ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎಮ್ಮಾರ್ಕೆ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ನಾ ನಿನ್ನ ಹಿಂಬಾಲಿಸುತಿರಲು ಹಿಂತಿರುಗಿ ನೋಡಬಾರದೇನೀ ನನ್ನನೇ ಆವರಿಸುತಿರಲು ಒಂಟಿತನವ ದೂಡಬಾರದೇ ಮನೆಯ ದೀಪ ಬೆಳಗುವವಳೇ ಮನದ ತಾಪ ಕಳೆವವಳೇಮನಸೊಳು ಮನೆಯ ಮಾಡಿ ಕನಸಿನಲ್ಲೂ ಕಾಡಬಾರದೇ ಬಾರೆಂದು ಕೂಗುವವಳೇ ಬಾಳ ಜೋಕಾಲಿ ತೂಗುವವಳೇರಾಗ ದ್ವೇಷಗಳ ಮರೆಸುವ ಹಾಡೊಂದನು ಹಾಡಬಾರದೇ ಕಷ್ಟಸುಖದಲಿ ಕೈ ಹಿಡಿವವಳೇ ಜೊತೆಯಾಗಿ ದುಡಿವವಳೇನದಿ ಸಾಗರ ಸೇರುವಂತೆಯೇ ಬಂದೆನ್ನನು ಕೂಡಬಾರದೇ ಐರಾಣಿಯ ಹೊರುವವಳೇ ರಾಣಿಯಾಗಿ ಮೆರೆಯುವಳೇಕಡಿತನ ಕುಂಬಾರನ ಜತೆಗಿರುವ ಆಣೆಯ ಮಾಡಬಾರದೇ ಎಮ್ಮಾರ್ಕೆ

ಎಮ್ಮಾರ್ಕೆ ಗಜಲ್ Read Post »

ಕಾವ್ಯಯಾನ

ನಾಗರಾಜ ಬಿ ನಾಯ್ಕ “ರೆಪ್ಪೆಯಾಚೆಯ ಚಿತ್ರಗಳು…….”

ಕಾವ್ಯ ಸಂಗಾತಿ ನಾಗರಾಜ ಬಿ ನಾಯ್ಕ “ರೆಪ್ಪೆಯಾಚೆಯ ಚಿತ್ರಗಳು…….” ಎರಡು ಕಣ್ಣುಗಳಕಾಂತಿಯಲ್ಲಿ ಹರಡಿದಚಿತ್ರಗಳ ಹುಡುಕುತ್ತಾಸಾಗಿದರೆ ಕಾಣದ ಮಾತಿನ ಮೌನಓರೆನೋಟದ ಬಿಗುಮಾನರೆಪ್ಪೆಯಾಚೆಗಿನ ಕುಡಿನೋಟದೂರದುತ್ತರದ ಮಾತುಗಳಲ್ಲಿ ಅವಿತ ಒಂದು ಮಾತಿನ ಕಥೆಸಾಲುಗಳಲ್ಲಿ ಹುಡುಕಾಡಿಕೊನೆಯಲ್ಲಿ ಸಿಕ್ಕ ಒಂಟಿ ಪದಮುಖದೊಳಗೆ ಒಲವಿನಒರತೆಯ ಚೆಲ್ಲಿ ನಗುವಾದಮೊಗದ ನಲಿವಿನ ಇರುಳುಕತ್ತಲೆಗೆ ಎಸೆದಬೆಳಕಿನ ಹೊಸ ಸಾಲಿನದೀಪದ ಹಣತೆಯ ಸಮಯದಿಟವಾದ ಹಕ್ಕಿ ಗೂಡಿನಸಂವೇದನೆ ಮತ್ತು ಹೊಸತನಎಲ್ಲವೂ ಅಂಕು ಡೊಂಕುದಾರಿಯ ನಿರಂತರಚಲನೆಯ ಪ್ರಯತ್ನರೆಪ್ಪೆಯೊಗಳಗಿನ ಗತದನಡುವೆ ಕಾಣದೇ ಮೌನವಾಗಿಉಳಿವ ಸಣ್ಣ ಇರುವೆಪಯಣದ ಪರಿಚಯಪ್ರಶ್ನೆ ಪರಿವೀಕ್ಷಣೆಯ ಆಚೆದೃಢವಾಗಿ ನಿಂತ ಪುಟ್ಟ ದೋಣಿರೆಪ್ಪೆಯ ಒಳಗೆ ಕುಳಿತಚಿತ್ರಗಳಲ್ಲಿ ಕಾಣದ ಗೆರೆಗಳಕಾಣುವ ಚಿತ್ರಗಳು ಸುಮ್ಮನೇನಮ್ಮದು ಎಂಬಂತೆ……… ನಾಗರಾಜ ಬಿ ನಾಯ್ಕ. 

