ಎಮ್ಮಾರ್ಕೆ ಅವರ ಗಜಲ್
ಕಾವ್ಯ ಸಂಗಾತಿ ಎಮ್ಮಾರ್ಕೆ ಅವರ ಗಜಲ್ ಇಲ್ಲಿ ಮನುಷ್ಯತ್ವವನ್ನೂ ಮಣ್ಣು ಮಾಡಲಾಗಿದೆ ಮರುಳೇಕರುಣೆ ಕನಿಕರಾದಿಗಳನು ದೂರ ದೂಡಲಾಗಿದೆ ಮರುಳೇ ರಾತ್ರಿಗೆ ಸಿಮೀತವಾದ ಹೇಯಕೃತ್ಯಗಳೀಗ ಹಗಲಿಗಿಳಿದಿವೆಬದುಕಿದ್ದಾಗಲೇ ಚರಮಗೀತೆಯ ಹಾಡಲಾಗಿದೆ ಮರುಳೇ ಬಹುತೇಕರು ಹಡೆದವರ ಕಡೆಗಣಿಸಿ ಬದುಕುವವರೇ ಇಲ್ಲಿಸಂಬಂಧಗಳಿಗೆ ತಣ್ಣಗಿದ್ದೇ ತರ್ಪಣ ಬಿಡಲಾಗಿದೆ ಮರುಳೇ ಒಳಿತಿಗಿಂತ ಕೆಡುಕೇ ಕಿವಿಗೆ ಬೀಳುತಿಹ ಜಾಯಮಾನವಿದುಶಕುನಿಯನ್ನೇ ಮೀರಿಸುವ ದಾಳವ ಹೂಡಲಾಗಿದೆ ಮರುಳೇ ಮಾನವ ಧರ್ಮ ಊನಗೊಂಡ ಶ್ವಾನದಂತೆ ಬೊಗಳುತಿದೆಕಾಲನ ಬೇತಾಳ ಕುಂಬಾರನ ಹೆಗಲ ಏರಲಾಗಿದೆ ಮರುಳೇ ಎಮ್ಮಾರ್ಕೆ
ಎಮ್ಮಾರ್ಕೆ ಅವರ ಗಜಲ್ Read Post »

