ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿಂಗಮ್ಮ ಭಾವಿಕಟ್ಟಿ ಅವರಕವಿತೆ “ವಿಚಿತ್ರ ಅಮ್ಮ”

ಕಾವ್ಯ ಸಂಗಾತಿ ನಿಂಗಮ್ಮ ಭಾವಿಕಟ್ಟಿ “ವಿಚಿತ್ರ ಅಮ್ಮ” ತಿಂಗಳೆಚ್ಚರವಿದ್ದುಬೆಳದಿಂಗಳ ಸ್ನಾನಮಾಡುವ ಅಮ್ಮ ನಕ್ಷತ್ರಗಳೊಂದಿಗೆಆಡುವ ಅಮ್ಮ ಒಮ್ಮೊಮ್ಮೆ ಹುಚ್ಚಿ ಎನಿಸಿಬಿಡುತ್ತಾಳೆ  ಒಬ್ಬಳೇ ನಗುತಯಾವುದೋ ಮಂತ್ರಗುನುಗುಣಿಸುತ ಓಡಾಡುವ ಎಲ್ಲಾ ಕಾಯಿಲೆಗೂಮದ್ದು ಹೇಳುವ ಅಮ್ಮಒಮ್ಮೊಮ್ಮೆ ಹುಚ್ಚಿ ಎನಿಸಿಬಿಡುತ್ತಾಳೆ ಎಲ್ಲ ಮಕ್ಕಳನ್ನುಮುಟ್ಟಿ ನಗಿಸುವಪಕ್ಕದ ಮನೆ ಗಿಡಕುನೀರು ಹನಿಸುವ ಅಮ್ಮವ್ಯಕ್ತಿ ವಸ್ತುಗಳ ಭೇದವರಿಯದೆ ಧನ್ಯವಾದ ಹೇಳುವಅಮ್ಮ ಒಮ್ಮೊಮ್ಮೆಹುಚ್ಚಿ ಎನಿಸಿ ಬಿಡುತ್ತಾಳೆ  ಹಸಿವೆಯ ಹಾಸಿಹೊದ್ದು ಎದ್ದು ಬಂದ ಆಕೆಗೆಲ್ಲರ ಹಸಿವೆಯ ಸದ್ದು ಗೊತ್ತು ಮುತ್ತಿನೊಂದಿಗೆ ಪ್ರೀತಿಬಡಿಸುವ  ವಿಚಿತ್ರ ಅಮ್ಮ ಅಲ್ಲ ಆಕೆ ಹುಚ್ಚಿ ಅಲ್ಲಮಕ್ಕಳು ನೆರೆಯವರಿಗೆಲ್ಲ ಪ್ರೀತಿ ಸಹಾಯ ಕರುಣೆಗಳಹುಚ್ಚು ಹಿಡಿಸಿದವಳು ಹೊಳೆಯುವ ಮೊದಲೇ ಹೋಗಿ ಹೊಳೆಯತೊಡಗಿದಳು ನಿಂಗಮ್ಮ ಭಾವಿಕಟ್ಟಿ

ನಿಂಗಮ್ಮ ಭಾವಿಕಟ್ಟಿ ಅವರಕವಿತೆ “ವಿಚಿತ್ರ ಅಮ್ಮ” Read Post »

ನಿಮ್ಮೊಂದಿಗೆ

“೧೯೩೦೦ ರ ಹೆಣ”ಹಿಂದಿ ಕವಿತೆ ಸುದೀರ್‌ ಧಾವಳೆ ಕನ್ನಡಾನುವಾದ ಕಾ.ಹು.ಚಾನ್‌ಪಾಷ

ಅನುವಾದ ಸಂಗಾತಿ ೧೯೩೦೦ ರ ಹೆಣ ಹಿಂದಿ ಮೂಲ : ಸುದೀರ್ ಧಾವಳೆ ಕನ್ನಡಕ್ಕೆ : ಕಾ.ಹು.ಚಾನ್‌ಪಾಷ ಬ್ಯಾಂಕಿನ ಹೊಸ್ತಿಲಿಗೆಇವತ್ತು ಯಾವ ಗ್ರಾಹಕನೂ ಬಂದಿಲ್ಲಬAದಿರುವುದು ಒಂದು ಪ್ರಶ್ನೆಅವನ ಕೈಯಲ್ಲಿ ಪಾಸ್‌ಬುಕ್ ಇಲ್ಲಒಂದು ಅಸ್ಥಿಪಂಜರವಿದೆಅವನು ಅರ್ಜಿ ತುಂಬಲಾರಸಹಿ ಹಾಕಲಾರಆದರೆ ಅವನು ಇತಿಹಾಸದ ಪುಟಗಳಲ್ಲಿಮೂಳೆಗಳಿಂದಲೇ ಒಂದು ಹೆಗ್ಗುರುತು ಮಾಡಿದ್ದಾನೆ ಸಮಾಧಿಯ ಮಣ್ಣು ಇನ್ನು ಹಸಿಯಾಗಿಯೇ ಇದೆತಂಗಿಯ ಕೊನೆಯ ಉಸಿರುನೆಲದಲ್ಲಿ ಸಿಲುಕಿಕೊಂಡಿವೆಯೇನೋ ಎಂಬಂತ್ತಿದೆಆ ಅಣ್ಣ ತನ್ನದೇ ರಕ್ತದ ಮೂಳೆಗಳನ್ನು ಅಗೆಯುತ್ತವ್ಯವಸ್ಥೆಯ ಬಾಗಿಲು ತಟ್ಟುತ್ತಿದ್ದಾನೆ “ಪುರಾವೆ ತನ್ನಿ; ಬದುಕಿರುವಳೋ ಅಥವಾ ಸತ್ತಿರುವಳೋ”ಕಾಗದಗಳ ಕಾಡನಲ್ಲಿ ಕುಳಿತಬಾಯಲ್ಲಿ ನಿಯಮಗಳ ಮೊಳೆ ಹೊಡೆದ ಅಧಿಕಾರಿಗಳು ಹೇಳಿದರು ಹೇಳುತ್ತಾರೆಇದು ವ್ಯವಸ್ಥೆ, ಇದು ನಿಯಮ,ಇದು ಪ್ರಕ್ರಿಯೆ, ಇದು ಕಾನೂನು…ಆದರೆ ಇವತ್ತುಒಬ್ಬ ಬಡ ಆದಿವಾಸಿನಿಮ್ಮ ನಿಯಮಗಳನ್ನುತನ್ನ ತಂಗಿಯ ಮೂಳೆಗಳಲ್ಲಿ ಸುತ್ತಿನಿಮ್ಮ ಮುಂದೆ ಎಸೆದಿದ್ದಾನೆ ನೀವು ಹೇಳುತ್ತೀರಿ“ಖಾತೆದಾರ ಬಂದರೆ ಮಾತ್ರ ಹಣ ಸಿಗುವುದು”ಅವನು ಕೇಳುತ್ತಾನೆ“ಸತ್ತ ನಂತರ ಯಾರು ಬರುತ್ತಾರೆ?”