ಧಾರಾವಾಹಿ ಸಂಗಾತಿ-20 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಭಾಗ- 20*ಜಯದೇವಿತಾಯಿ ಜೀವನ ವೃತ್ತಾಂತ*ಪತಿಯನ್ನು ದಿನರಾತ್ರಿ ಕಾಳಜಿಯಿಂದ ನೋಡಿಕೊಳ್ಳುತ್ತ ಜಯದೇವಿ ತಾಯಿಯವರು ತಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಮರೆತಿದ್ದರು. ತಮ್ಮ ದೇಹದ ನೋವನ್ನು ಕಡೆಗಣಿಸಿದ್ದರು. ಆ ಸಮಯದಲ್ಲಿ ಅವರಿಗೆ ಬೇನೆಯ ಅರಿವು ಆಗಲಿಲ್ಲ…. ನಂತರದ ದಿನಗಳಲ್ಲಿ ಒಳಗಿದ್ದ ನೋವುಗಳು ಒಂದೊಂದಾಗಿ ತಲೆ ಎತ್ತಲು ಶುರುಮಾಡಿದವು.ಆ ನಡುವೆ ಪತಿಯ ಸೇವೆ ಮಾಡುವಾಗ ಮೆಟ್ಟಲು ಏರಲು ಹೋಗಿ ಬಿದ್ದು ಬೆನ್ನಿನ ಎಲುಬಿಗೆ ಗಂಭೀರ ಹಾನಿ ಮಾಡಿತ್ತು. ಅವರು ತಾತ್ಕಾಲಿಕ ಚಿಕಿತ್ಸೆ ಪಡೆದು ಪತಿಗೆ ತನ್ನ ಆರೋಗ್ಯದ ಬಗ್ಗೆ ತಿಳಿಯದ ಹಾಗೆ ದಿನಗಳನ್ನು ಕಳೆಯುತ್ತಿದ್ದರು. ಪತಿಯ ಆರೈಕೆಯೇ ಅವರ ಪ್ರಪಂಚವಾಗಿತ್ತು. ಮೊದಲಿಗೆ ಅದು ಸಾಮಾನ್ಯವಾಗಿ ಕಂಡರೂ, ದಿನದಿಂದ ದಿನಕ್ಕೆ ತೀವ್ರವಾಗತೊಡಗಿತು. ತಲೆ ಸುತ್ತುವುದು, ನಿಶಕ್ತತೆ ಹೆಚ್ಚಾಗುತ್ತಿರುವುದು ಕಂಡುಬಂದಿತು…ದೇಹದಲ್ಲಿ ವಿಚಿತ್ರವಾದ ದುರ್ಬಲತೆ,.. ನಿಂತುಕೊಳ್ಳಲು ಸಾಧ್ಯವಾಗದಷ್ಟು ನೋವು ಕೊಡತೊಡಗಿತು. .. ಕೊನೆಗೆ ಮಕ್ಕಳು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಪರಿಶೀಲಿಸಿದಾಗ, ಬಹಳ ದಿನಗಳಿಂದ ನಿರ್ಲಕ್ಷ್ಯಗೊಂಡ ಆರೋಗ್ಯ ಸಮಸ್ಯೆಗಳು ಗಂಭೀರ ಹಂತಕ್ಕೆ ಬಂದಿವೆ ಎಂದು ತಿಳಿದುಬಂತು.ಮುಂಬೈಯಲ್ಲಿರುವ ದೊಡ್ಡ ಆಸ್ಪತ್ರೆಗೆ ಸೇರಿಸಲಾಯಿತು .ಪರೀಕ್ಷೆಗಳ ನಂತರ ವೈದ್ಯರು ಗಂಭೀರವಾಗಿ ಹೇಳಿದರು…..