“ಮದುವೆಯಾಗಿ ಒಂದು ವರ್ಷ ಆಯ್ತು, ನಿಮ್ಮಪ್ಪ ನನ್ನ ಮಗನಿಗೆ ಮದುವೆಯಲಿ ಮಾತು ಕೊಟ್ಟಂತೆ ಬೈಕ್ ಕೊಡಲಿಲ್ಲ ಹಾಗೂ ಗದ್ದೆ ಮಾರಿ ಐವತ್ತು ಸಾವಿರ ಕೊಡ್ತೀನಿ ಅಂದಿದ್ದ, ನಾವು ಇಲ್ಲಿಯವರೆಗೆ ಕಾದೆವು,ಇನ್ನೂ ಕಾಯಲಾರೆವು ಜೊತೆಗೆ ಈ ಗರ್ಭ ಒಂದು ಹೊರೆ,ನೀನು ಹಣ, ಬೈಕ್ ತರದಿದ್ದರೆ ನೀನು ನನ್ನ ಮನೆಯಲ್ಲಿರುವದು ಬೇಡ,ಈ ನಿನ್ನ ಗರ್ಭ ಕೂಡ ಉಳಿಸಲ್ಲ ಜೋಕೆ”ಎಂದು ಧನಪಿಶಾಚಿಯಾದ ವಿಮಲಮ್ಮ ಸೊಸೆ ಲಕ್ಷ್ಮಿಯನ್ನು ಹೀಯಾಳಿಸದ ದಿನಗಳಿಲ್ಲ ಅಲ್ಲದೇ ಹಿತ್ತಾಳೆ ಕಿವಿಯ ಮಗನಿಗೂ ಕೂಡ ಪತ್ನಿಯೊಂದಿಗೆ ಮಾತನಾಡದಂತೆ ಕರಾರು,ಸೊಸೆಗೆ ಬೇಡವಾದ ವಸ್ತುಗಳನ್ನಿರಿಸಿದ ಕೋಣೆಯಲ್ಲಿ ಮಲಗಲು ಹೇಳುತ್ತಿದ್ದಳು.ಇದ್ದ ಐದೆಕರೆ ಭೂಮಿಯನ್ನು ಮಾರಿ ಸರ್ಕಾರಿ ಕೆಲಸದ ವರನಾದ  ವೆಂಕಟೇಶನಿಗೆ ನಿಯತ್ತಿನಿಂದ ಬದುಕಿದ ರಾಮಪ್ಪ ಎರಡನೇ ಮದುವೆಯಾಗದೇ ತನ್ನ ಪ್ರೀತಿಯ ಮಗಳಾದ ಕುಸುಮಳನ್ನು ಧಾರೆ ಎರೆದು ಕೊಟ್ಟು, ಇನ್ನೂ ಐವತ್ತುಸಾವಿರ ರೂಪಾಯಿಗಳನ್ನು ಹಾಗೂ ಬೈಕನ್ನು ಕೊಡಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದ. ಕೇವಲ ಹತ್ತನೇ ತರಗತಿ ಓದಿದ ಕುಸುಮಳನ್ನು ಕಾಲೇಜಿಗೆ ಪಟ್ಟಣಕ್ಕೆ ಕಳಿಸಲು ಧೈರ್ಯ ಮಾಡದೇ ಪಕ್ಕದ ಓಣಿಯ ಗಾಯತ್ರಿಯ ಬಳಿ ಮಗಳೇ ಇಚ್ಛೆ ಪಟ್ಟದ್ದಕ್ಕೆ  ಬಟ್ಟೆ ಹೊಲಿಯುವದನ್ನು ಕಲಿಯಲು ಕಳಿಸುತ್ತಿದ್ದ.ಚನ್ನಾಗಿ ಬಟ್ಟೆ ಹೊಲಿಯಲು ಕಲಿತಿದ್ದ ಕುಸುಮಳಿಗೆ ವಿಶ್ರಾಂತಿ ಇಲ್ಲದೆ ದುಡಿಯುವಂತೆ ಪಕ್ಕದ ಹಳ್ಳಿಯ ಜನರ ಬಟ್ಟೆಗಳು ಕೂಡ ಬರತೊಡಗಿದಾಗ ಮನೆಯೆ ಒಂದು ಪುಟ್ಟ ಅಂಗಡಿಯಂತೆ ಕಂಡಿತು.