. ವಿಶ್ವನಾಥ ಎನ್ ನೇರಳಕಟ್ಟೆ         

Read Post »

ಇತರೆ, ಜೀವನ

“ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್

ವಿಶೇಷ ಸಂಗಾತಿ “ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್ ನಮ್ಮ ಪುಣ್ಯ ಭರತ ಭೂಮಿಯ ಹಳ್ಳಿಯೊಂದರಲ್ಲಿ ಓರ್ವ ರೈತ ವಾಸವಾಗಿದ್ದ. ಆತನ ಕೈಗಳು ಭೂಮಿಯಿಂದ ಆತನನ್ನು ಎಳೆದು ತೆಗೆದಂತೆ ತಿರುಚಿದ್ದವು ಆತನ ಬೆನ್ನು ಬಿಲ್ಲಿನಂತೆಬಾಗಿತ್ತು. ಅತ್ಯಂತ ವಯಸ್ಸಾಗಿದ್ದ ಆತ ಒಬ್ಬನೇ ವಾಸಿಸುತ್ತಿದ್ದ. ತನ್ನವರೆಲ್ಲರನ್ನು ಕಳೆದುಕೊಂಡ ಆತನಿಗೆ ಒಂಟಿ ಜೀವನ ಅಭ್ಯಾಸವಾಗಿತ್ತು.ಅದೊಂದು ಸುಗ್ಗಿಯ ದಿನ ಸತತವಾಗಿ ಕೆಲಸ ಮಾಡಿ ಮರಳಿಮನೆಗೆ ಬಂದ ಆತನ ದೇಹದಿಂದ ಬೆವರಿನ ವಾಸನೆ ಹಾಗೂ ಆತನ ಬಟ್ಟೆಗೆ ಮೆತ್ತಿದ ಹಸಿ ಮಣ್ಣಿನ ವಾಸನೆ ಇನ್ನಿಲ್ಲದಂತೆ ಅಂಟಿಕೊಂಡಿತ್ತು. ಮನೆಯ ಹಿತ್ತಲಿನ ಬಾವಿಯ ಬಳಿ ಕೈಕಾಲು ಮುಖವನ್ನು ತೊಳೆದ ಆತ ತನ್ನ ಸ್ನೇಹಿತನಿಗೂ ನೀರು ಕೊಟ್ಟು ಉಪಚರಿಸಿದ… ನಂತರ ಸ್ನೇಹಿತನೊಂದಿಗೆ ಅಡುಗೆಮನೆಯ ಮೇಜಿನ ಮೇಲೆ ಕುಳಿತ. ಮುಂಜಾನೆ ತಾನೇ ಮಾಡಿಟ್ಟ ಅಡುಗೆ ಅಲ್ಲಿತ್ತು.ತಟ್ಟೆಯಲ್ಲಿ ಬಡಿಸಿಕೊಂಡ ಆತ ಊಟವನ್ನು ಸೇವಿಸುವ ಮುನ್ನ ಎಂದಿನಂತೆ ತನ್ನ ತಲೆಯನ್ನು ಬಾಗಿಸಿ ಕೆಲ ಪ್ರಾರ್ಥನೆಯ ಮಂತ್ರಗಳನ್ನು ನಿಧಾನವಾಗಿ ಪಠಿಸಿದ. ನಂತರ ತನ್ನ ಜೊತೆಗೆ ಬಂದಿದ್ದ ಸ್ನೇಹಿತನೊಂದಿಗೆ ಕುಳಿತು ಊಟ ಮಾಡಿದ. ಊಟಕ್ಕೂ ಮುನ್ನ ತಮ್ಮ ರೈತ ಸ್ನೇಹಿತ ತಲೆಬಾಗಿ ಪ್ರಾರ್ಥನೆ ಮಾಡಿದ್ದನ್ನು ನೋಡಿದ ಆತನ ಸ್ನೇಹಿತನಿಗೆ ಇನ್ನು ತಡೆಯಲಾಗಲಿಲ್ಲ..ಗೆಳೆಯ… ಊಟಕ್ಕೆ ಮುನ್ನ ಪ್ರಾರ್ಥನೆಯ ಅಗತ್ಯ ಇದೆಯೇ? ಇದೆಲ್ಲವನ್ನು ನೀನು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಿಂದ ಪಡೆದದ್ದು ಮತ್ತೇಕೆ ದೇವರನ್ನು ಪ್ರಾರ್ಥಿಸುವೆ ಎಂದು ಗೆಳೆಯನನ್ನು ಪ್ರಶ್ನಿಸಿದ.