ನಿಮ್ಮ ಬಳಿ ಯಾವ ಉತ್ತರವೂ ಇಲ್ಲಬರೀ ಮೌನಅದೂ ಸಹ ಎಸಿ ಕೋಣೆಯಲ್ಲಿ ಕುಳಿತ ಮೌನ ಎರಡು ತಿಂಗಳ ಕಾಲಅವನು ನಿಮ್ಮ ಬಾಗಿಲಿಗೆ ಮನುಷ್ಯನಾಗಿ ಬರುತ್ತಿದ್ದನೀವು ಅವನನ್ನು ಅಟ್ಟಿಸಿದಿರಿಇವತ್ತು ಅವನು ಅಸ್ಥಿಪಂಜರವಾಗಿ ಬಂದಿದ್ದಾನೆನೀವು ಬೆಚ್ಚಿಬಿದ್ದಿದ್ದೀರಿ ಕೇಳಿಇದು ನೀವೇ ಹುಟ್ಟಿಸಿದ ಭಯಈ ಅಸ್ಥಿಪಂಜರಕೇವಲ ಆ ತಂಗಿಯದ್ದಲ್ಲಎಂದೋ ಸತ್ತ ನಿಮ್ಮ ಮನುಷ್ಯತ್ವದ್ದು ಊರಿನವರು ಹುಚ್ಚ ಎಂದರುಬ್ಯಾಂಕಿನವರು ನಿಯಮ ಹೇಳಿದರುಪೊಲೀಸರು ಪ್ರಕರಣ ದಾಖಲಿಸಿದರುಆದರೆ ಯಾರಿಗೂ ಕಾಣಲಿಲ್ಲಇವನೇ ಎಲ್ಲರಿಗಿಂತ ಬುದ್ಧಿವಂತನೆಂದುಏಕೆಂದರೆ ಇವನು ಅರ್ಥಮಾಡಿಕೊಂಡಿದ್ದಾನೆಈ ದೇಶದಲ್ಲಿಬದುಕಿರುವ ಮನುಷ್ಯನಿಗೆ ಯಾವ ಅಸ್ತಿತ್ವವೂ ಇಲ್ಲಆದರೆ ಸತ್ತ ದೇಹಕ್ಕೆ ಪೋಸ್ಟ್ಮರ‍್ಟಂ ಮಾಡಲಾಗುವುದುಇಲ್ಲಿ ಮನುಷ್ಯರಿಗಿಂತ ಹೆಣಗಳೇ ಅಧಿಕೃತ ದಾಖಲೆಗಳು ಇವನು ಕೇವಲ ಒಬ್ಬ ಅಣ್ಣನಲ್ಲಇಡೀ ಸಮಾಜದ ಹರಿದಹೋದ ನರನಾಡಿಇದರಿಂದ ರಕ್ತವಲ್ಲವ್ಯವಸ್ಥೆಯ ಕೊಳೆತ ವಾಸನೆ ಸೋರುತ್ತಿದೆಸಮಾದಿಯಿಂದ ತೆಗೆದ ಅಸ್ಥಿಪಂಜರಈಗ ಕೇವಲ ತಂಗಿಯದ್ದಾಗಿ ಉಳಿದಿಲ್ಲಅದು ಈ ಪ್ರಜಾಪ್ರಭುತ್ವದಎಂದೋ ಮುರಿದುಹೋದ ಬೆನ್ನೆಲುಬು ಇವತ್ತು ಅವನು ನಿಂತಿದ್ದಾನೆಜನರ ನಡುವೆಹಾಸ್ಯ ಮತ್ತು ಭಯದ ನಡುವೆಒಂದು ಪ್ರಶ್ನೆಯಾಗಿ“ಈಗಲಾದರೂ ನಂಬುವಿರಾ?”ಈ ಅಧಿಕಾರ?ಅದು ತಲೆ ತಗ್ಗಿಸಿ ಫೈಲ್ ತಿರುವುತ್ತಿದೆ…ಯಾಕೆಂದರೆಅದರ ಬಳಿ ಪ್ರತಿ ಸಾವಿನ ದಾಖಲೆಯಿದೆಆದರೆ ಪ್ರತಿ ಅನ್ಯಾಯಗಳದ್ದು ಇಲ್ಲ ಇದು ಕವಿತೆಯಲ್ಲ ಇದೊಂದು ಚಾರ್ಜ್ಶೀಟ್ಇದರಲ್ಲಿ ಆರೋಪಿಗಳು:ನಿಮ್ಮ ವ್ಯವಸ್ಥೆನಿಮ್ಮ ಕಾನೂನುಮತ್ತು ಆ ಇಡೀ ಚೌಕಟ್ಟುಯಾವುದು ಬಡವರಿಗೆ ಹೇಳುತ್ತದೆಯೋ ಅದು“ಮೊದಲು ಸತ್ತಿದ್ದಕ್ಕೆ ಪುರಾವೆ ತನ್ನಿನಂತರ ಬದುಕುವ ಹಕ್ಕು ಸಿಗುತ್ತದೆ” ಸುಧೀರ್ ಧಾವಳೆ : ಸುಧೀರ್ ಧಾವಳೆ ಅವರು ಮಹಾರಾಷ್ಟçದ ಪ್ರಸಿದ್ಧ ಸಾಹಿತಿ, ಸಾಮಾಜಿಕ ಕಾರ್ಯಕರ್ತರು. ‘ವಿದ್ರೋಹಿ’ ಎಂಬ ಮರಾಠಿ ದ್ವೈಮಾಸಿಕ ಪತ್ರಿಕೆಯ ಸಂಪಾದಕರು. ದಲಿತರು ಮತ್ತು ಶೋಷಿತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಇವರು ಸಮಾಜದ ಅಸಮಾನತೆ ಮತ್ತು ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರು. ಇವರ ಕವಿತೆಗಳು ವ್ಯವಸ್ಥೆಯ ವಿರುದ್ಧದ ಪ್ರತಿರೋಧದ ಅಸ್ತ್ರಗಳಾಗಿವೆ. ಹಿಂದಿ ಮೂಲ : ಸುದೀರ್ ಧಾವಳೆ ಕನ್ನಡಕ್ಕೆ : ಕಾ.ಹು.ಚಾನ್‌ಪಾಷ