ಇತ್ತ ಮಗನಿಗಾಗಿ ಸಂಬಳ ತರುವ ಸೊಸೆ ಸಿಗದಾದಾಗ ನುಗ್ಗೆಹಳ್ಳಿಯ ಶಾಸ್ತ್ರಿಯವರ ಮಧ್ಯಸ್ಥಿಕೆಯಿಂದ ಈ ಸಂಬಂಧ ಕುದುರಿತಾದರೂ ಯಾವುದರಲ್ಲೂ ಕಡಿಮೆಯಿರದ ಸೌಂದರ್ಯದ ಖನಿಯಂತಿರುವ ಕುಸುಮಳಿಗೆ ದೂರದ ಪಟ್ಟಣಗಳಿಂದ ಬಹಳ ಸಂಬಂಧಗಳು ಬಂದರೂ ತನ್ನ ತಂದೆಗೆ ವೃದ್ಧಾಪ್ಯದಲ್ಲಿ ನೆರವಾಗುವ ಉದ್ದೇಶದಿಂದ ಅವಳು ಒಪ್ಪದಾದಾಗ ಕೇವಲ ಹತ್ತು ಕಿಲೋಮೀಟರ ದೂರವಿದ್ದ ಈ ಸಂಬಂಧವನ್ನು ಕೂಡ ನಿರಾಕರಿಸಿದಾಗ ತಾಯಿ ಇಲ್ಲದ ತಬ್ಬಲಿ ಒಳ್ಳೆಯ ಮನೆ ಸೇರಲೆಂದು ಕೂಡಿಸಿಟ್ಟ ಹಣದೊಂದಿಗೆ ಅದ್ದೂರಿ ಮದುವೆಮಾಡಿಕೊಟ್ಟಿದ್ದ ರಾಮಪ್ಪ ಉಳಿದ ಹಣ ಹೊಂದಿಸಲು ಪರದಾಡುತ್ತಿದ್ದ ಸದಾ ಕೊರಗಿನಲ್ಲಿ ತನ್ನಿಂದ ಹಣ  ಕೊಡಲಾಗದಿದ್ದರೆ ತನ್ನ ಮಗಳ ಗತಿಯನ್ನು ನೆನೆದು ಸರಿಯಾಗಿ ಊಟ,ನಿದ್ದೆ ಮಾಡದೇ ತಲೆ ತಿರುಗಿ ರಸ್ತೆ ಮೇಲೆಬಿದ್ದಾಗ ಲಾರಿಯ ಬಾಯಿಗೆ ಸಿಕ್ಕು ಇಹ ಲೋಕ ತ್ಯಜಿಸಿದ.ಈ ಸುದ್ಧಿ ಕೇಳಿ ಸದಾ ಮನೆಗೆಲಸ ಹೊಲಿಗೆಕೆಲಸ ಮಾಡುತ್ತಿದ್ದ ಕುಸುಮ ತಂದೆಯ ಸಾವಿಗೆ ಕಾರಣವಾದ  ವರದಕ್ಷಿಣೆ,ಬೈಕ್ ಎಂದರಿಯಲು ಸಮಯ ಬೇಕಾಗಲಿಲ್ಲ.”ಕಣ್ಣರಿಯದಿದ್ದರೂ ಕರುಳರಿಯುತ್ತದೆ”ಎಂಬ ಮಾತಂತೆ ಗಂಡನ ಮನೆ ತೊರೆದು ಗಂಡನ ಮನೆಯವರು ಹೋಗೆನ್ನುವ ಮೊದಲೆ ದೃಢನಿಶ್ಚಯ ಮಾಡಿ ತವರು ಸೇರಿ ಗಂಡು ಮಗನಂತೆ ಎಲ್ಲ ಕ್ರಿಯಾಕರ್ಮಗಳನ್ನು ಮುಗಿಸಿ ಮೊದಲಿನಂತೆ ಬಟ್ಟೆ ಹೊಲಿಯುತ್ತ ಸ್ವಾವಲಂಬಿಯಾದಳು.ಅಕ್ಕಪಕ್ಕದವರು ಅವಳನ್ನು ಪ್ರೀತಿಯಿಂದ ನೋಡಿಕೊಂಡರು ಹೆಣ್ಣು ಮಗುವಿನ ತಾಯಿಯಾಗಿ ಮಗುವಿನ ಪಾಲನೆಯೊಂದಿಗೆ ತನ್ನ ಜೀವನಕ್ಕೆ ಆಧಾರವಾದ ಹೊಲಿಗೆಯನ್ನು ಶ್ರದ್ಧೆಯಿಂದ ಮಾಡಿ ಇಂದು ಅದೇ ಹಳ್ಳಿಯ ಸ್ತ್ರೀ ಶಕ್ತಿ ಸಂಘದಿಂದ ಸಾಲ ಪಡೆದು  ಇನ್ನೊಂದೆರಡು ಹೊಲಿಗೆಯಂತೊರ ಕೊಡಿಸಿ ತನ್ನಂತೆ ನೊಂದವರಿಗೆ ಕರುಣಾಮಯಿಯಾಗಿದ್ದಾಳೆ. ಮನೆಯಲ್ಲಿ” ಹೆಣ್ಣು ಹುಟ್ಟಿತು ಎಂದರೆ ಹುಣ್ಣು ಹುಟ್ಟಿತು” ಎಂಬಂತೆ ನಮ್ಮ ಪುರುಷಪ್ರಧಾನ ಸಮಾಜ ನೋಡುತ್ತದೆ.