ತಾನು ಕುಳಿತುಕೊಂಡಿದ್ದ ಸಾಕಷ್ಟು ಶಿಥಿಲವಾಗಿದ್ದ ಕುರ್ಚಿಯಿಂದ ತುಸು ಮುಂದಕ್ಕೆ ಬಾಗಿದ ಆ ರೈತ ನಿಧಾನವಾಗಿ ಎದ್ದು ನಿಂತನು. ಕಿಟಕಿಯ ಬಳಿ ತೆರಳಿ ತನ್ನ ಎರಡು ಕೈಗಳನ್ನು ಬಳಸಿ ಕಿಟಕಿಯ ಕಂಬಿಯನ್ನು ಗಟ್ಟಿಯಾಗಿ ಹಿಡಿದನು. ಮುಖದಲ್ಲಿ ಪುಟ್ಟದಾದ ನಗುವೊಂದನ್ನು ಹೊತ್ತು ದೂರದಲ್ಲಿ ಕಾಣುತ್ತಿದ್ದ ತನ್ನ ಹೊಲವನ್ನು ಸ್ನೇಹಿತನಿಗೆ ತೋರಿಸಿ ಅತ್ಯಂತ ಶಾಂತವಾಗಿ ಹೇಳಿದ. ಗೆಳೆಯ…ನಾನು ಹೊಲದಲ್ಲಿ ಕೆಲಸ ಮಾಡಲು ಸಾಧ್ಯ, ಆದರೆ ಮಳೆ ಬರಿಸಲು ನನ್ನಿಂದ ಸಾಧ್ಯವಿಲ್ಲ. ನನಗೆ ಬೀಜವನ್ನು ಬಿತ್ತಲು ಸಾಧ್ಯ ಆದರೆ ಆ ಬೀಜಕ್ಕೆ ಮೊಳೆತು ಬೆಳೆ ಎಂದು ಅಜ್ಞಾಪಿಸಲು ಸಾಧ್ಯವಿಲ್ಲ. ನನ್ನ ಕೈಗಳು ಕೆಲಸವನ್ನು ನಿರ್ವಹಿಸುತ್ತದೆ ಎಂಬುದೇನೋ ಖಂಡಿತವಾಗಿಯೂ ನಿಜ, ಆದರೆ ಚಮತ್ಕಾರವನ್ನು ಮಾಡಲು ಅಗೋಚರ ಶಕ್ತಿಗೆ ಮಾತ್ರ ಸಾಧ್ಯ ಎಂದು ಹೇಳಿ ದೀರ್ಘವಾದ ಉಸಿರನ್ನು ತೆಗೆದುಕೊಂಡ.ಆತನ ಕಣ್ಣುಗಳಲ್ಲಿ ಪ್ರಶಾಂತತೆ ತುಂಬಿ ತುಳುಕುತ್ತಿತ್ತು.ಒಂದೆರಡು ಕ್ಷಣಗಳ ವಿರಾಮವನ್ನು ತೆಗೆದುಕೊಂಡ ಆತ ಇದೆಲ್ಲ ಚಮತ್ಕಾರವನ್ನು ಬೇರೊಬ್ಬರು  ಮಾಡುತ್ತಿದ್ದಾರೆ…. ಪ್ರಾರ್ಥಿಸುವ ಮೂಲಕ ನಾನು ನನ್ನ ಕೆಲಸ ಯಾವುದು ಎಂಬುದನ್ನು ಅರಿತುಕೊಳ್ಳುತ್ತೇನೆ. ಉಪಕಾರ ಸ್ಮರಣೆ ಮಾಡುವುದರ ಮೂಲಕ ನನ್ನ ಮೇಲೆ ಕೃಪೆಯನ್ನು ತೋರುವ ಆ ಭಗವಂತನನ್ನು ನಾನು ನೆನೆಯದಿದ್ದರೆ ಹೇಗೆ ? ಆದ್ದರಿಂದಲೇ ಆ ಕಾಣದ ಕೈಗಳಿಗೆ, ಅಗೋಚರ ಶಕ್ತಿಗೆ ಪ್ರಾರ್ಥನೆಯ ಮಾಡುವ ಮೂಲಕ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಇದು ನನ್ನ ಆದ್ಯ ಕರ್ತವ್ಯ ಎಂದು ತನ್ನ ಮಾತನ್ನು ಪೂರ್ಣಗೊಳಿಸಿದನು.