ಹುಟ್ಟಿದುದು ಸಾಯಲೇಬೇಕು. ಏಕೆಂದರೆ ಅದು ಹುಟ್ಟಿದದು ಸಾಯುವದಕ್ಕಾಗಿ. ಸಾಯವದುದು ಹುಟ್ಟುವುದೇ ಇಲ್ಲ. ಹಾಗಾಗಿ “ಹುಟ್ಟು ಸಾವಿನ ಗುಟ್ಟು”
 ಆದರೆ ಸಾಯುವುದಕ್ಕೂ ಮುನ್ನ ಹುಟ್ಟಿದ ಮೇಲೆ, ಗುರಿ ಉದ್ದೇಶ, ಸಾಧನೆಗಳ ಏಣಿ ಏರಿ ನಿಲ್ಲಬೇಕು. ಆಗಲೇ ಸಾವು ಮತ್ತು ಬದುಕು ಸಾರ್ಥಕ ಗೊಳ್ಳುತ್ತವೆ.  ಇದಿಲ್ಲದೆ ಹುಟ್ಟು ಕೇವಲ ಸಾವನ್ನರಸುತ್ತಾ ನಡೆದರೆ……

ಪತಂಗದ ವಿಚಾರ ನಮಗೆ ಗೊತ್ತಿದೆ. ಅದು ತಾನು ಬೆಂಕಿ ತಾಗಿ ಸಾಯುತ್ತೇನೆ ಎನ್ನುವ ಸಂಗತಿಯನ್ನೇ ಗಟ್ಟಿ ಮಾಡಿಕೊಂಡು ಸಾವನ್ನು ತಲುಪಿ ಬಿಡುವ ಶತ ಪ್ರಯತ್ನದಲ್ಲಿ ಕೊನೆಗೂ ಗತಿಗಾಣುತ್ತದೆ

.ಸಾವು ಪ್ರತಿ ಸೃಷ್ಟಿಗೆ ಅನಿವಾರ್ಯವಾದರೂ ಹುಟ್ಟು ಸಾವನ್ನೇ ಕಟ್ಟಿಕೊಳ್ಳುವುದು ವಿಪರೀತ ಅಪರೂಪವೆನಿಸುತ್ತದೆ.
ಹುಟ್ಟು ಅದುವೇ ಬೇಕಾಗಿ ಸಾವು ಬೇಡವೆನಿಸುವ ಜೀವ ಸಂದರ್ಭಕ್ಕೆ ಅದೆಂತದ್ದೋಪರಿಯಲ್ಲಿ ಜೀವನ ಅಸಂಗತ ವೈರುಧ್ಯ ಪಡೆಯುತ್ತದೆ ಪತಂಗ………

ಇರಲಿ,ಅದರ” ಸಾಯಿಕತೆ” ಪ್ರಾರಂಭಿಸಿದ್ದೆ ಚಿಟ್ಟೆ ಅಥವಾ ಪತಂಗವು ಒಂದು “ ಇರುಳು ವೈರಿ “ ಅಥವಾ “ ಕಿರಣ ಮೋಹಿ”  ಅದಕ್ಕೆ ಬೆಳಕೊಂದೇ ಜೀವನ ಅಥವಾ ಬೆಳಕೇ ಜೀವನ. ಬೆಳಕಿನ ಸುತ್ತ ಒಂದು ನಿರ್ದಿಷ್ಟ ಅಂತರದಲ್ಲಿ ಪೇರಿ ಹಾಕುವುದು ಅದರ ವಿಚಿತ್ರ ಪ್ರವೃತ್ತಿ. ಈ ಗೀಳಿನಿಂದ ತಪ್ಪಿಸಿಕೊಳ್ಳುವ ಹಣೆಬರಹ ಮಾತ್ರ ಅದಕ್ಕಿಲ್ಲದಿರುವುದು ದುರದೃಷ್ಟಕರ.

ಚಕ್ಕುಲಿ ಆಕಾರದಲ್ಲಿ ಬಿಟ್ಟುಬಿಡದೆ ಬೆಳಕನ್ನು ಸುತ್ತುವರೆಯುವ ಅದು ಸುತ್ತುವ ಕಕ್ಷೆ ದೂರವಾದಂತೆ ಪುನಃ ಚಕ್ರಾಕಾರದ ಪ್ರಾರಂಭ ಬಿಂದುವಿಗೆ ಆಕರ್ಷಣೆಗೊಂಡು, ಬಂದು ಪೇರಿ ಹಾಕುತ್ತದೆ.
 ಇತ್ತ ಹೊರಬರದ ಇಂಥ ವಿಚಿತ್ರ ಸುಳಿಗೆ ಸಿಕ್ಕಿ ಬೀಳುವ ಆ ಚೆಟ್ಟಿ ಅನೇಕ ವೃತ್ತಗಳನ್ನು ಪುನರಾವರ್ತಿಸುವಾಗ  ಬೆಂಕಿಗೆ ತಗಲಿ ಕೊನೆಗೊಮ್ಮೆ ಸುಟ್ಟು ಬೀಳುತ್ತದೆ…..

 ಹೀಗೆ ಜನ್ಮಾಂತರದ ಅದಾವ ಪಾಪದ ಹಂತದಲ್ಲಿ ಇರುತ್ತದೆಯೋ ಏನೋ, ಪತಂಗದ ಜೀವನ ಹೋರಾಟವು “ಸಾವಿನ ಗುರಿ” ಯೇ ಆಗಿರುತ್ತದೆ,!!!


Leave a Reply

Back To Top