ಬಂಗಾರದ ಛಾಯೆ

ಬಂಗಾರದ ಛಾಯೆ

ನಾಗರತ್ನ ಹೆಚ್. ಗಂಗಾವತಿ

ಪುಟ್ಟ ಪ್ರಪಂಚಕ್ಕೆ
ಬಂದ ಮೊದಲ ದಿನ
ಕಂಡೆನು ಅಪ್ಪನ
ಮೊಗದ ಛಾಯೆ.

ಬಾಲ್ಯದ ತಿದ್ದಿ ತಿಡಿ
ಭವಿಷ್ಯ ರೂಪಿಸಿದ
ಸ್ವಾರ್ಥವೇ ಇರದ ಜೀವ

ಕಣ್ಣಿಗೆ ಕಾಣುವ
ದೇವರ ರೂಪ
ನೋವು ನಲಿವುಗಳಲ್ಲಿ
ಧೈರ್ಯ ತುಂಬಿ
ಜೊತೆಯಾಗಿ ಬೆಳೆಸಿದಾಗ

ತೊದಲ ನುಡಿಯ
ಕೇಳಿ ನಕ್ಕು ನೆಲೆದಾತ
ಬಣ್ಣದ ಬಟ್ಟೆಯ ಕೊಡಿಸಿ
ಮನವ ಸಂತೋಷ ಪಡೆಸಿದಾತ.

ಅಂಬೆಗಾಲಲಿ ಹೆಜ್ಜೆ ಹಾಕುಲು
ಕೈ ಬೆರಳು ಹಿಡಿದು ನಡೆಸಿದಾತ.
ದಿನವೂ ತಪ್ಪದೇ ಶಾಲೆಗೆ ಕಳಿಸಲು
ಸೈಕಲ್ ಸವಾರಿಯಲ್ಲಿ ಕೂರಿಸಿದಾತ.

ಮನದ ಮಂದಿರದಲ್ಲಿ
ದೈವ ಸ್ವರೂಪಿಯಾಗಿ
ಅಚ್ಚಳಿಯದೆ ನೆಲೆಸಿದಾತ.


Leave a Reply

Back To Top