“೧೯೩೦೦ ರ ಹೆಣ”ಹಿಂದಿ ಕವಿತೆ ಸುದೀರ್‌ ಧಾವಳೆ ಕನ್ನಡಾನುವಾದ ಕಾ.ಹು.ಚಾನ್‌ಪಾಷ Read Post »

ನಿಮ್ಮೊಂದಿಗೆ

“ಮಾನವ ಪ್ರೇಮವನ್ನು ಬಯಸುವ ಕೆಂಪು ಗುಲಾಬಿಯ ಹಾಯಿಕುಗಳು” ಅರುಣಾ ನರೇಂದ್ರ

ಪುಸ್ತಕ ಸಂಗಾತಿ “ಮಾನವ ಪ್ರೇಮವನ್ನು ಬಯಸುವ ಕೆಂಪು ಗುಲಾಬಿಯ ಹಾಯಿಕುಗಳು” ಅರುಣಾ ನರೇಂದ್ರ ಕೃತಿಯ ಹೆಸರು :ಕೆಂಪು ಗುಲಾಬಿಯ ಹಾಯಿಕುಗಳು(ಐದುನೂರಾ ಮೂವತ್ತಾರು ಹಾಯಿಕುಗಳ ಸಂಕಲನ)ಕವಿಯ ಹೆಸರು: ಡಾ.ಗವಿಸಿದ್ದಪ್ಪ ಎಚ್ ಪಾಟೀಲ.ಪ್ರಕಾಶಕರು : ಸಮನ್ವಯ ಪ್ರಕಾಶನ ಕಲಬುರಗಿಪ್ರಥಮ ಮುದ್ರಣ: 2023ಬೆಲೆ: 100₹ ಮಾನವ ಪ್ರೇಮವನ್ನು ಬಯಸುವ ಕೆಂಪು ಗುಲಾಬಿಯ ಹಾಯಿಕುಗಳು ಮೈದುನ ಡಾ. ಗವಿಸಿದ್ದಪ್ಪ ಪಾಟೀಲ ನನ್ನ ಕಣ್ಣ ಮುಂದೆ ಬೆಳೆದ ಹುಡುಗ. ನಾನು 1985 ರಿಂದ 1987ರವರೆಗೆ ಕೊಪ್ಪಳದಲ್ಲಿ ಶಿಕ್ಷಕರ ತರಬೇತಿ (ಟಿ ಸಿ ಎಚ್) ಪಡೆದೆ.ಆ ಅವಧಿಯಲ್ಲಿ ಕೊಪ್ಪಳದ ಎಂ ಎಚ್ ಪಿ ಎಸ್ ಶಾಲೆಗೆ ಪಾಠ ಕೊಡಲು ಹೋಗುತ್ತಿದ್ದಾಗ ಅಲ್ಲಿ ಗವಿ ನಾಲ್ಕನೇ ತರಗತಿ ಓದುತ್ತಿದ್ದ ಪುಟ್ಟ ಹುಡುಗ. ಅದೇನು ಆಕರ್ಷಣೆಯೋ ನನ್ನ ಹಿಂದೆನೇ ಸುತ್ತುತ್ತಿದ್ದ. ಅಚ್ಚುಮೆಚ್ಚಿನ ಶಿಷ್ಯನಾದ.ಆಗ ನಾನು ಇವರ ಅಣ್ಣ ನರೇಂದ್ರ ಪಾಟೀಲ ಅವರನ್ನು ಮದುವೆಯಾಗುತ್ತೇನೆಂದು ನನಗೂ ಗೊತ್ತಿರಲಿಲ್ಲ,ಈ ಪುಟ್ಟ ಪೋರನಿಗೂ ಗೊತ್ತಿರಲಿಲ್ಲ. ಅದು ಕೇವಲ ಋಣಾನುಬಂಧ. ನಾನು ಪಾಟೀಲರ ಮನೆಯ ಸೊಸೆಯಾದೆ.ನೋಡು ನೋಡುತ್ತಿದ್ದಂತೆ ಗವಿಸಿದ್ದಪ್ಪ ಪಾಟೀಲ ಒಂದೊಂದೇ ಮೆಟ್ಟಿಲೇರುತ್ತ ಸಾಹಿತ್ಯದ ಎತ್ತರದ ಶಿಖರವನ್ನೇ ಹತ್ತಿದ್ದಾನೆ ಎಂಬುದು ನನಗೆ ಹೆಮ್ಮೆ ಮತ್ತು ಅಭಿಮಾನ !.ಕಾವ್ಯ, ಆಧುನಿಕ ವಚನ,ಚುಟುಕು, ಶಾಹಿರಿ, ದೋಹೆ,ಗಜಲ್ ಹೀಗೆ ಕಾವ್ಯದ ಹಲವು ಪ್ರಕಾರಗಳಲ್ಲಿ ಕೃಷಿಗೈದಿದ್ದಾನೆ. ಅಲ್ಲದೇ ವಚನ ಸಾಹಿತ್ಯ, ವಿಮರ್ಶೆ,ಲೇಖನ,ಕಥೆ, ಜೀವನ ಚರಿತ್ರೆ, ಸಂಪಾದನೆ ಹೀಗೆ ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾನೆ. ಕೊಪ್ಪಳದ ಹಿರಿಯ ಸಾಹಿತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾನ್ಯ ಎಚ್ಎಸ್ ಪಾಟೀಲರ ಮಗನಾಗಿ ಸಾಹಿತ್ಯ ಮತ್ತು ಸಂಸ್ಕೃತಿಯ ಶ್ರೀಮಂತ ಮನೆತನದ ಕುಡಿಯಾಗಿ ನೀಡಿರುವ ಕೊಡುಗೆ ಅಪಾರ.ಡಾ. ಗವಿಸಿದ್ದಪ್ಪ ಪಾಟೀಲ ಇವರ ಸಂಗಾತಿ ಜಯದೇವಿ ಗಾಯಕವಾಡ ಕೂಡ ಒಳ್ಳೆಯ ಬರಹಗಾರ್ತಿಯಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪುಸ್ತಕ ತಂದಿದ್ದಾರೆ. ಸತಿ-ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವನಿಗೆ ಎನ್ನುವ ಶರಣರ ನುಡಿಯಂತೆ ಸತಿ-ಪತಿಗಳೊಂದಾಗಿ ಸಾಹಿತ್ಯ ಸರಸ್ವತಿಗೆ ಸಲ್ಲಿಸುತ್ತಿರುವ ಸೇವೆ ಅಮೋಘವಾದದು. ನಾನು 2010 ರಲ್ಲಿ “ರಸದ ತೆನಿ ಹೈಕುಗಳು” ಕೃತಿಯನ್ನು ತಂದೆ.ಅದು ಗವಿಯ ಒತ್ತಾಸೆಯೂ ಆಗಿತ್ತು. ಕಲ್ಯಾಣ ಕರ್ನಾಟಕದಲ್ಲಿ ಹಾಯಿಕು ಕೃತಿ ತಂದ ಮೊದಲ ಮಹಿಳೆ ಎಂದು ಗುರುತಿಸಿಕೊಂಡಿದ್ದೇನೆ. ಹಾಯಿಕು ಕಾವ್ಯ ಇದು ಜಪಾನ್ ಮೂಲದ ಸಾಹಿತ್ಯ. ಕೇವಲ ಮೂರು ಸಾಲುಗಳ 17 ಅಕ್ಷರ (syllables) ಗಳನ್ನು ಒಳಗೊಂಡ 5+7+5=17 ಅಕ್ಷರದ ಕ್ರಮಬದ್ಧ ಕಾವ್ಯ. ಇದನ್ನು ಜಪಾನಿನ ತ್ರಿಪದಿ ಎಂದು ಕರೆಯುಯಲಾಗುತ್ತದೆ. ಬಾಶೋ,ಬುಸೋನ, ಆಸ್ಸಾಂ,ಶಿಕಿ ಜಪಾನಿನ ಹಾಯಿಹಗ್ಗದಕು ಕವಿಗಳು. ಭಾಶೋ ಹೇಳುತ್ತಾನೆ “ಯಾರು ಜೀವನದಲ್ಲಿ ಮೂರರಿಂದ ಐದು ಹಾಯಿಕುಗಳನ್ನು ರಚಿಸುತ್ತಾರೋ ಅವರು ಹಾಯಿಕು ಕವಿ, “ಯಾರು 10 ಹಾಯ್ಕುಗಳನ್ನು ರಚಿಸುತ್ತಾರೋ ಅವರು ಮಹಾಕವಿ”ಎಂದಿದ್ದಾನೆ. ಇದರಿಂದ ನಮಗೆ ಗೊತ್ತಾಗುತ್ತದೆ ಹೈಕು‌ ರಚನೆ ಸುಲಭವಲ್ಲ . “ಗಾಗರ್ ಮೆಂ ಸಾಗರ ”  ಎನ್ನುವ ಹಾಗೆ, ಕರಿಯು ಕನ್ನಡಿಯಲ್ಲಿ ಅಡಗಿಕೊಂಡಂತೆ ಹಾಯಿಕುವಿನಲ್ಲಿ ಹಿರಿದಾದ ಅರ್ಥ ಅಡಗಿರುತ್ತದೆ. ಹಿಡಿದರೆ ಹಿಡಿಯಷ್ಟು ಬಿಟ್ಟರೆ ಜಗದ ತುಂಬಾ ಎನ್ನುವಂತೆ ಹಾಯಿಕು ಇಂದು ಜಗದಗಲ ಪಸರಿಸಿದೆ. ಇತ್ತೀಚಿಗೆ 17 ಸಿಲಬಲ್ ಗಳ ನಿಯಮ ಪಾಲಿಸದೆ ಭಾವಕ್ಕೆ ಹೆಚ್ಚು ಮಹತ್ವ ಕೊಟ್ಟು ಅತ್ಯಂತ ಪರಿಣಾಮಕಾರಿಯಾಗಿ, ಅಕ್ಷರ ನಿಯಮಗಳನ್ನು ಮೀರಿ ಒಟ್ಟು ಮೂರು ಸಾಲಿನಲ್ಲಿ ಹೈಕುಗಳನ್ನು ಬರೆಯುತ್ತಿದ್ದಾರೆ. ಆದರೆ ಡಾ. ಗವಿಸಿದ್ದಪ್ಪ ಪಾಟೀಲ 17 ಸಿಲೆಬಲ್ಲಗಳ ಚೌಕಟ್ಟಿನಲ್ಲಿ ಅರ್ಥಗರ್ಭಿತವಾದ ಹಾಯಿಕುಗಳನ್ನು ಬರೆದು ಕನ್ನಡ ಹಾಯಿಕು ಸಾಹಿತ್ಯಕ್ಕೆ ಉತ್ತಮ  ಕೊಡುಗೆಯನ್ನು ನೀಡಿದ್ದಾನೆ. “ಕೆಂಪು ಗುಲಾಬಿಯ ಹಾಯಿಕುಗಳು”  ಕೃತಿಯು ಹೆಸರೇ ಹೇಳುವಂತೆ ಪ್ರೀತಿ- ಪ್ರೇಮ, ಪ್ರಣಯ- ಉತ್ಸಾಹ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಕುರಿತು ತೀವ್ರ ಭಾವಗಳನ್ನು ಪ್ರತಿನಿಧಿಸುವ ಕೃತಿಯಾಗಿದೆ. ಪ್ರೀತಿ ಆದಾಗಪ್ರೇಮಿಗಳ ನಡುವೆಗುಲಾಬಿ ಹೂವು  **   ***   ** ಮುಳ್ಳಿನ ಮೇಲೆಕೆಂಪು ಗುಲಾಬಿ ಹೂವು ನಿಸರ್ಗ ಸ್ವರ್ಗ **   ***   **ಗುಲಾಬಿ ಹೂವುಮುಳ್ಳುಗಳ ನಡುವೆ ಚಂದ್ರೋದಯ ಗುಲಾಬಿ ಪ್ರೀತಿಯ ಸಂಕೇತ. ಎರಡು ಹೃದಯಗಳ ನಡುವೆ ಪ್ರೀತಿ ಮೂಡಿದಾಗ ಆ ಪ್ರೀತಿಯನ್ನು ಇಂದಿನ ಯುವ ಪೀಳಿಗೆ ಗುಲಾಬಿಯನ್ನು ಕೊಡು ಕೊಳ್ಳುವ ಮೂಲಕ ಪ್ರೇಮ ನಿವೇದನೆ ಮಾಡಿಕೊಳ್ಳುವ ಚಿತ್ರಣವನ್ನು ಈ ಹಾಯಿಕುಗಳಲ್ಲಿ ಕಾಣುತ್ತೇವೆ. ಇಂತಹ ಸುಂದರವಾದ ಗುಲಾಬಿ ಮುಳ್ಳಿನ ಮೇಲೆ ಇದ್ದೂ ತನ್ನ ಚೆಲುವಿನಿಂದ ನಿಸರ್ಗವನ್ನು ಸ್ವರ್ಗವಾಗಿಸುತ್ತದೆ. ಇದು ಮುಳ್ಳಿನ ನಡುವೆಯೂ ತನ್ನ ನೋವನ್ನು ಮರೆತು ಹುಣ್ಣಿಮೆಯ ಚಂದ್ರನಂತೆ ನಗುತ್ತಿರುತ್ತದೆ. ಎಂತಹ ಕಷ್ಟದ ಸಮಯದಲ್ಲೂ ನೊಂದುಕೊಳ್ಳದೆ ಸದಾ ನಗುವನ್ನು ಹಂಚಿಕೊಳ್ಳಬೇಕೆಂಬ ಸಂದೇಶವನ್ನು ಈ ಹಾಯಿಕುಗಳು ನೀಡುತ್ತವೆ. ಇಡೀ ಕೃತಿಯಲ್ಲಿ ಬಹುಪಾಲು ಹಾಯಿಕುಗಳು ಶ್ರಮಿಕ ವರ್ಗದವರು, ಶೋಷಿತರು,ಅಸ್ಪೃಶ್ಯರು, ಹಿಂದುಳಿದ ಮತ್ತು ದಲಿತ ವರ್ಗದವರು ಅನುಭವಿಸಿದ ಅನುಭವಿಸುತ್ತಿರುವ ನೋವಿನ ಚಿತ್ರಣವನ್ನು ನೀಡುತ್ತವೆ. ನಿತ್ಯ ದುಡಿಮೆಸುಖವೇ ಇಲ್ಲವೇನೋ ದಲಿತರಿಗೆ ***    ***   *** ಕಲ್ಲಿನ ದಾರಿತುಳಿದ ಅಸ್ಪೃಶ್ಯರುಕಲ್ಲಾಗಿಹರು ***    ***   ***ಎಲ್ಲಿಂದ ಬಂತೊ ಶೋಷಣೆ ಬೆಂದವರ ರಕ್ತ ಹೀರಲು ***   ***   ***“ಮಂಜು ಕಟ್ಟಿದೆಶತಮಾನದ ಬ್ಯಾನಿ ನೋಂದ ಕಣ್ಣಲ್ಲಿ“ ನಿತ್ಯವೂ ಕಲ್ಲು ಮುಳ್ಳುಗಳ ತುಳಿದು ದುಡಿದರೂ ಸುಖ ಕಾಣದ ದಲಿತ ವರ್ಗ ಕ್ಷಣ ಕ್ಷಣಕ್ಕೂ ಶೋಷಣೆಗೆ ಒಳಗಾಗುತ್ತಿದೆ. ಶತ ಶತಮಾನದಿಂದಲೂ ನೋವು, ಅವಮಾನ, ಅಸಡ್ಡೆಗಳಿಂದ ತತ್ತರಿಸಿ ಹೋಗಿರುವ ಈ ಜನರು ಸಹಜವಾಗಿ ಕಲ್ಲಂತೆ ಕಠಿಣ ಆಗುತ್ತಿದ್ದಾರೆ ಎಂದು ಕವಿಯ ಅಭಿಮತ.ಸಮಾನತೆಯ ಸರಿದಾರಿಯ ನಿರೀಕ್ಷೆಯಲ್ಲಿದ್ದವರಿಗೆ ಬುದ್ಧನ ಬೆಳಕು, ಗಾಂಧೀಜಿಯ ತತ್ವ, ಬಸವಾದಿ ಶರಣರ ವಿಚಾರಗಳು ಆತ್ಮವಿಶ್ವಾಸ ಮೂಡಿಸಿವೆ. ಸಂವಿಧಾನಕ್ಕೆಸಾಮಾಜಿಕ ನ್ಯಾಯವ ನೀಡಿದ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ದಲಿತ ವರ್ಗದವರಿಗೆ ಸಾಂವಿಧಾನಿಕವಾಗಿ ಸಾಮಾಜಿಕ ನ್ಯಾಯವನ್ನು ಒದಗಿಸಿ ಕೊಟ್ಟಿದ್ದಾರೆ.  “ಕಪ್ಪು ಜನರನೋವಿನ ಒಡಲಾಳದಬೆಳಕು ಬಾಬಾ” ಹಿಂದುಳಿದ ಜಾತಿ ಜನಾಂಗದ ಜನರ ಒಡಲಾಳದ ನೋವಿಗೆ ಬೆಳಕಾದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರು ಶಿಕ್ಷಣ, ಸಮಾನತೆ, ಸ್ವಾತಂತ್ರ್ಯದ ಬದುಕನ್ನು ನೀಡಿದವರು. ಕರಿಯ ಕಟ್ಟಿದ ಗೋಡೆಯ ಮೇಲೆ ಭಾರತದ ಧ್ವಜ ಹಾರಿತು ಎಂದು ಹೇಳುವಲ್ಲಿ  ಮನದಾಳದ ಕೆಚ್ಚು ಹೊರಹೊಮ್ಮಿದೆ.ಕೇವಲ ದಲಿತರಿಗೆ ಅಷ್ಟೇ ಅಲ್ಲ, ಇಡೀ ಮಾನವ ಕುಲದ ಏಳಿಗೆಗೆ  ಬಾ ಬಾ ಸಾಹೇಬರು ಶ್ರಮಿಸಿದರು. ಮನು ಕುಲಕ್ಕೆಹೊಸ ಭಾಷ್ಯ ಬರೆದಬಾ ಬಾ ಸಾಹೇಬ ***    ***   ***ಮಾನವತೆಯಧ್ವನಿ ಅಂಬೇಡ್ಕರ್ಈ ಸ್ವಾಭಿಮಾನಿ ಎಂದು ಅಂಬೇಡ್ಕರ್ ಅವರ ಮಾನವ ಪ್ರೇಮವನ್ನು ಇವರು ಹೈಕುಗಳಲ್ಲಿ ಹಿಡಿದಿಟ್ಟಿದ್ದಾರೆ. ಜಗಕೆ ಅನ್ನ ನೀಡುವ ರೈತನನ್ನು ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಆದರೆ ರೈತ ಎದುರಿಸುತ್ತಿರುವ ಸಂಕಷ್ಟಗಳು, ದಲ್ಲಾಳಿಗಳ ಶೋಷಣೆ, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಾಲದ ಬಾಧೆ ತಾಳದೆ  ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಬದುಕು ಕವಿ ಮನವನ್ನು ಕಲಕಿದೆ. ಬೆಳೆ ಯಾರಿಗೊ ದುಡಿಮೆಯ ಇನ್ನಾರಿಗೊಈ ದೇಶದಲ್ಲಿ ಎಂದು ನೋಯುವ ಕವಿ  ಕೈಗೆ ಕೆಸರುಆದರೂ ಬರಲಿಲ್ಲಬಾಯಿಗೆ ತುಪ್ಪ ಎಂದು ವಿಷಾದ ವ್ಯಕ್ತಪಡಿಸುತ್ತಾನೆ. ರೈತನ ಶ್ರಮಕ್ಕೆ ಬೆಲೆ ಸಿಗುವುದು ದುರ್ಲಭವಾಗಿರುವ ಪ್ರಚಲಿತ ದಿನಗಳಲ್ಲಿ ನೇಗಿಲ ಯೋಗಿಭಾರತ ಭಾಗ್ಯದಾತ ಕತ್ತು ನೇಣಿಗೆ ಎಂದು ರೈತನ ಸಮಸ್ಯೆ- ಸವಾಲುಗಳ ವಿವಿಧ ಮಗ್ಗಲುಗಳನ್ನು ಇಲ್ಲಿಯ ಹಾಯಿಕುಗಳು ಪರಿಚಯಿಸುತ್ತವೆ.  ‘ಯುವ ಜನ ದೇಶದ ಶಕ್ತಿ’ ಎಂದು ಹೇಳಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಹಲವು ದುಶ್ಚಟಗಳಿಗೆ ಬಲಿಯಾಗಿ, ಮೋಜು ಮಸ್ತಿಗಳಲ್ಲಿ ಕಾಲ ಕಳೆಯುತ್ತಾ ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವವರನ್ನು ಕಂಡು ಕವಿಯ ಮನ ನೊಂದಿದೆ. ದುಡಿದ ದುಡ್ಡುಸಾರಾಯಿ ಅಂಗಡಿಗೆಭವಿಷ್ಯ ಹಾಳು ***   ***    ***ಕುಡಿತ ಚಟಬದುಕಿನಲ್ಲಿ ಬಂದಸುಂಟರಗಾಳಿ ***   ***   ***ದಾರಿ ತಪ್ಪಿದೆಮಗ ಬಾರಿನೊಳಗೆ ಚಿತೆ ಏರಿದ ಎನ್ನುವ ಹಾಯಿಕುಗಳು ಕುಡಿತದ ಚಟಕ್ಕೆ ಒಳಗಾಗಿ ದುಡಿದದ್ದನ್ನೆಲ್ಲಾ ಹಾಳು ಮಾಡಿಕೊಳ್ಳುತ್ತಿರುವವರನ್ನು ನಿತ್ಯವೂ ನಾವು ನೋಡುತ್ತೇವೆ. ಕುಡಿತ ಆರೋಗ್ಯವನ್ನು ಹಾಳು ಮಾಡುತ್ತದೆ. ಕುಟುಂಬದ ನೆಮ್ಮದಿಯನ್ನು ಕೆಡಿಸುತ್ತದೆ. ಅಲ್ಲದೆ ಗೌರವವನ್ನು ಹಾಳು ಮಾಡುತ್ತದೆ. ಇಂಥ ಚಟಗಳಿಂದ ಯುವಕರು ದೂರ ಇರಬೇಕೆಂಬ ಸಂದೇಶವನ್ನು ಇವು ನೀಡುತ್ತವೆ.  ಇವತ್ತಿನ ತಾಂತ್ರಿಕ ಯುಗದಲ್ಲಿ ಮನುಷ್ಯ ತನ್ನ ಸುಖ ಸಂತೋಷಕ್ಕಾಗಿ ಏನೆಲ್ಲ ಸಾಧನಗಳನ್ನು ಕಂಡು ಹಿಡಿದಿದ್ದಾನೆ.ಅದರೆ ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟಿದ ಮೇಲೆ ಸಾವು ಖಚಿತ !.ಹುಟ್ಟು ಸಾವುಗಳ ನಡುವಿನ ಈ ಬದುಕು ಅತ್ಯಂತ ಅಮೂಲ್ಯವಾದದ್ದು. ಬದುಕಿನ ಬಂಡಿ ಸರಾಗವಾಗಿ ಸಾಗಲು ಗಂಡ- ಹೆಂಡತಿ ಅನ್ಯೋನ್ಯವಾಗಿ ಇರಬೇಕು.  ಈ ಜೀವನಕೆದಾಂಪತ್ಯ ಸಾಮರಸ್ಯ ಜೀವನೋತ್ಸಾಹ  ದಾಂಪತ್ಯದಲ್ಲಿ ಸಾಮರಸ್ಯ ಇದ್ದಾಗ ಮಾತ್ರ ಜೀವನದಲ್ಲಿ ಉತ್ಸಾಹ ಸಹಜವಾಗಿ ಮೂಡುತ್ತದೆ. ಇಲ್ಲದಿದ್ದರೆ ಸಂಸಾರ ಎನ್ನುವುದು ಸಾರವನ್ನು ಕಳೆದುಕೊಳ್ಳುತ್ತದೆ.  ಗಂಡ ಹೆಂಡತಿಜೀವನ ಬೇವು- ಬೆಲ್ಲ ಯುಗಾದಿ ಹಬ್ಬ ಗಂಡ ಹೆಂಡತಿ ಒಬ್ಬರನ್ನೊಬ್ಬರು ಅರಿತು ನಡೆದರೆ ಜೀವನ ಬೇವು ಬೆಲ್ಲದಂತೆ. ನಿತ್ಯವೂ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮವನ್ನು ಕಾಣಲು ಸಾಧ್ಯವಾಗುತ್ತದೆ. ಕವಿ ಡಾ. ಗವಿಸಿದ್ದಪ್ಪ ಪಾಟೀಲ ‘ಕೆಂಪು ಗುಲಾಬಿಯ ಹಾಯಿಕುಗಳು’ ಕೃತಿಯಲ್ಲಿ ಹೇಳದೆ ಇರುವ ವಿಷಯಗಳೇ ಇಲ್ಲ. ಸೃಷ್ಟಿಯ ಸೊಬಗಿನಲ್ಲಿ ಓಲಾಡಿದ್ದಾನೆ, ಸೂರ್ಯ ಚಂದ್ರ ನಕ್ಷತ್ರಗಳನ್ನು ಮಾತಾಡಿಸಿದ್ದಾನೆ, ಅಸಮಾನತೆಗೆ ಸಿಡಿದಿದ್ದಾನೆ, ಪ್ರೀತಿ- ಪ್ರೇಮ ಕನವರಿಕೆಯಲ್ಲಿ ಮೈಮನ ಮರೆತಿದ್ದಾನೆ.! ತಾನು ಒಬ್ಬ ಕವಿಯಾಗಿ ಕವಿತೆಯ ಬಗ್ಗೆ ಬರೆಯದಿದ್ದರೆ ಹೇಗೆ ?ಬರಹ ಅಪೂರ್ಣವೆನಿಸುತ್ತದೆ ಅಲ್ಲವೆ? ಅಂತೆಯೇ ಕಾವ್ಯವೆಂದರೆ ಏನು ಎನ್ನುವುದನ್ನು ಬಹಳ ಸೊಗಸಾಗಿ ತಿಳಿಸಿದ್ದಾನೆ.  ಶಬ್ದದೊಂದಿಗೆಕವಿ ಕಾವ್ಯ ತಿಕ್ಕಾಟ ಹೆರಿಗೆ ನೋವು  ಕಾವ್ಯವೆಂದರೆ ಕವಿ ತನ್ನ ಭಾವನೆಗಳನ್ನು ಶಬ್ದದ ಮೂಲಕ ಅಭಿವ್ಯಕ್ತಿಗೊಳಿಸುವುದಾಗಿದೆ. ಭಾವಗಳ ಜೊತೆಗೆ ಶಬ್ದಗಳ ತಿಕ್ಕಾಟ ಇದು ಸಾಮಾನ್ಯವಲ್ಲ. ಅದು ಹೆರಿಗೆ ನೋವಿನಷ್ಟೇ ಗಂಭೀರ ಎಂದು ಕವಿ ಅನುಭವದ ಅಮೃತ ಹಂಚಿಕೊಂಡಿದ್ದಾನೆ.  