“ಇದು ತುಂಬಾ ದಿನಗಳಿಂದ ಇದ್ದ ಸಮಸ್ಯೆ. ಈಗ ಆಪರೇಷನ್ ಮಾಡಲೇಬೇಕು. ಆದರೆ…”“ಆದರೆ” ಎಂಬ ಒಂದು ಪದವೇ ಮಕ್ಕಳ ಮನಸ್ಸನ್ನು ನಡುಗಿಸಿತು.ವೈದ್ಯರು ಮುಂದುವರೆದು ಹೇಳಿದರು….“ಆಪರೇಷನ್ ಮಾಡಿದರೂ ಅವರು ಮತ್ತೆ ಸಹಜವಾಗಿ ಓಡಾಡುತ್ತಾರೆ ಎಂಬ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ. ” ದೀರ್ಘಕಾಲದ ನಿರ್ಲಕ್ಷ್ಯ, ಮತ್ತು ಎಲುಬಿನ ಹಾನಿ….ಇವುಗಳ ಕಾರಣದಿಂದ ಫಲಿತಾಂಶ ಅನಿಶ್ಚಿತ.”ಎಂದರು.ಆ ಮಾತು ಕೇಳಿ ಮಕ್ಕಳ ಕಣ್ಣು ನೀರಾಯಿತು. ಆದರೆ ತಾಯಿಯವರು ಮಾತ್ರ ಶಾಂತವಾಗಿದ್ದರು.“ನನಗೆ ಭಯ ಇಲ್ಲ… ನಾನು ನನ್ನ ಜೀವನವನ್ನು ನನ್ನವರಿಗಾಗಿ ಬದುಕಿದ್ದೇನೆ. ಈಗ ಏನಾದರೂ ಆಗಲಿ, ನಾನು ಒಪ್ಪಿಕೊಂಡಿದ್ದೇನೆ…” ಎಂದು ವಿಶ್ವಾಸದಿಂದ ಹೇಳಿದರು.ಆಸ್ಪತ್ರೆಯ ಹಾಸಿಗೆಯಲ್ಲಿ ಇದ್ದಾಗಲೂ ಅವರು ತಮ್ಮ ನೋವನ್ನು ಹೇಳಿಕೊಳ್ಳಲಿಲ್ಲ. ಬದಲಾಗಿ ಮಕ್ಕಳ ಮುಖ ನೋಡುತ್ತಾ,“ನೀವು ಚೆನ್ನಾಗಿರಬೇಕು… ನಾನು ಹುಷಾರಾಗಿ ಬೇಗ ಬರುತ್ತೇನೆ…” ಅನ್ನುವ ಮನೋಬಲದ ಧೈರ್ಯ ತೋರುತ್ತಿದ್ದರು . ಆಪರೇಷನ್ ದಿನ ಬಂದಿತು. ವೈದ್ಯರು ತಮ್ಮ ಶ್ರೇಷ್ಠ ಪ್ರಯತ್ನ ಮಾಡಿದರು.ಐದು ಗಂಟೆಗಳ ಕಾಲ ನಡೆದ ಆ ಶಸ್ತ್ರಚಿಕಿತ್ಸೆ ಕುಟುಂಬದವರಿಗೆ ಯುಗದಷ್ಟು ಉದ್ದವಾಗಿತ್ತು.ಆಪರೇಷನ್ ನಂತರ, ಹಾಸಿಗೆಯಲ್ಲಿದ್ದರೂ ಅವರು ಮಕ್ಕಳಿಗೆ ಆಶೀರ್ವಾದ ಕೊಡುತ್ತಾ,“ನೀವು ಖುಷಿಯಾಗಿ ಇರಿ… ಅದೇ ನನ್ನ ಗೆಲುವು…”ಎಂದು ಹೇಳುತ್ತಿದ್ದರು.ತಾಯಿಯವರಿಗಾದ ಈ ಅನುಭವದಿಂದ ನಮ್ಮೆಲ್ಲರಿಗೂ ಒಂದು ಮಾತನ್ನು ಹೇಳುತ್ತಿದ್ದರು…. “ನಮ್ಮ ಆರೋಗ್ಯವನ್ನು ಕಡೆಗಣಿಸುವ… ತ್ಯಾಗ ಒಂದು ದಿನ ನೋವಿನ ರೂಪದಲ್ಲಿ ಹಿಂದಿರುಗುತ್ತದೆ. ಹೀಗಾಗಿ ದೇಹದ ಆರೋಗ್ಯದತ್ತ ಯಾವಾಗಲೂ ನಾವು ಅಲಕ್ಷಿಸಬಾರದು