ಭಾಗ್ಯಶ್ರೀ ಕೋಟಿ ಜಮಖಂಡಿ “ಭರವಸೆಯ ಬೆಳಕಿರಲಿ”
ಕಾವ್ಯ ಸಂಗಾತಿ ಭಾಗ್ಯಶ್ರೀ ಕೋಟಿ ಜಮಖಂಡಿ “ಭರವಸೆಯ ಬೆಳಕಿರಲಿ” ಬಾನ ಅಂಗಳದಿ ಮೋಡಗಳ ನರ್ತನ,ಧರೆಗೆ ಇಳಿಯಲು ಸಜ್ಜಾದ ವರುಣಒಣಗಿದ ಭೂಮಿಗೆ ಜೀವ ತುಂಬುವ ಕ್ಷಣ,ಬರಡಾದ ಬದುಕಿಗೆ ತಂದ ಹೊಸ ಕಿರಣ. ಹನಿ ಹನಿಯು ಮುತ್ತಾಗಿ ಮಣ್ಣ ಸೇರಲಿ,ಸಸ್ಯ ಸಂಕುಲವು ಹಸಿರು ಸೀರೆಯ ಉಡಲಿ.ರೈತನ ಕಣ್ಣಲಿ ಕನಸಿನ ಬೆಳೆ ಅರಳಲಿ, ಹಸಿವು ನೀಗಿ ಸಮೃದ್ಧಿ ಬೆಳಗಲಿ. ಗುಡುಗು ಸಿಡಿಲ ಅಬ್ಬರವಲ್ಲದ ಮಳೆ,ನೊಂದ ಜೀವಗಳ ಕಣ್ಣೀರು ಒರೆಸುವ ಮಳೆ.ಸೋತ ಮನಗಳಿಗೆ ಸಾಂತ್ವನದ ಧಾರೆ,ಜೀವಜಗತ್ತಿಗೆ ಹೊಸ ಚೈತನ್ಯದ ಸಾರೇ. ಸುರಿಸು ಮಳೆಯೇ ಕರುಣೆಯ ಹನಿ,ತೊಳೆಯು ಜಗದಕಲ್ಮಶದ ಮನೆ.ಪ್ರೀತಿ ವಿಶ್ವಾಸದ ಹೊಳೆ ಹರಿಯಲಿ ಎಲ್ಲೆಡೆ,ಭರವಸೆಯ ಬೆಳಕಿರಲಿ ಸಾಗುವ ಹೆಜ್ಜೆಯಲಿ. ಭಾಗ್ಯಶ್ರೀ ಕೋಟಿ ಜಮಖಂಡಿ
ಭಾಗ್ಯಶ್ರೀ ಕೋಟಿ ಜಮಖಂಡಿ “ಭರವಸೆಯ ಬೆಳಕಿರಲಿ” Read Post »