ಆತ ಹೇಳಿದ ಮಾತುಗಳನ್ನು ನಾವೆಂದೂ ಮರೆಯಬಾರದು. ಎಲ್ಲರ ಬದುಕು ಅಷ್ಟೇ ಸರಳವಾಗಿ ಇರುವುದಿಲ್ಲ. ಅದರಲ್ಲೂ ಬಿರುಗಾಳಿ, ನೆರೆ, ಭೀಕರ ಕ್ಷಾಮ ಇದ್ದೇ ಇರುತ್ತವೆ. ರೈತನ ಬದುಕಂತೂ ಅನಿಶ್ಚಿತತೆಯ ಹಾದಿಯಲ್ಲಿ ಸಾಗುತ್ತದೆ. ಬಿತ್ತಿದ ಬೆಳೆಗೆ ಸಾಕಷ್ಟು ಮಳೆ ಬೀಳದೆ ಹೋಗಬಹುದು ಫಸಲು ಕೈಗೆ ಬರುವುದರಲ್ಲಿಯೇ ಹಾಳಾಗಿ ಹೋಗಬಹುದು ಫಸಲಿಗೆ ಒಳ್ಳೆಯ ಬೆಲೆ ಸಿಕ್ಕದೆ ಹೋಗಬಹುದು. ಆತನ ಹೊರೆಗಳು ಮತ್ತಷ್ಟು ಹೆಚ್ಚಾಗುತ್ತವೆಯೇ ಹೊರತು ಕಡಿಮೆಯಾಗುವುದು ಸಾಧ್ಯವಿಲ್ಲ…ಆದರೂ ಕೂಡ ಪ್ರತಿದಿನ ಮುಂಜಾನೆ ಆತ ಬೇಗನೆ ಏಳುವುದನ್ನು ತಪ್ಪಿಸುವುದಿಲ್ಲ. ತನ್ನ ಅನಿಶ್ಚಿತ ಬದುಕಿನ ಕುರಿತು ಆತನಿಗೆ ಬೇಸರವಿಲ್ಲ… ಆದರೂ ಆತ ದೇವರಿಗೆ ಸದಾ ಕೃತಜ್ಞನಾಗಿರುತ್ತಾನೆ. ತನಗೆ ಉಸಿರು ಕೊಟ್ಟದ್ದಕ್ಕಾಗಿ, ತನ್ನಲ್ಲಿ ಸಾಮರ್ಥ್ಯವನ್ನು ತುಂಬಿದ್ದಕ್ಕಾಗಿ ಮತ್ತೆ ತನ್ನ ಹೊಲದಲ್ಲಿ ತಾನು ನಡೆದು ಓಡಾಡಲು ಅವಕಾಶವನ್ನು ಕಲ್ಪಿಸಿದ್ದಕ್ಕಾಗಿ ಆತ ದೇವರಿಗೆ ಸದಾ ಕೃತಜ್ಞನಾಗಿರುತ್ತಾನೆ. ಅಂತಹ ಒಂದು ಶಾಂತವಾದ, ಸಂತೃಪ್ತವಾದ, ಕೃತಜ್ಞತಾ ಭಾವದ ಮನಸ್ಥಿತಿಯಲ್ಲಿ ಆತ ತನ್ನ ಬದುಕಿನಲ್ಲಿ ಅದೆಷ್ಟೇ ದೊಡ್ಡ ಪ್ರಮಾಣದ ಬಿರುಗಾಳಿ ಬೀಸಿದರೂ ಅಚಲವಾಗಿ ನಿಲ್ಲುವ ಸಾಮರ್ಥ್ಯವನ್ನು ಹೊಂದುತ್ತಾನೆ. ಸ್ನೇಹಿತರೆ, ಕೃತಜ್ಞತೆ ಎನ್ನುವುದು ನಮಗೆ ಬಲಹೀನತೆಯಾಗಿ ತೋರಬೇಕಾಗಿಲ್ಲ ಕೃತಜ್ಞತೆಯನ್ನು ತೋರುವುದು ಅಂಧ ವಿಶ್ವಾಸವಂತೂ ಖಂಡಿತವಾಗಿ ಅಲ್ಲ. ಎಲ್ಲಾ ಆಶಾಶ್ವತತೆಗಳ ನಡುವೆ ಅತ್ಯಂತ ವಿನಮ್ರತೆಯಿಂದ ರೂಪುಗೊಂಡ ಶಕ್ತಿ ಹಾಗೂ ಸಾಮರ್ಥ್ಯವೇ ಕೃತಜ್ಞತೆಯಾಗಿರುತ್ತದೆ. ಬದುಕಿನ ಅನಿಶ್ಚಿತತೆಗಳ ನಡುವೆಯೂ ಕೂಡ ನಮಗೆ ಬದುಕು ಕೊಟ್ಟ ಎಲ್ಲ ಅವಕಾಶಗಳನ್ನು ಗೌರವ ಪೂರ್ವಕವಾಗಿ ನೆನೆಯಲು ನಾವು ಆಯ್ದುಕೊಳ್ಳುವ ಒಂದು ವಿಧಾನವಾಗಿರುತ್ತದೆ. ಏನಂತೀರಾ ಸ್ನೇಹಿತರೆ ? ವೀಣಾ ಹೇಮಂತ್ ಗೌಡ ಪಾಟೀಲ್

“ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಕಾವ್ಯಯಾನ

“ಸಂಗಮ”ತೆಲುಗು ಕವಿತೆ,ಮೂಲ ಡಾ. ದೇವರಾಜು ಮಹಾರಾಜು ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ “ಸಂಗಮ” ತೆಲುಗು ಕವಿತೆ, ಮೂಲ ಡಾ. ದೇವರಾಜು ಮಹಾರಾಜು ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು  ಒಂದೊಂದು ಪದವನ್ನೇ ಆಯ್ದುಕೊಳ್ಳುತ್ತಾ  ಆಯ್ದುಕೊಳ್ಳುತ್ತಾ ಪುಟ್ಟಮಗು ಬೆಂಕಿಪೆಟ್ಟಿಗೆಯ ರೈಲುಗಾಡಿಯನ್ನು ತಯಾರುಮಾಡಿದಂತೆ ನಾನೊಂದುಬ ವಾಕ್ಯವನ್ನು ತಯಾರುಮಾಡುತ್ತೇನೆ ವಿಚಿತ್ರ?  ಅದು ತಯಾರಾದಕೂಡಲೇ ದ್ರವರೂಪವನ್ನು ಅಳವಡಿಸಿಕೊಳ್ಳುತ್ತದೆ ಅಷ್ಟೇಅಲ್ಲ, ಪ್ರವಾಹವೇಗದಿಂದ ಸಾಗುತ್ತದೆ ಅದರಜೊತೆಗೆ  ನಾನೋ, ನನ್ನಜೊತೆಗೆ ಅದೋ ತಿಳಿಯದಂತೆ ನಾವಿಬ್ಬರೂ ಕವನ ಸಮುದ್ರದಲ್ಲಿ   ಭೇಟಿ ಆಗುತ್ತೇವೆ ಮನಸ್ಸಿನಲ್ಲಿ ಸುಳಿಗಳು ತಿರುಗಿ ತಿರುಗಿ, ಕಟ್ಟೆ  ಒಡೆದು ಹಾಳೆಯ ಮೇಲೆ ಪ್ರವಹಿಸಿದ ನದಿ ಕವನ ಸಮುದ್ರದಲ್ಲಿ ಸೇರದೆ ಏನಾಗುತ್ತದೆ?  ವೈಯಕ್ತಿಕ ಭಾವನಗಳೆಲ್ಲವೂ ಕಳೆದುಕೊಂಡಿರುವೆನೆಂದು ನನ್ನವು ನನ್ನವಾಗದೆ ಹೋಗಿವೆ ಎಂದು ಯಾವುದೋ ಕೊರೆತೆಯಿಂದ , ಯಾವುದೊ ದಿಗಿಲಿನಿಂದ ಬೆಪ್ಪುಮೂರೇ ಹಾಕಿಕೊಂಡು  ಮುಗ್ಧವಾಗಿ ಗುಕ್ಕುಹಿಡಿಯುತ್ತೇನೆ ಆಗ ಕವನ ಸಮುದ್ರದಲ್ಲಿ  ಕದುಲುತ್ತಿರುವ ಒಬ್ಬ ಓದುಗ ಋಷಿ ನನ್ನನ್ನು  ಅಪ್ಪಿಕೊಂಡು ಸಂತೈಸುತ್ತಾನೆನೀನೀಗ ಕವಿ-ಎನ್ನುತ್ತಾನೆ ರಚನೆಯ – ರವಿಎನ್ನುತ್ತಾನೆ ನಿನ್ನದೆಂದುಕೊಳ್ಳುವುದು ನಿನ್ನದಲ್ಲ,  ಅದು ಸಾಮಾಜಿಕ- ಎನ್ನುತ್ತಾನೆ ನಿನ್ನ ಒಣ ಭಾವನೆಗಳು ಈಗ ಆಳಗಳನ್ನು ಅಳವಡಿಸಿಕೊಂಡು ವಿಸ್ತಾರಗೊಂಡು  ವಿಶ್ವವವೆಲ್ಲಾ ವ್ಯಾಪಿಸಿದ ಕವನವು – ಎನ್ನುತ್ತಾನೆ ಇಲ್ಲಿನೋಡು, ಈ ನೆಗೆಯುತ್ತಿರುವ ಅಲೆಗಳ ಆರ್ಭಟ? ನಿನ್ನ ಅಮೃತಮಯ ಸೃಜನಶೀಲತೆಯಲ್ಲಿ  ನಾನೀಗ ಅನಂತತ್ವವನ್ನು, ಅಮರತ್ವವನ್ನು ಪಡೆಯುತ್ತಿದ್ದೇನೆ- ಎನ್ನುತ್ತಾನೆ ಎನ್ನುತ್ತಲೇ- ಕರುಣೆಯಿಂದ ನನ್ನನ್ನು ದಡಕ್ಕೆ ಸೇರಿಸುತ್ತಾನೇ  ನಾನೊಂದು ಮೌನ ಸಮುದ್ರಯಾಗುತ್ತೇನೆ ಕವನದ ಸಮುದ್ರದ ಅಲೆಗಳು ನನ್ನಲ್ಲಿ ಎದ್ದು ಬೀಳುತ್ತಿರುತ್ತವೆ! ತೆಲುಗು ಮೂಲ : ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು

