ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅನ್ನಪೂರ್ಣ ಸಕ್ರೋಜಿ ಪುಣೆ ಅವರ “ತಾಯ್ತನ”

ಕಾವ್ಯ ಸಂಗಾತಿ ಅನ್ನಪೂರ್ಣ ಸಕ್ರೋಜಿ ಪುಣೆ “ತಾಯ್ತನ” ಜೀವಸಂಕುಲದ ತಾಯ್ತನದವಿಶ್ವದ ತತ್ವವೇ ಅವ್ವಮಾನವ ಜನ್ಮದ ಜೀವನದಸಾರದ ಸತ್ವವೇ ಅವ್ವ|| ಸೃಷ್ಟಿಕರ್ತನ ಲೀಲೆ ಭುವಿಯಅತ್ಯದ್ಭುತ ಸೃಷ್ಟಿದೇವ ತಾ ಇಳೆಗಿಳಿದುಬಾರದಮಮತೆಯ ವೃಷ್ಟಿ|| ಬಡವಳಿರಲಿ ಬಲ್ಲಿದಳೇ ಇರಲಿಮಕ್ಕಳಿಗೆ ಮಾತೆ ಶ್ರೇಷ್ಠಭಿಕ್ಷುಕಿ ಇರಲಿ ರಾಣಿ ಆಗಿರಲಿಮಕ್ಕಳಿಗೆ ತಾಯಿ ನಿಷ್ಠ || ಇರುವೆಯಿಂದ ಆನೆಯವರೆಗೆಅವುಗಳ ತಾಯಿ ಆಧಾರದೇವಾನುದೇವತೆಗಳಿಗೂ ಸಹಆದಿಶಕ್ತಿಯೇ ಆಶ್ರಯ|| ಮಾನವ ಜನ್ಮದ ಸಾರ್ಥಕತೆಜನ್ಮ ಕೊಟ್ಟ ಹೆತ್ತತಾಯಿಜೀವನದಲ್ಲಿ ಬದುಕಿ ಇರಲುಅನ್ನ ನೀಡಿದ ಭೂತಾಯಿ || ನೀರು ಕೊಟ್ಟ ಕಾವೇರಿ ತಾಯಿನುಡಿ ಕಲಿಸಿದ ಕನ್ನಡ ತಾಯಿನನ್ನ ಜೀವದಾತೆ ಭಾರತಮಾತೆತಮಗೆಲ್ಲರಿಗೂ ಚಿರಋಣಿ ನಾ|| ಅನ್ನಪೂರ್ಣ ಸಕ್ರೋಜಿ ಪುಣೆ

ಅನ್ನಪೂರ್ಣ ಸಕ್ರೋಜಿ ಪುಣೆ ಅವರ “ತಾಯ್ತನ” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಒಂದು ಗೆರೆ ಕಡಿಮೆಯಿದೆ..ನಿನ್ನ ಪಡೆಯುವ ನಸೀಬಿಗೆಒಂದು ಹನಿ ಕಡಿಮೆಯಿದೆ..ನಿನ್ನ ಮರೆಸುವ ಮಧುಬಟ್ಟಲಿಗೆ..!! ನೋವಿಗೆ ಹಳೆಯ ಗಿರಾಕಿಯ ಹುಸಿನಗುವ ಮನಕೆ…ಒಂದು ಉನ್ಮಾದ ಬೇಕಿದೆ,ಪುನಃ: ನಿನ್ನ ಪ್ರೀತಿಸುವ ಚಾಳಿಗೆ!! ದಿನದ ಲೆಕ್ಕಹಚ್ಚಿಟ್ಟೆನಗೆ ಹೋದೆ ದೂರಯಾನಕೆ..ಒಂದು ಶರಧಿ ಬಾಕಿಯಿದೆ,ನಿನ್ನ ಸೇರುವ ಪರಿಧಿಗೆ..!! ಸಿಕ್ಕ ಘಳಿಗೆಯನ್ನು ಸಂಭ್ರಮಿಸಲು ಬಿಡಲಿಲ್ಲ ಬದುಕು..ಒಂದು ಏಕಾಂತ ಬೇಕಿದೆ,ನಿನ್ನ ಸ್ಮರಿಸುವ ಮನಸ್ಸಿಗೆ..!! ಸೀತಾ,ರಾಮ,ಲಕ್ಷ್ಮಣರ ವನವಾಸಕ್ಕಿಂತ ದೀರ್ಘವಾಯ್ತು ನೋವುಒಂದು ವಿರಾಮ ಬೇಕಿದೆ,ನಿನ್ನ ಕಾಡುವ ಮೌನಪಾಳಿಗೆ..!! ಬಂಧನಕ್ಕೆ ಬೆನ್ನು ಮಾಡಿ ತುದಿನಗುವ ಕದ್ದವನೇ,,ಒಂದು ನೂಲಿನ ಅಂತರವಿದೆ…ನಿನ್ನ ಕೂಡುವ ಹಾದಿಗೆ..!! ಕಂಬನಿ ಕುಡಿದು ಸಾಕಾಯ್ತು ಜಯಾ,ಕೇಳಿಲ್ಲಿ ಗೆಳೆಯಾ..ಒಂದು ಕಿಡಿ ಕಡಿಮೆಯಿದೆ,ನನ್ನ ನಿನ್ನ ಒಂದಾಗಿಸುವಅಗ್ನಿಸಾಕ್ಷಿಗೆ…!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

