Month: June 2021

ಇಂಚುಪಟ್ಟಿ

ಮಗನ ಮೇಲೆ ಬಂದ ಕಳ್ಳತನದ ಅಪವಾದಕ್ಕೆ ಕೊನೆ ಹಾಡಲು ಅದೇ ಅಂಗಡಿಯಿಂದ ಇನ್ನೊಂದು ಇಂಚುಪಟ್ಟಿ ಖರಿದಿಸಿ ಲಾವಣ್ಯಳಿಗೆ ಕೊಟ್ಟಿದ್ದನ್ನು ಲಕ್ಷ್ಮಿ ಹೇಳಿರಲಿಲ್ಲ. ಮಗ ಅವಿನಾಶನ ಕೈಯಲ್ಲಿ ಅವನ ಇಂಚುಪಟ್ಟಿಯನ್ನು ಕಂಡ ಲಾವಣ್ಯಳಿಗೆ, ಲಕ್ಷ್ಮಿ ಮಾಡಿರಬಹುದಾದ ಕೆಲಸವನ್ನು ಊಹಿಸುವದು ಕಷ್ಟವಾಗಲಿಲ್ಲ. ‘ನಾಳೆ ಲಕ್ಷ್ಮಿಯಲ್ಲಿ ಕ್ಷಮೆ ಕೋರಬೇಕು’ ಎಂದು ಮನಸ್ಸಿನಲ್ಲೇ ಎಣಿಸಿದ ಲಾವಣ್ಯ ಕಣ್ಣಿನಿಂದ ಉದುರುವ ನೀರನ್ನು ಒರಸಿಕೊಂಡಳು.

ಕವಿತೆ ಮೂಕವಾಗಿದೆ

ಶೋಷಿತರ ಬೆವರ ಹನಿ ಹರಿಯುವಂತೆ
ಬಾರುಕೋಲಿನ ಹೊಡೆತಕ್ಕೆ ಸಿಕ್ಕ ಕೋಣದಂತೆ
ಸುಳಿಗೆ ಸಿಕ್ಕ ದೋಣಿಯಂತೆ ವಿಲವಿಲನೆ ಒದ್ದಾಡಿ
ನನ್ನ ಕವಿತೆ ಮೂಕವಾಗಿದೆ

ಒಂಟಿ ಮರ

ಅಪ್ಪಳಿಸಿದ ಜಡಿಮಳೆಗೆ
ಎದೆಯೊಡ್ಡಿದೆ ಹೆಮ್ಮರ
ಎಲೆ-ಎಲೆಯಲಿ ಅನುರಣಿಸಿದೆ
ಖಗ-ಮೃಗಗಳ ಚೀತ್ಕಾರ

ನಾನಾಗಿ ಉಳಿದಿಲ್ಲ‌‌!

ಗಡಿಗಳಾಚೆಯ ಶತ್ರುಗಳ ತಡೆದಿದ್ದೆನಲ್ಲ
ಎದೆಯೊಳಗೆ ಅವಿತ ನಿನ್ನ ಮುಚ್ಚಿಟ್ಟಿದ್ದೆನೆ
ಮಂಕುದಿನ್ನೆಯಂತೆ ಅಂಗಲಾಚಿದಾಗೆಲ್ಲ
ಮೋಡಕವಿದ ವಾತಾವರಣ ಸುತ್ತಲೆಲ್ಲ

ಮನುಷ್ಯ ಮನುಷ್ಯನಿಗಾಗದೆ ಮತ್ತಾರಿಗಾಗುತ್ತಾನೆ? ಸಂಬಂಧಿಗಳು, ಸ್ನೇಹಿತರೆಂದ ಮೇಲೆ ಒಂದಲ್ಲ ಒಂದು ಸಂದರ್ಭದಲ್ಲಿ ಪರಸ್ಪರರಿಗೆ ಸಹಾಯಮಾಡಲೇಬೇಕಾಗುತ್ತದೆ.ಆ ಸಹಾಯ ಭೌತಿಕ ವಸ್ತುವಿನ ರೂಪದಲ್ಲಿರಬಹುದು ಅಥವಾ ಮಾನಸಿಕ ಸಾಂತ್ವನದ ರೂಪದಲ್ಲಿರಬಹುದು. ಇದರಲ್ಲಿ ಅಚ್ಚರಿಯೇನೂ ಇಲ್ಲ