ದೇಹದಲ್ಲಿ ಸ್ವಲ್ಪಾದರೂ ಏರುಪೇರಾದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಅದರ ಚಿಕಿತ್ಸೆಯನ್ನು ಪಡೆದುಕೊಳ್ಳಲೇಬೇಕು. ದೇವರು ದಯಪಾಲಿಸಿದ ಅತ್ಯ ಅಮೂಲ್ಯವಾದ ನಮ್ಮ ಆತ್ಮ- ನಮ್ಮ ದೇಹದ ಕಾಳಜಿಯನ್ನು ನಾವೇ ತೆಗೆದುಕೊಳ್ಳಲೇ ಬೇಕೆನ್ನುವ ವೈಚಾರಿಕತೆಯಿಂದ ತಿಳಿ ಹೇಳುತ್ತಿದ್ದರು. ಆಪರೇಷನ್ ಆದ ನಂತರದ ದಿನಗಳು….. ತಾಯಿಯವರ ಜೀವನದಲ್ಲಿ ಅತ್ಯಂತ ಕಠಿಣವಾದ ಅಧ್ಯಾಯವಾಗಿತ್ತು. ವೈದ್ಯರು ಸ್ಪಷ್ಟವಾಗಿ ಸೂಚಿಸಿದ್ದರು…“ಇನ್ನೂ ಕೆಲವು ವಾರಗಳು, ಬೋರಲಾಗಿಯೇ (ಹಾಸಿಗೆಯ ಮೇಲೆಯೇ) ಮಲಗಿರಬೇಕು… ಚಲನವಲನ ಬಹಳ ಕಡಿಮೆ ಇರಬೇಕು.”ದಿನವಿಡೀ ಓಡಾಡುತ್ತಿದ್ದ…ಎಲ್ಲರಿಗೂ ಆಧಾರವಾಗಿದ್ದ ತಾಯಿಯವರು ಈಗ ಹಾಸಿಗೆಯ ಮೇಲೆ ಮಲಗಬೇಕಾದ ಪರಿಸ್ಥಿತಿ…ಅದು ದೇಹ- ಮನಸ್ಸಿಗೂ ದೊಡ್ಡ ಪರೀಕ್ಷೆ.ಬೆನ್ನು ನೋವು ಇನ್ನೂ ತೀವ್ರವಾಗಿತ್ತು. ಪ್ರತಿಯೊಂದು ತಿರುಗಾಟವೂ ನೋವಿನ ಅಲೆ ತರಿಸುತ್ತಿತ್ತು. ಆದರೆ ಆ ನೋವನ್ನೂ ಅವರು ತಮ್ಮ ಮುಖದಿ ತೋರಿಸಲಿಲ್ಲ.ಡಾಕ್ಟರ್‌ಗಳು, ನರ್ಸ್‌ಗಳು ಭೇಟಿ ನೀಡಿದಾಗ“ನೋವು ಹೇಗಿದೆ?” ಎಂದು ಕೇಳಿದರೆ,ಅವರು ತುಂಟ ನಗೆಯೊಂದಿಗೆ,“ಚೆನ್ನಾಗಿದೆ… ನಾನು ಬಲವಾಗಿದ್ದೇನೆ…” ಎಂದು ಉತ್ತರಿಸುತ್ತಿದ್ದರು. *ಗಟ್ಟಿಕೊಂಡಿದೆ ಮನ| ಬೆಟ್ಟದ ಎತ್ತರವಾಗಿಪೆಟ್ಟಿಗೆ ಮಣೆಯಾದ ನಿಶ್ಚಲ- ನಿಲ್ಲುವದುಕಟ್ಟು ಕಾವಲು ಇಲ್ಲದಲೆ||* ಎನ್ನುತ ತಾಯಿಯ ಮೊಗದ ನಗು …. ಅವರ ಮನೋಬಲದ ಪ್ರತಿಬಿಂಬವಾಗಿತ್ತು……!! ಒಳಗೆ ಎಷ್ಟೇ ನೋವು ಇದ್ದರೂ, ಹೊರಗೆ ಅವರು ಪ್ರಸನ್ನ ಚಿತ್ತರಾಗಿ ಇರುತ್ತಿದ್ದರು.