ವರದಕ್ಷಿಣೆ ಕೊಡುವದು ತೆಗೆದುಕೊಳ್ಳುವದು ಅಪರಾಧವೆಂದು ಗೊತ್ತಿದ್ದರೂ ತಮ್ಮ ಮಗನ ಪಾಲನೆ ,ಶಿಕ್ಷಣದ ಮೊತ್ತವನ್ನು ಬಡ್ಡಿ ಸಮೇತ ವಸೂಲಿಮಾಡುವ ಗಂಡಿನ ಮನೆಯವರ ಹುನ್ನಾರ ತಮ್ಮ ಮಗಳು ಸುಖವಾಗಿದ್ದರೆ ಅಷ್ಟೇ ಸಾಕು ಎನ್ನುವ ಹೆಣ್ಣು ಹೆತ್ತವರ ಕನಸು ಬೆವರು ಸುರಿಸಿ ಕೂಡಿಟ್ಟ ಹಣವನ್ನು ತಮ್ಮ ಮಗಳ ಸುಖಕ್ಕಾಗಿ ಖರ್ಚು ಮಾಡುವ ಪದ್ಧತಿ ಮುಂದುವರೆಯುತ್ತಲೇ ಇದೆ. ವರದಕ್ಷಿಣೆ ಕಿರುಕುಳ ವೈದ್ಯೆಯ ಆತ್ಣಹತ್ಯೆ,ವರದಕ್ಷಿಣೆ ಕಿರುಕುಳ ಟೆಕ್ಕಿಯ ಸಾವು ಇಂತಹ ಪ್ರಸ್ತುತ ನೈಜ ದುರಂತಗಳ ಸುದ್ಧಿಯನ್ನು ಓದಿದಾಗ ಇಷ್ಟೆಲ್ಲ ಉನ್ನತ ವಿದ್ಯಾಭ್ಯಾಸ ಪಡೆದ ಈ ವೈದ್ಯೆ ಯಾಕೆ ಸಾಯಬೇಕು.ಕಷ್ಟಪಟ್ಟು ತಂದೆ ತಾಯಿಯ ಶ್ರಮ ತನ್ನ ಆಸೆಯಂತೆ ವೈದ್ಯಳಾದ ಸಾಧನೆ ಕನಸು ಇಂತಹ  ಕಮರಿಹೋಯಿತೆ? ಇಷ್ಟೆಲ್ಲ ಶಿಕ್ಷಣ ಪಡೆದ ಪತ್ನಿಯನ್ನು ವರದಕ್ಷಿಣೆಗೆ ಸತಾಯಿಸುವ ಸಾಕ್ಷರ ರಾಕ್ಷಸರಿಗೆ ಏನೆನ್ನಬೇಕು.ಜೀವನದ ಎಂತಹ ಪ್ರಸಂಗದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು.ತನಗೆ ಸರಿಬರದಿದ್ದರೆ ಬೇಡ ವಿಚ್ಛೇದನ ಪಡೆದು ಹೆತ್ತವರೊಂದಿಗೆ ತನ್ನ ಕನಸಿನ ವೃತ್ತಿಯೊಂದಿಗೆ ಜೀವನ ನಡೆಸಬಹುದಿತ್ತಲ್ಲವೇ?ಎಂದು ಕ್ಷಣ ಕೂಡ  ವಿಚಾರ ಮಾಡದೇ ದುಡುಕಿ ಆತ್ಮಹತ್ಯೆಗೆ ಶರಣಾಗುವದು ಸಮಂಜಸವೇ?ಇಲ್ಲ ಕಷ್ಟ ಪಟ್ಟು ಶಿಕ್ಷಣ ಪಡೆದು ಉದ್ಯೋಗ ಸೇರಿ ಸಾವಿನಲ್ಲಿ ಸಾರ್ಥಕ ಪಡೆಯುವದು ತರವೇ?ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವ ಉದ್ದೇಶ ಸ್ವಾಭಿಮಾನದ ಬದುಕು ಒಂದು ವೇಳೆ ಮದುವೆಯಾದ ಮೇಲೆ ಪತಿಯ ಕಿರುಕುಳ ಅತಿಯಾದರೆ ಆತ್ಮಹತ್ಯೆಗೆ ಶರಣಾಗದೇ ತನ್ನ ಕಾಲ ಮೇಲೆ ತಾನು ನಿಂತು ತನ್ನ ಜೀವನದ ನಿರ್ಧಾರ ಕೈಗೊಳ್ಳಲು ಶಕ್ತಳಾಗಲೆಂದು.
ವರದಕ್ಷಿಣೆ ನಿಷೇಧ ಕಾಯ್ದೆ1961ರ ಸೆಕ್ಷನ್ 3ರ (ತಿದ್ದುಪಡಿ 1986)ಪ್ರಕಾರ ವರದಕ್ಷಿಣೆ ನೀಡುವುದನ್ನು ಹಾಗೂ ತೆಗೆದುಕೊಳ್ಳುವದನ್ನು ನಿಷೇಧಿಸಲಾಗಿದೆ.ಹೀಗೆ ವರದಕ್ಷಿಣೆ ಸಮಸ್ಯೆಯು ಬಹುದೊಡ್ಡ ಸಾಮಾಜಿಕ ಹಾಗೂ ಆರೋಗ್ಯದ ಸಮಸ್ಯೆಯಾಗಿದೆ.

ನ್ಯಾಶನಲ್ ಕ್ರೈಮ್ ರೆಕಾರ್ಡ್ಸ ಬ್ಯೂರೋ ಅಂಕಿ ಅಂಶಗಳ ಪ್ರಕಾರ,20120ರಲ್ಲಿ ವರದಕ್ಷಿಣೆ ಅಪರಾಧಗಳಿಗೆ ಸಂಬಂಧಿಸಿದಂತೆ 47,951ಮಹಿಳೆಯರು ಸೇರಿದಂತೆ ಸುಮಾರು 2,00,000ಜನರನ್ನು ಬಂಧಿಸಲಾಯಿತು.ಆದರೆ ಕೇವಲ15% ಆರೋಪಿಗಳಿಗೆ ಮಾತ್ರ ಶಿಕ್ಷೆ ವಿಧಿಸಲಾಯಿತು.ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ 2005ರಲ್ಲಿ ಕಾನೂನುರಕ್ಷಣೆಯ ಮತ್ತೊಂದು ಅವಕಾಶವನ್ನು ಕಲ್ಪಿಸಿಕೊಡಲಾಯಿತು.
ಮಹಿಳೆಯಲ ಕಾನೂನು ಹೋರಾಟಕ್ಕೂ ಕೂಡ ಕೆಲವೊಮ್ಮೆ ಆರ್ಥಿಕ ಸಮಸ್ಯೆ ಅಡ್ಡಿಯಾಗುತ್ತದೆ.

ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂಬ ಹೆಗ್ಗಳಿಕೆ ನಮ್ಮ ಮಹಿಳೆಯರಿಗೆ ಎಂದೆಂದೂ ಇದೆ.ಹೀಗಿರುವಾಗ ತಮ್ಮ ಜೀವವನ್ನು  ಬಲಿನೀಡದೆ ತನ್ನ ನಂಬಿದ ಜೀವಗಳಿಗಾಗಿ ಬದುಕುವ ಛಾತಿ ಸದಾ ಇರಲಿ. ನೈತಿಕತೆರಲಿ ಸ್ವಾಭಿಮಾನದ ಆತ್ಮಸ್ಥೈರ್ಯದ ಬದುಕಿರಲು ಜೀವನವದು ಧನ್ಯ ಸಮಾಜದಲಿ ಮಾನ್ಯವಾಗುವಲ್ಲಿ ಸಂದೇಹವಿಲ್ಲ 


Leave a Reply

Back To Top