ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಶ್ರೇಷ್ಠ ಶಿವಯೋಗ ಸಾಧಕರು ಮಲೆ ಮಹದೇಶ್ವರ ಹನ್ನೆರಡನೆಯ ಶತಮಾನದ ಶರಣರನ್ನು ಸಂತರನ್ನು ಹೊಂದಿರುವ ಕನ್ನಡದ ಈ ನೆಲದಲ್ಲಿ ಏಳು ಬೆಟ್ಟಗಳ ಮಲೆಯ ಮಹದೇಶ್ವರರು ಹುಟ್ಟಿ ಬರುತ್ತಾರೆ. ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ಪವಿತ್ರ ಲಿಂಗಾಯತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ದಕ್ಷಿಣ ತುದಿಯ ಗಡಿ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿದೆ. ಜನಪದ ಕಾವ್ಯಗಳು ಮತ್ತು ಸ್ಥಳ ಪುರಾಣಗಳ ಪ್ರಕಾರ, ಶ್ರೀ ಮಲೆ ಮಹದೇಶ್ವರ ಸ್ವಾಮಿಯ ತಂದೆ ತಾಯಿಗಳ ವಿವರ ತಂದೆ: ಚಂದ್ರಶೇಖರ ಮೂರ್ತಿ (ಕೆಲವು ಕಡೆ ಚಂದ್ರಶೇಖರ ಗುರುಗಳು ಎಂದೂ ಕರೆಯಲಾಗುತ್ತದೆ). ತಾಯಿ: ಉತ್ತರಾಜಮ್ಮ (ಕೆಲವು ಜನಪದ ಕಥೆಗಳ ಪ್ರಕಾರ ಇವರನ್ನು ಸುಗುಣಾದೇವಿ ಎಂದೂ ಗುರುತಿಸಲಾಗುತ್ತದೆ).ಹಿನ್ನೆಲೆ ಮತ್ತು ನಂಬಿಕೆಗಳು: ದೈವಿಕ ಜನನ: ಜನಪದ ಚರಿತ್ರೆಯ ಪ್ರಕಾರ, ಉತ್ತರಾಜಮ್ಮನಿಗೆ ದೀರ್ಘಕಾಲ ಮಕ್ಕಳಾಗದಿದ್ದಾಗ ಅವರು ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಭಕ್ತಿಗೆ ಮೆಚ್ಚಿದ ಶಿವನು ಅವಳ ಕನಸಿನಲ್ಲಿ ಬಂದು ಗಂಡು ಸಂತಾನದ ವರವನ್ನು ನೀಡುತ್ತಾನೆ. ಅದರಂತೆ ಜನಿಸಿದ ಬಾಲಕನೇ ಮುಂದೆ ‘ಮಹದೇಶ್ವರ’ರಾಗಿ ಪ್ರಸಿದ್ಧಿ ಪಡೆದರು ಎಂಬ ಪ್ರತೀತಿ ಇದೆ. *ಅವತಾರ ಪುರುಷ: ಮಹದೇಶ್ವರರು ಯಾವುದೇ ಸಾಮಾನ್ಯ ಮಾನವನಂತೆ ಜನಿಸದೆ, ಲೋಕ ಕಲ್ಯಾಣಕ್ಕಾಗಿ ಭೂಮಿಗೆ ಬಂದ ಶ್ರೇಷ್ಠ ಚಿಂತಕ ಅನುಭವಿ. ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ. ಅವರು ಸಣ್ಣ ವಯಸ್ಸಿನಲ್ಲೇ ಸಂಸಾರ ಮತ್ತು ಲೌಕಿಕ ಜೀವನವನ್ನು ತೊರೆದು ಆಧ್ಯಾತ್ಮಿಕ ಹಾದಿ ಹಿಡಿದರು.ಮಹದೇಶ್ವರ ಸ್ವಾಮಿಯ ಬಾಲ್ಯದ ಪವಾಡಗಳು ಅಥವಾ ಅವರು ಶ್ರೀಶೈಲದಿಂದ ಕರ್ನಾಟಕಕ್ಕೆ ಬಂದ ಇತಿಹಾಸದ ಬಗ್ಗೆ ಪುರಾಣ ಕಥನಗಳ ದಾಖಲೆಗಳಿವೆ. *ಹಿನ್ನೆಲೆ ಮತ್ತು ಸ್ಥಳ* ಪುರಾಣಮಹದೇಶ್ವರ ಸ್ವಾಮಿ: 14-15ನೇ ಶತಮಾನದಲ್ಲಿ ಬಾಳಿ ಬದುಕಿದ ಪವಾಡ ಪುರುಷ ಹಾಗೂ ಶರಣ ಸಂಸ್ಕೃತಿಯ ಸಂತ ಶ್ರೀ ಮಹದೇಶ್ವರರು ಸಾಕ್ಷಾತ್ ಶಿವನ ಅವತಾರ ಎಂದು ಅಲ್ಲಿನ ಜನಪದಿಗರು ನಂಬಿದ್ದಾರೆ. *ತಪೋಭೂಮಿ ಮತ್ತು ಮುಕ್ತಿ:* ಮಹದೇಶ್ವರರು ಈ ಬೆಟ್ಟಗಳಲ್ಲಿ ತಪಸ್ಸು ಆಚರಿಸಿ, ಭಕ್ತರ ಕಷ್ಟಗಳನ್ನು ನಿವಾರಿಸಿ, ಕೊನೆಗೆ ಇಲ್ಲೇ ಲಿಂಗ ರೂಪದಲ್ಲಿ ಐಕ್ಯರಾದರು (ಸಮಾಧಿ ಹೊಂದಿದರು). ಹುಲಿ ವಾಹನ: ಜನಪದ ಕಾವ್ಯಗಳ ಪ್ರಕಾರ, ಬಾಲಯೋಗಿ ಮಹದೇಶ್ವರರು ಕಾಡಿನ ಹುಲಿಯನ್ನೇ ತಮ್ಮ ವಾಹನವಾಗಿಸಿಕೊಂಡು ಬೆಟ್ಟಗಳಲ್ಲಿ ಸಂಚರಿಸುತ್ತಿದ್ದರು.ಶ್ರವಣ ಸಂಹಾರ: ಈ ಭಾಗದಲ್ಲಿ ಜನರಿಗೆ ಹಿಂಸೆ ನೀಡುತ್ತಿದ್ದ ಕ್ರೂರ ರಾಜ ‘ಶ್ರವಣ’ನನ್ನು ಮಹದೇಶ್ವರರು ಸಂಹರಿಸಿ ಜನರನ್ನು ಮುಕ್ತಗೊಳಿಸಿದರು ಎಂಬ ಇತಿಹಾಸವಿದೆ. ಏಳು ಮಲೆಗಳು (ಬೆಟ್ಟಗಳು)ಮಲೆ ಮಹದೇಶ್ವರ ಕ್ಷೇತ್ರವು ಸಮುದ್ರ ಮಟ್ಟದಿಂದ ಸುಮಾರು 3,200 ಅಡಿ ಎತ್ತರದಲ್ಲಿದ್ದು, ದಟ್ಟವಾದ ಅರಣ್ಯದಿಂದ ಆವೃತವಾದ ಏಳು ಬೆಟ್ಟಗಳ ಸಾಲನ್ನು ಒಳಗೊಂಡಿದೆ: ಆನೆಮಲೆ ಜೇನುಮಲೆ ಕಾಡುಮಲೆ ಕಾನುಮಲೆ ಪೊನ್ನಾಚಿಮಲೆ ಪಾವಲಮಲೆ (ಪವಲಮಲೆ) ಪಚ್ಚೆಮಲೆ ಪ್ರಮುಖ ಆಕರ್ಷಣೆಗಳು ಮತ್ತು ವಿಶೇಷತೆಗಳುಲಿಂಗ ರೂಪದ ದರ್ಶನ: ದೇವಸ್ಥಾನದ ಗರ್ಭಗುಡಿಯಲ್ಲಿ ಮಹದೇಶ್ವರರು ಸ್ವಯಂಭೂ ಲಿಂಗ ರೂಪದಲ್ಲಿ ನೆಲೆಸಿದ್ದಾರೆ. ಅಂತರಗಂಗೆ: ಬೆಟ್ಟದ ಸಮೀಪವಿರುವ ಒಂದು ಪವಿತ್ರ ನೀರಿನ ಸೆಲೆ. ಇಲ್ಲಿ ವರ್ಷದ ಯಾವುದೇ ಋತುವಿನಲ್ಲೂ ನೀರು ಬತ್ತುವುದಿಲ್ಲ. ಭಕ್ತರು ಇಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ದೊಡ್ಡ ನಂದಿ ವಿಗ್ರಹ: ದೇವಾಲಯದ ಆವರಣದಲ್ಲಿ ಶಿವನ ವಾಹನವಾದ ನಂದಿಯ ಬೃಹತ್ ಮೂರ್ತಿಯಿದೆ. ಜಾನಪದ ಕಾವ್ಯ: ಮಲೆ ಮಹದೇಶ್ವರ ಕಾವ್ಯ ಅಥವಾ ತಂಬೂರಿ ಶೈಲಿಯ ಗಾಯನವು ಕರ್ನಾಟಕದ ಪ್ರಸಿದ್ಧ ಜಾನಪದ ಪರಂಪರೆಯಾಗಿದೆ. ಭಕ್ತರು ಇಂದಿಗೂ ಕಾಲ್ನಡಿಗೆಯ ಮೂಲಕ ಬೆಟ್ಟ ಹತ್ತುತ್ತಾ ಮಾದಪ್ಪನ ಕಥೆಗಳನ್ನು ಹಾಡುತ್ತಾರೆ. ಕಾಡಿನ ಸೋಲಿಗರು ಮತ್ತು ಇತರೆ ಬುಡಕಟ್ಟಿನ ಜನರಿಗೆ ಲಿಂಗ ಸಂಸ್ಕಾರ ನೀಡಿ ಕಾಯಕ ದಾಸೋಹ ಗುರು ಲಿಂಗ ಜಂಗಮ ತತ್ವಗಳನ್ನು ಪರಿಚಯಿಸಿದ ಸಾವಿಲ್ಲದ ಶ್ರೇಷ್ಠ ಶಿವಯೋಗ ಸಾಧಕರು ಮತ್ತು ಶರಣರು. ಬಸವ ಪರಂಪರೆಯ ಶ್ರೇಷ್ಠ ಚಿಂತಕರ ಬದುಕಿನ ತಿರುಳನ್ನು ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ತಿರುಗಾಡಿ ಬಸವ ತತ್ವ ಅಧ್ಯಯನ ಶಿವಯೋಗ ಸಾಧನೆಯನ್ನು ಅಲ್ಲಿನ ಬುಡಕಟ್ಟು ಮುಂತಾದ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದರು. ________________________’ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ನಾಗರಾಜ್ ಹರಪನಹಳ್ಳಿ ಕವಿತೆ “ಭೂಮಿಗೆ ಆಕಳಿಕೆ ಸಮಯ”
ಕಾವ್ಯ ಸಂಗಾತಿ ನಾಗರಾಜ್ ಹರಪನಹಳ್ಳಿ “ಭೂಮಿಗೆ ಆಕಳಿಕೆ ಸಮಯ” ಸೀರೆ ಸೆರಗ ತಾಗಿದ ಗಾಳಿಪ್ರೇಮದ ನವಿರು ಹೊತ್ತುತಂತುಆಡಿದ ಆಡದೇ ಉಳಿದ ಮಾತು ಮೌನಗಳ ಸಂಕಲನ ಮೋಡಗಳಲ್ಲಿಚಿತ್ರ ಬಿಡಿಸಿತುನೀನಿಡುವ ಪ್ರತಿ ಹೆಜ್ಜೆಯಲಿಕನಸು ಇಣುಕುತ್ತಿದೆ ಗೆಳತಿಮನಸುಗಳ ಅಗಣಿತ ತರಂಗಗಳುಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನೆನ್ನಲಿ ?*** ನಿನ್ನ ದನಿ ಕೇಳದ ಭೂಮಿಗೆಆಕಳಿಕೆ ಸಮಯಅದಕ್ಕೆ ಮಗ್ಗಲು ಬದಲಿಸುತ್ತಿದೆಮುಗಿಲಿಗೆ ದಿಗಿಲು ಬಡಿದಿದೆಎಲ್ಲಿ ಹೋದೆ ?ಗೆಜ್ಜೆ ಸದ್ದಿಗೆ ಅರಳುತ್ತಿದ್ದ ಹೂ ಸಹ ಮೌನವಾಗಿದೆ *** ನಾನು ಸುಳಿದಾಡುವೆ ಒಬ್ಬಳೇ ಇರುವೆ ಎಂದು ಭಾವಿಸಬೇಡಸುಳಿಯುವ ಗಾಳಿಯಲ್ಲಿಎರಡು ನಿಟ್ಟುಸಿರುಗಳಿವೆ ಅವು ಪ್ರೇಮದ ಪಲ್ಲವಿಗಳಾಗಿಬದಲಾಗಿ ಬಿಡಲಿಕಣ್ಣಲ್ಲಿ ನಕ್ಷತ್ರಗಳು ಹಾಡಲಿಕಾಲ್ಗೆಜ್ಜೆಗಳಲ್ಲಿ ಏಳು ಸುತ್ತಿನ ಮಲ್ಲಿಗೆ ಅರಳಲಿ****ರುತುಗಳಿಗೆ ತಕ್ಕಂತೆಬಣ್ಣ ರೂಪ ಪಡೆಯುವ ಭೂಮಿಮನಸ್ಸಿನ ಏರಿಳಿತಕ್ಕೆ ತಕ್ಕಂತೆಬಣ್ಣಗಳ ಸೀರೆ ತೊಡುವ ಆಕೆಎಲ್ಲವೂ ಪ್ರಕೃತಿ ಕಲಿಸಿದ ಪಾಠಕ್ಕೆನಿಬ್ಬೆರಗಾಗುವುದು ಮಾತ್ರ ………**** ನೀನು ನಡೆದರೆಭೂಮಿ ಪಿಸುಗುಡುತ್ತದೆಮಣ್ಣ ಕಣ ಕಣವೂಜೀವಸೆಲೆಯಿಂದ ಪುಟಿದೇಳುತ್ತದೆ ದಾರಿ ಪಕ್ಕದ ಗಿಡ ಮರಗಳುಕಣ್ಣು ಮಿಟುಕಿಸುತ್ತವೆಮುಂಗುರುಳ ಲಾಸ್ಯಕ್ಕೆಗಾಳಿ ರೋಮಾಂಚನಗೊಳ್ಳುತ್ತದೆ ನಾಗರಾಜ್ ಹರಪನಹಳ್ಳಿ
ನಾಗರಾಜ್ ಹರಪನಹಳ್ಳಿ ಕವಿತೆ “ಭೂಮಿಗೆ ಆಕಳಿಕೆ ಸಮಯ” Read Post »