“ಸಂಗಮ”ತೆಲುಗು ಕವಿತೆ,ಮೂಲ ಡಾ. ದೇವರಾಜು ಮಹಾರಾಜು ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು Read Post »

ಕಾವ್ಯಯಾನ

ಬೆಂಶ್ರೀ ರವೀಂದ್ರ ಅವರ ಕವಿತೆ “ಹೆಡೆ ಬಿಚ್ಚಿ ಹೊಡೆ”

ಕಾವ್ಯ ಸಂಗಾತಿ ಬೆಂಶ್ರೀ ರವೀಂದ್ರ “ಹೆಡೆ ಬಿಚ್ಚಿ ಹೊಡೆ” ನೀನು ಮನೆ ಬಿಟ್ಟು ಹೋದ ರಾತ್ರಿಯೇ ರಾಹುಲ ಹುಟ್ಟಿದಹೆರಿಗೆಯ ನೋವಲಿದ್ದವಳಕೈ ಹಿಡಿದು ಯಶೋಧರಾಸಹಿಸಿಕೊ ನಾನಿದ್ದೇನೆಅಂತೇಕೆ ಅಂದು ಹೋಗಲಿಲ್ಲ ನಾನೇನು ಕಡಿಮೆ ಮಾಡಿದ್ದೆಅಂತಃಪುರದ ತುಂಬಾ ಸೀತೆಗೂಮಿಗಿಲು ಸುಂದರಿಯರು ಇದ್ದರಲ್ಲಬೇಡವೆಂದನೇಅವಳೊಬ್ಬಳನ್ನು ಬಿಡೆಂದುಗೋಗರೆದರೂ ಧಿಕ್ಕರಿಸಿದೆಯಲ್ಲ. ಬೇಕಿತ್ತೆ ಅಗ್ನಿಗಿಂತ ಬೇರೆ ಸಾಕ್ಷಿಕಾಡಾಡಿಯಾಗಿ ಮಾಡಿದೆಯಲ್ಲತುಂಬು ಬಸುರಿಗೆಅವನಿಯೇ ಗತಿಯಾಯ್ತಲ್ಲ ಹೇಳಿ ಹೋಗಬಹುದಿತ್ತು ಮಧುರೆಗೆನಾ ಬರುವುದರಲ್ಲೇ ಮತ್ತೆಂದೂಸಿಗದಂತೆ ಹೊರಟೆಯಲ್ಲಅಷ್ಟು ಅವಸರವಿತ್ತೇಎದೆ ಮಿಡಿತಕೆ ಸದೆಬಡಿತವೇ ಹೀಗೆ ಬರೆಯಲುಂಟು ನೂರಾರುಕಥೆಗಳು ಇತಿಹಾಸ ಚರಿತ್ರೆಇಲ್ಲಿ ಮಾತ್ರವಲ್ಲ ಎಲ್ಲೆಲ್ಲೂ ಜಗದಗಲ‌ ಮುಗಿಲಗಲಮತ ಧರ್ಮ ಜಾತಿ ವರ್ಗ ವರ್ಣಗಳ ಭೇದವಿಲ್ಲದೆಹೆಬ್ಬೆಟ್ಟಿನಡಿಯಲೇ ಇಟ್ಟುನಡೆದಿದೆ ನುಡಿ ಸಾಂತ್ವನನಡೆ ಗೊಸುಂಬೆ ಅಯ್ಯೋಮತ್ತೆ ನೀನಿವರ ಕೈಗೊಂಬೆ ಅವರ ಮೇಲಿವರುಇವರ ಮೇಲವರುಎಡ ಬಲ‌ ಮಧ್ಯದಮುಖವಿಲ್ಲದ ಕೂಗುಮಾರಿಗಳುಭಾಷಣ ಭೂಷಣರುಇವರೇ ಅವರು ಅವರೇ ಇವರು ಬಿಲ್ಲುಗಳ ಹೆಣೆಯುತ್ತಾರೆಹಾರುವುದಿಲ್ಲ ಬಾಣನುಡಿ ನೇವರಿಕೆಗೆತಣಿವುದೇ ಬಾಯಾರಿಕೆನೀನಿಲ್ಲದೆ ಅವರಿಲ್ಲಎಂಬರಿವಿದ್ದರೂಅರಿವುಗೆಟ್ಟ ಅರಿಗಳುಮಂಗಮಾಡುವ ನರಿಗಳುಮತಕಾಗಿ ಹಾರಿಸುವ ಹುಸಿಮತಾಪುಕೋರರು ಹುಡುಗಿನೀನಿನ್ನು ಇರಬಾರದು ಸುಮ್ಮನೆಬಯಲಿಗೆಳೆದು ಬಿಮ್ಮನೆಕಳಚಿ ಮುಖವಾಡಗಳಪೂತ್ಕರಿಸಿ ಈ ಬೇಮಾನರಪಡೆ ಕಟ್ಟಿ ಪಡೆ ನಿನ್ನ ಪಾಲುಹೆಡೆ ಬಿಚ್ಚಿ ಹೊಡೆಇಲ್ಲವಾದರೆ ಏಳಲ್ಲಎಪ್ಪತ್ತು ದಶಕವಾದರೂನಿನಗಿಷ್ಟೂ ಕೂಳು ಸಿಕ್ಕುವುದಿಲ್ಲ. ಬೆಂಶ್ರೀ ರವೀಂದ್ರ

ಬೆಂಶ್ರೀ ರವೀಂದ್ರ ಅವರ ಕವಿತೆ “ಹೆಡೆ ಬಿಚ್ಚಿ ಹೊಡೆ” Read Post »

ಅನುವಾದ

ಮಲಯಾಳಂ ಕವಿತೆ “ಒಂದು ನುಡಿ?”ಮೂಲ ತಾಜುದ್ದೀನ್‌ ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ.