ಶಬ್ದಾರ್ಥಗಳ ಸಂಯೋಗವೇ ಕಾವ್ಯದ ಬಂಧನ ಕಟ್ಟು ಎಂದು ಕಾವ್ಯವನ್ನು ಅರ್ಥೈಸುತ್ತಾನೆ.  ಅವ್ವನ ಕೌದಿಚಿತ್ತ ಚಿತ್ತಾರದಿಂದಹೊಲಿದ ಕಾವ್ಯ  ಇದಂತೂ ಅದ್ಭುತ ರೂಪಕ! ಚಿತ್ತದಲ್ಲಿ ಹೊಳೆದ ಭಾವಗಳ ಬಣ್ಣ ಬಣ್ಣದ ಬಟ್ಟೆಗಳನ್ನು ಜೋಡಿಸಿ ಅವ್ವ ಹೊಲಿದ ಕೌದಿ ಎಂದು ವೈಶಿಷ್ಟ್ಯಪೂರ್ಣವಾಗಿ ಕಾವ್ಯವನ್ನು ಅರ್ಥೈಸಿದ್ದಾನೆ. ಕವಿ ಡಾ. ಗವಿಸಿದ್ದಪ್ಪ ಪಾಟೀಲ ಸಮಾಜದ ಜನತೆ, ಸಾಮಾಜಿಕ ವ್ಯವಸ್ಥೆಯ ಬಗೆಗೆ ವ್ಯಕ್ತಪಡಿಸುವ ವಿಶೇಷ ಕಾಳಜಿಯನ್ನು ಈ ಕೆಳಗಿನ ಹಾಯಿಕುಗಳಲ್ಲಿ ಕಾಣುತ್ತೇವೆ.  ಮೂಢನಂಬಿಕೆಹೊತ್ತು ಹರಿದ ಧರ್ಮ ನಾಲೆಯ ನೀರು ಜನರಲ್ಲಿ ಆಳವಾಗಿ ಬೇರೂರಿರುವ ಮೂಢ ನಂಬಿಕೆಯು ಧರ್ಮ ಎಂಬ ಕಾಲುವೆಯಲ್ಲಿ ತುಂಬಿ ಹರಿಯುವ ನೀರು ಇದ್ದಂತೆ ಎಂದು ಅಭಿಪ್ರಾಯ ಪಡುತ್ತಾನೆ. ಇಂತಹ ಮೌಢ್ಯತೆಯಿಂದ ಹೊರಗೆ ಬರಬೇಕು ಎಂದೂ ಇಲ್ಲದಿದ್ದರೆ ಬದುಕು ನರಕವಾಗುವ ಭೀತಿಯನ್ನು ಮೌಡ್ಯ ಆಚರಣೆತಂದಿದೆ ಜನರಲ್ಲಿ ಭೀತಿ ನರಕ ಎಂದು ಈ ಮೂಲಕ ಸ್ಪಷ್ಟಪಡಿಸಿದ್ದಾನೆ. ನನ್ನ ಜನರುಹಣೆ ಬರಹ ಎಂದು ತಲೆಕೊಟ್ಟರು  ಬದುಕಿನಲ್ಲಿ ಏನಾದರೂ ಅವಘಡ ಸಂಭವಿಸಿದರೆ, ಯಶಸ್ಸು ಸಿಗದಿದ್ದರೆ ಹಣೆ ಬರಹವನ್ನೇ ಹೊಣೆ ಮಾಡುವದು ಸಹಜ.ಇದು ಮೌಢ್ಯತೆ !.ಇದಕ್ಕೆ ಬದಲಾಗಿ ಎಲ್ಲಿ ತಪ್ಪಿದ್ದೇವೆ , ಯಾವುದೇ ಕಾರ್ಯ ವೈಫಲ್ಯಕ್ಕೆ ನನ್ನೊಳಗಿರುವ ದೌರ್ಬಲ್ಯವೇನು ಎಂಬುದನ್ನು ಅರಿತು ಸುಧಾರಿಸಿಕೊಳ್ಳಬೇಕು. ಅದನ್ನು ಬಿಟ್ಟು ಹಣೆ ಬರಹ ಎಂದು ತಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇಂಥ ಮೌಡ್ಯತೆಯನ್ನು ಬಿಟ್ಟು ವೈಚಾರಿಕ ಮನೋಭಾವವನ್ನು  ಬೆಳೆಸಿಕೊಂಡು ಜಾಗೃತರಾಗುವ ಸದಾಶಯವನ್ನು ಈ ಹಾಯಿಕುಗಳು ತಿಳಿಸುತ್ತವೆ. ಸ್ವಾರ್ಥವೇ ತುಂಬಿಕೊಂಡ ಈ ಭೂಮಿಯ ಮೇಲೆ ಪ್ರೀತಿ ಕರುಣೆ ಮತ್ತು ಸೋದರತೆಯಂತಹ ಮಾನವೀಯ ಗುಣಗಳು ಇಲ್ಲವಾಗಿ ಎಲ್ಲಿ ನೋಡಿದರೂ ದ್ವೇಷ – ಅಸೂಯೆ, ಹೊಡೆದಾಟ- ಬಡಿದಾಟಗಳನ್ನು ಕಂಡು ಕವಿ ಮರುಗುತ್ತಾನೆ. ಮನುಜ ಪಥ ದಾರಿ ಕಳಕೊಂಡಿದೆ ಯಾಕೋ ಸಾಲಾಗಿ ಎಂದು ಚಿಂತಿಸುತ್ತಾನೆ. ಓ ಮನುಷ್ಯರೇಮಾನವತೆಯ ತಂದುಕೊಡಿ ನನಗೆ  ಎಂದು ಹಂಬಲಿಸಿ

“ಮಾನವ ಪ್ರೇಮವನ್ನು ಬಯಸುವ ಕೆಂಪು ಗುಲಾಬಿಯ ಹಾಯಿಕುಗಳು” ಅರುಣಾ ನರೇಂದ್ರ Read Post »

You cannot copy content of this page

Scroll to Top