ಪದ ನಮನ

ಒಪ್ಪಿದೆ ನಿಮ್ಮ ಹಂಚಿ ಬಾಳುವ ಬದುಕ
ಮಿಂಚಲಿ ಹೊಳೆಯಲಿ, ಮಾಸಿಯೇ ಹೋಗಲಿ
ಬಾಳು ಇರುವುದೇ ಹಂಚಿಕೆಯಲಿ

ಒಂದು ನೆನಪು

ಆದರೆ ಕೆಲವು ದೊಡ್ಡಗಂಟಲಿನ ಮುಗ್ದ ಗುಗ್ಗುಗಳು ಮುಂದೆ ಸಾಹಿತ್ಯ ಕಂಟಕರಾಗಿ ಪರಿವರ್ತನೆಯಾದದ್ದು ನಮ್ಮ ಸಹವಾಸದಿಂದಲೇ. ಅವರು ಸಿದ್ದಾಂತಗಳಿಂದ ಚಿತ್ತಾಗಿ ಹುಚ್ಚುಚ್ಚಾಗಿ ಕುಣಿದು ವಿಕಟವಿಟ ಗಣದಂತೆ ಮೆರೆವಾಗಲೆ ನಮ್ಮ ಕವಿ ಹೊರಗೆ ಬಂದು ಪ್ರಸನ್ನ ಚಿತ್ತರಾಗಿ ಈ ಕೃತಿ ಬರೆದಿದ್ದಾರೆ.

ತವರು ತಾರಸಿಯಾಗುತ್ತಿದೆ

ನನ್ನ ” ಸಿರಿದೊಂಡಲಿನ” ಮುತ್ತು ಮಣಿಗಳನ್ಬೆಲ್ಲ
ಒಂದೊಂದೂ ಬಿಡದೆ
ಆರಿಸಿ ತರಬೇಕು

ಇಂದು ವಿಮಾನ ನಿಲ್ದಾಣದಲ್ಲಿ ನಾನು, ವೈಶಾಲಿ, ವೆಂಕಟೇಶ, ಶ್ರೀನಿವಾಸ, ರಾಜೇಶ ಹಾಗೂ ಶ್ರೀನಾಥ ಬೆಂಗಳೂರಿನ ವಿಮಾನಕ್ಕಾಗಿ ಕಾಯುತ್ತಿದ್ದೇವೆ. ವಿಮಾನ ಹೊರಡುವುದು ಆರು ಗಂಟೆ ತಡವಾಗಿದ್ದರಿಂದ ನಿಮ್ಮೊಂದಿಗೆ ನನ್ನ ಈ ಕತೆಯನ್ನು ಬರೆದು ಹಂಚಿಕೊಳ್ಳಲು ಸಾಧ್ಯವಾಯಿತು. ವಿಮಾನ ತಡವಾಗಿದ್ದೂ ಗೋವಿಂದನ ದಯೆಯೇ ಎಂಬುದು ನನ್ನ ನಂಬಿಕೆ. ಇಲ್ಲಾ ಅಂದ್ರೆ ನನ್ನ ಕತೆ ನಿಮ್ಮೊಂದಿಗೆ ಹೇಳೋಕ್ಕೆ ಸಮಯ ಎಲ್ಲಿ ಸಿಕ್ತಾ ಇತ್ತು ಹೇಳಿ. ಸರಿ ಹಾಗಾದ್ರೇ, ಮತ್ತೇ ಬೆಂಗಳೂರಿನಲ್ಲಿ ಸಿಗೋಣವೇ………..

Back To Top