Day: June 15, 2021

ಕರ್ತವ್ಯಕ್ಕೆ ಬೇಕು ಪ್ರೀತಿಯ ಕೀಲೆಣ್ಣೆ

ಕರ್ತವ್ಯದ ಬೀಜ ಬಿತ್ತಿ ಜೀವನದ ಪರಮೋಚ್ಛ ಗುರಿಯಾದ ಮುಕ್ತಿಯ ಬೆಳೆಯನ್ನು ಬೆಳೆಯಬಹುದು.. ಅದಕ್ಕಾಗಿ ಕರ್ತವ್ಯಪರತೆಗೆ ಮನದ ಭೂಮಿಯನ್ನು ಹಸನು ಮಾಡಿ. ಹದಗೊಳಿಸಬೇಕು. ಕರ್ತವ್ಯಪರತೆಯು ಸಾಧಕರ ಎದೆಗಿಳಿದಿರುವ ಫಲವಾಗಿಯೇ ಅಮೂಲ್ಯ ಮಾನವ ಜೀವನದ ಮೌಲ್ಯವನ್ನು ಎತ್ತಿ ಹಿಡಿಯಲು ಸಾಧ್ಯವಾಗಿದೆ ಅಲ್ಲವೇ

ಸರ್ವಋತು ಬೆಳೆಗಳಾಗಿರುವ ಸಿರಿಧಾನ್ಯಗಳು ಪರಿಸರ ಪೂರಕವಾದ ಬೆಳೆಗಳು. ಅಧಿಕ ಪೌಷ್ಠಿಕಾಂಶ, ಕಬ್ಬಿಣಾಂಶ, ನಾರಿನಂಶ ಹೊಂದಿರುವುದರಿಂದ ಇವು ಉತ್ತಮ ಆಹಾರವೇ ಆಗಿವೆ. ಜೀವನ ಶೈಲಿ, ಅನುವಂಶೀಯ ಕಾಯಿಲೆಗಳಾದ ಮಧುಮೇಹ, ಆ್ಯಸಿಡಿಟಿ, ರಕ್ತದೊತ್ತಡ, ಮಲಬಾಧೆ, ಕರಳು ಸಂಬಂಧಿ ಕಾಯಿಲೆಗಳೇ ಮೊದಲಾದವುಗಳಿಗೆ ಸಿರಿಧಾನ್ಯಗಳ ನಿಯಮಿತ ಬಳಕೆಯಿಂದ ಶಾಶ್ವತ ಪರಿಹಾರವಿದೆಯೆಂದು ಆಹಾರತಜ್ಞರು ಪ್ರತಿಪಾದಿಸುತ್ತಿದ್ದಾರೆ.

ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ, ಕಾಂಗ್ರೇಸ್ ಮತ್ತು ಬಿ.ಜೆ.ಪಿ.ಹೊರತಾಗಿ ಕನ್ನಡಿಗರ ಹಿತಾಸಕ್ತಿಗಳನ್ನು ಕಾಯಬಲ್ಲಂತಹ ಪ್ರಾದೇಶಿಕ ರಾಜಕೀಯ ಪಕ್ಷವೊಂದು ಬೇಕೆಂದು ಕನ್ನಡಿಗರು ಬಯಸುವುದರಲ್ಲಿ ತಪ್ಪೇನೂ ಇಲ್ಲ.

ಜೋಡಿ ಬಾಗಿಲು

ನಾಟಕ, ನಾಟಕದೊಳಗೆ ನಾಟಕ
ಮಾಯೆಯೋ ನಿಜವೋ
ಕರ್ಮವೋ ಛಾಯೆಯೋ
ನಿಜ ಸೂತ್ರದಾರನ ಹುಡುಕಾಟ
ಮನೆಯೊಳಗೇ ನಡೆದಿದೆ

ಇಂಚುಪಟ್ಟಿ

ಮಗನ ಮೇಲೆ ಬಂದ ಕಳ್ಳತನದ ಅಪವಾದಕ್ಕೆ ಕೊನೆ ಹಾಡಲು ಅದೇ ಅಂಗಡಿಯಿಂದ ಇನ್ನೊಂದು ಇಂಚುಪಟ್ಟಿ ಖರಿದಿಸಿ ಲಾವಣ್ಯಳಿಗೆ ಕೊಟ್ಟಿದ್ದನ್ನು ಲಕ್ಷ್ಮಿ ಹೇಳಿರಲಿಲ್ಲ. ಮಗ ಅವಿನಾಶನ ಕೈಯಲ್ಲಿ ಅವನ ಇಂಚುಪಟ್ಟಿಯನ್ನು ಕಂಡ ಲಾವಣ್ಯಳಿಗೆ, ಲಕ್ಷ್ಮಿ ಮಾಡಿರಬಹುದಾದ ಕೆಲಸವನ್ನು ಊಹಿಸುವದು ಕಷ್ಟವಾಗಲಿಲ್ಲ. ‘ನಾಳೆ ಲಕ್ಷ್ಮಿಯಲ್ಲಿ ಕ್ಷಮೆ ಕೋರಬೇಕು’ ಎಂದು ಮನಸ್ಸಿನಲ್ಲೇ ಎಣಿಸಿದ ಲಾವಣ್ಯ ಕಣ್ಣಿನಿಂದ ಉದುರುವ ನೀರನ್ನು ಒರಸಿಕೊಂಡಳು.

Back To Top