ಅನುವಾದ ಸಂಗಾತಿ ಮಲಯಾಳಂ ಕವಿತೆ “ಒಂದು ನುಡಿ?” ಮೂಲ ತಾಜುದ್ದೀನ್‌ ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ. ಸಹ ಪ್ರಯಾಣಿಕನೇ…….,ಈ ತಿರುವಿನಲ್ಲಿಯೂಅಥವಾಮುಂದಿನ ತಿರುವಿನಲ್ಲಿಯೂನಾವು ಬೇರೆಯಾಗುತ್ತೇವೆ….!ನೀನು ಪುನಃಯಾತ್ರೆಯನ್ನು ಮುಂದುವರಿಸುವಾಗನನ್ನ  ‘ಶವಪೆಟ್ಟಿಗೆ ‘ಯನ್ನುಹೊತ್ತುಕೊಂಡು ಸಾಗಬೇಡಾ….!!!. ಯಾರದ್ದರೂನನ್ನ ಕುರಿತು ಕೇಳಿದ್ದರೇ…….,ನಾನುಜೊತೆಗೆ ಇದ್ದುನಷ್ಟವಾದ ದುರಾದೃಷ್ಟವಂತ….!ಬಾಳಿನಿಂದ ದೂರವಾದಪಾತ್ರದಾರ……ಎಂದು ಮಾತ್ರ ಹೇಳಬೇಕು….!‘ ದರಿದ್ರ’ನಾಗಿದ್ದೆ ಎಂದುಮಾತ್ರ ಹೇಳಬಾರದು…..!!! ನನ್ನ ನೋಟಗಳಲ್ಲಿಬರೆಯದೇ ಇದ್ದದ್ದುಓದಿದ್ದರೇ……ಅಳಿಸಿ ಹಾಕಲುನೀನು ‘ಅವಳ ‘ಬಳಿ ಹೇಳಬೇಕು….!!! ನಾನು ಒಂದು‘ಹೂವು’ ಸಹಕಿತ್ತು ಹಾಕಿಯೇಇಲ್ಲ….!!!. ಮಲಯಾಳಂ ಮೂಲ: ತಾಜುದ್ದೀನ್.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.                                 

ಮಲಯಾಳಂ ಕವಿತೆ “ಒಂದು ನುಡಿ?”ಮೂಲ ತಾಜುದ್ದೀನ್‌ ಕನ್ನಡಕ್ಕೆ ಐಗೂರು ಮೋಹನ್ ದಾಸ್ ಜಿ. Read Post »

ಕಾವ್ಯಯಾನ

ಪ್ರೊ.ರಾಜಕುಮಾರ ಬಿ ಟಿ. ಅವರ ಕವಿತೆ “ಮಾನವೀಯತೆ ಹರಿಕಾರರು”

ಕಾವ್ಯ ಸಂಗಾತಿ ಪ್ರೊ.ರಾಜಕುಮಾರ ಬಿ ಟಿ. “ಮಾನವೀಯತೆ ಹರಿಕಾರರು” ಅವಿಭಕ್ತ ಕುಟುಂಬದಲಿ ಜನಿಸಿಅಸ್ಪೃಶ್ಯತಾ ಅಂಧಕಾರವನು ಅಳಿಸಿಜಾತೀಯತೆ ಹೊಡೆದೊಡಿಸಲುಜಾತ್ಯತೀತ ಭಾವ ಮೂಡಿಸಲು ಮೂಡಿಹರು ದಲಿತ ಸೂರ್ಯ’ರು -೧- ಅಸ್ಪೃಶ್ಯತೆಯ ಕಹಿಯನು ಉಂಡುಅವಮಾನದಿಕುಲುಮೆಯಲಿ ಬೆಂದುಬದುಕಿನ ಬವಣೆಗಳಲಿ ನೊಂದುಅಸಹಾಯಕತೆಯ ಕಣ್ಣಿರಲಿ ಮಿಂದುದೀನ-ದುರ್ಬಲರ ಧ್ವನಿಯಾಗಿಹರು  -೨- ಸಮಾನತೆಯ ಲೇಖನಿ ಹಿಡಿದುಸಮ ಸಮಾಜಕೆ ಸಂವಿಧಾನ’ವ ಬರೆದುಸರ್ವರಲೂ ಸಮಭಾವ ತಂದು  ಸಾಮಾಜಿಕ ನ್ಯಾಯವೆಂದು ಸಾರಿಹರು ಮಾನವತಾವಾದಿಆಗಿಹರು  -೩- ಅಕ್ಷರಗಳನು ಆಯುಧವಾಗಿರಿಸಿಅಂಧಶ್ರದ್ಧೆಗಳನು ಬೇಧಿಸಿಲೇಖನಿಯ ಮಸಿಕೋಟಿ-ಕೋಟಿ ಜನಗಳಿಗೆ ಬಿಸಿಎಂದಬ್ಬರಿಸಿ ಘರ್ಜಿಸಿದ ಭೀಮ’ರಿವರು -೪- ಅನಿಷ್ಟಗಳ ನಡುವಿಂದ ಸಿಡಿದುಅಜ್ಞಾನವ ದೈರ್ಯದಿ ತುಳಿದು ದೇಶ-ಕೋಶಗಳಿಗೆ ಮಿಡಿದುಜ್ಞಾನಕ್ಷೀರವನು ಕುಡಿದುಘರ್ಜಿಸಿಹರು ಮಹಾ ನಾಯಕರಿವರುಅಂಬೇಡ್ಕರರು -೫- ಪ್ರೊ.ರಾಜಕುಮಾರ ಬಿ ಟಿ.