ಮಕ್ಕಳು ಅವರ ನೋವನ್ನು ಅರಿತುಕೊಳ್ಳುತ್ತಿದ್ದರು. ಕೆಲವೊಮ್ಮೆ ಕಣ್ಣೀರು ತಡೆಯಲಾಗದೆ ಹೊರಬಂದಾಗ, ತಾಯಿಯವರು ಅವರನ್ನು ಸಮಾಧಾನಪಡಿಸುತ್ತಿದ್ದರು..“ನೀವು ಅಳಬೇಡಿ… ನಾನು ಚೆನ್ನಾಗುತ್ತೇನೆ…”ಎನ್ನುವ ಸಕಾರಾತ್ಮಕತೆಯ ಭಾವನೆ ಬಲವೇ ಅವರನ್ನು ಬೇಗನೆ ಚೇತರಗೊಳಿಸಿತು ಅನ್ನುತ್ತಿದ್ದರು. ದಿನಗಳು ಕಳೆದಂತೆ, ವೈದ್ಯರು ಕೂಡ ಆಶ್ಚರ್ಯಪಟ್ಟಿದರು.ಅವರ ಚೇತರಿಕೆಯ ವೇಗ, ಅವರ ಸ್ಥಿತಿಗಿಂತ ಹೆಚ್ಚು ಉತ್ತಮವಾಗಿತ್ತು.“ಇದು ನಮ್ಮ ಚಿಕಿತ್ಸೆಕಿಂತ… ಅವರ ಮನೋಬಲವೇ ಅವರನ್ನು ಗುಣಪಡಿಸಿದೆ,” ಎಂದು ವೈದ್ಯರು ಹೇಳಿದರು.ಹೌದು, ದೇಹದ ಗಾಯಗಳನ್ನು ಔಷಧಿಗಳು ಗುಣಪಡಿಸಿದಂತೆ….. ನಮ್ಮಲ್ಲಿ ಬಲವಾಗಿದ್ದ ಸಕಾರಾತ್ಮಕತೆಯೇ ಅದೇ ನಿಜವಾದ ಚಿಕಿತ್ಸಕ ಎನ್ನುವರು ತಾಯಿಯವರು. *ಬಿದ್ದು ಹೋಗುವ| ದೇಹಕ್ಕೆ ಕಾದಿಡುವುದೆತಕ್ಕೆಸಾಧಿಸಬೇಕು ಅದರಿಂದ- ಮಾಕಾರ್ಯಶೋಧಿಸಬೇಕು ತನ್ನಿರುವ|| ಎನ್ನುವಂತೆ ತಮ್ಮ ಮುಂದಿನ ಕಾರ್ಯಕ್ಕೆ ಅಣೆಯಾಗಲು ಸಿದ್ದರಾದರು. ಸ್ವಲ್ಪ ಸ್ವಲ್ಪವಾಗಿ ಅವರು ಕುಳಿತುಕೊಳ್ಳಲು ಆರಂಭಿಸಿದರು… ನಂತರ ನಿಧಾನವಾಗಿ ಹೆಜ್ಜೆ ಇಡಲು ಪ್ರಯತ್ನಿಸಿದರು. ಪ್ರತಿಯೊಂದು ಹೆಜ್ಜೆಯಲ್ಲೂ ನೋವು ಇದ್ದರೂ, ಅವರ ಮುಖದಲ್ಲಿ ನಗು ಕಡಿಮೆಯಾಗಲಿಲ್ಲ.ಅವರ ಚೇತರಿಕೆ ವೈದ್ಯಕೀಯ ಸಾಧನೆ ಜೊತೆಗೆಅವರ ಅಜೇಯ ಮನೋಬಲದ ಜಯವಾಗಿತ್ತು….!! ದೇಹ ದುರ್ಬಲವಾದರೂ, ಮನಸ್ಸು ಬಲವಾಗಿದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ…. ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟರು ತಾಯಿಯವರು ಅಂತ ವೈದ್ಯರು ಹೊಗಳುತ್ತಿದ್ದರು. *ಎಲೆ ಎಲೆ ಮಾನವ |ಏನಿದೆ ನಿನ್ನ ಕೈಯಲಿಕಾಲನ ಕೈವಾಡ ತಿಳಿದುಕೊ- ಮರ್ತ್ಯದಿಖಾಲಿ ಬಂದು ಖಾಲಿ ಹೋಗುವುದು||* ಅನ್ನುವಂತೆ ನನ್ನ ಕೈಯಲ್ಲಿ ಏನಿದೆ ಎಲ್ಲಾ ಸಿದ್ದರಾಮ ನಡೆಸಿದಂಗೆ …ಅವನ ಆಶೀರ್ವಾದದಿಂದಲೇ ನಾನು ಮತ್ತೆ ಎದ್ದು ಬದುಕಿ ಬಂದೆ ಅಂತ ಹೇಳುತಿದ್ದರು. ಇನ್ನು ಮಾಡುವ ಕೆಲಸ ನೂರಾರು ಇದೆ ಅದಕ್ಕೆ ಸಿದ್ದರಾಮನು ಮತ್ತೆ ನನಗೆ ಕರುಣಿಸಿದನು ಎನ್ನುವರು. ಎಲ್ಲ ನೋವುಗಳಿಗೂ ಗಟ್ಟಿಯಾಗಿ ನಿಂತ ದೇಹವು ಎಲ್ಲದಕ್ಕೂ ಅಣಿಯಾಗಿ ಆರೋಗ್ಯವಂತರಾಗಿ ಸೊಲ್ಲಾಪುರಕ್ಕೆ ಬರುತ್ತಿದ್ದಂತೆ ಅವರಿಗೆ ಇನ್ನೊಂದು ಆಘಾತ ಕಾಯಿದಿತ್ತು. ಬರುವಾಗ ತರಲಿಲ್ಲ| ಬರಿದಾಗಿ ಹೋಗುವೆವೈರಿತನ ಬೆಳೆಸಿ ಎಷ್ಟು ದಿನ- ಬಾಳುವಿಪರರ ಹೃದಯ ಕಮರಿಸಿ || ಎನ್ನುವಂತೆ ಹೃದಯವನ್ನು ಕಮರಿಸಿದ ಗಂಡನ ತಮ್ಮ ಜಯದೇವಪ್ಪ…. ತಾಯಿಯವರ ಮೇಲೆ ಕೋರ್ಟಿನಲ್ಲಿ ಕೇಸು ದಾಖಲೆ ಮಾಡಿದ್ದ. *ದೂಶಿಸುತ ಅನ್ಯರ |ರೋಷ ಹಿಡಿದು ನೀನುದ್ವೇಷ ಮಾಡುವಿ ಏ ಮರಳೇ ಆಸ್ಥಿರ,ಆಯುಷ್ಯ ಪಡೆದು ಬಂದಿರುವೆ ||* ಅನ್ನುವಂತೆ ತಾಯಿಯವರು ಮಾಡಿದ ಮಹಾನ್ ಕಾರ್ಯಗಳಲಿ ಒಂದಾದ ಬಡ್ಡಿ ವ್ಯವಹಾರವನ್ನು ನಿಲ್ಲಿಸಿ, ಜನರಿಂದ ಕಿತ್ತುಕೊಂಡ ಆಸ್ತಿಗಳನ್ನು ತಿರುಗಿ ಕೊಟ್ಟಿದ್ದೇ ಒಂದು ದೊಡ್ಡ ಅಪರಾಧವಾಗಿತ್ತು ಜಗದೇಪ್ಪನಿಗೆ….. ಜಗದೇವಪ್ಪನು ಅಣ್ಣನ ಹೆಸರಿನಲ್ಲಿ ಇರುವ ಆಸ್ತಿಯ ಮೇಲೆ ಕಣ್ಣಿಟ್ಟಿದ್ದವನು…. ತಾಯಿಯವರು ಅಸಹಾಯಕರ ಆಸ್ತಿಯನ್ನು ಹಿಂದಿರುಗಿಸುವ ತ್ಯಾಗವನ್ನು…. ದೌರ್ಬಲ್ಯವೆಂದು ಭಾವಿಸಿದ. “ಅಣ್ಣನ ಮಕ್ಕಳು ಚಿಕ್ಕವರು… ಆಸ್ತಿಯ ಜವಾಬ್ದಾರಿ ನನ್ನದು ಆಗಬೇಕು…” ಎಂಬ ದುರಾಸೆ ಅವನ ಮನಸ್ಸನ್ನು ಆವರಿಸಿತು. ತಾಯಿಯವರು ಎಲ್ಲ ಆಸ್ತಿಯನ್ನು ಜನರಿಗೆ ಹಿಂತಿರುಗಿಸುತ್ತಿರುವುದನ್ನು ನೋಡಿ, ಅವನ ಅಹಂಕಾರಕ್ಕೆ ಹೊಡೆತ ಬಂತು. *ಅಹಂಕಾರ ತಲೆಗೇರಿ| ಮಂಕನಂತೆ ಮಾತಾಡಿಬೆಂಕಿ ಉಡಿಯಲ್ಲಿ ಕಟ್ಟಿದಂತೆ ನೋಡಯ್ಯಬೆಂಕಿ ಆರಿಸುವದೇ ಬಲು ಲೇಸು ||* ಅಹಂಕಾರದ ಬೆಂಕಿಯ ಹುಡಿಯಲ್ಲಿ ಕಟ್ಟಿಕೊಂಡ ಜಗದೇವಪ್ಪನು ಅತ್ತಿಗೆಯು ಇನ್ನೂ ಎಲ್ಲಾ ಆಸ್ತಿಗಳನ್ನು ಹೀಗೆ ದಾನ ಮಾಡಿ ಕರಗಿಸಿ ಬಿಡುವಳು ಅಂತ ದಾವೇ ಮಾಡಿದ.ಆ ಸುದ್ದಿ ಕೇಳಿದ ಕ್ಷಣದಲ್ಲಿ, ತಾಯಿಯವರ ಹೃದಯ ಕ್ಷಣಮಾತ್ರ ಕಲುಕಿತು… ಆದರೆ ಮುಖದಲ್ಲಿ ಅದೇ ಶಾಂತಿ.*ಕಾಲನ ಕೈವಾಡ |ಅಲಗಿನಂತೆ ಕ್ರೂರಬಲ್ಲವರಿಗಿಲ್ಲ ಇಲ್ಲಿ ಸುಖವಿಲ್ಲ- ಪಾಪದಚೆಲ್ಲಾಟಕೆ ತಾಣವಾಗಿದೆ *||ಎನ್ನುವಂತಿದ್ದ ಸನ್ನಿವೇಶವನ್ನು ಎದುರಿಸುತ “ನಾನು ತಪ್ಪೇನೂ ಮಾಡಿಲ್ಲ… ಜನರ ಹಕ್ಕನ್ನು ಅವರಿಗೆ ತಿರುಗಿ ಕೊಟ್ಟಿದ್ದೇನೆ…” ಎಂದು ವಾದಿಸಿದರು ಆ ನಂಬಿಕೆ ಅವರಿಗೆ ಬಲ ನೀಡಿತು *ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾಪಂಜು ಹಿಡಿದು ನಿಜ ತತ್ವ -ಸಾರುವೇ ಕೆಂಜಡೆಯವನ ಕೃಪೆಯಿಂದ ||*ಎಂದು ಎದೆಗುಂದದೆ ಕೋರ್ಟಿಗೆ ಹೋದರು… ಕೋರ್ಟ್‌ನ ವಾತಾವರಣ….ತಾಯಿಯವರು ಮೊದಲ ಬಾರಿಗೆ ಅಲ್ಲಿ ಕಾಲಿಟ್ಟರು.ಒಂದು ಕಡೆ ಜಗದೇವಪ್ಪನ ದುರಾಸೆಯ ಧ್ವನಿ,ಇನ್ನೊಂದು ಕಡೆ ತಾಯಿಯವರ ಸತ್ಯದ ಧರ್ಮ. ಜಗದೇವಪ್ಪ ತನ್ನ ವಾದಗಳನ್ನು ಜೋರಾಗಿ ಮಂಡಿಸುತ್ತಿದ….“ಆಸ್ತಿ ನಮ್ಮ ಕುಟುಂಬದವರದು… ಇವರಿಗೆ ಹಕ್ಕಿಲ್ಲ…ಅದನ್ನು ಬೇಕಾದ ಹಾಗೆ ದಾನವನ್ನು ಮಾಡುತ್ತಿರುವುದಾಗಿಯು… ಹಾಗೆ ತವರು ಮನೆಯವರು ಆಸ್ತಿಯನ್ನು ಲಪಟಾಯಿಸಲು ಕುಳಿತುಕೊಂಡಿದ್ದಾರೆ ಅನ್ನುವ ವಾದ ಮಂಡಿಸಿದ. ತಾಯಿಯವರು ತಲೆಯನ್ನು ತಗ್ಗಿಸದೆ, ಶಾಂತವಾಗಿ ನಿಂತಿದ್ದರು.ಅವರ ಕಣ್ಣುಗಳಲ್ಲಿ ನೋವು ಇದ್ದರೂ, ಅವುಗಳಲಿ ನೈತಿಕತೆಯ ಧೈರ್ಯ ಹೊಳೆಯುತ್ತಿತ್ತು.