ಕಾವ್ಯಯಾನ

ಡಾ.ದಾನಮ್ಮ ಝಳಕಿ ಅವರ ಕವಿತೆ “ಅವ್ವ ಆಲದ ನೆರಳು”

ಅಮ್ಮನ ಸಂಗಾತಿ ಡಾ.ದಾನಮ್ಮ ಝಳಕಿ “ಅವ್ವ ಆಲದ ನೆರಳು” ಬಿಸಿಲ ಬಾದೆಯ ಬದುಕಿನ ದಾರಿಯಲ್ಲಿತಂಪಾದ ನೆರಳಾಗಿ ನಿಂತವಳು ಅವ್ವ…ಬಿರುಗಾಳಿಯ ನೋವಿನ ಮಧ್ಯೆಬೇರು ಬಿಟ್ಟ ಆಲದ ಮರದಂತೆ ಗಟ್ಟಿಯಾದವಳು ಅವ್ವ… ಕಣ್ಣೀರು ಮುತ್ತಾದ ಕ್ಷಣಗಳಲ್ಲಿಕೈ ಹಿಡಿದು ಧೈರ್ಯ ಹೇಳಿದವಳು,ಬಿದ್ದ ಹೆಜ್ಜೆ ಎತ್ತಿ ನಿಲ್ಲಿಸಿಬಾಳಿಗೆ ಬೆಳಕಾದವಳು ಅವ್ವ… ತನ್ನ ಹೊಟ್ಟೆ ಬಾಯಾರಿದ್ದರೂಮಕ್ಕಳ ಕನಸು ತಣಿಸಿದ ತಾಯಿ,ತನ್ನ ನೋವನ್ನು ಮರೆಮಾಚಿನಗುವಿನ ದೀಪ ಹಚ್ಚಿದವಳು ಅವ್ವ… ಆಲದ ನೆರಳಲ್ಲಿ ಹಕ್ಕಿಗಳುಆರಾಮವಾಗಿ ಗೂಡು ಕಟ್ಟುವಂತೆ,ಅವ್ವ ಮಡಿಲಲ್ಲಿ ಮಕ್ಕಳುಭಯವಿಲ್ಲದೆ ಕನಸು ಕಟ್ಟಿದರು… ಅವ್ವನ ಮಾತು ವೇದದ ಸಾಲು,ಅವ್ವನ ಪ್ರೀತಿ ಗಂಗೆಯ ನೀರು,ಅವ್ವನ ಕರುಣೆ ದೇವರ ರೂಪ,ಅವ್ವನೇ ಮನೆಯ ಜೀವಧಾರೆ… ಕಾಲ ಬದಲಾಗಬಹುದು,ಮನೆಗಳ ರೂಪ ಬದಲಾಗಬಹುದು,ಆದರೆ ಅವ್ವ ಎಂಬ ಆಲದ ನೆರಳುಎಂದೆಂದಿಗೂ ಒಣಗದು… ಜೀವನದ ಕೊನೆಯ ಉಸಿರಿನವರೆಗೂಮಕ್ಕಳಿಗಾಗಿ ತಾನೇ ಕರಗುವಳು,ಆಕಾಶದಷ್ಟು ದೊಡ್ಡ ಹೃದಯ ಹೊತ್ತುಭೂಮಿಯಂತೆ ತಾಳುವಳು ಅವ್ವ… ಅವ್ವ ಎಂದರೆಕೇವಲ ಒಂದು ಪದವಲ್ಲ…ಬಿಸಿಲಿನ ಬದುಕಿಗೆದೇವರು ಕೊಟ್ಟ ಆಲದ ನೆರಳು…!