ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.
ಸುಳಿದು ಬೀಸುವ ವಾಯು ನಿಮ್ಮ ದಾನ.
ನಿಮ್ಮ ದಾನವನುಂಡು ಅನ್ಯರ ಹೊಗಳುವ,
ಕುನ್ನಿಗಳನೇನೆಂಬೆ, ರಾಮನಾಥ.

ಶರಣ ಜೇಡರ ದಾಸಿಮಯ್ಯ

[ನಿಸರ್ಗ ಶಕ್ತಿ, ದೈವ ಜ್ಯೋತಿ ಚೈತನ್ಯದ ಬೆಳಕಿಗೆ ಪರದೆ ಕಟ್ಟಿ
ಕೆಲ ಪಟ್ಟ ಭದ್ರರು,ಸಮಾಜದ ಶೋಷಣೆಗೆ ಮಾರ್ಗ ಮಾಡಿಕೊಂಡಿದ್ದರು.

ಇಂತಹ ಸಿರಿಗರ ಹೊಡೆದ ಶ್ರೀಮಂತರ ದರ್ಪ ದುಷ್ಟತನಗಳು, ನಿರಂತರ ಶೋಷಣೆ ಮಾಡುತ್ತ ಬಂದುದರ ಇತಿಹಾಸ ಬಲು ದೀರ್ಘವಾದದ್ದು.
ಇಂತಹ ಶೋಷಣೆಯ ಸಾಮ್ರಾಜ್ಯ ನಡುಗಿಸಿ , ಪ್ರಕ್ರುತಿಯ ಸತ್ಯ ದರ್ಶನ ತಿಳಿಯಯಪಡಿಸಿದ ಹೆಗ್ಗಳಿಕೆ  12 ನೇ ಶತಮಾನದ ಬಸವಾದಿ ಶರಣರಿಗೆ ಸಲ್ಲುತ್ತದೆ.

ಚರಾಚರ ಸೃಷ್ಟಿಯ ಮೂಲತತ್ವಕ್ಕೆ ಬೇಕಾಗುವ ಎಲ್ಲ ಅಂಶಗಳನ್ನು ಒಳಗೊಂಡ ಸುಸಜ್ಜಿತ  ಜಗತ್ತಿನಲ್ಲಿ ಮನುಷ್ಯ ಎನನ್ನೂ ತಯಾರಿಸಬೇಕಿಲ್ಲ , ತಯಾರಿಸಲು ಆಗದು.ಈ ಸತ್ಯವನ್ನು ತಿಳಿಯದ ಮನುಷ್ಯ,
ತನ್ನಿಂದ ಈ ಜಗತ್ತು ನಡೆಯುತ್ತಿದೆ.
ನಾನು ಇದನ್ನು ಮಾಡಿದೆ,
ನಾನು ಅದನ್ನು ಕಂಡು ಹಿಡಿದೆ,
ನಾನು ಕೊಟ್ಟೆ, ನಾನು ಇಟ್ಟು ಬಂದೆ, ಎನ್ನವ ದರ್ಪ, ಅಹಂಕಾರಿ ನಾನೆಂಬ ಗರ್ವಿ, ಬುದ್ಧಿಜೀವಿ ಮಾನವರಿಗೆ
ಶರಣ ಜೇಡರ ದಾಸಿಮಯ್ಯನವರು ಹೇಳುತ್ತಾರೆ ಕೇಳೋಣ ಬನ್ನಿ….
ಎಂತಹ ಅಧ್ಭುತ,ಅಪ್ರತಿಮ, ಶಾಶ್ವತ ಸತ್ಯ ದರ್ಶನ ಮಾಡಿಸಿದ್ದಾರೆ

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ

ಇಲ್ಲಿರುವ ಭೂಮಿ , ಭೂಮಿಯ ಮೇಲಿರುವ ಸ್ರಷ್ಟಿ ಸಂಪದ ,ಮನುಜ ನೀ ತಂದದ್ದಲ್ಲ ಇದು ದೇವನ ಕೃಪೆ ಕೊಡುಗೆ, ಇದೆಲ್ಲ ದೈವೀಶಕ್ತಿಯ ದಾನ ದಾಸೋಹವಾಗಿದೆ.

ಸುಳಿದು ಬೀಸುವ ವಾಯು ನಿಮ್ಮ ದಾನ.

ಈ ಜಗತ್ತಿನ ಜೀವಜಾಲ ಬದುಕಲು ಬೇಕಾದ ವಾಯು ದೇವನ ಕೃಪೆ ಕೊಡುಗೆ
ಮನುಷ್ಯ ಎಷ್ಟೇ ಮುಂದುವರಿದಿದ್ದರೂ ವಾಯು ಉತ್ಪತ್ತಿ ಮಾಡಬಹುದೇ? ಇಲ್ಲವೇ ಇದು ಇಲ್ಲದೆ ಜೀವ ನಡೆಸಬಹುದೇ? ಯಾವುದೂ ಸಾದ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಶರಣರು.

ನಿಮ್ಮ ದಾನವನುಂಡು ಅನ್ಯರ ಹೊಗಳುವ,
ಕುನ್ನಿಗಳನೇನೆಂಬೆ, ರಾಮನಾಥ.

ಹೀಗೆ ಎಲ್ಲವೂ ದಯಾಮಯನ ಕರುಣೆಯ ಫಲಗಳು.ಕೊಟ್ಟ ಈ ಶಕ್ತಿಯನ್ನು ಶ್ಲಾಘಿಸದೆ, ನಿಮ್ಮ ದಾನವನ್ನು ಉಂಡು ಬೇರೆಯವರನ್ನು ಹೊಗಳುವವರನ್ನು ಕನಿಷ್ಠ ಪ್ರಾಣಿಯಾದ ನಾಯಿಗೆ ಹೋಲಿಸಿ, ಛೀಮಾರಿ ಹಾಕಬೇಕು ರಾಮನಾಥ ಎನ್ನುವ ಭಾವ ಈ ವಚನದಲ್ಲಿ ತುಂಬಿ ನಿಂತಿದೆ ಇಂತಹ ಶರಣರ ಅನುಭಾವ ತಿಳಿಯುವುದೇ ನನ್ನ ಸೌಭಾಗ್ಯ
ಎಲ್ಲರಿಗೂ ಶರಣುಶರಣಾರ್ಥಗಳು

—————————————-

One thought on “

Leave a Reply

Back To Top