ಅವರು ಮಾತನಾಡಿದಾಗ, ಮಾತುಗಳು ಮೃದುವಾಗಿ ಅರ್ಥ ಗಂಭೀರವಾಗಿತ್ತು“ನಾವು ಜನರಿಂದ ಅನ್ಯಾಯವಾಗಿ ಪಡೆದಿದ್ದನ್ನು ನಾನು ಹಿಂತಿರುಗಿಸಿದೆ. ಅದರಲ್ಲಿ ತಪ್ಪೇನಿದೆ?”ಕೋರ್ಟ್‌ನಲ್ಲಿದ್ದವರ ಹೃದಯಕೆ ಆ ಮಾತುಗಳು ತಲುಪಿದವು. *ಗೊತ್ತಾಯಿತು ಲೋಕದ| ಗತ್ತುಗಾರಿಕೆಯಲ್ಲಬಿತ್ತುವರು ಮೋಸದ ಬೀಜವೂ ಜನಗಳುಸತ್ತು ಹೋಗುವರು ವಿಷವುಂಡು||*ಎನ್ನುವಂತೆಒಬ್ಬ ತಾಯಿ, ತನ್ನದೇ ಸೌಕರ್ಯವನ್ನು ಬಿಟ್ಟು, ಅನ್ಯಾಯದ ವಿರುದ್ಧ ನಿಂತಿದ್ದಳು…ದೇಹದ ನೋವು, ಆಪರೇಷನ್‌ನ ತೊಂದರೆ ಎಲ್ಲವನ್ನೂ ಮರೆತು, ತಾಯಿಯವರು ಧರ್ಮದ ಪರವಾಗಿ ನಿಂತ ದೃಶ್ಯ,ಎಲ್ಲರ ಮನಸ್ಸನ್ನೂ ಸ್ಪರ್ಶಿಸಿತು.ಜಗದೇವಪ್ಪನ ದುರಾಸೆ ಒಂದು ಕಡೆ,ತಾಯಿಯವರ ಧರ್ಮಬಲ ಇನ್ನೊಂದು ಕಡೆ… ಕೋರ್ಟ್ ಹಾಲ್‌ನಲಿ…ಎಲ್ಲರ ಕಣ್ಣುಗಳು ಒಂದೇ ದಿಕ್ಕಿನಲ್ಲಿ ನೆಟ್ಟಿದ್ದವು…ಅಲ್ಲಿ ಮೊದಲ ಬಾರಿಗೆ ನಿಂತಿದ್ದ ಜಯದೇವಿ ತಾಯಿಯವರ ಮೇಲೆ…ಚಿಕ್ಕ ವಯಸ್ಸಿನ ವಿಧವೆ ಬಿಳಿ ಸೀರೆ ತೊಟ್ಟು, ಕಪ್ಪು ಕೂದಲು,ನೊಸಲ ಮೇಲೆ ಬೆಳ್ಳಿಯ ಕಿರಣಗಳಂತೆ ಹೊಳೆ ಹೊಳೆವ ಮೂರು ಬಿಟ್ಟು ವಿಭೂತಿ ಬೊಟ್ಟು,ಅತ್ಯಂತ ಸೌಮ್ಯ ದೈವಿ ಕಳೆ ಹೊಂದಿದ… ಶಾಂತ ಮನಸ್ಸು ಆ ನೋವನ್ನು ಮೀರಿತ್ತು……ಅವರು ತ್ಯಾಗದ ಪ್ರತಿಮೆಯಂತೆ ನಿಂತಸಂಗಮರಮರಿಯ ಮೂರ್ತಿಯಂತೆ ಕಂಡರು……ನ್ಯಾಯವಾದಿಯು ತಾಯಿಯವರನ್ನು ದೀರ್ಘವಾಗಿ ಒಮ್ಮೆ ನೋಡಿ “ಏನಪ್ಪಾ ನಿನ್ನ ಸಮಸ್ಯೆ???”ಅಂತ ಜಗದೇವಪ್ಪನ ತತ್ತಿರುವಿ ಕೇಳದರು… ಜಗದೇವಪ್ಪ ತನ್ನ ಮಾತನ್ನು ಮಂಡಿಸಿದ.ಜಯದೇವಿ ತಾಯಿಯವರ ಕಣ್ಣು ನಿಧಾನವಾಗಿ ತಿರುಗಿ ಜಗದೇವಪ್ಪನ ಮೇಲೆ ಬಿದ್ದವು…ಆ ಕ್ಷಣ…ತಾಯಿಯ ಕಣ್ಣಲ್ಲಿ ಕೋಪ ಇರಲಿಲ್ಲ…ದ್ವೇಷ ಇರಲಿಲ್ಲ…ಇದ್ದದ್ದು ಮಾತ್ರ ಮಮತೆ…ತಮ್ಮ ಮಗನಂತೆ ನೋಡಿದ ಆ ವ್ಯಕ್ತಿ…ಇಂದು ಕೋರ್ಟ್‌ನಲ್ಲಿ ಎದುರಾಳಿ…!!!