ಕಾವ್ಯ ಸಂಗಾತಿ
ಬನಶ್ರೀ ಹತ್ತಿ ವಿಜಯಪುರ
“ಮರೆಯಾದ ನನ್ನಪ್ಪ”


ಬೆನ್ನ ಹಿಂದೆ ಬೆಟ್ಟದಂತೆ ನಿಂತಿದ್ದೆ
,ಕಣ್ಣ ಮುಂದೆ ದಾರಿದೀಪವಾಗಿದ್ದೆ
.ನಿನ್ನ ಕೈ ಹಿಡಿದು ನಡೆದ ಹಾದಿ
ಇಂದಿಗೂ ನನ್ನ ಬಾಳ ಹಸಿರು,
ಇಂದು ನೀನಿಲ್ಲದೆ ಬದುಕು
ಬರೀ ಬಳಲಿಕೆಯ ಉಸಿರು.
ನನ್ನ ಸಣ್ಣ ತಪ್ಪುಗಳ ತಿದ್ದಿ ಬುದ್ದಿ ಹೇಳುತ್ತಿದ್ದೆ,
ಕಷ್ಟ ಬಂದಾಗ ಧೈರ್ಯ ತುಂಬಿ
ನಗು ಬೀರುತ್ತಿದ್ದೆ.
ನೀನು ಹಾಕಿಕೊಟ್ಟ ಹಾದಿಯೇ ನನ್ನಾಸ್ತಿ
ನಿನ್ನ ನೆನಪುಗಳೇ ನನ್ನ ಜೀವನದ ಬುತ್ತಿ.
ಅಪ್ಪ ಅಂದರೆ ಕೇವಲ ಎರಡಕ್ಷರವಲ್ಲ,
ಒಂದು ದೊಡ್ಡ ಆಲದ ಮರ,
ನೀನಿಲ್ಲದ ಈ ಬಾಳು ಈಗ ಮರುಭೂಮಿ
ಮರೆಯಾದರೂ ನೀನು ನನ್ನ
ಎದೆಯ ಗೂಡಿನಲ್ಲಿರುವೆ
,ನನ್ನ ಪ್ರತಿ ಯಶಸ್ಸಿನಲ್ಲೂ ನಿನ್ನ ದಿವ್ಯ ಚೇತನ
ನೀನು ಮರೆಯಾಗಿ ಹೋಗಿಲ್ಲ
ಇಲ್ಲಿಯೇ ಭೂಮಿ ಬೆಳೆ ಮಳೆಯಲ್ಲಿರುವೆ
ಆಗಾಗ ನಿನ್ನ ತುಂತರ ಹನಿ
ನನ್ನ ಕಣ್ಣೀರು ಮರೆಸುವವು ಅಪ್ಪ
ಅಪ್ಪ ಮತ್ತೊಮ್ಮೆ ಬಂದು ಪ್ರೀತಿ ತೋರು
ಬನಶ್ರೀ ಹತ್ತಿ ವಿಜಯಪುರ




ಅತ್ಯುತ್ತಮ ಕವನ
ಭಾವಪೂರ್ಣ ಕವಿತೆ