ಮಹಾದೇವಿ ಪಾಟೀಲ-ಅಪ್ಪ ನನ್ನ ಆತ್ಮ

ಅಪ್ಪ ನನ್ನ ಆತ್ಮ

ಮಹಾದೇವಿ ಪಾಟೀಲ

ಅಪ್ಪ ನೀ ನನ್ನೆಲ್ಲ ಸಾಧನೆಯ ಜೀವ ಕನ್ನಡಿ,
ನಾ ಇರುವ ಈ ರೀತಿಗೆ ನೀನೆ ಅಲ್ಲವೇ ಮುನ್ನುಡಿ..
ನಿನ್ನ ಕೈ ಬೆರಳ ತುದಿ ಸಾಕು ನನ್ನ ಈ ಕೈಗೆ
ನೂರಾನೆಯ ಬಲ ಸೋಕಿದಂತೆ ನನ್ನ ಬದುಕಿಗೆ ||

ನೀ ಇರುವೆ ಎಂಬ ಧೈರ್ಯದಲ್ಲಿ ನಾನು
ಎಂಥ ನೋವೇ ಬರಲಿ ಎದುರಿಸುವೆನು
ನೀ ನನಗೆ ಕೊಡುವ ಭರವಸೆಯ ಆಸರೆ ಯಾರು ಕೊಡಬಲ್ಲರು ನಿನ್ನ ಹೊರತು ಬೇರೆ||

ಅಂದು ಹೆಗಲ ಮೇಲೆ ಹೊತ್ತು ತೋರಿಸಿದೆ ಜಗವ ಕಂಡುನಕ್ಕು ನಲಿಯುತ್ತಿದ್ದೆ ನಗುವ ಮೊಗವ
ಇಂದು ಅದೇ ಕಣ್ಣಿಂದ ನೋಡುತ್ತಿರುವೆ ಜಗವ ನೊಂದರೂ ಬೆಂದರೂ ಕೇಳುವರಾರಿಲ್ಲ ನೋವ||

ನನ್ನ ನೀ ಅರಿತಷ್ಟು ಅರಿತವರಾರು ಅಪ್ಪ? ಆತಂಕವಾದಾಗೆಲ್ಲ ಭದ್ರತೆಯ ಬೆಳಕ ತೋರಿದವನಪ್ಪ..
ಭವದ ಯಾನದಲ್ಲಿ ನಮಗಾಗೇ ಬದುಕಿದವನಪ್ಪ
ನಾ ಇರುವವರೆಗೆ ನೀನು ಜೊತೆಯಲ್ಲೇ ಇರಬೇಕಪ್ಪ ||

ನನ್ನ ಪಾಲಿನ ದೈವ ನೀನೆ ಕೇಳದೆ ಎಲ್ಲ ಕೊಡಿಸಿದೆ
ನನ್ನ ಭಾವದ ಜೀವ ನೀನೆ ಹೇಳದೆ ಎಲ್ಲ ತಿಳಿದಿರುವೆ
ವಯಸ್ಸು ಏರಿದರೂ ಮನಸ್ಸು ಮಾಗಿದರೂ ನಾ ನಿನ್ನ ಪುಟ್ಟ ಮಗುವೆ
ಪ್ರತಿ ಜನ್ಮಕೂ ನಾನೆ ನಿನ್ನ ಮಗಳಾಗಿ ಹುಟ್ಟ ಬಯಸುವೆ||

 --------------------

Leave a Reply

Back To Top