ನಾಗರಾಜ ಬಿ ನಾಯ್ಕ “ರೆಪ್ಪೆಯಾಚೆಯ ಚಿತ್ರಗಳು…….” Read Post »

ಕಾವ್ಯಯಾನ

ರಾಧಾ ಹನುಮಂತಪ್ಪ ಟಿ ಹರಿಹರ ಅವರ ಕವಿತೆ “ಎ.ಐ. ತಮ್ಮಾ”

ಕಾವ್ಯ ಸಂಗಾತಿ ರಾಧಾ ಹನುಮಂತಪ್ಪ ಟಿ ಹರಿಹರ “ಎ.ಐ. ತಮ್ಮಾ” *ಎಐ ತಮ್ಮ ಎಐ ತಮ್ಮ ನೀನು ಎಲ್ಲಿಂದ ಬಂದೆ ಎಲ್ಲಿಂದ ಬಂದೆ ಹೇಳು ನಿನಗಿಷ್ಟು ಮಾಹಿತಿ ಎಲ್ಲಿಂದ ಬಂತು ಹೇಳು* *ನಿಮಿಷ ಸೆಕೆಂಡ್ ಗಳಲ್ಲಿ ನಮ್ಮಯ ಪ್ರಶ್ನೆಗೆ ಉತ್ತರವ ಹೇಗೆ ಹುಡುಕುವೆಯಾ ತಮ್ಮ ಹೇಗೆ ಹುಡುಕುವೆಯಾ ತಮ್ಮ ಹೇಳು* *ನೆಮ್ಮದಿ ಶಾಂತಿ ಬೇಕು ಎಂದರೂ ಅದಕ್ಕೆ ಪ್ರತಿಯಾಗಿ ಉತ್ತರವ ಕೊಡುವ ನಿನ್ನ ಚಾಣಾಕ್ಷ ಬುದ್ಧಿಗೆ ನಾನು ಸೋತೆನು ತಮ್ಮ ನಾನು ಸೋತೆನು ತಮ್ಮ ನೀ ಎಲ್ಲಿರುವೆ ಹೇಳು* *ಎಲ್ಲ ಕ್ಷೇತ್ರಗಳಲ್ಲೂ ನಿನ್ನದೇ ಹಾವಳಿ ತಮ್ಮ ಈ ಮನುಷ್ಯನೇ ಮಾಡಿದನಂತೆ ನಿನ್ನನು ಇದು ನಿಜವೇ ತಮ್ಮ ಇದು ನಿಜವೇ ತಮ್ಮ ನೀನು ಹೇಳು* *ಎಐ ತಮ್ಮ ನೀನು ಎಲ್ಲಿಂದ ಬಂದೆ ನಿನ್ನಿಂದ ಸಕಲ ಜೀವಿಗಳ ಕುಲಕ್ಕೆ ತೊಂದರೆ ಯಾಗದು ಎಂದು ಹೇಳು ತಮ್ಮ ತೊಂದರೆ ಯಾಗದು ಎಂದು ಹೇಳು ಎಐ ತಮ್ಮ ಹೇಳು* ರಾಧಾ ಹನುಮಂತಪ್ಪ ಟಿ ಹರಿಹರ