ಜಗದೇವಪ್ಪನನ್ನು ನೋಡಿ ಕನಿಕರ ಪಟ್ಟರು. ಜಗದೇವಪ್ಪ ತಲೆತಗ್ಗಿಸಿದ್ದ…ಆ ಕಣ್ಣೋಟವನ್ನು ಎದುರಿಸಲು ಅವನಿಗೆ ಧೈರ್ಯ ಇರಲಿಲ್ಲ… ನ್ಯಾಯವಾದಿಯು ತಿರುಗಿ ತಾಯಿ ಅವರಿಗೆ ಯಾವ ಪ್ರಶ್ನೆಯನ್ನು ಕೇಳದೆ” ಸರಿ ಹಾಗಿದ್ದರೆ ಇವರು ಯಾರು ??”ಅಂತ ಜಗದೇವಪ್ಪನಿಗೆ ಕೇಳಿದರು “ಇವರೇ ನನ್ನ ಅಣ್ಣನ ಹೆಂಡತಿ ಇವರೇ” ಅಂತ ಹೇಳಿದ .”ಆತುರ ಆತುರದಲಿ*ಹಾಗಿದ್ದರೆ ಅಣ್ಣನ ಹೆಂಡತಿ ಎಂದರೆ ತಾಯಿಯ ಸಮಾನ ಹೀಗಾಗಿ ಅವರಿಗೆ ನಿನ್ನ ಆಸ್ತಿಯನ್ನೆಲ್ಲಒಪ್ಪಿಸಿಬಿಡು….. ನಿನ್ನ ಮಕ್ಕಳು ದೊಡ್ಡವರಾದ ಮೇಲೆ ಅವರು ಎಲ್ಲವನ್ನು ನಿನಗೆ ಜೋಪಾನವಾಗಿ ಇಟ್ಟುಕೊಂಡು ಒಪ್ಪಿಸುತ್ತಾರೆ “ಅಂತ ತೀರ್ಪನ್ನು ಕೊಟ್ಟು …..ಮರು ಮಾತನಾಡದೆ ನ್ಯಾಯವಾದಿಗಳು ಅಲ್ಲಿಂದ ಎದ್ದು ಹೊರಟು ಹೋದರು.ಕೋರ್ಟ್‌ನಲಿ ಕ್ಷಣಕಾಲ ಎಲ್ಲರೂ ಬೆರಗಾದರು…ಜಗದೇವಪ್ಪ ನಿಬ್ಬೆರಗಾಗಿ ಮಾತಿಲ್ಲದೆ ನಿಂತುಬಿಟ್ಟ…ಆದರೆ ತಾಯಿಯವರು…ಹಿಂದಿರುಗಿ ನೋಡಲಿಲ್ಲ…ಅವರ ಹೆಜ್ಜೆಗಳು ನಿಧಾನವಾಗಿ ಹೊರಗೆ ನಡೆದವು…ಅದು ಜಯದ ಹೆಜ್ಜೆಗಳಾಗಿದ್ದವು…..“ಸ್ವಾರ್ಥದ ಮೇಲೆ ಮಾನವೀಯತೆಯ ಜಯ”… *ಹೇಸಿ ಈ ಲೌಕಿಕದ| ಆಸೆಯು ಎನಿತಿಲ್ಲಈಶ ಸಿದ್ದರಾಮನ ಚಿಂತನೆ -ನನಗೆಹೊಸ ಬೆಳಕು ನೀಡಿ ಸಲಹುವದು ||* ಲೌಕಿಕದ ಆಸೆಗಳಿಗೆ ಹೇಸಿದ ತಾಯಿಯವರು ಸಿದ್ದರಾಮನ ಚಿಂತೆಯಲ್ಲಿ ಅವರಿಗೆ ಯಾವ ಸೋಲು ಗೆಲುವಿಗೆ ಪ್ರಾಮುಖ್ಯತೆ ಇರುತ್ತಿರಲಿಲ್ಲ…. *ಈ ಸನ್ನಿವೇಶದಲ್ಲಿ ತಾಯಿಯವರು ಸೋಲಲಿಲ್ಲ“ನ್ಯಾಯಕ್ಕೆ ಜೀವ ತುಂಬಿದರು.(ಮುಂದುವರೆಯುವುದು) ಸವಿತಾ ದೇಶಮುಖ