ಗಜಲ್
ಶುಭಲಕ್ಷ್ಮಿ ಆರ್ ನಾಯಕ
ಸಿಗದ ಒಲವನರಸಿ ದಣಿಯದಿರು ಗೆಳತಿ
ಹಗೆಯ ತೋರಿದ ಮನಕೆ ಮರುಗದಿರು ಗೆಳತಿ
ಬಾಳೊಂದು ಸುಂದರ ಪಯಣದ ಹಾದಿಯು
ವ್ಯರ್ಥ ಹುಡುಕಾಟದಲಿ ಬಾಳ ಕೆಡಿಸದಿರು ಗೆಳತಿ
ಗಂಧವಿರದ ಸುಮದಂತೆ ಒಲವಿರದ ಬಾಳು
ಇಲ್ಲದ ಗಂಧವನು ಆಘ್ರಾಣಿಸದಿರು ಗೆಳತಿ
ಒಡೆದ ಗಾಜಂತೆ ಛಿದ್ರ ಮುರಿದ ಒಲವು
ಬರಿದೆ ಸೇರಿಸುತ್ತ ಸಮಯ ಕಳೆಯದಿರು ಗೆಳತಿ
ತುಂಬಿದೆ ಜಗದಲ್ಲಿ ಬಗೆಬಗೆಯ ಒಲವು
ದೊರೆಯದ ಒಲವಿಗಾಗಿ ಹಂಬಲಿಸದಿರು ಗೆಳತಿ
ನಿನ್ನ ವ್ಯರ್ಥ ಪ್ರಯತ್ನಕೆ ಮರುಗಿದೆ ಶುಭಳ ಮನ
ಪ್ರೀತಿಗಾಗಿ ಜೀವನ ಯಾನದಲಿ ಸೋಲದಿರು ಗೆಳತಿ
*********************************
ನನ್ನ ಬರಹಗಳನ್ನು ಪ್ರಕಟ ಮಾಡಿ ಪ್ರೋತ್ಸಾಹಿಸುತ್ತಿರುವ ಸಂಗಾತಿ ಪತ್ರಿಕೆಗೆ ಆಭಾರಿಯಾಗಿರುವೆ. ಶುಭವಾಗಲಿ.
ಗಜಲ್ ಸೊಗಸಾಗಿದೆ, ಬದುಕಿನಲಿ ನಾವು ಬಯಸಿದ್ದು ಸಿಗುವುದಿಲ್ಲ,ಸಿಕ್ಕದರಲ್ಲಿಯೇ ತೃಪ್ತಿ ಯಿಂದ ಬಾಳಬೇಕು ,ಸಿಗದ ವಸ್ತು ವಿಗಾಗಿ ಹುಡುಕುವುದು ಬೇಡ ಎಂಬ ನೀತಿ ತುಂಬಿದ ಗಜಲ್ ಸೊಗಸಾಗಿದೆ
ಚೆನ್ನಾಗಿದೆ