*ಅವ್ವ ಆಲದ ನೆರಳು* ಬಿಸಿಲ ಬಾದೆಯ ಬದುಕಿನ ದಾರಿಯಲ್ಲಿತಂಪಾದ ನೆರಳಾಗಿ ನಿಂತವಳು ಅವ್ವ…ಬಿರುಗಾಳಿಯ ನೋವಿನ ಮಧ್ಯೆಬೇರು ಬಿಟ್ಟ ಆಲದ ಮರದಂತೆ ಗಟ್ಟಿಯಾದವಳು ಅವ್ವ… ಕಣ್ಣೀರು ಮುತ್ತಾದ ಕ್ಷಣಗಳಲ್ಲಿಕೈ ಹಿಡಿದು ಧೈರ್ಯ ಹೇಳಿದವಳು,ಬಿದ್ದ ಹೆಜ್ಜೆ ಎತ್ತಿ ನಿಲ್ಲಿಸಿಬಾಳಿಗೆ ಬೆಳಕಾದವಳು ಅವ್ವ… ತನ್ನ ಹೊಟ್ಟೆ ಬಾಯಾರಿದ್ದರೂಮಕ್ಕಳ ಕನಸು ತಣಿಸಿದ ತಾಯಿ,ತನ್ನ ನೋವನ್ನು ಮರೆಮಾಚಿನಗುವಿನ ದೀಪ ಹಚ್ಚಿದವಳು ಅವ್ವ… ಆಲದ ನೆರಳಲ್ಲಿ ಹಕ್ಕಿಗಳುಆರಾಮವಾಗಿ ಗೂಡು ಕಟ್ಟುವಂತೆ,ಅವ್ವ ಮಡಿಲಲ್ಲಿ ಮಕ್ಕಳುಭಯವಿಲ್ಲದೆ ಕನಸು ಕಟ್ಟಿದರು… ಅವ್ವನ ಮಾತು ವೇದದ ಸಾಲು,ಅವ್ವನ ಪ್ರೀತಿ ಗಂಗೆಯ ನೀರು,ಅವ್ವನ ಕರುಣೆ ದೇವರ ರೂಪ,ಅವ್ವನೇ ಮನೆಯ ಜೀವಧಾರೆ… ಕಾಲ ಬದಲಾಗಬಹುದು,ಮನೆಗಳ ರೂಪ ಬದಲಾಗಬಹುದು,ಆದರೆ ಅವ್ವ ಎಂಬ ಆಲದ ನೆರಳುಎಂದೆಂದಿಗೂ ಒಣಗದು… ಜೀವನದ ಕೊನೆಯ ಉಸಿರಿನವರೆಗೂಮಕ್ಕಳಿಗಾಗಿ ತಾನೇ ಕರಗುವಳು,ಆಕಾಶದಷ್ಟು ದೊಡ್ಡ ಹೃದಯ ಹೊತ್ತುಭೂಮಿಯಂತೆ ತಾಳುವಳು ಅವ್ವ… ಅವ್ವ ಎಂದರೆಕೇವಲ ಒಂದು ಪದವಲ್ಲ…ಬಿಸಿಲಿನ ಬದುಕಿಗೆದೇವರು ಕೊಟ್ಟ ಆಲದ ನೆರಳು…! ಡಾ.‌ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಅವರ ಕವಿತೆ “ಅವ್ವ ಆಲದ ನೆರಳು” Read Post »

ಇತರೆ

ಡಾ.ಭಾರತಿ‌ ಅಶೋಕ್ ವಿಶೇಷ ಬರಹ “ಅಮ್ಮಾ….”

