Month: June 2023

ಹಮೀದಾ ಬೇಗಂ ದೇಸಾಯಿ-ಆಕಾಶವೇ ನನ್ನಪ್ಪ…

ಹಮೀದಾ ಬೇಗಂ ದೇಸಾಯಿ-ಆಕಾಶವೇ ನನ್ನಪ್ಪ… ಅಪ್ಪ ಎಂದರೆ ಆಕಾಶದಂತೆಎಂದರು ಎಲ್ಲರೂ..ಆಕಾಶವೇ ಅಪ್ಪ..ನನಗೆಆಗಸದ ನೀಲಿ ಬಣ್ಣಬೆಳ್ಮೋಡಗಳ ಮೆತ್ತೆಬೆಳಗುವ ಕೆಂಪು ಸೂರ್ಯಹಾಲ್ಬೆಳದಿಂಗಳು ಸುರಿವ ಚಂದ್ರಮಿನುಗುವ ತಾರೆಗಳುಅಸಂಖ್ಯಾತ ಕ್ಷೀರಪಥಗಳುನಿಗೂಢ ಆಕಾಶ ಕಾಯಗಳು…ಎಲ್ಲವೂ ಆಕಾಶದ ಒಡಲಲ್ಲಿ..ಇದೆಲ್ಲವೂ ನನ್ನಪ್ಪನೇ…!ನಾ ಹುಟ್ಟಿದ ಬಳಿಕಆಕಾಶದಲ್ಲಿ ಲೀನವಾದವನಾನೆಂದೂ ನೋಡದ ನನ್ನಪ್ಪಆಕಾಶವೇ ನನ್ನಪ್ಪ

ಇಮಾಮ್ ಮದ್ಗಾರ-ನನ್ನಪ್ಪ

ವರ್ತಮಾನದ
ನರ್ತನ ವನ್ನು
ನಿಶ್ಯಭ್ದ ಗೊಳಿಸಿದ್ದರು
ನನ್ನಪ್ಪ ( ನನ್ನ ಪಾಲಿಗೆ)

ಭವ್ಯ ಭವಿಷ್ಯದ
ದಿವ್ಯದ ದಾರಿ
ಯಾಗಿದ್ದರು ನನ್ನಪ್ಪ

ಬಡತನದ
ಬೇತಾಳ ದರಿದ್ರದ
ಬೆನ್ನೇರಿದ್ದರೂ
ಬದುಕಿನ ಗಾಳಿಪಟ
ಬಡತನದ ಗಾಳಿಗೆ
ತುಂಡಾಗದಂತೆ
ಬದುಕಿದರು
ನನ್ನಪ್ಪ

ಅಂಬೆಗಾಲಿನ
ಅಂಬಾರಿಯಲಿ
ದಸರಾ ಮೆರವಣಿಗೆ
ಮಾಡಿಸಿ ದವರು
ನನ್ನಪ್ಪ

ಶ್ರಮದ ಬೆಲೆಯೇ ಸಾಕು
ಬಡಿದೋಡಿಸಲು
ಬಡತನವ..
ಜೋತು ಬಿದ್ದು ಬಿಡು
ಭರವಸೆಯ ಭುಜಕೆ
ಎಂದು ಕಲಿಸಿದವರು
ನನ್ನಪ್ಪ

ಕದಲದ ಕಲ್ಲಾಗು
ದುಷ್ಕರ್ಮಗಳಿಗೆ
ಕರ್ಮದ ಧರ್ಮ
ನಿನ್ನ ಹಿಂದೆ
ತುಳಿದು ಬದುಕು
ಅಹಂಕಾರವ..
ಎಂದು ತಿಳಿಸಿದವರು
ನನ್ನಪ್ಪ

ಎರಡು ದಶಕಗಳ
ಹಿಂದೆ..
ಕಾಲಜೇಡನ
ಶಯ್ಯೆಯಲಿ
ಬಾಳ ಯುದ್ದವ
ಮುಗಿಸಿ ಮಲಗಿದರು
ನನ್ಬಪ್ಪ ಸಾವ
ಸುಖವನಪ್ಪಿ.‌

ಬೆಳಕಾಗಿಹದಿಂದು
ನಿಮ್ಮ ದಾರಿ
ಚಣ ಚಣವೂ ನನ್ನ
ಬೆನ್ನ ಹಿಂದಿದೆ
ನಿಮ್ಮೊಲವು

ಪ್ರತಿಕ್ಷಣವೂ..
ಕಾಣುತಿದೆ
ನಿಮ್ಮ ಮೊಗವು…

Back To Top