ಪ್ರೊ.ರಾಜಕುಮಾರ ಬಿ ಟಿ. ಅವರ ಕವಿತೆ “ಮಾನವೀಯತೆ ಹರಿಕಾರರು” Read Post »

ನಿಮ್ಮೊಂದಿಗೆ

ಡಾ.ಕಾಡಜ್ಜಿ ಮಂಜುನಾಥ್‌ ಅವರ ಕವಿತೆ “ನ್ಯಾಯ ಕಣ್ಣು ತೆರೆದಿದೆ”

ಕಾವ್ಯ ಸಂಗಾತಿ ಡಾ.ಕಾಡಜ್ಜಿ ಮಂಜುನಾಥ್‌ “ನ್ಯಾಯ ಕಣ್ಣು ತೆರೆದಿದೆ” ಜನಸಾಮಾನ್ಯರಉಸಿರು ನಿಲ್ಲಿಸಿದರ್ಪ ಮೆರೆದನರನ ಮಾತುಮೌನವಾಗಿದೆ; ಹಣದಕಪಿಮುಷ್ಠಿಯಲಿಹಂತಕರ ಸೃಷ್ಟಿಸಿದ್ವೇಷವೆಂಬ ರೋಗದಿಜೀವ ತೆಗೆದಜೀವಿಯಮುಖವಾಡ ಕಳಚಿದೆ; ತೋಳ್ಬಲದಕತ್ತಿಯ‌ ಅಂಚಿನಲಿಹಣದಾಸೆ ತೋರಿಸಿಕುರ್ಚಿಯ‌ ವ್ಯಾಮೋಹದಿಪ್ರಾಣ ತೆಗೆದವಿನಯದದುರಹಂಕಾರಮಣ್ಣಾಗಿದೆ; ಕಾನೂನಿನರಕ್ಷಕರೇಅಪರಾಧಿಗಳಆಮಿಷಕ್ಕೆ ಬಲಿಯಾಗಿಸಹಾಯ ಹಸ್ತಚಾಚಿದಮೃಗಗಳ ಮೇಲೆನ್ಯಾಯ ದೇವತೆಯಕಣ್ಣು ಬಿದ್ದಿದೆ; ಬಾಳಿ ಬದುಕಬೇಕಾದಮುಗ್ದ ಯುವಕನನ್ನುದಬ್ಬಾಳಿಕೆಯಕೆಂಡದಲಿಕೊಲೆ ಮಾಡಿದಕಟುಕರನ್ನುಕಾರಾಗೃಹ  ಕೈಬೀಸಿಕರೆದಿದೆ; ತೆರೆ ಹಿಂದಿನಕುತಂತ್ರಗಳು ಕರಗಿಹಣ ಅಧಿಕಾರ  ಪ್ರಭುತ್ವದಕೈಗಳುಕಾನೂನಿನ ಕುಣಿಕೆಗೆಸಿಲುಕಿಸಂವಿಧಾನವುತನ್ನ ಅಭೇದ್ಯಶಕ್ತಿಯನ್ನುನ್ಯಾಯದ ಚಾಟಿಯಲಿಕರ್ಮವುಮರುಕಳಿಸಿದೆ;ಡಾ.ಕಾಡಜ್ಜಿ ಮಂಜುನಾಥ

ಡಾ.ಕಾಡಜ್ಜಿ ಮಂಜುನಾಥ್‌ ಅವರ ಕವಿತೆ “ನ್ಯಾಯ ಕಣ್ಣು ತೆರೆದಿದೆ” Read Post »

You cannot copy content of this page

Scroll to Top