ರಾಧಾ ಹನುಮಂತಪ್ಪ ಟಿ ಹರಿಹರ ಅವರ ಕವಿತೆ “ಎ.ಐ. ತಮ್ಮಾ” Read Post »

ಕಾವ್ಯಯಾನ

ಜಿ.ಎಸ್.ಕಲಾವತಿಮಧುಸೂದನ ಅವರ ಕವಿತೆ “ಸಮಾಧಾನ ಸಮಾಧಾನ ಸಮಾಧಾನ”

ಕಾವ್ಯ ಸಂಗಾತಿ ಜಿ.ಎಸ್.ಕಲಾವತಿಮಧುಸೂದನ ಸಮಾಧಾನ ಸಮಾಧಾನ ಸಮಾಧಾನ ಸದಾ ನಿನದೇ ಧ್ಯಾನ..ಎಷ್ಟೆಂದು ಬೇಡಲಿ ನಿನ್ನ ದಾನ..! ಬೇಡಿದಷ್ಟು ನೀಡುತಲೇ ಕಾಯಲು ಹವಣಿಸುವುದೇ ನಿನ್ನ ಸದ್ಗುಣ. ಎಷ್ಟೆಂದು ಪಾಡಿ ಪೊಗಳಲಿ ನಿನ್ನ ಗುಣಗಾನ.. ಗಾನಯಾನದಲಿ ತೇಲುವಲಿ ಯಾರಿಲ್ಲವು ನಿನ್ನ ಸಮಾನ..ಅಗುಳಗುಳ ನುಂಗಲು ಬೇಕು ದಿನದಿನವು ನಿನ್ನ ಅನುಸಂಧಾನ. ಅಣುವಣುವಿಗೂ ಚಣಚಣವು ದಿನದಿನವು ಜಲಜಭವದ ಅವನಿಯೊಳು ಮುಳುಗಿರಲು ಕರಪಿಡಿದೆತ್ತುವೆ ಸಾವಧಾನ.. ನೀನಿರದೇ ಇರಲು ಸಾಧನೆಗೆ ಎಲ್ಲೆಡೆಯು ಮಾನ…ಹರಣ..! ಕುಕೃತ್ಯ ಕುಟಿಲಗಳ ನಿವಾರಿಸಲು ಪ್ರೇರಣ..ನವನವೀನ ನಿತ್ಯ ನೂತನಕೆ ಬೇಕು ಸದಾ ನಿನ್ನ ಕರುಣ..! ನಿನ್ನ ಮರೆತು ನಡೆವ ಪ್ರತಿ ಚಣವು ಪ್ರತಿ ಕಣವು ಜೀವನ್ಮರಣ.. ಬದುಕೇ ಅಶಾಂತಿಯ ರಣಾಂಗಣ…!!ನಿನ್ನ ಮರೆತು ನಡೆಯದಂತೆಬೇಡುವಗೆ ಮಾಣಿಸು ಸದಾ ನಿನ್ನ ಸ್ಮರಣ.. ಸುಂದರ ಸುಮಧುರ ಶಾಂತಿ ನೆಮ್ಮದಿ ಪ್ರೀತಿ ವಾತ್ಸಲ್ಯಗಳ ಬಾಂಧವ್ಯದ ಬದುಕುಗಳ ಸಂಬಾಳಿಸಿ ಉಳಿಸಿ ಬೆಳೆಸಲು ನೀನೇ ಸಾದನ..ದಿನದಿನವೂ ಜೊತೆ ಸಾಗಿ ಹರಸಿ ಹರಿಸು  ನಿನ್ನ ಕರುಣ.. ಕಣಕಣದಲಿ ನೆಲೆಯಾಗಲಿ ಶಾಂತಿಯ ಸದನ..! ಜಿ.ಎಸ್.ಕಲಾವತಿ ಮಧುಸೂದನ

ಜಿ.ಎಸ್.ಕಲಾವತಿಮಧುಸೂದನ ಅವರ ಕವಿತೆ “ಸಮಾಧಾನ ಸಮಾಧಾನ ಸಮಾಧಾನ” Read Post »

You cannot copy content of this page

Scroll to Top