ಅಮ್ಮನ ಸಂಗಾತಿ ಡಾ.ಭಾರತಿ‌ ಅಶೋಕ್ “ಅಮ್ಮಾ….” ಅಮ್ಮಾ…. ಅವಳು ಅವಳನ್ನೇ ಮರೆತುಮಗುವ ಮೆರೆಸುವವಳುಅರ್ಥಪೂರ್ಣ ಮಾಂತ್ರಿಕಳುಅವಅಮ್ಮಾ,ಮಾ, ಮಾತೃ, ತಾಯಿ  ತಾಳ್ಮೆಯೇ ಮೈವೆತ್ತವಳು. “ದೇವರೇ  ಧನ್ಯವಾದಗಳು ನಮ್ಮನ್ನು ಮಾತ್ರ ನಿನ್ನ ಅನುವಾದಕರನ್ನಾಗಿ ಆಯ್ಕೆ ಮಾಡಿಕೊಂಡದ್ದಕ್ಕೆ” ಎನ್ನುವ ಕವಿಯ ಕೃತಜ್ಞತೆಗೆ ಅರ್ಥವಿದೆ. ಒಡಲುರಿಯ ಕತ್ತರಿಸಿ ಬೊಗಸೆಯಲ್ಲಿಟ್ಟು ಸದಾ ಕಣ್ಗಾವಲಿರಿಸಿ, ಕಾಯುವ ಜೀವ ಅಮ್ಮಾ. ಗರ್ಭದಲಿ ಮೂಡಿದ ಕ್ಷಣವೇ ಶುರುವಾಗುವುದು ಅಮ್ಮನ ಮಮಕಾರದ ತುಡಿತ.ಒಂದಿನಿತು ಕದಲದ ಚಿತ್ತ. ಮೂಡಿದ ಮಾಂಸ ಮುದ್ದೆಯೊಂದಿಗಿನ ಸಂವಾದ ಸದಾ. ಹೃದಯದ ಜೋಡಿ ಮಿಡಿತ ನವಮಾಸವೂ. ಪ್ರಸವದಲಿ  ಅವಳು  ಮರು ಹುಟ್ಟುವಳು ಮಗುವಿನೊಂದಿಗೆ.  ಇಲ್ಲಿಂದ ಎಲ್ಲ ಮಗುವಿಗೆ. ಪ್ರಸವದ ನೋವ ನುಂಗಿದವಳು ಈಗ ಹಸಿವ ನುಂಗುವಳು.ಜಗದ ನೋವೆನಗಿರಲೆಂದು ಅದರ ನಲಿವೆಲ್ಲ ಮಗುವಿಗಿಟ್ಟು ತಣ್ಣನೆ ನಗುವಳು – ಮಗುವ ಚಲನೆ ಕಂಡು. ಮಗು ಅತ್ತರೆ ತಾನು ಅತ್ತು, ನಕ್ಕರೆ ಸುಖಿಸಿ ನೋವ ಮರೆವಳು. ಬೆಳೆದ ಮಗು ಸಮಾಜಮುಖಿಯಾದರೆ ಕಿರೀಟ ಅಪ್ಪನಿಗೆ, ಇಲ್ಲದಿರೆ ನಿಂದೆಗೆ ಸದಾ ಸಖಿ. ಅನವರತ ತನ್ನವರ ಒಳಿತಿಗೆ ಮಿಡಿವ ಅಮ್ಮನ  ಒಳಿತು ಕೇಳುವ ಕಿವಿಗಳಿಗೆ ಬರ.ಅದ್ಯಾವುದ ಲೆಕ್ಕಿಸದ ಅವಳು  ಸದಾ ಹಸನ್ಮುಖಿ. ಜಗದ ಜನನಿ ತಾಯಿ.ನಿತ್ಯದ ಬದುಕು ಅವಳ ಛಾಯೆ, ಇಲ್ಲದಿಹ ಬದುಕಿಗೆಲ್ಲಿ ಠಾವು.ಅವಳು ಸದಾ ವಂದಿತಳು ಜಗದಿ ಪೂಜಿಪಳು. ಡಾ. ಭಾರತಿ ಅಶೋಕ್

ಡಾ.ಭಾರತಿ‌ ಅಶೋಕ್ ವಿಶೇಷ ಬರಹ “ಅಮ್ಮಾ….” Read Post »

You cannot copy content of this page

Scroll to Top